For Quick Alerts
ALLOW NOTIFICATIONS  
For Daily Alerts

ಮಕ್ಕಳ ದಿನಾಚರಣೆ 2021: ಈ ದಿನದ ಪ್ರಾಮುಖ್ಯತೆಯನ್ನು ಎಂದಿಗೂ ಮರೆಯಬಾರದು

|

ನವೆಂಬರ್ 14 ಮಕ್ಕಳ ನೆಚ್ಚಿನ ದಿನ, ಏಕೆಂದರೆ ಪ್ರತಿವರ್ಷ ಈ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತದೆ. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನಿಸಿದ ಈ ದಿನವನ್ನು ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಮೀಸಲಿಡಲಾಗಿದೆ. ಅಂದರೆ, ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನವನ್ನು ಪ್ರತಿವರ್ಷ ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಸ್ವತಂತ್ರ ಭಾರತದ ಮೊದಲ ಪ್ರಧಾನಿ ಪಂಡಿತ್ ನೆಹರು ಅವರನ್ನು ಮಕ್ಕಳು ಪ್ರೀತಿಯಿಂದ 'ಚಾಚಾ' ಎಂದು ಕರೆಯುತ್ತಿದ್ದರು.

ಮಕ್ಕಳ ದಿನಾಚರಣೆಯ ಇತಿಹಾಸ:

ಮಕ್ಕಳ ದಿನಾಚರಣೆಯ ಇತಿಹಾಸ:

'ಇಂದಿನ ಮಕ್ಕಳೇ ನಾಳಿನ ಪ್ರಜೆಗಳು' ಎಂಬ ಮಾತಿದೆ. ಅದೇ ರೀತಿ ಮಕ್ಕಳನ್ನು ರಾಷ್ಟ್ರದ ನಿಜವಾದ ಶಕ್ತಿ ಮತ್ತು ಸಮಾಜದ ಅಡಿಪಾಯವೆಂದು ಪರಿಗಣಿಸಲಾಗಿದೆ. ಭಾರತವು 1956 ರಿಂದ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಿದೆ. ಚಾಚಾ ನೆಹರೂ ಅವರ ಮರಣದ ನಂತರ, ಮಕ್ಕಳೊಂದಿಗಿನ ಅವರ ಬಾಂಧವ್ಯ ಮತ್ತು ಒಲವಿನಿಂದ, ನೆಹರು ಅವರ ಜನ್ಮದಿನವನ್ನು ಮಕ್ಕಳ ದಿನವಾಗಿ ಆಚರಿಸುವ ಮತ್ತು ಅವರ ಹಕ್ಕುಗಳಿಗಾಗಿ ಪ್ರತಿಪಾದಿಸುವ ದಿನವೆಂದು ಗುರುತಿಸಲಾಯಿತು. ಅಂದಿನಿಂದ ಪ್ರತಿ ವರ್ಷ ನವೆಂಬರ್ 14ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ಮಕ್ಕಳ ದಿನದ ಮಹತ್ವ :

ಮಕ್ಕಳ ದಿನದ ಮಹತ್ವ :

ಮಕ್ಕಳ ದಿನಾಚರಣೆಯ ಗೌರವದ ಹೊರತಾಗಿ, ಮಕ್ಕಳ ಹಕ್ಕುಗಳು, ಕಾಳಜಿ ಮತ್ತು ಶಿಕ್ಷಣದ ಬಗ್ಗೆ ಹೇಳುತ್ತದೆ. ಭಾರತದ ಮೊದಲ ಪ್ರಧಾನ ಮಂತ್ರಿ ಆಧುನಿಕ ಭಾರತ ಹೇಗಿರಬೇಕು ಎಂಬುದರ ಬಗ್ಗೆ ಸರಿಯಾದ ದೃಷ್ಟಿಯನ್ನು ಹೊಂದಿದ್ದರು. ಜೊತೆಗೆ ತಮ್ಮ ಕನಸುಗಳನ್ನು ಮಕ್ಕಳಿಂದ ನನಸಾಗಿಸಬೇಕು ಎಂದು ಬಯಸಿದವರು. ಹಾಗಂತ, ಮಕ್ಕಳ ದಿನಾಚರಣೆಯ ಸಂಭ್ರಮದ ನಡುವೆ ಚಾಚಾ ನೆಹರೂ ಅವರ ಸಂದೇಶವನ್ನು ನಾವು ಮರೆಯಬಾರದು. ಅದೇನೆಂದರೆ, ಮಕ್ಕಳಿಗೆ ಅವರ ಬೆಳವಣಿಗೆಗೆ ಸುರಕ್ಷಿತ ಮತ್ತು ಪ್ರೀತಿಯ ಪರಿಸರ ಇರಬೇಕು. ಅದಲ್ಲದೆ ಅವರಿಗೆ ಸಾಕಷ್ಟು ಮತ್ತು ಸಮಾನ ಅವಕಾಶಗಳನ್ನು ಪೂರೈಸಿ ಅವರಿಂದ ದೇಶದ ಪ್ರಗತಿಗೆ ಕೊಡುಗೆ ಪಡೆಯಬಹುದು. ಈ ದಿನವು ನಮ್ಮಲ್ಲಿನ ಪ್ರತಿಯೊಬ್ಬರಿಗೂ ಮಕ್ಕಳ ಕಲ್ಯಾಣದ ಬಗೆಗಿನ ನಮ್ಮ ಬದ್ದತೆಯನ್ನು ಪುನರ್ ನವೀಕರಿಸಲು ನೆನಪು ಮಾಡಿ, ಮಕ್ಕಳಿಗೆ ನೆಹರುವಿನ ಆದರ್ಶದಂತೆ ಮತ್ತು ಅವರ ಮಾದರಿಯಲ್ಲಿ ಬದುಕಲು ಕಲಿಸಬೇಕು.

ಮಕ್ಕಳ ನೆಚ್ಚಿನ 'ಚಾಚಾ ನೆಹರು':

ಮಕ್ಕಳ ನೆಚ್ಚಿನ 'ಚಾಚಾ ನೆಹರು':

ಪಂಡಿತ್ ಜವಾಹರಲಾಲ್ ನೆಹರು ಮಕ್ಕಳ ಶಿಕ್ಷಣವನ್ನು ಹೆಚ್ಚಾಗಿ ಪ್ರೋತ್ಸಾಹಿಸುತ್ತಿದ್ದರು. ಸ್ವತಂತ್ರ ಭಾರತವು ತನ್ನ ಮಕ್ಕಳ ಏಳಿಗೆಯೊಂದಿಗೆ ಮಾತ್ರ ಸಮೃದ್ಧಿಯಾಗಬಲ್ಲದು ಎಂದು ನಂಬಿದ್ದರು. ಮಕ್ಕಳು ರಾಷ್ಟ್ರದ ನಿಜವಾದ ಶಕ್ತಿ ಮತ್ತು ಸಮಾಜದ ಅಡಿಪಾಯ ಎಂಬ ದೃಢವಾದ ನಂಬಿಕೆಯನ್ನು ಹೊಂದಿದ್ದರು. "ಇಂದಿನ ಮಕ್ಕಳು ನಾಳಿನ ಭಾರತವನ್ನು ಕಟ್ಟುತ್ತಾರೆ. ನಾವು ಅವರನ್ನು ಬೆಳೆಸುವ ವಿಧಾನವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ " ಎಂದು ಚಾಚಾ ನೆಹರು ಹೇಳುತ್ತಿದ್ದರು.

English summary

Children's Day 2021 Date, History, Importance and Significance of Children's Day in India

Here we talking about Children's Day 2021 Date, History, Importance and Significance of Children's Day in India, read on
X
Desktop Bottom Promotion