For Quick Alerts
ALLOW NOTIFICATIONS  
For Daily Alerts

ಶ್ರೀರಾಮ ಸೀತೆಗೆ ಏಕೆ ಅಗ್ನಿ ಪರೀಕ್ಷೆ ಮಾಡಲು ಹೇಳಿದ?

|

ರಾಮಾಯಣ ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಒಂದು. ಅಯೋಧ್ಯೆಯ ಸೂರ್ಯವಂಶದ ರಾಜ ಪುತ್ರ ರಾಮ. ಆತನ ಮಡದಿ ಸೀತೆಯ ತ್ಯಾಗಗಳು, ಸೀತೆಯ ಅಪಹರಣ ಮಾಡಿದ ರಾವಣನ ಸಂಹಾರ, ರಾಮನ ಮಕ್ಕಳಾದ ಲವ-ಕುಶರ ಜೀವನ ಚರಿತ್ರೆಯನ್ನು ವಾಲ್ಮೀಕಿ ಮಹರ್ಷಿಗಳು ಮಹಾಕಾವ್ಯದ ರೂಪದಲ್ಲಿ ರೂಪಿಸಿದ್ದಾರೆ.

ಸತ್ಯ ಹಾಗೂ ಧರ್ಮದ ನೆಲೆಯಲ್ಲಿ ಬದುಕಿದ ರಾಮನ ಜೀವನ ಪ್ರತಿಯೊಬ್ಬ ವ್ಯಕ್ತಿಗೂ ಮಾದರಿ. 24000 ಶ್ಲೋಕಗಳು ಹಾಗೂ 7 ಕಾಂಡಗಳಿಂದ ಕೂಡಿದೆ. ಇದರಲ್ಲಿ ಬರುವ ಎಲ್ಲಾ ಕಥೆ ಹಾಗೂ ಉಪಕಥೆಗಳು ಪ್ರತಿಯೊಬ್ಬರಿಗೂ ಜೀವನದ ಅರ್ಥ ಹಾಗೂ ಕರ್ಮಗಳ ಮಗ್ಗೆ ಅರಿವನ್ನು ಮೂಡಿಸುತ್ತವೆ. ಇಂತಹ ಒಂದು ಪವಿತ್ರತೆಯನ್ನು ಪಡೆದುಕೊಂಡಿರುವ ಕಥೆಗಳಲ್ಲಿ ಇರುವ ಕೆಲವು ವಿಶೇಷ ಮಾಹಿತಿಯನ್ನು ಅರಿಯೋಣ ಬನ್ನಿ...

ವಾಲ್ಮೀಕಿ ರಾಮಾಯಣ:

ವಾಲ್ಮೀಕಿ ರಾಮಾಯಣ:

ರಾಮಾಯಣವನ್ನು ವಾಲ್ಮೀಕಿ ಬರೆದಿದ್ದಾನೆ. ಅದು ಕಾವ್ಯಾತ್ಮಕ ಪದ್ಯ (ಶ್ಲೋಕಗಳ)ಗಳ ರೂಪದಲ್ಲಿ ಬರೆಯಲಾಗಿದೆ. ಅಯೋಧ್ಯೆಯ ರಾಜಕುಮಾರ ರಾಮನ ಕಥೆಯನ್ನು ಒಳಗೊಂಡಿದೆ. ಅಯೋಧ್ಯೆಯಿಂದ ಹೊರಡುವ ಸಮಯದಲ್ಲಿ ರಾಮನ ಪತ್ನಿ ಸೀತಾ ಮಾತೆಯು ಹೇಳಿದ ವಿಚಾರಗಳ ಆಧಾರದ ಮೇಲೆ ಗ್ರಂಥವನ್ನು ರಚಿಸಲಾಗಿದೆ ಎಂದು ಹೇಳಲಾಗುತ್ತದೆ.

ರಾಮನ ಜೀವನ ಘಟನೆಗಳು:

ರಾಮನ ಜೀವನ ಘಟನೆಗಳು:

ರಾಮಾಯಣದ ಮೂಲವು ಸಂಸ್ಕøತ ಗ್ರಂಥಗಳಲ್ಲಿದೆ. ನಂತರದಲ್ಲಿ ಹಿಂದಿ ಮತ್ತು ಇತರ ಭಾಷೆಗಳಿಗೆ ಭಾಷಾಂತರಗೊಳಿಸಲಾಗಿದೆ. ತ್ರೇತಾ ಯುಗದಲ್ಲಿ ಮಾನವೀಯತೆಯ ವಿಚಾರದ ನಡುವೆ ನಡೆದುಬಂದ ಕಥೆ ಇದಾಗಿದೆ. ಇದರಲ್ಲಿ ಹಲವಾರು ಕಥೆಗಳು, ಉಪಕಥೆಗಳು ಮತ್ತು ಜಾನಪದ ಕಲಾಕೃತಿಗಳ ಉಲ್ಲೇಖವಿದೆ ಎಂದು ಹೇಳಲಾಗುವುದು.

ಪದ್ಮ ಪುರಾಣ:

ಪದ್ಮ ಪುರಾಣ:

ಪವಿತ್ರ ಗ್ರಂಥಗಳಲ್ಲಿ ಪದ್ಮ ಪುರಾಣವು ಒಂದು. ಇದರಲ್ಲಿ ಸುಮಾರು 55,000 ಶ್ಲೋಕಗಳಿವೆ. ಈ ಪುಸ್ತಕದ ಕೆಲವು ಕಥೆಗಳಲ್ಲಿ ರಾಮಾಯಣದ ಉಲ್ಲೇಖವಿದೆ ಎಂದು ಹೇಳಲಾಗುವುದು. ಸೀತಾ ಮಾತೆಯ ಅಪಹರಣದ ನಂತರ ರಾಮಾಯಣದಲ್ಲಿ ಸೀತೆಯ ಅನುಪಸ್ಥಿತಿಯನ್ನು ಇದರಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಇದಕ್ಕೆ ಕೆಲವು ವಿರೋಧಗಳಿರುವುದನ್ನು ಸಹ ನೋಡಬಹುದು.

ಸೀತೆಯ ಅಗ್ನಿ ಪರೀಕ್ಷೆ:

ಸೀತೆಯ ಅಗ್ನಿ ಪರೀಕ್ಷೆ:

ಪದ್ಮ ಪುರಾಣದ ಪ್ರಕಾರ ಸೀತಾಮಾತೆಯ ಎರಡು ರೂಪ ಇತ್ತು. ಅದರಲ್ಲಿ ಒಂದು ನೈಜತೆಯ ಸೀತಾ ಮತೆಯಾಗಿದ್ದರೆ ಒಂದು ಸೀತೆಯ ಮಾಯಾ ರೂಪ ಎಂದು ಹೇಳಲಾಗುವುದು.

ಸೀತಾ ಅಪಹರಣ:

ಸೀತಾ ಅಪಹರಣ:

ಲಂಕೆಯ ರಾಜನಾದ ರಾವಣನು ಋಷಿಯ ವೇಶದಲ್ಲಿ ಬಂದು ಸೀತೆಯನ್ನು ವಂಚಿಸಿ, ಬಲವಂತವಾಗಿ ಅಪಹರಣ ಮಾಡಿದನು. ಬಳಿಕ ಲಂಕೆಯ ಅಶೋಕ ವನದಲ್ಲಿ ಸೀತೆಯನ್ನು ಬಂಧಿಯಾಗಿರಿಸಿದ್ದನು. ಸೀತೆಯನ್ನು ಬಿಡಿಸಿಕೊಂಡು ಬರಲು ರಾಮನು ರಾವಣನ ವಿರುದ್ಧ ಹೋರಾಡಿದನು. ಅಂತ್ಯದಲ್ಲಿ ರಾವಣನನ್ನು ಸೋಲಿಸಿ ಸೀತೆಯನ್ನು ಕರೆತಂದನು. ಬಳಿಕ ತನ್ನ ಶುದ್ಧತೆಯನ್ನು ಸಾಬೀತು ಪಡಿಸಲು ಸೀತಾ ಮಾತೆಯು ಅಗ್ನಿಪರೀಕ್ಷೆಗೆ ಒಳಗಾಗಬೇಕು ಎಂದನು. ಶುದ್ಧತೆ ಮತ್ತು ನಿಷ್ಠತೆಯನ್ನು ಸೀತಾ ದೇವಿಯು ಅಗ್ನಿಪರೀಕ್ಷೆಯ ಮೂಲಕ ಸಾಬೀತು ಪಡಿಸಿದಳು. ಆದರೂ ಆಕೆಗೆ ಅಯೋಧ್ಯೆ ಮತ್ತು ರಾಮನ ಜೀವನದಿಂದ ಬಹಿಷ್ಕಾರ ನೀಡಲಾಯಿತು.

ಪದ್ಮ ಪುರಾಣದ ಪ್ರಕಾರ ಸೀತಾಮಾತೆಗೆ ಮತ್ತು ಅಗ್ನಿಪರೀಕ್ಷೆಗೆ ಸಂಬಂಧವೇ ಇಲ್ಲ. ರಾಮನು ಸೀತೆಯನ್ನು ಬಿಟ್ಟಿದ್ದಾನೆ. ಮಾಯಾ ಸೀತೆಯ ಬಗ್ಗೆ ರಾಮನಿಗೆ ತಿಳಿದಿತ್ತು ಎಂದು ಉಲ್ಲೇಖಿಸಲಾಗಿದೆ.

ಸೀತೆ ಅಗ್ನಿಗೆ ಪ್ರಾರ್ಥಿಸುತ್ತಾಳೆ:

ಸೀತೆ ಅಗ್ನಿಗೆ ಪ್ರಾರ್ಥಿಸುತ್ತಾಳೆ:

ತ್ರೇತಾಯುಗದ ಕಥೆಯಲ್ಲಿ... ತ್ರೇತಾಯುಗದಲ್ಲಿ ಎಲ್ಲರೂ ನ್ಯಾಯಯುತವಾಗಿ ಬದುಕುತ್ತಿದ್ದರು. ಅಲ್ಲಿ ಯಾವುದೇ ವ್ಯಕ್ತಿಗೆ ಹಾನಿ ಉಂಟಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿಯೇ ರಾವಣನು ವೇಷ ಧರಿಸಿ ಸೀತೆಯನ್ನು ಅಪಹರಿಸಿದನು. ಸೀತೆಯು ಲಕ್ಷ್ಮಿಯ ಅವತಾರ ಎನ್ನುವುದು ಯಾರು ಅರಿತಿರಲಿಲ್ಲ. ಆದರೆ ಈ ವಿಚಾರವು ರಾಮ ಮತ್ತು ಲಕ್ಷ್ಮಣನಿಗೆ ತಿಳಿದಿತ್ತು. ಅಗ್ನಿ ಪರೀಕ್ಷೆಗೆ ಒಳಪಡಿಸಿದಾಗ ಆಕೆಯು ಅಗ್ನಿ ದೇವನನ್ನು ಪ್ರಾರ್ಥಿಸಿದಳು.

ಅಗ್ನಿ ದೇವನು ಸೀತೆಯನ್ನು ಮರೆಮಾಡಿದನು:

ಅಗ್ನಿ ದೇವನು ಸೀತೆಯನ್ನು ಮರೆಮಾಡಿದನು:

ಸೀತೆಯ ನಿಷ್ಠೆ ಮತ್ತು ಆಕೆಯ ಭಕ್ತಿಗೆ ಮೆಚ್ಚಿದ ಅಗ್ನಿ ದೇವನು ಭ್ರಮೆಯನ್ನು ಸೃಷ್ಟಿಸಿ ನಿಜವಾದ ಸೀತೆಯನ್ನು ಬದಲಿಸಿದನು. ಯಾರು ಬೆಂಕಿಯ ಜ್ವಾಲೆಯಲ್ಲಿ ಹಾಗೆ ಉಳಿಯುವುದಿಲ್ಲ ಎಂದು ಭಾವಿಸಿದ್ದರು. ಇದರ ಬಗ್ಗೆ ಯಾವುದೇ ಜ್ಞಾನ ವಿಲ್ಲದೆ ರಾವಣನು ಸೀತೆಯನ್ನು ಅಪರಿಸಿದನು. ಅವಳನ್ನು ಲಂಕೆಗೆ ಕರೆದೊಯ್ದನು.

ರಾಮನ ನ್ಯಾಯದ ನಿರ್ಧಾರ:

ರಾಮನ ನ್ಯಾಯದ ನಿರ್ಧಾರ:

ವಿಷ್ಣುವಿನ ಅವತಾರವೇ ರಾಮನ ಅವತಾರ ಎಂದು ತಿಳಿದಿತ್ತಾದರೂ, ತನ್ನ ಕರ್ಮವನ್ನು ಪೂರೈಸಲು ಮತ್ತು ನಿಜವಾದ ಧರ್ಮವನ್ನು ಸ್ಥಾಪಿಸುವ ಸಲುವಾಗಿ ರಾವಣನೊಂದಿಗೆ ಹೋರಾಡಿದನು. ರಾವಣನ ಪಾಪ ಕರ್ಮಗಳಿಗೆ ಶಿಕ್ಷೆ ವಿಧಿಸಿದನು.

ಅಗ್ನಿ ಪರೀಕ್ಷೆ:

ಅಗ್ನಿ ಪರೀಕ್ಷೆ:

ಸೀತೆಯನ್ನು ಅಗ್ನಿ ಪರೀಕ್ಷೆಗೆ ಒಳಪಡಿಸಿದಾಗ ಮಾಯಾ ಸೀತೆಯಲ್ಲಿ ನಿಜವಾದ ಸೀತೆಯನ್ನು ಹಿಂತಿರುಗಿಸಲು ಕೋರಿದನು. ನಂತರ ನಿಜವಾದ ಸೀತೆ ಹೊರ ಬಂದಳು. ಜೊತೆಗೆ ರಾವಣನ ಸ್ಪರ್ಶ ಇಲ್ಲವೆಂಬುದನ್ನು ಸಾಭೀತು ಪಡಿಸಿದನು.

ಮಾಯಾ ಸೀತೆಯ ಇತರ ಉಲ್ಲೇಖಗಳು:

ಮಾಯಾ ಸೀತೆಯ ಇತರ ಉಲ್ಲೇಖಗಳು:

ಮಾಯಾ ಸೀತೆಯ ಇತರ ಉಲ್ಲೇಖಗಳು ಮತ್ತು ಅದಕ್ಕೆ ಸಂಬಂಧಿಸಿದ ಕಥೆಯನ್ನು ಬ್ರಹ್ಮವಿವರ್ತನ ಪುರಾಣ ಮತ್ತು ಇತರ ಪುರಾಣ ಕಥೆಗಳಲ್ಲಿ ಕಾಣಬಹುದು.

Read more about: inspiration
English summary

reason-why-lord-rama-asked-sita-to-go-through-agni-pari

reason-why-lord-rama-asked-sita-to-go-through-agni-pari
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more