For Quick Alerts
ALLOW NOTIFICATIONS  
For Daily Alerts

ನಿಮ್ಮ ನೆಚ್ಚಿನ ಬಟ್ಟೆ ಮೇಲೆ ಆಗಿರುವ ಕಲೆಯನ್ನು ತೆಗೆಯುವುದು ಹೇಗೆ?

|

ನಮ್ಮ ಬಟ್ಟೆಯ ಮೇಲೆ ಏನಾದರೂ ಚೆಲ್ಲಿ ಕಲೆಗಳಾಗುವುದು ಸಾಮಾನ್ಯವಾದರೂ ತುಂಬಾ ನೋವು ಕೊಡುವ ಸಂಗತಿ. ಆ ಬಟ್ಟೆ ಏನಾದರೂ ನೆಚ್ಚಿನದ್ದಾಗಿದ್ದರೆ ಮುಗಿದೇ ಹೋಯಿತು, ಕಲೆಯ ಕುರಿತು ಚಿಂತೆ ಮಾಡುತ್ತಾ ಕುಳಿತಿರುತ್ತೀರಿ. ಏಕೆಂದರೆ ಬಟ್ಟೆಯ ಮೇಲೆ ಆದ ಕೆಚಪ್ ಕಲೆ, ವೈನ್ , ಟೀ ಕಲೆಯನ್ನು ತೆಗೆಯುವುದು ಅಷ್ಟು ಸುಲಭದ ಮಾತಲ್ಲ. ವಾಷಿಂಗ್ ಮಿಶಿನ್ ಗೆ ಹಾಕಿದರೂ, ಈ ಕಲೆಗಳು ಹೋಗುವುದಿಲ್ಲ. ಅಂತಹ ಕಲೆಗಳನ್ನು ಸುಲಭವಾಗಿ ಹೇಗೆ ತೆಗೆಯಬಹುದು ಎಂಬುದನ್ನು ನಾವಿಲ್ಲಿ ಹೇಳಲಿದ್ದೇವೆ.

ನಿಮ್ಮ ನೆಚ್ಚಿನ ಬಟ್ಟೆಗಳನ್ನು ಕಲೆಮುಕ್ತಗೊಳಿಸಲು ಈ ಕೆಳಗಿನ ಸಲಹೆಗಳನ್ನು ಪಾಲಿಸಿ:

ಕೆಚಪ್ ಕಲೆ:

ಕೆಚಪ್ ಕಲೆ:

ನಿಮ್ಮ ಬಟ್ಟೆ ಮೇಲಿರುವ ಕೆಚಪ್ ಕಲೆಯನ್ನು ತೆಗೆಯಲು ಮೊದಲು ಯಾವುದಾದರೂ ಚಾಕುವಿನಿಂದ ಕಲೆಯನ್ನು ಕೆರೆಯಿರಿ. ನಂತರ ಅದನ್ನು ಕೆಲವು ನಿಮಿಷಗಳ ಕಾಲ ತಣ್ಣೀರಿನಲ್ಲಿ ನೆನೆಸಿಟ್ಟು, ನಂತರ ಲಿಕ್ವಿಡ್ ಡಿಟರ್ಜೆಂಟ್ ಅನ್ನು ಅದಕ್ಕೆ ಹಚ್ಚಿ. ಆಮೇಲೆ, ಸ್ಪಂಜ್ ಸಹಾಯದಿಂದ ಕಲೆಯಿರುವ ಜಾಗಕ್ಕೆ ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಹಚ್ಚಿ, ಕಲೆ ಕಣ್ಮರೆಯಾಗುವುದನ್ನು ನೋಡಿ.

ಕಾಫಿ ಕಲೆ:

ಕಾಫಿ ಕಲೆ:

ಕಾಫಿ ಬಿದ್ದ ಜಾಗ ಒಣಗದಿದ್ದರೆ ಈ ಕಲೆ ತೆಗೆಯುವುದು ಸುಲಭ. ಅದಕ್ಕಾಗಿ ಕಾಫಿ ಬಿದ್ದ ಒಂದೆರಡು ನಿಮಿಷದೊಳಗೆ ಆ ಬಟ್ಟೆಯನ್ನು ತಣ್ಣೀರಿನಲ್ಲಿ ಅದ್ದಿಡಿ. ತಾಜಾ ಕಲೆ ಮೇಲೆ ನೀರು ಹರಿಯುವುದರಿಂದ ಕಾಫಿ ಕಲೆ ತೆಗೆಯಬಹುದು. ಒಂದು ವೇಳೆ ಕಾಫಿ ಕಲೆ ಒಣಗಿದ್ದರೆ, ಕಲೆಯಾದ ಜಾಗವನ್ನು ಒದ್ದೆ ಮಾಡಿ, ಅಲ್ಲಿಗೆ ಕೆಲವು ಹನಿ ಲಿಕ್ವಿಡ್ ಡಿಟರ್ಜೆಂಟ್ ಅನ್ನು ಹಾಕಿ, ಬೆರಳುಗಳಿಂದ ನಿಧಾನವಾಗಿ ಉಜ್ಜಿ, ಐದು ನಿಮಿಷ ಬಿಟ್ಟು ತೊಳೆಯಿರಿ. ಆಗಲೂ ಕಲೆ ಹೋಗದಿದ್ದರೆ, ಪುಡಿ ಡಿಟರ್ಜೆಂಟ್ ಗೆ ಕೆಲವು ಹನಿ ಬಿಳಿವಿನೇಗರ್ ಸೇರಿಸಿ, ಮಿಕ್ಸ ಮಾಡಿ, ಕಲೆಯಾದ ಜಾಗಕ್ಕೆ ಹಾಕಿ, ಹಲ್ಲುಜ್ಜುವ ಬ್ರಷ್ ನಿಂದ ಉಜ್ಜಿ ತೊಳೆಯಿರಿ.

ಹಣ್ಣಿನ ಕಲೆ:

ಹಣ್ಣಿನ ಕಲೆ:

ಬಟ್ಟೆಯಲ್ಲಿ ಉಳಿದ ಯಾವುದೇ ಹಣ್ಣುಗಳ ಕಲೆಯನ್ನು ನಿಧಾನವಾಗಿ ಉಜ್ಜಲು ಮಂದವಾದ ಚಾಕು ಅಥವಾ ಚಮಚವನ್ನು ಬಳಸಿ. 3 ಚಮಚ ಅಡಿಗೆ ಸೋಡಾವನ್ನು 1 ಚಮಚ ನೀರಿನೊಂದಿಗೆ ಸೇರಿಸಿ. ಈ ಪೇಸ್ಟ್ ಅನ್ನು ಒಂದು ಚಮಚ ಅಥವಾ ಚಾಕುವಿನಿಂದ ಕಲೆಯಾದ ಸ್ಥಳದ ಮೇಲೆ ಲೇಪಿಸಿ. ಕನಿಷ್ಠ 15 ನಿಮಿಷಗಳ ಕಾಲ ಬಿಟ್ಟು ಪೇಸ್ಟ್ ತೊಳೆಯಿರಿ. ತದನಂತರ ಡಿಟರ್ಜೆಂಟ್‌ನ ಕೆಲವು ಹನಿಗಳನ್ನು ನೇರವಾಗಿ ಕಲೆ ಮೇಲೆ ಹಾಕಿ, ಕೆಲವು ನಿಮಿಷ ಬಿಟ್ಟು, ಕಲೆಯನ್ನು ಬಿಸಿನೀರಿನಿಂದ ತೊಳೆಯಿರಿ. ಆಮೇಲೆ ಅದಕ್ಕೆ ಕಲೆ ಹೋಗುವ ಸ್ಪ್ರೇ ಹಚ್ಚಿ, ಎಂದಿನಂತೆ ಬಟ್ಟೆಯನ್ನು ತೊಳೆಯಬಹುದು.

ಇಂಕ್ ಕಲೆ:

ಇಂಕ್ ಕಲೆ:

ಬಾಲ್ ಪೆನ್ ನ ಇಂಕ್ ಆಗಿದ್ದರೆ, ಅದಕ್ಕೆ ಬಾಡಿ ಸ್ಪ್ರೇ ಹಾಕಿ, ಸ್ವಲ್ಪ ಹೊತ್ತು ಬಿಟ್ಟು ತೊಳೆಯಬಹುದು. ಅದರ ಜೊತೆಗೆ ನೈಲ್ ಪಾಲಿಶ್ ರಿಮೂವರ್ ನ ಎರಡ ಹನಿಗಳನ್ನು ಇಂಕ್ ಆದ ಜಾಗದ ಮೇಲೆ ಹಾಕಿ, ಹತ್ತಿ ಅಥವಾ ಬಟ್ಟೆಯ ಸಹಾಯದಿಂದ ಉಜ್ಜುವ ಮೂಲಕ ಕಲೆಯನ್ನು ತೆಗೆಯಬಹುದು. ಅದರ ಜೊತೆಗೆ ನಿಂಬೆ ಅಥವಾ ವಿನೇಗರ್ ಬಳಸಿಯೂ ಸಹ ಇಂಕ್ ಕಲೆಯನ್ನು ತೆಗೆಯಬಹುದು.

ವೈನ್ ಕಲೆ:

ವೈನ್ ಕಲೆ:

ದ್ರವರೂಪದ ಲಾಂಡ್ರಿ ಡಿಟರ್ಜೆಂಟ್ ಅಥವಾ ಡಿಶ್ ಸೋಪ್ ಅನ್ನು ಕಲೆಯಾದ ಜಾಗದ ಮೇಲೆ ಉಜ್ಜುವ ಮೂಲಕ ಪ್ರಾರಂಭಿಸಿ. ಮುಂದೆ, ಬಟ್ಟೆಯನ್ನು 30 ನಿಮಿಷಗಳ ಕಾಲ ನೆನೆಸಿ. ತದನಂತರ ಸ್ಟೇನ್ ರಿಮೂವರ್ ಹಚ್ಚಿ, ತೊಳೆಯಿರಿ. ಕಲೆ ಹೋಗುವವರೆಗೆ ಅಥವಾ ಯಾವುದೇ ವ್ಯತ್ಯಾಸವಿಲ್ಲದವರೆಗೆ ಈ ಹಂತಗಳನ್ನು ಪುನರಾವರ್ತಿಸಿ. ಬಿಳಿ ಬಟ್ಟೆಯ ಮೇಲಿನ ಕಲೆಗಳಿಗಾಗಿ, ನೀವು ಬ್ಲೀಚಿಂಗ್ ಪುಡಿಯನ್ನು ಬಳಸಬಹುದು.

Read more about: home ಮನೆ
English summary

The Ideal Stain Removal Guide For The Clumsy Souls in kannada

Here we talking about The Ideal Stain Removal Guide For The Clumsy Souls in kannada, read on
Story first published: Saturday, July 24, 2021, 13:31 [IST]
X
Desktop Bottom Promotion