For Quick Alerts
ALLOW NOTIFICATIONS  
For Daily Alerts

ನಾಯಿಗಳಿಗೆ ಮೂಳೆಗಳನ್ನು ನೀಡುವುದು ಒಳಿತೇ ಅಥವಾ ಕೆಡುಕೇ?

|

ನಾಯಿಗಳಿಗೆ ಮೂಳೆಗಳು ಅತಿ ಮೆಚ್ಚಿನ ಆಹಾರವಾಗಿದೆ. ಬೇರೆಲ್ಲಾ ಆಹಾರಗಳಿಗಿಂತ ನಾಯಿಗಳು ಮೂಳೆಗಳನ್ನು ಇಷ್ಟಪಡುತ್ತವೆ. ನಿಮ್ಮ ಮುದ್ದಿನ ಸಾಕುಪ್ರಾಣಿಗೆ ಮೂಳೆಗಳನ್ನು ಆಹಾರವಾಗಿ ನೀಡುವಾಗ ನೀವು ಕೆಲವೊಂದು ಎಚ್ಚರಿಕೆಗಳನ್ನು ಪಾಲಿಸಬೇಕಾಗುತ್ತದೆ. ಮೂಳೆಗಳಿಂದ ನಾಯಿಗಳಿಗೆ ಒಳಿತಿನೊಂದಿಗೆ ಕೆಡುಕೂ ಇದೆ ಎಂಬುದನ್ನು ಮನಗಂಡಿದ್ದೀರಾ?

ಮೂಳೆಗಳು ನಾಯಿಯ ದವಡೆ ಮತ್ತು ಹಲ್ಲುಗಳಿಗೆ ಕ್ಯಾಲ್ಶಿಯಮ್ ಅನ್ನು ಪೂರೈಸುತ್ತದೆ. ಇದು ನಾಯಿಗಳಿಗೆ ಮೂಳೆಗಳಿಂದ ಉಂಟಾಗುವ ಪ್ರಯೋಜನಗಳನ್ನು ತಿಳಿಸಿದರೆ ಮೂಳೆಗಳು ನಾಯಿಗೆ ಮಲಬದ್ಧತೆ, ಕಿಡ್ನಿ ಸಮಸ್ಯೆ ಮೊದಲಾದ ತೊಂದರೆಗಳನ್ನು ನೀಡುತ್ತದೆ. ಇನ್ನೊಂದು ವರದಿಯ ಪ್ರಕಾರ ನಾಯಿಯ ತಳಿಗಳನ್ನು ಆಧರಿಸಿ ನಾಯಿಗೆ ಮೂಳೆಗಳು ಉತ್ತಮವೇ ಅಲ್ಲವೇ ಎಂಬುದನ್ನು ಕೂಡ ನಿರ್ಧರಿಸಲಾಗುತ್ತದೆ. ಹಾಗಿದ್ದರೆ ಮೂಳೆಗಳಿಂದ ನಾಯಿಗುಂಟಾಗುವ ಪ್ರಯೋಜನಗಳು ಮತ್ತು ನಷ್ಟಗಳನ್ನು ಕುರಿತು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಈ ಶ್ವಾನಗಳು ಮನೆಯಲ್ಲಿದ್ದರೆ ಕಾವಲುಗಾರ ಬೇಕಾಗಿಲ್ಲ

Pros and Cons Of Feeding Your Dog With Bones?

ಹಲ್ಲಿನ ಆರೋಗ್ಯ
ಮೂಳೆಗಳು ನಾಯಿಯ ಹಲ್ಲಿನ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ಮೂಳೆಗಳನ್ನು ಅಗೆಯುವುದು ನಾಯಿಗೆ ದವಡೆ ಮತ್ತು ಹಲ್ಲಿಗೆ ವ್ಯಾಯಾಮವನ್ನು ಒದಗಿಸಿದಂತಾಗುತ್ತದೆ. ಆದರೆ ನಾಯಿ ಮರಿಗಳಿಗೆ ದೊಡ್ಡ ಗಾತ್ರದ ಮೂಳೆಗಳನ್ನು ನೀಡದಿರಿ.

ಥಿಯಾಮೈನ್ ಕೊರತೆ
ನಿಯಮಿತವಾಗಿ ನಾಯಿಗಳಿಗೆ ಮೂಳೆಗಳನ್ನು ನೀಡುವುದು ಅವುಗಳಲ್ಲಿ ಥಿಯಾಮೈನ್ ಕೊರೆತೆಯನ್ನು ಉಂಟುಮಾಡುತ್ತದೆ. ಆದ್ದರಿಂದ ನಾಯಿಗಳಿಗೆ ನಿಯಮಿತವಾಗಿ ಮೂಳೆಗಳನ್ನು ಆಹಾರವಾಗಿ ನೀಡುವುದು ಅಷ್ಟು ಉತ್ತಮವಾದುದಲ್ಲ.

ಮಲಬದ್ಧತೆ
ಮೂಳೆಗಳು ಸ್ವಾಭಾವಿಕವಾಗಿ ಗಟ್ಟಿಯಾಗಿರುವುದರಿಂದ ನಾಯಿಗಳಿಗೆ ಸುಲಭವಾಗಿ ಜೀರ್ಣಮಾಡಿಕೊಳ್ಳಲು ಆಗುವುದಿಲ್ಲ. ಇದರಿಂದ ಅವುಗಳಲ್ಲಿ ಮಲಬದ್ಧತೆಯಂತಹ ಸಮಸ್ಯೆಗಳು ಕಂಡುಬರಬಹುದು.

ಕಿಡ್ನಿ ಸಮಸ್ಯೆ
ಮೂಳೆಗಳ ನಡುವಿನ ಭಾಗವು ಮಾಂಸದಿಂದ ಕೂಡಿರುತ್ತದೆ ಇದರಿಂದಾಗಿ ನಾಯಿಗಳಲ್ಲಿ ಕೊಬ್ಬಿನ ಸಂಗ್ರಹ ಅಧಿಕವಾಗಿರುತ್ತದೆ. ಈ ರೀತಿಯ ಕೊಬ್ಬು ನಂತರ ಕಿಡ್ನಿ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ನಾಯಿಗೆ ಚಾಕಲೇಟ್ ತಿನ್ನಿಸಿದರೆ ಅಪಾಯ!

ಹೊಟ್ಟೆ ನೋವು ಸಮಸ್ಯೆ
ದೀರ್ಘ ಕಾಲದವರೆಗೆ ನಾಯಿಗಳು ಮೂಳೆಗಳನ್ನು ಕಡಿಯುವುದು ಅವುಗಳಲ್ಲಿ ಹೊಟ್ಟೆಯ ಸಮಸ್ಯೆಯನ್ನು ತಂದೊಡ್ಡಬಹುದು. ಅಲ್ಲದೆ ಮೂಳೆಗಳನ್ನು ದೀರ್ಘ ಕಾಲ ಬಳಸುವುದು ನಾಯಿಗಳಲ್ಲಿ ಹೊಟ್ಟೆಯ ಸಮಸ್ಯೆಯನ್ನು ತಂದೊಡ್ಡಬಹುದು.

Read more about: ನಾಯಿ ಮನೆ dog home
English summary

Pros and Cons Of Feeding Your Dog With Bones?

In this article, we look to answer a very important dog care question- Is it safe to feed your dog with bones. We analyze on the basis of credible study and suggest if bones are healthy for dogs. In this article, we look to answer a very important dog care question- Is it safe to feed your dog with bones.
Story first published: Thursday, November 13, 2014, 18:49 [IST]
X
Desktop Bottom Promotion