For Quick Alerts
ALLOW NOTIFICATIONS  
For Daily Alerts

ಸಾಂತಾ ಕ್ಲಾಸ್ ಕುರಿತು ಕುತೂಹಲಕಾರಿ ಅಂಶಗಳು

By Poornima Hegde
|

ಪ್ರತಿವರ್ಷ ಕ್ರಿಸ್ ಮಸ್ ಹಬ್ಬ ಬಂದರೆ ಎಲ್ಲಿಲ್ಲದ ಖುಷಿ, ಸಂಭ್ರಮ. ಕ್ರಿಸ್ ಮಸ್ ಹಬ್ಬ ಹೊತ್ತುತರುವ ವಿವಿಧ ಉಡುಗೊರೆಗಳು, ಸಿಹಿ ತಿನಿಸುಗಳು ಸಂತೋಷ, ನಗು ಎಲದಕ್ಕಿಂತ ಹೆಚ್ಚಾಗಿ ನಗುತ್ತ ಬರುವ ಸಾಂತಾ ಕ್ಲಾಸ್ ಎಲ್ಲರಲ್ಲೂ ಹೊಸ ಹುಮ್ಮಸ್ಸನ್ನು ಚೈತನ್ಯವನ್ನು ಹುಟ್ಟುಹಾಕುತ್ತದೆ. ಪ್ರತಿವರ್ಷ ಮಕ್ಕಳಂತೂ ಸಾಂತಾ ಕ್ಲಾಸ್ ನನ್ನು ಭೇಟಿ ಮಾಡಲು, ಆತನೊಂದಿಗೆ ಕುಣಿಯಲು ಕಾಯುತ್ತಲೇ ಇರುತ್ತಾರೆ! ಸಾಂಟಾ ಕ್ಲಾಸ್ ನ ನಗುಮುಖ, ಖುಷಿಯನ್ನು ಹಂಚುವ ಸ್ವಭಾವ ಹಾಗೂ ಅವನ ಕೆಂಪಿ ಬಿಳಿ ರಂಗಿನ ಬಟ್ಟೆ ಎಂಥವರನ್ನಾದರೂ ಸೆಳೆಯುತ್ತದೆ.

ಆದರೆ ಈ ಸಾಂತಾ ಕ್ಲಾಸ್ ಹಿನ್ನೆಲೆ ಬಗ್ಗೆ ನಮಗೆಷ್ಟು ಗೊತ್ತು? ಸಾಂತಾ ಕ್ಲಾಸ್ ಇರುವುದು ನಿಜವೇ ಅಲ್ಲವೇ ಎಂಬುದರ ಬಗ್ಗೆಯೇ ಸಾಕಷ್ಟು ಜನರಿಗೆ ಅರಿವಿಲ್ಲ. ಅವನ ಉಡುಗೊರೆಗಾಗಿ ಕಾಯುವ ನಾವು ಅವನ ಅಸ್ತಿತ್ವದ ಬಗ್ಗೆ ತಿಳಿದುಕೊಳ್ಳುವುದಕ್ಕೆ ಸಾಕಷ್ಟಿದೆ. ಇಲ್ಲಿ ಸಾಂತಾ ಕ್ಲಾಸ್ ಬಗ್ಗೆ ಕೆಲವು ನಂಬಿಕೆ / ಪುರಾಣಗಳನ್ನು ಹಾಗೂ ಹಿಮಸಾರಂಗಗಳ ಜೊತೆ ಹಾರುವ ಬಗ್ಗೆ ಹೇಳಲಾಗಿದೆ.

Myths about Santa Claus

ಸಾಂತಾ ಕ್ಲಾಸ್ ಟರ್ಕಿಯ ಮೂಲದವನು
ಇದನ್ನು ನೀವು ನಂಬುವುದು ನಿಮಗೆ ಬಿಟ್ಟಿದ್ದು. ಆದರೆ ನಂಬಿಕೆಯ ಪ್ರಕಾರ ನಮ್ಮ ಸಾಂತಾ ಮೂರನೇ ಶತಮಾನದ ಸಂತ ನಿಕೋಲಸ್ ಜೊತೆ ಹೋಲಿಕೆಯನ್ನು ಹೊಂದಿದ್ದಾನೆ. ಮಕ್ಕಳಿಗೆ ಉಡುಗೊರೆಗಳನ್ನು ಹಂಚುತ್ತಿದ್ದ ಮೈರಾದ ಬಿಷಪ್ ನನ್ನು ಉತ್ತಮ ಹೃದಯದ ವ್ಯಕ್ತಿ ಎಂದು ಕರೆಯಲಾಗುತ್ತಿತ್ತು, ಮೂರು ಮಕ್ಕಳ ಜೀವನವನ್ನು ಮರಳಿ ಕೊಟ್ಟಿದ್ದಕ್ಕಾಗಿ ಬಿಷಪ್ ನನ್ನು ಪವಾಡ ಪುರುಷ ಎಂದೂ ಕರೆಯಲಾಗುತ್ತದೆ.

ಸಾಂತಾ ಧರಿಸುವ ಉಡುಪನ್ನು ಯಾರು ವಿಸ್ಯಾನಗೊಳಿಸಿದ್ದರು?
ನಾವು ಸಾಂತಾ ಕ್ಲಾಸ್ ಕೆಂಪು ಬಿಳಿ ಉಡುಗೆಯನ್ನು ತೊಟ್ಟು ಬಂದು ಉಡುಗೊರೆಯನ್ನು ನೀಡುವುದನ್ನು ಬಲ್ಲೆವು. ಆದರೆ ಆ ಉಡುಪುಗಳ ವಿನ್ಯಾಸದ ಬಗ್ಗೆ ನಮಗೆ ತಿಳಿದಿಲ್ಲ. ಒಂದು ಪಾನೀಯ ಕಂಪನಿ ತನ್ನ ಪ್ರಚಾರದ ಅಭಿಯಾನಕ್ಕಾಗಿ ಈ ಬನ್ಣದ ಬಟ್ಟೆಯನ್ನು ತಯಾರಿಸಿತ್ತು. ಆದಾಗ್ಯೂ ನಾವು ಸಾಂತಾ ಉಡುಪನ್ನು ಅಲ್ಲೆಲ್ಲೋ ಉತ್ತರ ಧ್ರುವದಲ್ಲಿ ತಯಾರಿಸಲಾಗುತ್ತದೆ ಎಂದು ನಂಬಿದ್ದೇವೆ!

ಸಾಂತಾ ಕ್ಲಾಸ್ ಮತ್ತು ಆತನ ಉಡುಗೊರೆಗಳು
ಸಾಂತಾ ಕ್ಲಾಸ್ ನೀಡುವ ಉಡುಗೊರೆಗಳು ಉತ್ತರ ಧ್ರುವದಲ್ಲಿ ತಯಾರಿಸಲಾಗುತ್ತದೆ. ಅಲ್ಲಿಯೇ ಪ್ಯಾಕ್ ಮಾಡಿ ತರಲಾಗುತ್ತದೆ ಎಂದು 1890 ರಲ್ಲಿ ಲೂಯಿಸ್ ಮೋ ಎಂಬ ಲೇಖಕ, ಸಾಂಟಾ ಕ್ಲಾಸ್ ಉಡುಗೊರೆಯ ಬಗ್ಗೆ ಬರೆದಿದ್ದನ್ನು ಓದಿ ತಿಳಿದಿದ್ದೇವೆ. ಈ ಪುಸ್ತಕದ ಹೆಸರು –ಜ್ಯುಲೆಮಂಡೆಸ್ ಬಗ್’ (Julemandens Bog’)

ಸಾಂತಾನ ಹಿಮಸಾರಂಗ ಜಾರುಬಂಡಿ: ಸತ್ಯ ಅಥವಾ ಪುರಾಣ?
ಸಾಂತಾ, ಭವ್ಯವಾದ ಹಿಮಸಾರಂಗಗಳಿಂದ ಎಳೆಯಲ್ಪಡುವ ತನ್ನ ಜಾರುಬಂಡಿಯಿಂದ ಹಾರುತ್ತ ತನ್ನ ಉಡುಗೊರೆಗಳನ್ನು ನೀಡುತ್ತಾನೆ. ಆದರೆ ಇದು ಹಿಮಸಾರಂಗಗಳ ನಿಜವಾಗಿ ಹಾರುವ ಬಂದಿಯೋ ಅಥವಾ ಭ್ರಮೇಯೋ ಎಂದು ತರ್ಕಗಳಾಗಿದ್ದರೂ ಇಂದಿಗೂ ನಿರೂಪಿಸಲು ಸಾಧ್ಯವಾಗಿಲ್ಲ. ಇಂದಿಗೂ ಕೆಲವರು ಆಡಿನ ರಥದಲ್ಲಿ ಬರುವ ಥಾರ್ ನ ಕಥೆಯನ್ನು ಸಾಂತಾ ಕ್ಲಾಸ್ ಹೋಲುತ್ತಾನೆ ಎಂದು ವಾದಿಸುತ್ತಾರೆ.

ಸಾಂತಾ ನಿಜವಾಗಿಯೂ ಕ್ರಿಸ್ ಮಸ್ ಗೆ ಸಂಬಂಧಿಸಿದವನೇ?
ಪ್ರತಿ ವರ್ಷ ಕ್ತಿಸ್ ಮಸ್ ದಿವಸ ಮಕ್ಕಳು ಸಾಂತಾ ನೀಡುವ ಉಡುಗೊರೆಗಾಗಿ ಕಾಯುತ್ತಿರುತ್ತಾರೆ. ಆದರೆ ಕ್ರಿಸ್ ಮಸ್ ಯೇಸು ಕ್ರಿಸ್ತನ ಜನ್ಮ ಆಚರಣೆಯನ್ನು ಸೂಚಿಸುತ್ತದೆಯೇ ಹೊರತು ಸಾಂತಾ ಮತ್ತು ಕ್ರಿಸ್ತನ ನಡುವೆ ನಿಜವಾದ ಸಂಬಂಧವಿಲ್ಲ. ಸಾಂತಾನ ಮೂಲ ಇನ್ನೂ ಅಪರಿಚಿತ. ಸೇಂಟ್ ನಿಕೋಲಸ್ ಗೆ ಹತ್ತಿರದ ಹೋಲಿಕೆಯನ್ನು ಹೊಂದಿದ್ದಾನೆ ಎಮ್ದೇ ನಾವು ನಿಕಟವಾಗಿ ನಂಬಿದ್ದೇವೆ. ಅಲ್ಲದೆ, ಯೇಸು ಕ್ರಿಸ್ತನ ಜನ್ಮ ಮತ್ತು ಸೇಂಟ್ ನಿಕೋಲಸ್ ನ ಜೀವನ ನಡುವೆ ಸಾಕಷ್ಟು ಸಮಯದ ಅಂತರವಿದೆ.

English summary

Myths about Santa Claus

Every year, Christmas brings with it joy, happiness, family time, gifts, and of course, our beloved Santa Claus. Children adore him and wait to meet him every year. His cheerful jolly nature is loved by every little child and his red and white clothing has become a trademark of Christmas itself. But, do we really know who Santa is or from where does he come!
X
Desktop Bottom Promotion