For Quick Alerts
ALLOW NOTIFICATIONS  
For Daily Alerts

ವಾಸ್ತು ಪ್ರಕಾರ ಮನೆಯಲ್ಲಿ ಈ 5 ಕಲಾಕೃತಿಗಳಿದ್ದರೆ ಒಳಿತಾಗುವುದು

|

ಇಂದಿನ ದಿನಗಳಲ್ಲಿ ವಾಸ್ತು ಬಗ್ಗೆ ಜನರಲ್ಲಿ ಹೆಚ್ಚಿನ ನಂಬಿಕೆ ಮೂಡುತ್ತಿರುವುದನ್ನು ನಾವು ಗಮನಿಸಿದ್ದೇವೆ. ಹೀಗಾಗಿ ಪ್ರತಿಯೊಂದು ವಿಚಾರದಲ್ಲೂ ವಾಸ್ತುವನ್ನು ಪರಿಗಣಿಸಲಾಗುತ್ತದೆ.

ಮನೆ, ಕಟ್ಟಡ, ವಾಹನ ಖರೀದಿ, ಉದ್ಯಮ ಆರಂಭ ಹೀಗೆ ಪ್ರತಿಯೊಂದಕ್ಕೂ ವಾಸ್ತುವನ್ನು ಪರಿಗಣಿಸುವರು. ಅದರಲ್ಲೂ ಮನೆಯಲ್ಲಿ ಯಾವ ವಸ್ತುಗಳನ್ನು ಇಡಬೇಕು, ಯಾವುದು ಯಾವ ದಿಕ್ಕಿನಲ್ಲಿ ಎನ್ನುವ ಬಗ್ಗೆ ತುಂಬಾ ಮಂದಿ ವಾಸ್ತು ಹೇಳುವರು. ಇದು ಹೆಚ್ಚಿನವರಿಗೆ ಒಂದು ಕಲೆಯಾಗಿ ಕರಗತವಾಗಿದೆ.

Vastu Tips For Home,

ಹಿಂದಿನಿಂದಲೂ ವಾಸ್ತುಶಾಸ್ತ್ರವನ್ನು ಬಳಸಿಕೊಂಡು ಕಟ್ಟಡ, ಮನೆ ನಿರ್ಮಾಣ ಮಾಡಿಕೊಂಡು ಬರಲಾಗುತ್ತಿದೆ. ಕಟ್ಟಡಕ್ಕೆ ಯಾವ ರೀತಿಯ ವಿನ್ಯಾಸ, ಬಣ್ಣ ಇತ್ಯಾದಿಗಳನ್ನು ತುಂಬಾ ಗಂಭೀರವಾಗಿ ಪರಿಗಣಿಸುವರು. ವಾಸ್ತು ಸರಿಯಾಗಿದ್ದರೆ ಆಗ ಮನೆಯಲ್ಲಿ ಧನಾತ್ಮಕವಾದ ಶಕ್ತಿಯು ಬರುವುದು ಎಂದು ನಂಬಲಾಗಿದೆ.

ಮನೆಯಲ್ಲಿ ಹೆಚ್ಚಿನವರು ಕೆಲವೊಂದು ಕಲಾಕೃತಿ, ಚಿತ್ರಗಳು ಹಾಗೂ ಸಂಕೇತಗಳನ್ನು ಇಡುವರು. ಇದು ಶೇ.90ರಷ್ಟು ನಮ್ಮ ನಡವಳಿಕೆ ಹಾಗೂ ನಿರ್ಧಾರಗಳ ಮೇಲೆ ಪರಿಣಾಮ ಬೀರುವುದು ಎಂದು ನಂಬಲಾಗಿದೆ. ಮನೆ ಹಾಗೂ ಕಚೇರಿಗಳಲ್ಲಿ ಇಡುವಂತಹ ಕಲಾಕೃತಿ ಹಾಗೂ ಚಿತ್ರಗಳು ಪ್ರೇರಣೆ, ಶಾಂತಿ, ಕ್ರಿಯಾತ್ಮಕತೆ ಮತ್ತು ಜೀವನದಲ್ಲಿ ಹಿತಕರ ಭಾವನೆ ನೀಡಬೇಕು. ನಿಮ್ಮ ಮನೆಯಲ್ಲಿ ಇರುವಂತಹ ಕಲಾಕೃತಿಗಳು ದೈನಂದಿನ ಜೀವನದಲ್ಲಿ ನಿಮ್ಮ ಮೇಲೆ ಪರಿಣಾಮ ಬೀರುವುದು. ಇದನ್ನು ನೀವು ಗಮನಿಸಬಹುದಾಗಿದೆ.

ಆಶೀರ್ವದಿಸುವ ಬುದ್ಧ

ಆಶೀರ್ವದಿಸುವ ಬುದ್ಧ

ಭಾರತದಲ್ಲಿ ಜನ್ಮ ತಳೆದಂತಹ ಬೌದ್ಧ ಧರ್ಮವು ಮೊದಲ ಶತಮಾನದಲ್ಲಿ ಹ್ಯಾನ್ ಆಡಳಿತಾವಧಿಯಲ್ಲಿ ಚೀನಾದಲ್ಲಿ ಹೆಚ್ಚು ಪ್ರಚಾರವಾಯಿತು. ಹೆಬ್ಬೆರಳಿನಿಂದ ಹಿಡಿದು ಐದು ಕೈಬೆರಳುಗಳು ಕೂಡ ವಾಸ್ತುಶಾಸ್ತ್ರದ ಐದು ಅಂಶಗಳು ಎಂದು ಪರಿಗಣಿಸಲಾಗಿದೆ. ಇದರಲ್ಲಿ ನೀರು, ಆಕಾಶ, ಅಗ್ನಿ, ವಾಯು ಮತ್ತು ಭೂಮಿ. ಈ ಭಂಗಿಯು ಹೆಚ್ಚು ಧೈರ್ಯ ಮತ್ತು ಕೋಪದಿಂದ ರಕ್ಷಣೆ ನೀಡುವುದು.

ಆಶೀರ್ವದಿಸುವಂತಹ ಮುದ್ರದಲ್ಲಿ ಇರುವಂತಹ ಕೈಯು ಯಾವುದೇ ಭೀತಿ ಇಲ್ಲ ಎನ್ನುವಂತಹ ಅರ್ಥವನ್ನು ನೀಡುವುದು. ಇನ್ನೊಂದು ಕೈಯು ಕಾಲಿನ ಮೇಲೆ ಧ್ಯಾನ ಮುದ್ರೆಯಲ್ಲಿದ್ದು, ಇದು ಆಂತರಿಕ ಸಮತೋಲನ ಮತ್ತು ಶಾಂತಿಯ ಚಿಹ್ನೆಯಾಗಿದೆ.

ಮುದ್ರೆಯ ಭಂಗಿಯು ಭಕ್ತನನ್ನು ಮೂರ್ತಿಯ ಹತ್ತಿರಕ್ಕೆ ತರುವುದು. ಆಶೀವರ್ದಿಸುವ ಬುದ್ಧನನ್ನು ಮುಂದಿನ ಪ್ರವೇಶದ್ವಾರದ ಬಳಿ ಅಥವಾ ಪ್ರಾರ್ಥನಾ ಮಂದಿರಲ್ಲಿ ಇಡಬೇಕು. ಓದುವ ಕೊಠಡಿ, ಧಾನ್ಯ ಕೊಠಡಿ ಮತ್ತು ಗ್ರಂಥಾಲಯದಲ್ಲೂ ಇದನ್ನು ಇಡಬಹುದು.

ಕುದುರೆಗಳು

ಕುದುರೆಗಳು

ಕುದರೆಯು ಪರಿಶ್ರಮ, ಸಾಧನೆ, ನಿಷ್ಠೆ, ಗೆಲುವು, ಶಕ್ತಿ, ಸ್ವಾತಂತ್ರ್ಯ, ವೇಗದ ಸಂಕೇತವಾಗಿದೆ. ಇಷ್ಟು ಮಾತ್ರವಲ್ಲದೆ ಇದು ನೀವು ವೃತ್ತಿಯಲ್ಲಿ ಉನ್ನತಿ ಪಡೆಯುವ ಗುರಿಯು ಯಶಸ್ವಿಯಾಗಿಸುವುದು ಅಥವಾ ನಿಮ್ಮ ಉದ್ಯಮಕ್ಕೆ ಶ್ರೇಯಸ್ಸು ಒದಗಿಸುವುದು. ನಿಮ್ಮ ಕಚೇರಿಯಲ್ಲಿ ಕೆಲಸದ ಪ್ರದರ್ಶನದ ವಿಚಾರ ಬಂದರೆ ಆಗ ನೀವು ಕುದುರೆಯ ಚಿತ್ರವನ್ನು ನಿಮ್ಮ ಟೇಬಲ್ ಬಳಿ ಇಡಿ.

ಇದರಿಂದ ನಿಮ್ಮ ತೀವ್ರ ಉನ್ನತಿ ಮತ್ತು ಹೊಸ ಕ್ರಿಯಾತ್ಮಕತೆ ಬರುವುದು. ಕುದುರೆಯು ಮುಂದೆ ಓಡುತ್ತಿದೆ ಎಂದರೆ ಆಗ ನೀವು ಉದ್ಯಮದಲ್ಲಿ ಯಾವುದೇ ರೀತಿಯ ತೊಂದರೆ ಎದುರಿಸುವುದಿಲ್ಲ. ಇದನ್ನು ಮನೆ ಅಥವಾ ಕಚೇರಿಯಲ್ಲಿ ನೀವು ಇಟ್ಟರೆ ಆಗ ನಿಮಗೆ ಗೆಲುವು, ಶಕ್ತಿ ಮತ್ತು ಯಶಸ್ಸು ಸಿಗುವುದು.

ಕುದುರೆಯ ಕಲಾಕೃತಿಯನ್ನು ಇಡುವ ವೇಳೆ ನೀವು ಬಣ್ಣ, ಕುದುರೆಗಳ ಸಂಖ್ಯೆ ಮತ್ತು ದಿಕ್ಕು ತುಂಬಾ ಪ್ರಮುಖವಾಗಿರುವುದು. ಕಂದು ಮತ್ತು ಕಡು ಬಣ್ಣದ ಕುದುರೆಗಳು ತುಂಬಾ ಧನಾತ್ಮಕ, ಆಕರ್ಷಕ ಮತ್ತು ಶಕ್ತಿ ತುಂಬುವುದು ಎಂದು ವಾಸ್ತುಶಾಸ್ತ್ರ ಪ್ರಕಾರ ಹೇಳಲಾಗುತ್ತದೆ.

ಜನಪ್ರಿಯ ಫಿನಿಕ್ಸ್

ಜನಪ್ರಿಯ ಫಿನಿಕ್ಸ್

ಫಿನಿಕ್ಸ್ ಹಕ್ಕಿಯು ಎಲ್ಲಾ ನಾಗರಿಕತೆ ಕಂಡುಬರುತ್ತದೆ. ಭಾರತದಲ್ಲಿ ಇದನ್ನು ಗರುಡ ಎಂದು ಕರೆಯುವರು ಮತ್ತು ಚೀನಾದಲ್ಲಿ ಫೆಂಗ್ ಹುಯಾಂಗ್, ಜಪಾನ್ ನಲ್ಲಿ ಹೂ ಮತ್ತು ಈಜಿಪ್ಟ್ ನಲ್ಲಿ ಬೆನು ಎನ್ನುವರು.

ಜನಪ್ರಿಯತೆ ಪಡೆಯಬೇಕಾದರೆ ಆಗ ನಿಮ್ಮ ಆಕಾಂಕ್ಷೆಗಳೀಗೆ ಕೂಡ ಒಂದು ಮೌಲ್ಯವಿರಬೇಕು. ಕೆಲವರು ಶ್ರೀಮಂತ ಜೀವನಶೈಲಿ ಬಯಸುವರು. ಫಿನಿಕ್ಸ್ ಹಕ್ಕಿಯು(ಫೆಂಗ್ ಶೂಯಿ ಹಕ್ಕಿ) ಜನಪ್ರಿಯತೆ ಮತ್ತು ಉನ್ನತಿ ತಂದುಕೊಡುವುದು. ಇದು ನಿಮಗೆ ಜೀವನದಲ್ಲಿ ಹೊಸ ಅವಕಾಶವನ್ನು ತಂದುಕೊಡುವುದು.

ಹೀಗಾಗಿ ಜಗತ್ತಿನಲ್ಲಿ ನೀವು ಹೆಚ್ಚು ಜನಪ್ರಿಯತೆ ಪಡೆಯಬಹುದು. ಮನೆ ಅಥವಾ ಕಚೇರಿಯ ದಕ್ಷಿಣ ಭಾಗದ ಗೋಡೆಯಲ್ಲಿ ಇದನ್ನು ಇಟ್ಟರೆ ಆಗ ನಿಮಗೆ ಹಾಗೂ ಉದ್ಯಮಕ್ಕೆ ಹೆಚ್ಚು ಜನಪ್ರಿಯತೆ ಹಾಗೂ ಉನ್ನತಿ ಸಿಗುವುದು.

ಫಿನಿಕ್ಸ್ ಕಲಾಕೃತಿಯನ್ನು ಕಲಾವಿದರು, ರಾಜಕಾರಣಿಗಳು, ಸಂಗೀತಗಾರರು, ನೃತ್ಯಗಾರರು ಮತ್ತು ಎಲ್ಲಾ ರೀತಿಯ ವೃತ್ತಿಪರರು ಇಟ್ಟುಕೊಳ್ಳಬಹುದು. ತುಂಬಾ ದುರಾದೃಷ್ಟದಿಂದ ಬಳಲುತ್ತಿದ್ದ ಜನರು ಫೆಂಗ್ ಶೂಯಿ ಫಿನಿಕ್ಸ್ ನಿಂದಾಗಿ ಒಳ್ಳೆಯ ಅದೃಷ್ಟ ಪಡೆಯುವರು ಎಂದು ಹೇಳಲಾಗಿದೆ.

ನೀರಿನ ಚಿತ್ರಗಳು

ನೀರಿನ ಚಿತ್ರಗಳು

ಮನೆ ಹಾಗೂ ಕಚೇರಿಯಲ್ಲಿ ನೀರಿನ ಚಿತ್ರವನ್ನು ಇಟ್ಟರೆ ಅದರಿಂದ ಧನಾತ್ಮಕ ಶಕ್ತಿಯು ಹರಿಯುತ್ತಿರುವುದು ಮತ್ತು ಅದು ನಿಲ್ಲುವುದನ್ನು ತಡೆಯಬಹುದು. ಇದರ ನಿಜವಾದ ಕಾರ್ಯವು ಚಲನೆ ಮತ್ತು ಜೀವನದಲ್ಲಿನ ಹರಿವನ್ನು ತಿಳಿಸುವುದು.

ಪ್ರತಿಯೊಬ್ಬರು ಸಮಸ್ಯೆಗಳಲ್ಲಿ ಸಿಲುಕೊಳ್ಳಬಾರದು ಮತ್ತು ಎಲ್ಲರು ಮುಂದುವರಿಯುತ್ತಿರಬೇಕು ಎಂದು ಇದು ನಮ್ಮನ್ನು ಆಹ್ವಾನಿಸುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ನೀರು ಈಶಾನ್ಯ ದಿಕ್ಕಿನಲ್ಲಿ ಜ್ಞಾನವನ್ನು ಪ್ರತಿನಿಧಿಸುವುದು. ಹಣದ ಹರಿವು ಸುಗಮವಾಗಿರುವಂತೆ ಇದು ಮಾಡುವುದು. ನೀರು ಹರಿಯುತ್ತಿರುವಂತಹ ಅಥವಾ ನದಿ ಚಿತ್ರವನ್ನು ಮನೆ ಅಥವಾ ಕಚೇರಿಯಲ್ಲಿ ತೂಗು ಹಾಕಿ.

ಇದು ಆ ಭಾಗದಲ್ಲಿ ಹೆಚ್ಚಿನ ಶಕ್ತಿ ತುಂಬುವುದು. ಮನೆ ಪ್ರವೇಶದಲ್ಲಿ ಹೊರಗಡೆ ಚೆಲ್ಲುವಂತಹ ಕಾರಂಜಿಯನ್ನು ತೂಗು ಹಾಕಬೇಡಿ. ಇದರಿಂದ ಹಣ ಹಾಗೂ ಸಂಪತ್ತು ನಷ್ಟ ಆಗುವುದು. ಮಲಗುವ ಕೋಣೆಯಲ್ಲಿ ನೀರಿನ ಕಲಾಕೃತಿ ತೂಗು ಹಾಕಬೇಡಿ.

ಕಲಾಕೃತಿ

ಕಲಾಕೃತಿ

ಕಲಾಕೃತಿಯನ್ನು ನಿಮ್ಮ ಮಲಗುವ ಕೋಣೆಯಲ್ಲಿ ತೂಗು ಹಾಕಿದರ ಅದರಿಂದ ಪ್ರೇಮಿಸುವ ಶಕ್ತಿಯು ಆಕರ್ಷಿಸಲ್ಪಡುತ್ತದೆ. ದಂಪತಿಯು ನಗುವಂತಹ ಸುಂದರ ಕಲಾಕೃತಿ ಅಥವಾ ನೃತ್ಯ ಮಾಡುವಂತಹ ಕಲಾಕೃತಿಯು ದಂಪತಿಯ ಮಧ್ಯೆ ಸೌಹಾರ್ದತೆ ಹೆಚ್ಚಿಸುವುದು.

ವಿವಾಹದ ಸಂಭ್ರಮವಿರುವ ಕಲಾಕೃತಿ ಅಥವಾ ಚಿತ್ರವನ್ನು ನೀವು ಆಯ್ಕೆ ಮಾಡಿ. ನೀವು ಗೋಡೆಯಲ್ಲಿ ಜೋಡಿಯಾಗಿ ತೂಗು ಹಾಕಿರುವಂತಹ ಕಲಾಕೃತಿ ಅಥವಾ ಚಿತ್ರವು ಮದುವೆಯ ಸಂಕೇತವಾಗಿರಬೇಕು. ಇದು ಪುರುಷ ಹಾಗೂ ಮಹಿಳೆಯು ಒಂದಾಗುವಂತಹ ಸಂಕೇತವಾಗಿರಬೇಕು.

English summary

These Picture must Keep In House According To Vastu

These Picture Keeping In House Will Bring You Good Luck, Read on,
Story first published: Monday, May 25, 2020, 11:55 [IST]
X
Desktop Bottom Promotion