For Quick Alerts
ALLOW NOTIFICATIONS  
For Daily Alerts

2022ರಲ್ಲಿ ಚಿನ್ನ ಖರೀದಿಸಲು ಇರುವ ಅತ್ಯಂತ ಮಂಗಳಕರ ದಿನ ಹಾಗೂ ದಿನಾಂಕಗಳು ಇವೇ ನೋಡಿ

|

ಚಿನ್ನವು ಭೂಮಿಯ ಮೇಲಿನ ಅತ್ಯಂತ ಅಮೂಲ್ಯ ಮತ್ತು ಅಪರೂಪದ ಲೋಹಗಳಲ್ಲಿ ಒಂದಾಗಿದ್ದು, ಚಿನ್ನವನ್ನು ಖರೀದಿಸುವುದು ಅದೃಷ್ಟವೆಂಬ ನಂಬಿಕೆಯೂ ಇದೆ. ಆದ್ದರಿಂದ ಚಿನ್ನವನ್ನು ಮಂಗಳಕರ ದಿನಗಳಲ್ಲಿ ಖರೀದಿಸಲು ಬಯಸುತ್ತಾರೆ. ಹಬ್ಬ ಮತ್ತು ಮದುವೆ ಸೀಸನ್‌ನಲ್ಲಿ ಲ್ಲಿ ಚಿನ್ನದ ಮಾರಾಟವು ಹೆಚ್ಚಾಗುತ್ತದೆ. ಆದಾಗ್ಯೂ, ಮಕರ ಸಂಕ್ರಾಂತಿ, ಅಕ್ಷಯ ತೃತೀಯ ಮತ್ತು ಧಂತೇರಸ್‌ಗಳಂತಹ ದಿನಗಳು ಚಿನ್ನವನ್ನು ಖರೀದಿಸಲು ಉತ್ತಮ ಸಮಯ. ಈ ದಿನಗಳಲ್ಲಿ ನಿರ್ದಿಷ್ಟ ಸಮಯದಲ್ಲಿ ಚಿನ್ನವನ್ನು ಖರೀದಿಸುವುದು ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ ಎಂಬ ಭಾವನೆಯಿದೆ. ಇದೇ ರೀತಿ 2022 ರಲ್ಲಿ ಚಿನ್ನವನ್ನು ಖರೀದಿಸಲು ಅತ್ಯಂತ ಮಂಗಳಕರ ದಿನ ಹಾಗೂ ದಿನಾಂಕಗಳ ಬಗ್ಗೆ ನೋಡೋಣ.

2022 ರಲ್ಲಿ ಚಿನ್ನವನ್ನು ಖರೀದಿಸಲು ಅತ್ಯಂತ ಮಂಗಳಕರ ದಿನ ಹಾಗೂ ದಿನಾಂಕಗಳ ಪಟ್ಟಿ ಇಲ್ಲಿದೆ:

ಪುಷ್ಯ ನಕ್ಷತ್ರ:

ಪುಷ್ಯ ನಕ್ಷತ್ರ:

ಭಾರತದಲ್ಲಿ ಪುಷ್ಯಮಿ, ಪುಷ್ಯ, ಪೂಸಂ ಮತ್ತು ಪೂಯಂ ಎಂದೂ ಕರೆಯಲ್ಪಡುವ ಪುಷ್ಯ ನಕ್ಷತ್ರವು ಅತ್ಯಂತ ಮಂಗಳಕರವಾದ ನಕ್ಷತ್ರವಾಗಿದೆ. ಚಿನ್ನ, ಭೂಮಿ ಅಥವಾ ಇತರ ವ್ಯಾಪಾರ ಉಪಕರಣಗಳನ್ನು ಖರೀದಿಸುವಂತಹ ಹಣಕಾಸಿನ ವಹಿವಾಟುಗಳನ್ನು ನಡೆಸಲು ಇದು ಉತ್ತಮ ಸಮಯ. ಪುಷ್ಯ ನಕ್ಷತ್ರವು ಗುರುವಾರದಂದು ಬಂದರೆ, ಅದನ್ನು ಗುರು ಪುಷ್ಯ ಅಮೃತ ಯೋಗ ಎಂದು ಕರೆಯಲಾತ್ತಿದ್ದು, ಹೆಚ್ಚು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಪುಷ್ಯ ನಕ್ಷತ್ರ 2022 ರಲ್ಲಿ ಚಿನ್ನವನ್ನು ಖರೀದಿಸಲು ದಿನಗಳ ಪಟ್ಟಿ ಹೀಗಿದೆ:

ಪುಷ್ಯ ನಕ್ಷತ್ರ 2022 ರಲ್ಲಿ ಚಿನ್ನವನ್ನು ಖರೀದಿಸಲು ದಿನಗಳ ಪಟ್ಟಿ ಹೀಗಿದೆ:

18 ಜನವರಿ 2022

14 ಫೆಬ್ರವರಿ 2022

15 ಫೆಬ್ರವರಿ 2022

14 ಮಾರ್ಚ್ 2022

10 ಏಪ್ರಿಲ್ 2022

7 ಮೇ 2022

8 ಮೇ 2022

4 ಜೂನ್ 2022

1 ಜುಲೈ 2022

8 ಜುಲೈ 2022

29 ಜುಲೈ 2022

24 ಆಗಸ್ಟ್ 2022

25 ಆಗಸ್ಟ್ 2022

21 ಸೆಪ್ಟೆಂಬರ್ 2022

18 ಅಕ್ಟೋಬರ್ 2022

14 ನವೆಂಬರ್ 2022

15 ನವೆಂಬರ್ 2022

12 ಡಿಸೆಂಬರ್ 2022

ಮಕರ ಸಂಕ್ರಾಂತಿ - 14 ಜನವರಿ 2022:

ಮಕರ ಸಂಕ್ರಾಂತಿ - 14 ಜನವರಿ 2022:

ಸುಗ್ಗಿಯ ಹಬ್ಬ, ಮಕರ ಸಂಕ್ರಾಂತಿ ಒಂದು ಮಂಗಳಕರ ದಿನ. ಇದನ್ನು ಭಾರತದ ವಿವಿಧ ರಾಜ್ಯಗಳಲ್ಲಿ ಪೊಂಗಲ್ ಮತ್ತು ಬಿಹು ಎಂದೂ ಕರೆಯಲಾಗುತ್ತದೆ. ಮಕರ ಸಂಕ್ರಾಂತಿಯು ಪ್ರತಿ ವರ್ಷ ಜನವರಿ 14 ರಂದು ಬರಲಿದ್ದು, ದಿಉ ಸುಗ್ಗಿಯ ಋತುವಿನ ಆರಂಭವನ್ನು ಸೂಚಿಸುತ್ತದೆ. ಪಂಜಾಬ್‌ನಲ್ಲಿ, ಜನರು ಜನವರಿ 13 ಅನ್ನು ಲೋಹ್ರಿ ಎಂದು ಆಚರಿಸುತ್ತಾರೆ ಮತ್ತು ಚಿನ್ನವನ್ನು ಖರೀದಿಸಲು ಆ ದಿನವನ್ನು ಮಂಗಳಕರವೆಂದು ಪರಿಗಣಿಸುತ್ತಾರೆ. ಮಕರ ಸಂಕ್ರಾಂತಿಯಂದು ಅಥವಾ ಅದರ ಆಸುಪಾಸಿನ ದಿನಗಳು ಚಿನ್ನವನ್ನು ಖರೀದಿಸುವುದು ಸಮೃದ್ಧಿಯ ಸಂಕೇತವಾಗಿದೆ. ಜೊತೆಗೆ ಮಕರ ಸಂಕ್ರಾಂತಿಯಂದು ಚಿನ್ನವನ್ನು ಖರೀದಿಸಿದಾಗ ಆಭರಣಗಳು ಉಡುಗೊರೆಗಳು ಅಥವಾ ಮೇಕಿಂಗ್ ಶುಲ್ಕದ ಮೇಲೆ ರಿಯಾಯಿತಿಗಳಂತಹ ವಿಶೇಷ ಕೊಡುಗೆಗಳನ್ನು ಸಹ ಸಿಗುತ್ತದೆ.

ಯುಗಾದಿ ಮತ್ತು ಗುಡಿ ಪಾಡ್ವಾ - 2 ಏಪ್ರಿಲ್ 2022:

ಯುಗಾದಿ ಮತ್ತು ಗುಡಿ ಪಾಡ್ವಾ - 2 ಏಪ್ರಿಲ್ 2022:

ಹಿಂದೂ ಕ್ಯಾಲೆಂಡರ್ ಪ್ರಕಾರ, ಹೊಸ ವರ್ಷ ಯುಗಾದಿಯಂದು ಪ್ರಾರಂಭವಾಗುತ್ತದೆ. ಈ ದಿನವನ್ನು ಗುಡಿ ಪಾಡ್ವಾ, ಓಣಂ ಮತ್ತು ವೈಶಾಖಿ ಎಂದೂ ಕರೆಯಲಾಗುತ್ತದೆ. ಈ ಹಬ್ಬಗಳ ಹೆಸರುಗಳು ಮತ್ತು ಸಂಪ್ರದಾಯಗಳು ರಾಜ್ಯಗಳಾದ್ಯಂತ ಬದಲಾಗುತ್ತವೆ, ಆದರೆ ಅವು ಎಲ್ಲಾ ಪಂಗಡಗಳಿಗೆ ಮಂಗಳಕರವಾಗಿವೆ. ಆಂಧ್ರಪ್ರದೇಶ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಈ ದಿನವನ್ನು ಯುಗಾದಿ ಎಂದು ಆಚರಿಸಿದರೆ, ಕೇರಳದಲ್ಲಿ ಜನರು ಓಣಂ ಅನ್ನು ಆಚರಿಸುತ್ತಾರೆ. ಮಹಾರಾಷ್ಟ್ರದವರು ಗುಡಿ ಪಾಡ್ವಾವನ್ನು ಆಚರಿಸುತ್ತಾರೆ. ಇದು ಪಂಜಾಬ್‌ನಲ್ಲಿ ವೈಶಾಖಿ ಎಂದು ಜನಪ್ರಿಯವಾಗಿದೆ. ಇವೆಲ್ಲವೂ ಸುಗ್ಗಿಯ ಹಬ್ಬಗಳು ಮತ್ತು ಸಮೃದ್ಧಿಯನ್ನು ಸೂಚಿಸುತ್ತವೆ. ಜನರು ಹೊಸ ವರ್ಷವನ್ನು ಆಚರಿಸುವ ಈ ದಿನಗಳಲ್ಲಿ ಚಿನ್ನದ ಮಾರಾಟವು ಹೆಚ್ಚಾಗುತ್ತದೆ ಮತ್ತು ಚಿನ್ನವನ್ನು ಖರೀದಿಸುವುದು ಹೊಸ ಆರಂಭ ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ.

ಅಕ್ಷಯ ತೃತೀಯ - 2 ಮೇ 2022:

ಅಕ್ಷಯ ತೃತೀಯ - 2 ಮೇ 2022:

ಅಕ್ಷಯ ತೃತೀಯವು ಹಿಂದೂ ಹಬ್ಬವಾಗಿದ್ದು, 2022 ರಲ್ಲಿ ಚಿನ್ನವನ್ನು ಖರೀದಿಸಲು ಅತ್ಯಂತ ಮಂಗಳಕರ ದಿನಗಳಲ್ಲಿ ಒಂದಾಗಿದೆ. ಸಂಪ್ರದಾಯದ ಪ್ರಕಾರ, ಜನರು ಸಂಪತ್ತಿನ ದೇವರಾದ ಕುಬೇರನು ಅಕ್ಷಯ ತೃತೀಯದಲ್ಲಿ ತಮ್ಮ ಮನೆಯವರಿಗೆ ಸಮೃದ್ಧಿಯನ್ನು ನೀಡುತ್ತಾನೆ ಎಂಬ ನಂಬಿಕೆಯದೆ. ಈ ದಿನದಂದು ಖರೀದಿಸಿದ ಎಲ್ಲಾ ವಸ್ತುಗಳು ಅನಿರ್ದಿಷ್ಟವಾಗಿ ಬೆಳೆಯುತ್ತವೆ. ಈ ದಿನ ನೀವು ಖರೀದಿಸುವ ಚಿನ್ನವನ್ನು ಅದೃಷ್ಟ ಮತ್ತು ಪ್ರಗತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಜನರು ಮುಂದಿನ ವರ್ಷಗಳಲ್ಲಿ ಚಿನ್ನ ದುಪ್ಪಟ್ಟಾಗುವ ಭರವಸೆಯೊಂದಿಗೆ ಹೂಡಿಕೆ ಮಾಡುತ್ತಾರೆ.

ನವರಾತ್ರಿ - 26 ಸೆಪ್ಟೆಂಬರ್ 2022 ರಿಂದ 4 ಅಕ್ಟೋಬರ್ 2022:

ನವರಾತ್ರಿ - 26 ಸೆಪ್ಟೆಂಬರ್ 2022 ರಿಂದ 4 ಅಕ್ಟೋಬರ್ 2022:

ನವರಾತ್ರಿಯು ಒಂಬತ್ತು ದಿನಗಳ ಕಾಲ ಭಾರತದಾದ್ಯಂತ ಹೆಚ್ಚು ಸಂಭ್ರಮದಿಂದ ಆಚರಿಸಲಾಗುವ ವಾರ್ಷಿಕ ಹಬ್ಬವಾಗಿದೆ. ಈ ಹಬ್ಬವು ದುಷ್ಟ ರಾಕ್ಷಸ ಮಹಿಷಾಸುರನ ಮೇಲೆ ದುರ್ಗಾದೇವಿಯ ವಿಜಯವನ್ನು ಸೂಚಿಸುತ್ತದೆ. ನವರಾತ್ರಿಯ ಒಂಬತ್ತು ದಿನಗಳು ಹೊಸ ಆರಂಭ ಮತ್ತು ಸಮೃದ್ಧಿಯನ್ನು ಸೂಚಿಸುತ್ತವೆ. ಪಶ್ಚಿಮ ಬಂಗಾಳ ಮತ್ತು ಗುಜರಾತ್ ಜನರಿಗೆ ಇದು ಮಹತ್ವದ ಹಬ್ಬವಾಗಿದೆ. ಆದಾಗ್ಯೂ, ಭಾರತದಾದ್ಯಂತ ಜನರು ಒಂಬತ್ತು ದಿನಗಳ ಉದ್ದಕ್ಕೂ ಹಬ್ಬಗಳಲ್ಲಿ ಪಾಲ್ಗೊಳ್ಳುತ್ತಾರೆ. ಕೆಟ್ಟದ್ದರ ಮೇಲೆ ಒಳ್ಳೆಯದ ವಿಜಯವನ್ನು ಆಚರಿಸಲು ಜನರು ಉಪವಾಸವನ್ನು ಆಚರಿಸುತ್ತಾರೆ. ಅವರು ಅದೃಷ್ಟದ ಸಂಕೇತವಾಗಿ ಚಿನ್ನದ ಆಭರಣಗಳು ಸೇರಿದಂತೆ ಹೊಸ ವಸ್ತುಗಳನ್ನು ಖರೀದಿಸುತ್ತಾರೆ. ಇದನ್ನು ದುರ್ಗಾ ದೇವಿಯ ಆಶೀರ್ವಾದ ಎಂದು ಪರಿಗಣಿಸಲಾಗಿದೆ. ನವರಾತ್ರಿಯ ಸಮಯದಲ್ಲಿ ಹೆಚ್ಚಿನ ಜನರು ತಮ್ಮ ಮದುವೆಯ ಆಭರಣಗಳನ್ನು ಖರೀದಿಸುವುದರಿಂದ ಈ ದಿನಗಳಲ್ಲಿ ಚಿನ್ನದ ಬೆಲೆಗಳು ಏರುತ್ತವೆ.

ದಸರಾ - 5 ಅಕ್ಟೋಬರ್ 2022:

ದಸರಾ - 5 ಅಕ್ಟೋಬರ್ 2022:

ದಸರಾವು ನವರಾತ್ರಿಯ ಕೊನೆಯ ದಿನದಂದು ಆಚರಿಸಲಾಗುವ ಪ್ರಮುಖ ಹಿಂದೂ ಹಬ್ಬವಾಗಿದೆ. ಇದು ಕೆಟ್ಟದ್ದರ ವಿರುದ್ಧ ಒಳಿತಿನ ವಿಜಯವನ್ನು ಸೂಚಿಸುವ ಹಬ್ಬವಾಗಿದೆ. ರಾಮನು ರಾವಣನನ್ನು ಕೊಂದನು ಮತ್ತು ದುರ್ಗಾದೇವಿಯು ಈ ದಿನ ರಾಕ್ಷಸ ರಾಜನನ್ನು ಕೊಂದಳು. ತಮ್ಮ ವಿಜಯವನ್ನು ಮತ್ತು ಒಳ್ಳೆಯ ಸಮಯದ ಆರಂಭವನ್ನು ಆಚರಿಸಲು, ಜನರು ಚಿನ್ನವನ್ನು ಖರೀದಿಸುತ್ತಾರೆ. ನವರಾತ್ರಿಯ ಒಂಬತ್ತು ದಿನಗಳು ಚಿನ್ನವನ್ನು ಖರೀದಿಸಲು ಮಂಗಳಕರವಾಗಿದೆ. ಆದಾಗ್ಯೂ, ಕೆಲವರು ಚಿನ್ನದ ಮೇಲೆ ಹೂಡಿಕೆ ಮಾಡಲು ದಸರಾಕ್ಕೆ ಆದ್ಯತೆ ನೀಡುತ್ತಾರೆ. ಬೇಡಿಕೆ ತುಂಬಾ ಹೆಚ್ಚಿರುವುದರಿಂದ ಈ ದಿನಗಳಲ್ಲಿ ಚಿನ್ನದ ಬೆಲೆಗಳು ಗರಿಷ್ಠ ಮಟ್ಟದಲ್ಲಿರಬಹುದು.

ಧನ್ತೇರಸ್/ ಧನತ್ರಯೋದಶಿ- 23 ಅಕ್ಟೋಬರ್ 2022:

ಧನ್ತೇರಸ್/ ಧನತ್ರಯೋದಶಿ- 23 ಅಕ್ಟೋಬರ್ 2022:

ಧನ್ತೇರಸ್ ಪ್ರತಿ ವರ್ಷ ದೀಪಾವಳಿಯ ಎರಡು ದಿನಗಳ ಮೊದಲು ಬರುವ ಹಬ್ಬವಾಗಿದೆ. ದೀಪಾವಳಿಯು ಉತ್ತಮ ಆರೋಗ್ಯ ಮತ್ತು ಸಮೃದ್ಧಿಯ ದೇವತೆಯಾದ ಲಕ್ಷ್ಮಿ ದೇವಿಗೆ ಸಮರ್ಪಿತವಾದ ಹಬ್ಬವಾಗಿದ್ದು, ಈ ಧನತ್ರಯೋದಶಿ ದೀಪಾವಳಿ ಹಬ್ಬದ ಆರಂಭವನ್ನು ಸೂಚಿಸುತ್ತದೆ, ಆದ್ದರಿಂದ ಜನರು ಹೊಸ ವಸ್ತುಗಳನ್ನು ಖರೀದಿಸುತ್ತಾರೆ. ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಮತ್ತು ಅವಳನ್ನು ತಮ್ಮ ಮನೆಗಳಿಗೆ ಆಹ್ವಾನಿಸಲು ಈ ದಿನ ಚಿನ್ನವನ್ನು ಖರೀದಿಸಲು ಆದ್ಯತೆ ನೀಡುತ್ತಾರೆ. ಸಂಪ್ರದಾಯದಂತೆ, ಪ್ರತಿ ಮನೆಯವರು ಕನಿಷ್ಠ ಒಂದು ಹೊಸ ವಸ್ತುವನ್ನು ಖರೀದಿಸುತ್ತಾರೆ ಮತ್ತು ಹೆಚ್ಚಿನವರು ಚಿನ್ನದ ಆಭರಣಗಳನ್ನು ಖರೀದಿಸಲು ಬಯಸುತ್ತಾರೆ.

ಬಲಿಪಾಡ್ಯಮಿ - 26ನೇ ಅಕ್ಟೋಬರ್ 2022:

ಬಲಿ ಪಾಡ್ಯಮಿ ಅಥವಾ ಬಲಿ ಪಾಡ್ಯ ದೀಪಾವಳಿಯ ಅಂತ್ಯವನ್ನು ಸೂಚಿಸುತ್ತದೆ. ಇದನ್ನು ದೀಪಾವಳಿಯ ನಾಲ್ಕನೇ ದಿನದಂದು ಆಚರಿಸಲಾಗುತ್ತದೆ. ದೀಪಾವಳಿಯ ಕೊನೆಗೊಳ್ಳುತ್ತಿದ್ದಂತೆ, ಬಲಿಪ್ರತಿಪಾಡ್ಯಮಿಯಂದು ಚಿನ್ನವನ್ನು ಖರೀದಿಸುವುದು ಹೆಚ್ಚು ಮಹತ್ವವನ್ನು ಹೊಂದಿದೆ. ಜನರು ತಮ್ಮ ಕುಟುಂಬವನ್ನು ಸಮೃದ್ಧಿಯಿಂದ ಆಶೀರ್ವದಿಸಲು ಮತ್ತು ಸಮೃದ್ಧಿಯನ್ನು ಆಹ್ವಾನಿಸಲು ಚಿನ್ನವನ್ನು ಖರೀದಿಸುತ್ತಾರೆ. ಈ ದಿನ ಖರೀದಿಸಿದ ಚಿನ್ನವು ಪ್ರಗತಿ ಮತ್ತು ಅದೃಷ್ಟವನ್ನು ಸಂಕೇತಿಸುತ್ತದೆ.

Read more about: insync life ಜೀವನ
English summary

Auspicious days and time to buy gold in 2022 in Kannada

Shubh Muhurat For Gold Purchase in 2022 : Here is the list of Most auspicious days and time to buy gold in 2022 in Kannada. Take a look.
Story first published: Thursday, January 6, 2022, 17:51 [IST]
X
Desktop Bottom Promotion