Latest Updates
-
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು!
ಹಿಂದು ಧರ್ಮ: ತಿಲಕವಿಡುವುದು ಹಲವಾರು ಸಂಕೇತದ ಸೂಚನೆ
ಹಿಂದೂ ಧರ್ಮದಲ್ಲಿ ಯಾವುದೇ ದೇವಸ್ಥಾನಕ್ಕೆ ಹೋದರೂ ಕುಂಕುಮ ಅಥವಾ ಶ್ರೀಗಂಧವನ್ನು ಹಣಿಗಿಡಲು ನೀಡುವರು. ಇದು ತುಂಬಾ ಪೂಜ್ಯನೀಯವೆಂದು ನಂಬಲಾಗಿದೆ. ಪ್ರತಿಯೊಂದು ಪೂಜೆಗಳಲ್ಲಿ ಕುಂಕುಮವು ಇದ್ದೇ ಇರುತ್ತದೆ. ಪೂಜೆಯ ಮಂಗಳಾರತಿ ಆದ ಬಳಿಕ ಎಲ್ಲರೂ ತಿಲಕವಿಟ್ಟುಕೊಳ್ಳುವರು. ತಿಲಕವಿಡುವುದು ಸಾವಿರಾರು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ.
ಇದು ಹಿಂದೂ ಧರ್ಮದ ಆಚರಣೆಯೆಂದು ಕೆಲವರು ನಂಬಿದ್ದಾರೆ. ಆದರೆ ಇದರ ಹಿಂದೆ ವೈಜ್ಞಾನಿಕ ಕಾರಣಗಳು ಕೂಡ ಇವೆ. ಪೂಜೆಯ ವೇಳೆ ಕುಂಕುಮ ಅಥವಾ ಶ್ರೀಗಂಧದ ತಿಲಕವಿಡಲಾಗುತ್ತದೆ. ಹಣೆಗೆ ಎರಡು ಹುಬ್ಬುಗಳ ನಡುವೆ ಉಂಗುರದ ಬೆರಳಿನಿಂದ ತಿಲವಿಡಲಾಗುತ್ತದೆ.

ಉಂಗುರ ಬೆರಳಿನ ಕೆಳಗಿನ ಭಾಗವನ್ನು ಸೂರ್ಯ ಪರ್ವತ ಅಥವಾ ಸೂರ್ಯ ಕ್ಷೇತ್ರ ಎಂದು ಕರೆಯಲಾಗುತ್ತದೆ. ಆಗ್ಯ ಚಕ್ರವು ಹಣೆಯ ಮಧ್ಯಭಾಗದಲ್ಲಿ ನೆಲೆಸಿದೆ. ತಿಲಕವನ್ನು ಉಂಗುರ ಬೆರಳಿನಿಂದ ಇಡುವುದರಿಂದ ಆ ಜಾಗದಲ್ಲಿ ಒತ್ತಡವು ಬೀಳುವುದು ಮತ್ತು ಇದರಿಂದ ಸೂರ್ಯ ಪ್ರಜ್ವಲಿಸುವನು. ತಿಲಕವಿಡುವುದು ಕೇವಲ ಸೌಂದರ್ಯಕ್ಕೆ ಮಾತ್ರವಲ್ಲ. ತಿಲಕವು ಆಗ್ಯ ಚಕ್ರವನ್ನು ಎಬ್ಬಿಸುವುದು. ಇದರ ಮೂಲಕ ವ್ಯಕ್ತಿಯೊಬ್ಬ ಬುದ್ಧಿವಂತಿಕೆ ಹಾಗೂ ಖ್ಯಾತಿ ಪಡೆಯಬಲ್ಲ.
ತಿಲಕವಿಡುವ ಜಾಗವು ದೇಹದ ಎಲ್ಲಾ ಪ್ರಮುಖ ನರಗಳಿಗೆ ಕೇಂದ್ರ. ಇದರಿಂದ ದೇಹದಲ್ಲಿ ಶಕ್ತಿಯು ಬರುವುದು ಮತ್ತು ಒಂದೇ ಸ್ಥಳದ ಮೇಲೆ ಗಮನಹರಿಸಲು ಸಾಧ್ಯವಾಗುವುದು. ತಿಲಕ ಅಥವಾ ಕುಂಕುಮ ಇಟ್ಟುಕೊಳ್ಳುವುದು ನಮಗೆ ನಾವೇ ಒಂದು ರೀತಿಯ ಪೂಜೆ ಮಾಡಿಕೊಂಡಂತೆ.



Click it and Unblock the Notifications
