For Quick Alerts
ALLOW NOTIFICATIONS  
For Daily Alerts

ಶಿವನ ಅನುಗ್ರಹ ಪಡೆದುಕೊಳ್ಳಲು 16 ಸೋಮವಾರ ವ್ರತ ಮಾಡಿ

|
16 ಸೋಮವಾರಗಳು ಈ ರೀತಿ ವ್ರತ ಮಾಡಿದರೆ ಶಿವನ ಅನಿಗ್ರಹ ಖಂಡಿತ ಸಿಗುತ್ತೆ | Oneindia Kannada

ಸೋಮವಾರ ದಿನ ಅತ್ಯಂತ ಪವಿತ್ರ ಎಂದೆನಿಸಿದ್ದು ಈ ದಿನದಂದು ಶಿವನ ಪೂಜೆಯನ್ನು ನಡೆಸಲಾಗುತ್ತದೆ. ಈ ದಿನ ಶಿವಭಕ್ತರು ಶಿವಾಲಯಕ್ಕೆ ತೆರಳಿ ಶಿವನ ಪೂಜೆಯನ್ನು ಮಾಡುತ್ತಾರೆ ಪೂಜೆಯನ್ನು ನಡೆಸುತ್ತಾರೆ ತಮ್ಮ ಸಂಕಷ್ಟಗಳನ್ನು ಶಿವನಲ್ಲಿ ತೋಡಿಕೊಳ್ಳುತ್ತಾರೆ. ಭೋಲೇನಾಥ ಎಂದೇ ಕರೆಯಿಸಿಕೊಳ್ಳುವ ಶಿವನು ಸರಳ ಪೂಜೆಗೆ ಒಲಿಯುವ ಮಹಾಮಹಿಮನಾಗಿದ್ದಾರೆ. ವಿಶ್ವದ ಒಳಿತಿಗಾಗಿ ವಿಷವನ್ನು ಕುಡಿದು ನೀಲಕಂಠ ಎಂದೆನಿಸಿಕೊಂಡಿರುವ ಭಗವಂತನು ಭಕ್ತರ ಕಷ್ಟಕಾರ್ಪಣ್ಯಗಳನ್ನು ನಿವಾರಿಸುವವರಾಗಿದ್ದಾರೆ.

ಹದಿನಾರು ಸೋಮವಾರ ಅಥವಾ 16 ಸೋಮವಾರಗಳು ಶಿವನನ್ನು ಸಂತುಷ್ಟಗೊಳಿಸಿದರೆ ಭಗವಂತ ನಮ್ಮನ್ನು ಸದಾಕಾಲ ಆಶೀರ್ವದಿಸಿ ನಮ್ಮ ಅಭೀಷ್ಟಗಳನ್ನು ನೆರವೇರಿಸಿಕೊಡುತ್ತಾರೆ ಎಂಬುದು ನಂಬಿಕೆಯಾಗಿದೆ. ಸೋಲಃ ಸೋಮವಾರ ಹೆಚ್ಚು ಪ್ರಸಿದ್ಧವಾಗಿದ್ದು 16 ಸೋಮವಾರಗಳಂದು ಭಕ್ತರು ಶಿವನನ್ನು ನೆನೆದು ವ್ರತ ವನ್ನು ಕೈಗೊಂಡರೆ ಅದು ಅತ್ಯುತ್ತಮ ಎಂದೆನಿಸಿದೆ. ಕೈಲಾಸವಾಸಿಯು ಭಕ್ತರ ಮೊರೆಯನ್ನು ಕೇಳುವ ಕಾರುಣ್ಯವಂತರು. ಎಷ್ಟೇಷ್ಟೋ ಭಕ್ತರನ್ನು ಸಾವಿನ ದವಡೆಯಿಂದ ಪಾರು ಮಾಡಿ ತನ್ನ ಭಕ್ತರನ್ನು ಮಗುವಿನಂತೆ ಕಾಪಾಡುವವರಾಗಿದ್ದಾರೆ.

ಕೋಳೂರ ಕೊಡಗೂಸು, ಭಕ್ತ ಮಾರ್ಕಂಡೇಯ ಹೀಗೆ ಶಿವನು ತನ್ನ ಭಕ್ತರ ಬೆಂಗಾವಲಿಗೆ ಸದಾಕಾಲ ನಿಲ್ಲುವವರಾಗಿದ್ದಾರೆ. ಇನ್ನು ಹಿಂದೂ ಧರ್ಮದಲ್ಲಿ 16 ಸೋಮವಾರಗಳ ಉಪವಾಸ ವ್ರತಾಚರಣೆ ಹೆಚ್ಚು ಪ್ರಸಿದ್ಧವಾಗಿದ್ದು ಆದಿ ಕಾಲದಿಂದಲೂ ನಡೆದುಕೊಂಡು ಬಂದಿರುವಂತಹದ್ದಾಗಿದೆ. ಇದನ್ನು ಸೋಲಾರ್ ಸೋಮವಾರ ವ್ರತ ಎಂದೂ ಕರೆಯಲಾಗುತ್ತದೆ. 16 ದಿನ ನಿರಂತರವಾಗಿ ಸೋಮವಾರಗಳಂದು ಉಪವಾಸ ಮಾಡಿ ಶಿವನ ಮನಸ್ಸನ್ನು ಗೆಲ್ಲಬಹುದಾಗಿದೆ ಅವರ ಆಶೀರ್ವಾದವನ್ನು ಪಡೆದುಕೊಳ್ಳಬಹುದಾಗಿದೆ.

ಯಾರಿಗೆ ಮತ್ತು ಯಾವಾಗ ಸೋಮವಾರ ವ್ರತವನ್ನು ಮಾಡಬೇಕು

ಯಾರಿಗೆ ಮತ್ತು ಯಾವಾಗ ಸೋಮವಾರ ವ್ರತವನ್ನು ಮಾಡಬೇಕು

ಶಿವನ ಅನುಗ್ರಹವನ್ನು ಪಡೆಯಬೇಕಾದವರು 16 ಸೋಮವಾರ ವ್ರತ ವನ್ನು ಕೈಗೊಳ್ಳಬಹುದು. ವೈವಾಹಿಕ ಜೀವನದಲ್ಲಿ ಕಷ್ಟವನ್ನು ಅನುಭವಿಸುತ್ತಿರುವವರು ಮತ್ತು ತಾವು ಮೆಚ್ಚುವವರನ್ನು ಪತಿಯಾಗಿ ಪಡೆಯಬೇಕೆಂದು ಬಯಸಿರುವವರು ಈ ವ್ರತವನ್ನು ಮಾಡಬಹುದು. ಶ್ರಾವಣ ಮಾಸದ ಪ್ರಥಮ ಸೋಮವಾರಂದು ವ್ರತ ವನ್ನು ಕೈಗೊಳ್ಳಬೇಕು (ಜುಲೈ-ಆಗಸ್ಟ್). ವ್ರತ ವು ಉಪವಾಸ, ಪೂಜೆ ಮತ್ತು 16 ಸೋಮವಾರದ ವ್ರತ ಕಥೆಯನ್ನು ಓದುವುದನ್ನು ಒಳಗೊಂಡಿದೆ (ಸೋಲಃ ಸೋಮವಾರ ವ್ರತ ಕಥೆ).

ಸೋಮವಾರ ವ್ರತದ ಉಪವಾಸ ನಿಯಮಗಳು

ಸೋಮವಾರ ವ್ರತದ ಉಪವಾಸ ನಿಯಮಗಳು

ಈ 16 ಸೋಮವಾರದ ವ್ರತದ ನಿಯಮವು ಅತ್ಯಂತ ಸರಳವಾಗಿದೆ.

ಈ ಸಮಯದಲ್ಲಿ ಉಪವಾಸ ಕೈಗೊಳ್ಳುವವರು ಒಳ್ಳೆಯ ಮನಸ್ಸಿನಿಂದ ಶ್ರದ್ಧಾ ಭಕ್ತಿಯಿಂದ ಶಿವ ದೇವರನ್ನು ನೆನೆಯಬೇಕು. ಸೋಮವಾರ ಬೆಳಗ್ಗೆ ವ್ರತ ಆರಂಭವಾಗುತ್ತದೆ.

*ಪ್ರಾತಃ ಕಾಲದಲ್ಲಿಯೇ ಎದ್ದು ನಿಮ್ಮ ಬೆಳಗ್ಗಿನ ನಿತ್ಯಕರ್ಮಗಳನ್ನು ಮುಗಿಸಿ. ಸ್ನಾನದ ನಂತರ ಪೂಜಾ ಕೊಠಡಿಗೆ ತೆರಳಿ ಶಿವನ ಪೂಜೆಯನ್ನು ಆರಂಭಿಸಿ ನೀವು ಶಿವಲಿಂಗ ಅಥವಾ ಶಿವ ದೇವರ ಫೋಟೋವನ್ನು ಇರಿಸಿಕೊಳ್ಳಬಹುದು.

*ದೇವರ ಸ್ಥಾನವನ್ನು ಶುಚಿಗೊಳಿಸಿ ಎಳ್ಳೆಣ್ಣೆಯಿಂದ ದೀಪವನ್ನು ಹಚ್ಚಿ. ಶ್ರೀಗಂಧ ಮತ್ತು ಹೂಗಳಿಂದ ಮೂರ್ತಿಯನ್ನು ಅಲಂಕರಿಸಿ. ಶಿವನ ಹೆಸರನ್ನು ಪಠಿಸಿ ಮತ್ತು ಹೂಗಳನ್ನು ಅರ್ಪಿಸಿ.

*ಪೂಜೆಯ ಕೊನೆಯಲ್ಲಿ ದೇವರಿಗೆ ವೀಳ್ಯದೆಲೆ, ನಟ್ಸ್, ಅಡಿಕೆ, ಹಣ್ಣುಗಳು ಮತ್ತು ಮನೆಯಲ್ಲಿ ನೀವು ತಯಾರಿಸಿದ ಸಿಹಿತಿಂಡಿಯನ್ನು ಅರ್ಪಿಸಿ.

ಸೋಮವಾರ ವ್ರತದ ಉಪವಾಸ ನಿಯಮಗಳು

ಸೋಮವಾರ ವ್ರತದ ಉಪವಾಸ ನಿಯಮಗಳು

*16 ಸೋಮವಾರದ ವ್ರತ ದ ಕಥೆಯನ್ನು ಪಾರಾಯಣೆ ಮಾಡಿ ಮತ್ತು ಕರ್ಪೂರವನ್ನು ಬೆಳಗಿಸಿ ಶಿವನಿಗೆ ಆರತಿಯನ್ನು ಬೆಳಗಿ.

*ಪೂಜೆಯ ನಂತರ ನೀವು ದಿನವಿಡೀ ಉಪವಾಸವನ್ನು ಕೈಗೊಳ್ಳಬೇಕು. ಉಪವಾಸವನ್ನು ನಡೆಸಿಕೊಂಡು ಕಚೇರಿ ಇಲ್ಲವೇ

ಮನೆಯ ಕೆಲಸವನ್ನು ಮಾಡಬೇಕು.*ಸಂಜೆ, ದೇವರ ಮುಂದೆ ದೀಪವನ್ನು ಹಚ್ಚಿ ಮತ್ತು ಪ್ರಸಾದವನ್ನು ದೇವರಿಗೆ ಅರ್ಪಿಸಿ. ಪೂಜೆಯ ನಂತರ ಪ್ರಸಾದ ಮತ್ತು ಹಣ್ಣುಗಳ ಸೇವನೆ ಮಾಡಿ. ಹೀಗೆ 16 ಸೋಮವಾರಗಳ ಕಾಲ ವ್ರತ ವನ್ನು ನೀವು ಮಾಡಬೇಕು.

*ಪೂಜೆಯ ಕೊನೆಯಲ್ಲಿ ದೇವರಿಗೆ ವೀಳ್ಯದೆಲೆ, ನಟ್ಸ್, ತೆಂಗಿನ ಕಾಯಿ ಮತ್ತು ಹಣ್ಣುಗಳನ್ನು ಅರ್ಪಿಸಿ ಮತ್ತು ಮನೆಯಲ್ಲಿ

ಮಾಡಿದ ಸಿಹಿಯನ್ನು ದೇವರಿಗೆ ನೀಡಿ.

*ಪೂಜೆಯ ನಂತರ ಇಡೀ ದಿನ ನೀವು ಉಪವಾಸವನ್ನು ಮಾಡಬೇಕು. ಈ ಸಮಯದಲ್ಲಿ ನಿಮ್ಮ ಮನೆಗೆಲಸ ಇಲ್ಲವೇ

ಕಚೇರಿ ಕೆಲಸಗಳನ್ನು ನೀವು ಮಾಡಬಹುದು.

16 ಸೋಮವಾರ ವ್ರತ ದ ಕಥೆ

16 ಸೋಮವಾರ ವ್ರತ ದ ಕಥೆ

ಒಂದೂರಿನಲ್ಲಿ ಒಬ್ಬ ಜಮೀನ್ದಾರಿನಿದ್ದು ಆತ ಮತ್ತು ಆತನ ಪತ್ನಿ ದೈವೀ ಭಕ್ತರಾಗಿದ್ದು ದೈವಿಕ ನೆಲೆಯಲ್ಲಿ ಜೀವನ ನಡೆಸಿದ್ದರು. ಆದರೆ ಸಂತಾನ ಕೊರತೆ ಅವರನ್ನು ಕಾಡುತ್ತಿತ್ತು. ಶಿವನನ್ನು ಪ್ರಾರ್ಥಿಸಿದಾಗ ದೇವರು ಅವರಿಗೆ ಪುತ್ರ ಸಂತಾನವನ್ನು ನೀಡುತ್ತಾರೆ. ಆದರೆ ದುರಾದೃಷ್ಟವಶಾತ್ ಪುತ್ರನಿಗೆ 12 ವರ್ಷ ಜೀವಿತಾವಧಿ ಇರುತ್ತದೆ ಇದು ಹುಡುಗನ ತಂದೆಗೆ ತಿಳಿದಿರುತ್ತದೆ.

16 ಸೋಮವಾರ ವ್ರತ ದ ಕಥೆ

16 ಸೋಮವಾರ ವ್ರತ ದ ಕಥೆ

ಹುಡುಗನ ತಂದೆಯು ಪುತ್ರನಿಗೆ ಯಾವುದಕ್ಕೂ ಕಡಿಮೆ ಇಲ್ಲದೆ ಅವನನ್ನು ಬೆಳೆಸುತ್ತಾನೆ. ತನ್ನ ಹನ್ನೆರಡನೆಯ ವಯಸ್ಸಿನಲ್ಲಿ ಹುಡುಗನು ತನ್ನ ಮಾವನೊಂದಿಗೆ ಕಾಶಿಗೆ ವಿದ್ಯಾಭ್ಯಾಸ ಪೂರ್ಣಗೊಳಿಸಲು ಹೋಗುತ್ತಾನೆ. ದಾರಿಯಲ್ಲಿ ಬರುತ್ತಿದ್ದಾಗ ಒಬ್ಬ ವ್ಯಾಪಾರಿಯ ಮಗಳ ಮದುವೆಯನ್ನು ನೋಡುತ್ತಾರೆ. ವರನು ಒಂದು ಕಣ್ಣನ್ನು ಮಾತ್ರ ಹೊಂದಿರುತ್ತಾನೆ. ಹುಡುಗನ ಈ ಅಂಗವಿಕಲ ಎಂಬುದನ್ನು ಹುಡುಗಿಯ ಮನೆಯವರು ಅರಿತುಕೊಳ್ಳುತ್ತಾರೆ.

16 ಸೋಮವಾರ ವ್ರತ ದ ಕಥೆ

16 ಸೋಮವಾರ ವ್ರತ ದ ಕಥೆ

ಈ ಹುಡುಗನನ್ನು ಹುಡುಗಿಯ ಮನೆಯವರು ಮದುವೆಯಾಗಲು ವಿನಂತಿಸುತ್ತಾರೆ. ಹಾಗೆ ವಿವಾಹವಾದ ಹುಡುಗನು ವಿದ್ಯಾಭ್ಯಾಸಕ್ಕಾಗಿ ಕಾಶಿಗೆ ಹೋಗುತ್ತಾನೆ. ಆತನ ಹಣೆಯ ಬರಹದಲ್ಲಿ ಬರೆದಂತೆ ಹುಡುಗ ಮೃತನಾಗುತ್ತಾನೆ. ವ್ಯಾಪಾರಿಯ ಮನೆಯಲ್ಲಿರುವ ಶಿವನ ಮೇಲಿನ ಭಕ್ತಿ ಮತ್ತು ಆ ಮನೆಯವರ ನಿಷ್ಠೆಯನ್ನು ನೋಡಿ ಶಿವ ಆ ಹುಡುಗನಿಗೆ ಮರಳಿ ಜೀವದಾನ ಮಾಡುತ್ತಾರೆ. ತಾನು ವಿವಾಹವಾದ ಹುಡುಗಿಯೊಂದಿಗೆ ಹುಡುಗ ಮನೆಗೆ ಬರುತ್ತಾನೆ ಮತ್ತು ಅವರೆಲ್ಲರೂ ಸುಖವಾಗಿ ಜೀವನ ನಡೆಸುತ್ತಾರೆ.

English summary

16 Monday (Somvar) Vrat Rules

Monday is considered very auspicious for the worship of Lord Shiva. Devotees throng at Shiva temples on Mondays specially to get the blessings of the merciful Lord who can remove the difficulties of devotees and give all the desired boons. 16 Monday fast is one of the most popular vrat or fasting observances in Hinduism dedicated to Lord Shiva. Hindus believe that Lord Shiva is the supreme Lord and since observing fasting over 16 consecutive Mondays also known as solah somvar vrat is known to bestow several benefits to devotees.
Story first published: Monday, August 27, 2018, 7:01 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more