ಆರ್ಥಿಕ ತೊಂದರೆಯೇ ಹಾಗಾದರೆ, ಪ್ರತಿದಿನ 'ಲಕ್ಷ್ಮಿ ಪೂಜೆ' ಮಾಡಿ

By: manu
Subscribe to Boldsky

ಜೀವನದಲ್ಲಿ ಯಾವುದು ಇಲ್ಲದಿದ್ದರೂ ಹಣವಿರಬೇಕು. ಹಣವೊಂದಿದ್ದರೆ ಹೇಗೋ ಜೀವನ ನಡೆಸಿಕೊಂಡು ಹೋಗುತ್ತೇವೆ ಎನ್ನುವ ಮನೋಭಾವ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಇದು ಸತ್ಯದ ವಿಚಾರವೂ ಹೌದು. ಹಣವಿಲ್ಲ ಎಂದರೆ ಏನೂ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಲಕ್ಷ್ಮಿ ದೇವಿಯ ಕೃಪೆಗೆ ಒಳಗಾಗಿ ಕೈ ತುಂಬಾ ಹಣ, ಮನೆ ತುಂಬಾ ಶಾಂತಿ-ನೆಮ್ಮದಿ ಇರಲಿ ಎಂದು ಬಯಸುವುಸದು ಸಹಜ. ದುರ್ಗಾ ದೇವಿಯ ಪ್ರಮುಖ ಮೂರು ಅವತಾರದಲ್ಲಿ ಲಕ್ಷ್ಮಿ ದೇವಿಯ ಅವತಾರವೂ ಒಂದು.

ಎಷ್ಟೇ ದೊಡ್ಡ ಕೆಲಸ, ಆಸ್ತಿ ಇದ್ದರೂ ಕೆಲವೊಮ್ಮೆ ಕೈಯಲ್ಲಿ ಹಣ ನಿಲ್ಲುವುದಿಲ್ಲ. ಮುಟ್ಟಿದ್ದೆಲ್ಲಾ ಹಾಳಾಗುವುದು, ವ್ಯಾಪಾರ-ವ್ಯವಹಾರದಲ್ಲಿ ನಷ್ಟ ಉಂಟಾಗುವುದು. ಇಂತಹ ಸಮಸ್ಯೆಗಳಿಂದ ದೂರವಿರಬಬೇಕು ಎಂದರೆ ಲಕ್ಷ್ಮಿ ಪೂಜೆ ಮಾಡಬೇಕು. ಅದಕ್ಕಾಗಿ ಕೆಲವು ನಿಯಮ ಹಾಗೂ ಪದ್ಧತಿಗಳನ್ನು ಅನುಸರಿಸಿದರೆ ಮನೆಯಲ್ಲಿ ಸದಾ ಲಕ್ಷ್ಮಿ ನಲಿಯುತ್ತಿರುತ್ತಾಳೆ. ಎಲ್ಲಾ ದಾರಿದ್ರ್ಯವೂ ನಿವಾರಣೆಯಾಗುತ್ತದೆ. ಈ ವರ್ಷದ ಶ್ರಾವಣ ಮಾಸದಿಂದಲೇ ಲಕ್ಷ್ಮಿ ದೇವಿಯ ಆರಾಧನೆ ಆರಂಭಿಸಿ ಅದೃಷ್ಟವಂತರಾಗಿ...

ಪ್ರತಿ ಶುಕ್ರವಾರ 108 ಬಾರಿ, ಈ ಮಂತ್ರ ಜಪಿಸಿ

ಪ್ರತಿ ಶುಕ್ರವಾರ 108 ಬಾರಿ, ಈ ಮಂತ್ರ ಜಪಿಸಿ

ಪ್ರತಿ ಶುಕ್ರವಾರ 108 ಬಾರಿ (ಒಂದು ಮಾಲಾ)ಶುಕ್ರಾ ಬೀಚ್ ಮಂತ್ರವನ್ನು ಜಪಿಸಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ನಿಮ್ಮನ್ನು ಕಾಯುತ್ತಾಳೆ. ನೀವು ಹೇಳಬೇಕಾದ ಮಂತ್ರ ಹೀಗಿದೆ ನೋಡಿ... "ಓಂ ಡ್ರಾಮ್ ಡ್ರೀಮ್ ಡ್ರಾಮ್ ಸಹ ಶುಕ್ರೇ ನಮಃ"

ದೇವರ ಕೋಣೆ ಸ್ವಚ್ಛವಾಗಿರಬೇಕು

ದೇವರ ಕೋಣೆ ಸ್ವಚ್ಛವಾಗಿರಬೇಕು

ದೇವರ ಕೋಣೆಯನ್ನು ಸ್ಚಚ್ಛ ಹಾಗೂ ನೀಟಾಗಿ ಇರುವಂತೆ ಕಾಪಾಡಬೇಕು. ಮಂತ್ರವನ್ನು ಜಪಿಸುವಾಗ ತುಪ್ಪದ ದೀಪ ಹಚ್ಚಿ ಜಪಿಸಬೇಕು. ಹೀಗೆ ಮಾಡುವುದರಿಂದ ಮನೆಗೆ ಶುಭವಾಗುವುದು. ಲಕ್ಷ್ಮಿ ಒಲಿಯುವಳು.

ಮನೆಯಲ್ಲಿ 'ದೇವರ ಕೋಣೆ' ಹೀಗಿರಲಿ, ಎಲ್ಲವೂ ಶುಭವಾಗುವುದು...

ಶ್ರೀ ಯಂತ್ರವನ್ನಿಡಬೇಕು

ಶ್ರೀ ಯಂತ್ರವನ್ನಿಡಬೇಕು

ಮನೆಯಲ್ಲಿ ಪವಿತ್ರವಾದ ಶ್ರೀ ಯಂತ್ರವನ್ನು ಇಟ್ಟಿರಬೇಕು. ಪುರಾಣದ ಪ್ರಕಾರ ಶ್ರೀ ಯಂತ್ರವು ಬ್ರಹ್ಮ ಮತ್ತು ವಿಷ್ಣು ದೇವರ ಕೃಪೆಗೆ ಒಳಗಾಗಿತ್ತು ಎನ್ನಲಾಗುತ್ತದೆ.

ಆರ್ಥಿಕ ಸುಧಾರಣೆ ಆಗುವುದು

ಆರ್ಥಿಕ ಸುಧಾರಣೆ ಆಗುವುದು

ಶ್ರೀ ಯಂತ್ರವನ್ನು "ಓಂ" ಧ್ವನಿಯ ಕಂಪನ ದೃಶ್ಯ ಚಿತ್ರಣ ಎಂದು ಪರಿಗಣಿಸಲಾಗಿದೆ. ಮನೆಯಲ್ಲಿ ಈ ಯಂತ್ರವನ್ನು ಇಟ್ಟರೆ ಓಂ ಎನ್ನುವ ಧ್ವನಿಯಿಂದ ವಿಷ್ಣು ದೇವರ ಕೃಪೆಗೆ ಒಳಗಾಗಬಹುದು. ಈ ಯಂತ್ರದ ಚಿತ್ರವನ್ನು ಪೂರ್ವ ದಿಕ್ಕೆಗೆ ಬರುವಂತೆ ಇಟ್ಟರೆ ಆರ್ಥಿಕ ಸ್ಥಿತಿ ಸುಧಾರಣೆಯಾಗುವುದು ಎನ್ನುವ ನಂಬಿಕೆಯಿದೆ.

ಕೌರಿ ಚಿಪ್ಪುಗಳು

ಕೌರಿ ಚಿಪ್ಪುಗಳು

ಲಕ್ಷ್ಮಿಯು ಸಮುದ್ರದಲ್ಲಿ ಜನಿಸಿದಾಕೆ ಎನ್ನುತ್ತವೆ ಪುರಾಣಗಳು. ಹೀಗಾಗಿ ಸಮುದ್ರದಲ್ಲಿ ಸಿಗುವಂತಹ ಚಿಪ್ಪುಗಳಲ್ಲಿ ಕೌರಿಯೂ ಜಾತಿಯ ಚಿಪ್ಪನ್ನು ಮನೆಯಲ್ಲಿ ಇಡುವುದರಿಂದ ಲಕ್ಷ್ಮೀಯು ಒಲಿಯುತ್ತಾಳಂತೆ.

ಲಕ್ಷ್ಮಿ-ಗಣಪತಿಯ ಮೂರ್ತಿಯನ್ನು ಜತೆಯಲ್ಲಿ ಇಟ್ಟು ಪೂಜೆ ಮಾಡಿ

ಲಕ್ಷ್ಮಿ-ಗಣಪತಿಯ ಮೂರ್ತಿಯನ್ನು ಜತೆಯಲ್ಲಿ ಇಟ್ಟು ಪೂಜೆ ಮಾಡಿ

ಲಕ್ಷ್ಮಿ ಮತ್ತು ಗಣಪತಿ ವಿಗ್ರಹಗಳು ಲಕ್ಷ್ಮಿ ಹಾಗೂ ಗಣಪತಿಯ ಮೂರ್ತಿಯನ್ನು ಜತೆಯಲ್ಲಿ ಇಟ್ಟು ಯಾವಾಗಲೂ ಪೂಜೆ ಮಾಡುತ್ತಾ ಇದ್ದರೆ ಆಗ ಲಕ್ಷ್ಮಿಯೂ ಬೇಗನೆ ಒಲಿಯುತ್ತಾಳೆ ಎಂದು ನಂಬಲಾಗಿದೆ. ಮೂರ್ತಿಗಳು ಬೆಳ್ಳಿಯದ್ದಾಗಿದ್ದರೆ ಸಂಪತ್ತು ಯಾವತ್ತೂ ಮನೆಯಿಂದ ಹೊರಹೋಗುವುದಿಲ್ಲ ಎನ್ನುವ ನಂಬಿಕೆಯಿದೆ.

ಲಕ್ಷ್ಮಿಯನ್ನು ಪೂಜಿಸುವ ವಿಧಾನ

ಲಕ್ಷ್ಮಿಯನ್ನು ಪೂಜಿಸುವ ವಿಧಾನ

ಸಾಕ್ಷಾತ್ ಲಕ್ಷ್ಮೀ ದೇವಿಯು ಕಮಲದ ಹೂವಿನಲ್ಲಿ ನೆಲೆಸಿರುತ್ತಾಳೆ ಎಂಬ ನಂಬಿಕೆ ಎಲ್ಲರಲ್ಲಿ ಮನೆ ಮಾಡಿದೆ. ಅದರಲ್ಲೂ ನೀವು ಕಮಲದ ಬೀಜಗಳ ಜಪಮಾಲೆಯನ್ನು ಮನೆಯಲ್ಲಿ ಇರಿಸುವುದರಿಂದ ಆಕೆಯನ್ನು ಮನೆಗೆ ಆಹ್ವಾನಿಸಬಹುದು ಎಂದು ಹೇಳಲಾಗುತ್ತದೆ.

English summary

A Simple Tip That Can Help Please Goddess Laxmi & Bring Riches

Goddess Laxmi, who is considered to be one of the three major forms of Durga, is very benevolent towards her devotees. Simple habits like hygenic living and generosity towards needy people is enough to please her. But sometimes we experience that despite such habits, one is facing monetary issues or doesn't have abundance in life. No matter what your situation is, a powerful mantra described in shastras that can evoke Laxmi's blessings.
Subscribe Newsletter