For Quick Alerts
ALLOW NOTIFICATIONS  
For Daily Alerts

ಗ್ರೇವಿ ಥಿಕ್ ಆಗಿ, ರೆಸ್ಟೋರೆಂಟ್ ಶೈಲಿಯಲ್ಲಿ ಬರಬೇಕೇ? ಈ ಟ್ರಿಕ್ಸ್ ಫಾಲೋ ಮಾಡಿ..

|

ರೆಸ್ಟೋರೆಂಟ್-ಶೈಲಿಯ ಥಿಕ್ ಗ್ರೇವಿ ಎಲ್ಲರಿಗೂ ಇಷ್ಟ. ಆದರೆ ಪ್ರತಿದಿನ ರೆಸ್ಟೋರೆಂಟ್ ಗೆ ಹೋಗೋಕೆ ಆಗಲ್ಲ ಅಲ್ವಾ? ಅಂತಹವರು ಮನೆಯಲ್ಲಿಯೇ ರೆಸ್ಟೋರೆಂಟ್ ಶೈಲಿಯ ದಪ್ಪ ಗ್ರೇವಿ ಮಾಡೋಣ ಅಂತ ಪ್ಲಾನ್ ಮಾಡ್ತಾ ಇರ್ತಾರೆ. ಆದ್ರೆ ಅದು ಸರಿಯಾಗಿ ಬಂದಿರಲ್ಲ. ಅದು ಚಿಕನ್, ಪನ್ನೀರ್ ಅಥವಾ ಇತರ ಯಾವುದೇ ಗ್ರೇವಿ ಆಗಿರಲಿ, ರೆಸ್ಟೋರೆಂಟ್ ನಲ್ಲಿ ಕೊಡೋ ಹಾಗೇ, ಥಿಕ್ ಮಾಡೋದು ಹೇಗೆ ಎಂಬುದನ್ನು ಇಲ್ಲಿ ಹೇಳಿದ್ದೇವೆ. ಈ ಸಲಹೆಗಳಿಂದ ನೀವು ಮನೆಯಲ್ಲಿಯೇ ದಪ್ಪ ಗ್ರೇವಿ ತಯಾರಿಸಿ, ಸವಿಯಬಹುದು.

ಗ್ರೇವಿ ದಪ್ಪ ಆಗಬೇಕು ಅಂದ್ರೆ ಏನ್ ಮಾಡ್ಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಕಾರ್ನ್ ಫ್ಲೋರ್:

ಕಾರ್ನ್ ಫ್ಲೋರ್:

ಗ್ರೇವಿಯನ್ನು ದಪ್ಪವಾಗಿಸುವ ಸಾಮಾನ್ಯ ವಿಧಾನವೆಂದರೆ ಅದಕ್ಕೆ ಜೋಳದ ಹಿಟ್ಟು ಅಥವಾ ಕಾರ್ನ್ ಫ್ಲೋರ್ ಸೇರಿಸುವುದು. ಸಾಮಾನ್ಯವಾಗಿ, ಚೈನೀಸ್ ಆಹಾರಶೈಲಿಯಲ್ಲಿ ಗ್ರೇವಿ ದಪಪ್ವಾಗಿಸಲು ಕಾರ್ನ್ ಫ್ಲೋರ್ ಅನ್ನು ಸೇರಿಸಲಾಗುತ್ತದೆ. ಆದರೆ, ನೀವು ಇದನ್ನು ಭಾರತೀಯ ಗ್ರೇವಿ ಸಿದ್ಧತೆಗಳಿಗೆ ಕೂಡ ಸೇರಿಸಬಹುದು. ಇದಕ್ಕಾಗಿ ನೀವು ಒಂದು ಬಟ್ಟಲಿಗೆ 2 ಚಮಚ ಕಾರ್ನ್ ಫ್ಲೋರ್ ಸೇರಿಸಿ. ಅದಕ್ಕೆ ¼ ಕಪ್ ನೀರು ಸೇರಿಸಿ, ಮಿಶ್ರಣ ಮಾಡಿ. ಇದನ್ನು ಗ್ರೇವಿಗೆ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ನಿಮ್ಮ ಗ್ರೇವಿ ಒಂದು ನಿಮಿಷದೊಳಗೆ ದಪ್ಪವಾಗುತ್ತದೆ. ಕಾರ್ನ್ ಫ್ಲೋರ್ ಬದಲಿಗೆ ನೀವು ಸಂಸ್ಕರಿಸಿದ ಹಿಟ್ಟನ್ನು ಕೂಡ ಬಳಸಬಹುದು. ಕಾರ್ನ್ ಫ್ಲೋರ್ ಮತ್ತು ಸಂಸ್ಕರಿಸಿದ ಹಿಟ್ಟು ಎರಡೂ ಆರೋಗ್ಯಕರ ಒಳ್ಳೆಯದಲ್ಲ, ಆದ್ದರಿಂದ ಮಿತವಾಗಿ ಬಳಸಿ.

ಟೊಮೆಟೊ ಪ್ಯೂರಿ:

ಟೊಮೆಟೊ ಪ್ಯೂರಿ:

ರೆಸ್ಟೋರೆಂಟ್ ತರಹದ ಗ್ರೇವಿ ಖಾದ್ಯವನ್ನು ತಯಾರಿಸಲು, ಟೊಮೆಟೊ ಪ್ಯೂರಿಯನ್ನು ಬಳಸಬಹುದು. ಇದು ಗ್ರೇವಿಯನ್ನ ಥಿಕ್ ಮಾಡುವುದಲ್ಲದೇ, ರುಚಿಯನ್ನು ಹೆಚ್ಚಿಸುತ್ತದೆ. ಇದಕ್ಕಾಗಿ ಮೊದಲು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಬೆಳ್ಳುಳ್ಳಿ ಮತ್ತು ಈರುಳ್ಳಿ ಸೇರಿಸಿ, ಕೆಲವು ನಿಮಿಷಗಳ ಕಾಲ ಹುರಿಯಿರಿ. ಈಗ ಉಪ್ಪಿನ ಜೊತೆಗೆ ಕತ್ತರಿಸಿದ ಟೊಮೆಟೊಗಳನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ, ಮುಚ್ಚಳದಿಂದ ಮುಚ್ಚಿ, ಟೊಮೆಟೊಗಳು ಮೆತ್ತಗಾಗುವವರೆಗೆ 10 ನಿಮಿಷ ಬೇಯಿಸಿ. ಈಗ ಮಿಶ್ರಣವನ್ನು ಸ್ವಲ್ಪ ತಣ್ಣಗಾಗಲು ಬಿಡಿ, ನಂತರ ಮಿಕ್ಸರ್ ಗೆ ಹಾಕಿ ಪೇಸ್ಟ್ ಮಾಡಿ. ಈ ಪೇಸ್ಟನ್ನು ನಿಮ್ಮ ಗ್ರೇವಿಗೆ ಸೇರಿಸುವುದರಿಂದ ದಪ್ಪವಾದ ಗ್ರೇವಿ ನಿಮ್ಮಗಾಗಿ ಸಿದ್ಧವಾಗುತ್ತದೆ.

ನಟ್ಸ್ ಅಥವಾ ಬೀಜಗಳ ಪೇಸ್ಟ್:

ನಟ್ಸ್ ಅಥವಾ ಬೀಜಗಳ ಪೇಸ್ಟ್:

ನಟ್ಸ್ ಅಥವಾ ಬೀಜದ ಪೇಸ್ಟ್ ಗ್ರೇವಿಯನ್ನು ದಪ್ಪವಾಗಿಸುವ ಇನ್ನೊಂದು ಆಸಕ್ತಿದಾಯಕ ವಿಧಾನವಾಗಿದೆ. ನಿಮ್ಮ ಗ್ರೇವಿಯನ್ನು ದಪ್ಪವಾಗಿಸಲು, ಸ್ವಲ್ಪ ಗೋಡಂಬಿ ಅಥವಾ ಬಾದಾಮಿಯನ್ನು ರುಬ್ಬಿಕೊಂಡು ಪೇಸ್ಟ ತಯಾರಿಸಿ. ಇದನ್ನ ನಿಮ್ ಗ್ರೇವಿಗೆ ಸೇರಿಸುವುದರಿಂದ ಥಿಕ್ ಆಗುವುದಲ್ಲದೇ, ನಿಮ್ಮ ಖಾದ್ಯಕ್ಕೆ ರಿಚ್ ನೆಸ್ ನೀಡುತ್ತದೆ. ಕಲ್ಲಂಗಡಿ ಬೀಜಗಳು, ಅಗಸೆ ಬೀಜಗಳು ಅಥವಾ ಗಸಗಸೆ ಬೀಜಗಳಂತಹ ಬೀಜಗಳನ್ನು ಸಹ ರುಬ್ಬಿ ಪೇಸ್ಟ್ ತಯಾರಿಸಬಹುದು. ಇದು ಕೂಡ ಅದು ನಿಮ್ಮ ಗ್ರೇವಿಯ ಸ್ಥಿರತೆಯನ್ನು ಹೆಚ್ಚಿಸುತ್ತದೆ.

ಮೊಟ್ಟೆಗಳು:

ಮೊಟ್ಟೆಗಳು:

ನೀವು ಮಾಂಸಾಹಾರಿಗಳಾಗಿದ್ದರೆ, ನಿಮ್ಮ ಗ್ರೇವಿಯನ್ನು ರುಚಿಕರವಾಗಿಸಲು ಉತ್ತಮ ಮಾರ್ಗವೆಂದರೆ ಮೊಟ್ಟೆಯನ್ನು ಸೇರಿಸುವುದು. ಆದರೆ ಇಡೀ ಮೊಟ್ಟೆಯನ್ನು ಎಂದಿಗೂ ಹಾಕಬೇಡಿ, ಇದು ಗಂಟುಗಂಟ ಸೃಷ್ಟಮಾಡಬಹುದು. ಅದಕ್ಕಾಗಿ ನೀವು ಒಂದು ಬಟ್ಟಲಿನಲ್ಲಿ ಮೊಟ್ಟೆಯನ್ನು ಒಡೆದು, ಅದಕ್ಕೆ ½ ಕಪ್ ಗ್ರೇವಿ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ, ಈ ಮಿಶ್ರಣವನ್ನು ಗ್ರೇವಿಗೆ ಸೇರಿಸಿ ಮತ್ತು ನಿರಂತರವಾಗಿ ಕಲಕಿ. ಸ್ಟವ್ ಮೀಡಿಯಂ ಫ್ಲೇಮ್ ನಲ್ಲಿರಲಿ. ಮೊಟ್ಟೆಯ ಮಿಶ್ರಣ ಚೆನ್ನಾಗಿ ಬೆರೆಸುವವರೆಗೆ ಮಿಕ್ಸ್ ಮಾಡಿ, ನೀವು ಗ್ರೇಇ ಥಿಕ್ ಆಗುವುದನ್ನು ಗಮನಿಸಬಹುದು. ಮೊಟ್ಟೆಗಳು ಪ್ರೋಟೀನ್‌ನ ಸಮೃದ್ಧ ಮೂಲವಾಗಿದ್ದು ಗ್ರೇವಿಯನ್ನು ದಪ್ಪವಾಗಿಸಲು ಆರೋಗ್ಯಕರ ಆಯ್ಕೆಯಾಗಿದೆ.

ಕಡಲೆಹಿಟ್ಟು:

ಕಡಲೆಹಿಟ್ಟು:

ಕಡಲೆಹಿಟ್ಟನ್ನು ಸಾಮಾನ್ಯವಾಗಿ ಆಲೂಗಡ್ಡೆ ಆಧಾರಿತ ಭಕ್ಷ್ಯಗಳಿಗೆ ಸೇರಿಸಲಾಗುತ್ತದೆ. ಇದು ಸಬ್ಜಿಗೆ ಉತ್ತಮ ರುಚಿಯನ್ನು ನೀಡುತ್ತದೆ. ಮೊದಲು ಕಡಲೆಹಿಟ್ಟನ್ನು ಹಿಟ್ಟನ್ನು ಹಸಿವಾಸನೆ ಹೋಗುವವರೆಗೆ ಹುರಿದುಕೊಳ್ಳಿ. ಇದನ್ನು ಗ್ರೇವಿಗೆ ಸೇರಿಸಿ. ಗ್ರೇವಿಯನ್ನು ದಪ್ಪವಾಗಿಸಲು ಕಾರ್ನ್ ಹಿಟ್ಟು ಅಥವಾ ಸಂಸ್ಕರಿಸಿದ ಹಿಟ್ಟಿಗೆ ಕಡಲೆಹಿಟ್ಟು ಆರೋಗ್ಯಕರ ಬದಲಿಯಾಗಿದೆ.

English summary

Tips to Make Gravy Thicker in Kannada

Fond of thick restaurant-style dishes but fail to recreate them at home because the gravy refuses to thicken? Worry no more, as we bring to you 5 easy ways to increase the consistency of your gravy. Here we talking about Tips to make gravy thicker in Kannada, read on
Story first published: Tuesday, August 17, 2021, 15:08 [IST]
X
Desktop Bottom Promotion