For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ಕಾಮಧೇನು ವಿಗ್ರಹ ಇಡುವುದರ ಹಿಂದಿರುವ ಮಹತ್ವ

|

ಹಿಂದೂ ಸಂಪ್ರದಾಯದಲ್ಲಿ ಆಕಳು ಮತ್ತು ಕರುವಿಗೆ ವಿಶೇಷ ಮಹತ್ವವಿದೆ. ಕಾಮಧೇನು ಎಂದು ನಾವು ಹಸುವನ್ನು ಪೂಜಿಸುತ್ತೇವೆ. ಹಸು ಮತ್ತು ಕರುವಿನ ವಿಗ್ರಹವನ್ನು ಪೂಜಿಸುವುದರಿಂದ ನಿಮ್ಮೆಲ್ಲಾ ಆಸೆಗಳಿಗೆ ಹಾರೈಕೆ ಸಿಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಮನೆಯಲ್ಲಿ ಕಾಮಧೇನು ವಿಗ್ರಹವಿರುವುದು ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ.

Importance Of Keeping Cow At Home

ಕಾಮಧೇನು ದೈವಿಕ ಗುಣಗಳ ತಾಯಿ ಎಂದು ಪರಿಗಣಿಸಲ್ಪಡುತ್ತದೆ ಮತ್ತು ಭೂಮಿಯ ಮೇಲಿರುವ ದೇವತೆ ಎಂದು ಹೇಳಲಾಗುತ್ತದೆ. ಕಾಮಧೇನುವಿನ ವಿಗ್ರಹವು ಸಮೃದ್ಧಿ ಮತ್ತು ವಾತ್ಸಲ್ಯದ ಸಂಕೇತವಾಗಿದೆ. ತಾಯಿ ತನ್ನ ಮಗುವಿನ ಮೇಲೆ ಹೊಂದಿರುವ ಪ್ರೀತಿಯಂತೆಯೇ ಸರಿ.
ಕಾಮಧೇನು ಹಸುವಿನ ವಿಗ್ರಹ

ಕಾಮಧೇನು ಹಸುವಿನ ವಿಗ್ರಹ

ಕಾಮಧೇನು ಹಸುವಿನ ವಿಗ್ರಹವು ಮಾರುಕಟ್ಟೆಯಲ್ಲಿ ವಿವಿಧ ಲೋಹಗಳಲ್ಲಿ ಲಭ್ಯವಿರುತ್ತದೆ. ಮೆಟಲ್ ಪ್ಲೇಟ್ ಇರುವ ಆಂಟಿಕ್ ಕಾಮಧೇನು ಕೂಡ ಇದೀಗ ಮಾರುಕಟ್ಟೆಯಲ್ಲಿ ಸಿಗುತ್ತದೆ. ಪೂಜಾ ವಿಧಿವಿಧಾನಕ್ಕೆ ಇದು ಹೇಳಿ ಮಾಡಿಸಿದಂತಿರುತ್ತದೆ. ತಾಮ್ರ ಅಥವಾ ಹಿತ್ತಾಳೆಯ ಫಿನಿಶಿಂಗ್ ಇದರಲ್ಲಿರುತ್ತದೆ. ಮನೆಯ ಅಲಂಕಾರ ಹೆಚ್ಚಿಸುವುದಕ್ಕೂ ಕೂಡ ಇದು ನೆರವಾಗುತ್ತದೆ. ವೈಟ್ ಮೆಟಲ್ ಮತ್ತು ಸಿಲ್ವರ್ ಫಿನಿಶಿಂಗ್ ನಲ್ಲೂ ಕೂಡ ಕಾಮಧೇನು ವಿಗ್ರಹ ಸಿಗುತ್ತದೆ. ನಿಮ್ಮ ಬಜೆಟ್ ಮತ್ತು ನಿಮ್ಮ ಆಯ್ಕೆಗೆ ಅನುಸಾರವಾಗಿ ಇದನ್ನು ಕೊಂಡುಕೊಳ್ಳಬಹುದು.

ಕೈಯಿಂದ ತಯಾರಿಸಲ್ಪಟ್ಟ ಕರಕುಶಲ ವಸ್ತುಗಳು ದೇವರು ಮತ್ತು ದೇವಿಯ ಧಾರ್ಮಿಕ ಪೂಜೆಗೆ ಬಳಸಲ್ಪಡುತ್ತದೆ. ಈ ಕಾಮಧೇನುವಿನ ಕರಕುಶಲ ವಸ್ತುವನ್ನು ನೀವು ಮದುವೆ ವಾರ್ಷಿಕೋತ್ಸವ, ಹುಟ್ಟುಹಬ್ಬ, ವಿವಾಹ ಉಡುಗೊರೆಗಳು, ರಿಟರ್ನ್ ಗಿಫ್ಟ್, ಧಾರ್ಮಿಕ ಕಾರ್ಯಕ್ರಮದಲ್ಲಿ ಉಡುಗೊರೆ ಇತ್ಯಾದಿ ಸಮಯದಲ್ಲಿ ಉಡುಗೊರೆ ರೂಪದಲ್ಲಿ ನೀಡುವುದಕ್ಕೂ ಕೂಡ ಸೂಕ್ತವಾಗಿರುವುದಾಗಿದೆ. ನಿಮ್ಮ ಕಛೇರಿ, ಮನೆ, ಅಂಗಡಿಗಳು,ಕೈಗಾರಿಕೆ ಮತ್ತು ವ್ಯಾಪಾರಿ ಸ್ಥಳಗಳಲ್ಲಿ ಇರಿಸಬಹುದು. ನಿಮ್ಮ ಸ್ನೇಹಿತರಿಗೆ,ಸಂಬಂಧಿಗಳಿಗೆ ಉದ್ಯೋಗಿಗಳಿಗೆ ನೀವು ನೀಡುವ ಅತ್ಯುತ್ತಮ ಉಡುಗೊರೆ ಇದಾಗಿರುತ್ತದೆ.

ಯಾರು ಬಳಸಬೇಕು?

ಯಾರು ಬಳಸಬೇಕು?

ನಿಮ್ಮ ಆದಾಯಕ್ಕೆ ಹೋಲಿಸಿದರೆ ನಿಮ್ಮ ಮನೆಯ ಖರ್ಚು ಅಧಿಕವಾಗಿದ್ದಲ್ಲಿ ಯಾವುದೇ ಸೋಮವಾರ ಬೆಳಿಗ್ಗೆ 4.30 ರಿಂದ 6 ಘಂಟೆಯ ಅವಧಿಯಲ್ಲಿ ನಿಮ್ಮ ಮನೆಯ ನೈರುತ್ಯ ಮೂಲೆಯಲ್ಲಿ ಇರಿಸಿ. ಈ ಮುಹೂರ್ತವನ್ನು ಬ್ರಾಹ್ಮ ಮುಹೂರ್ತ ಎಂದು ಹೇಳಲಾಗುತ್ತದೆ. ದೇವರನ್ನು ಪ್ರಾರ್ಥಿಸುವುದಕ್ಕೆ ಇದು ಬಹಳ ಶುಭವಾಗಿರುವ ಮುಹೂರ್ತವಾಗಿದೆ.ಗುಲಾಬಿ ನೀರು ಮತ್ತು ಹಾಲಿನೊಂದಿಗೆ ನೀವು ನಿಯಮಿತವಾಗಿ ಪೂಜೆ ಸಲ್ಲಿಸಬಹುದು.ಕಾಮಧೇನು ಹಸುವನ್ನು ನೀವು ಮಲ್ಲಿಗೆ ಹೂವುಗಳಿಂದ ಅಲಂಕರಿಸಬಹುದು.ಧೂಪ ಮತ್ತು ದ್ರವ್ಯವನ್ನು ತೋರಿಸಿ ಕೂಡ ವಿಶೇಷ ಪೂಜೆ ಸಲ್ಲಿಸಬಹುದು.ಹೀಗೆ ಮಾಡಲು ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ನೀವು ಉತ್ತಮ ಫಲಿತಾಂಶವನ್ನು ಗಮನಿಸಬಹುದು.

ಇನ್ನೊಂದು ವಿಧಾನದಲ್ಲೂ ನೀವು ಪೂಜಿಸುವ ಅವಕಾಶವಿದೆ.ಶುಕ್ರವಾರದಂದೂ ಕೂಡ ನೀವು ಪೂಜೆ ಕೈಗೊಳ್ಳಬಹುದು. ನಿಮ್ಮ ಮನೆಯಲ್ಲಿ ನೆಮ್ಮದಿ ನೆಲೆಸಿಲ್ಲ ಎಂದು ನೀವು ಭಾವಿಸುತ್ತಿದ್ದರೆ ನಿಮ್ಮ ಜೀವನದಲ್ಲಿ ಯಶಸ್ಸು ಸಿಗುತ್ತಿಲ್ಲ ಎಂದು ಅನ್ನಿಸುತ್ತಿದ್ದರೆ,ನಿಮ್ಮ ಮನೆ ಮತ್ತು ಕಛೇರಿಯಲ್ಲಿ ಕಾಮಧೇನುವನ್ನು ಇರಿಸಿ.ಅಲ್ಪಾವಧಿಯಲ್ಲೇ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ನೀವು ಗಮನಿಸುತ್ತೀರಿ.

ಕಾಮಧೇನು ಹಸು ನಿಮ್ಮ ಎಲ್ಲಾ ಆಸೆಗಳನ್ನು ಪೂರೈಸುತ್ತದೆ. ಕಾಮಧೇನು ಹಸು ಯಶಸ್ಸು ಮತ್ತು ಸಂಪತ್ತಿಗಾಗಿ ಬಳಸಬಹುದು

ವಿಗ್ರಹ ಇಟ್ಟರೆಆಗುವ ಅನುಕೂಲಗಳು

ವಿಗ್ರಹ ಇಟ್ಟರೆಆಗುವ ಅನುಕೂಲಗಳು

ಇದು ಆಧ್ಯಾತ್ಮಿಕ ಮತ್ತು ಭೈತಿಕ ಯಶಸ್ಸನ್ನು ನೀಡುತ್ತದೆ.

ಇದು ನಿಮ್ಮ ಮನೆಯಲ್ಲಿ ಶಾಂತಿಯನ್ನು ನೆಲೆಸುವಂತೆ ಮಾಡುತ್ತದೆ.

ಕಾಮಧೇನು ಹಸು ನಿಮ್ಮ ವ್ಯವಹಾರದಲ್ಲಿ ಅಭಿವೃದ್ಧಿಯಾಗುವಂತೆ ಮಾಡುತ್ತದೆ.

ಇದು ಶಿಕ್ಷಣಕ್ಕೆ ಬಹಳ ಸಹಕಾರಿಯಾಗಿದೆ. ನಿಮ್ಮ ಮನೆಯಲ್ಲಿ ಮಕ್ಕಳಿದ್ದಲ್ಲಿ ವಿಶೇಷ ಯಶಸ್ಸು ಮಕ್ಕಳಿಗೆ ಆಗುತ್ತದೆ.

ಪವಾಡ ಸೃಷ್ಟಿಸುವ ಕಾಮಧೇನು

ಪವಾಡ ಸೃಷ್ಟಿಸುವ ಕಾಮಧೇನು

ಕಾಮಧೇನು ಹಸುವನ್ನು ಸುರಬೀಸ್ ಎಂದು ಕರೆಯುತ್ತಾರೆ. ದೈವಿಕ ಗೋವಿನ ದೇವತೆ ಎಂದು ಹಿಂದೂ ಧರ್ಮದಲ್ಲಿ ಪೂಜಿಸ್ಪಡುವ ಕಾಮಧೇನುವನ್ನು ಪೂಜಿಸಲಾಗುತ್ತದೆ. ಆಕೆ ಸಾಕಷ್ಟು ಪವಾಡ ಸೃಷ್ಟಿಸುವ ಹಸುವಾಗಿದ್ದು ತನ್ನ ಮಾಲೀಕನಿಗೆ ಆತ ಬಯಸಿದ್ದನ್ನು ನೀಡುವ ಕರುಣಾಳು ತಾಯಿ ಆಕೆ.ಇತರೆ ಜಾನುವಾರುಗಳ ತಾಯಿ ಮತ್ತು ಹನ್ನೊಂದು ರುದ್ರದಂತೆ ಕಾಮಧೇನುವನ್ನು ಚಿತ್ರಿಸಲಾಗುತ್ತದೆ.

ಪ್ರತಿಮಾಶಾಸ್ತ್ರದಲ್ಲಿ ಆಕೆಯನ್ನು ಹೆಣ್ಣು ತಲೆ ಮತ್ತು ಸ್ತನಗಳನ್ನು ಹೊಂದಿರುವ ಬಿಳಿ ಆಕಳು ಅಥವಾ ಅವಳ ದೇಹದೊಂದಿಗೆ ವಿವಿಧ ದೇವತೆಗಳನ್ನು ಹೊಂದಿರುವ ಬಿಳಿ ಹಸುವಾಗಿ ಚಿತ್ರಿಸಲಾಗಿದೆ. ಎಲ್ಲಾ ಹಸುಗಳನ್ನು ಕೂಡ ಹಿಂದೂ ಧರ್ಮದಲ್ಲಿ ಕಾಮಧೇನುವಿನ ಐಹಿಕ ಸಾಕಾರವಾಗಿ ಪೂಜಿಸಲಾಗುತ್ತದೆ. ಹಾಗಂತ ಕಾಮಧೇನುವನ್ನು ಸ್ವತಂತ್ರವಾಗಿ ದೇವತೆಯಂತೆ ಪೂಜಿಸುವುದಿಲ್ಲ ಅಷ್ಟೇ ಅಲ್ಲ ಆಕೆಗಾಗಿಯೇ ವಿಶೇಷ ದೇವಾಲಯ ಕೂಡ ಇಲ್ಲ. ಸಾಮಾನ್ಯವಾಗಿ ಎಲ್ಲಾ ಹಸುಗಳನ್ನು ಹಿಂದೂಗಳು ದೇವರೆಂದೇ ಭಾವಿಸುತ್ತಾರೆ.

ಪೂಜೆ ಮಾಡುವಾಗ ಈ ಕೆಳಗಿನ ಮಂತ್ರವನ್ನು ಪಠಿಸಬೇಕು ನಮೋ ದೇವಯಾನಿ ಮಹಾ ದೇವಯಾನಿ

ಸುರಭಾಯಿ ಚ ನಮೋ ನಮಃ |

ಗವಂ ಬೀಜ ಸ್ವರೂಪಾಯ

ನಮಸ್ತೇ ಜಗತ್ ಅಂಬಿಕೆ ||

ಬ್ರಹ್ಮಾಂಡದ ತಾಯಿಗೆ ನಮಸ್ಕಾರಗಳು

ಬ್ರಹ್ಮಾಂಡದ ತಾಯಿಗೆ ನಮಸ್ಕಾರಗಳು

ನಮೋ ದೇವಯಾನಿ ಮಹಾ ದೇವಯಾನಿ

ಸುರಭಾಯಿ ಚ ನಮೋ ನಮಃ |

ಗವಂ ಬೀಜ ಸ್ವರೂಪಾಯ

ನಮಸ್ತೇ ಜಗತ್ ಅಂಬಿಕೆ ||

ಈ ಮೇಲಿನ ಸ್ತೋತ್ರವು (ವೈದಿಕ ಗ್ರಂಥಗಳು) ದೈವಿಕ ಕಾಮಧೇನು ಹಸುವಿಗಾಗಿ ಭಗವಾನ್ ಇಂದ್ರನ ಪ್ರಾರ್ಥನೆ ಎಂದು ನಂಬಲಾಗಿದೆ. ಈ ಮೇಲಿನ ಸ್ತೋತ್ರದ ಅರ್ಥವೇನೆಂದರೆ "ಭಕ್ತರ ಆಶಯಗಳನ್ನು ಈಡೇರಿಸುವ ಮಹಾ ದೇವಿಗೆ ನಮಸ್ಕಾರಗಳು, ಬ್ರಹ್ಮಾಂಡದ ತಾಯಿಗೆ ನಮಸ್ಕಾರಗಳು"

ಕಾಮಧೇನುವನ್ನು ಹಿಂದೂಗಳು ಯಶಸ್ಸು ಮತ್ತು ಸಮೃದ್ಧಿಯ ಮೂಲವೆಂದು ಪರಿಗಣಿಸುತ್ತಾರೆ. ದೈವಿಕ ತಾಯಿ ಎಂದು ಪೂಜಿಸುತ್ತಾರೆ. ಆಕೆಯ ಭೂಮಿ ತಾಯಿ (ಪೃಥ್ವಿಯ ತಾಯಿ) ಎಂದು ಹೋಲಿಕೆ ಮಾಡಲಾಗುತ್ತದೆ. ಪ್ರಶಾಂತತೆಗೆ ಹಸುವನ್ನು ಹೋಲಿಸುತ್ತಾರೆ, ಅಷ್ಟೇ ಅಲ್ಲ ಆತ್ಮತ್ಯಾಗದ ಸ್ವಭಾವ,ಫಲವತ್ತತೆ ಮತ್ತು ಪರಿಶುದ್ಧತೆಯ ಸಂಕೇತವೆಂದು ಆ ತಾಯಿಯನ್ನು ಪೂಜಿಸಲಾಗುತ್ತದೆ. ಒಟ್ಟಿನಲ್ಲಿ ಹಿಂದೂ ಸಂಪ್ರದಾಯದಲ್ಲಿ ಗೋಮಾತೆಯನ್ನು ಪೂಜನೀಯ ಭಾವದಿಂದ ನೋಡಲಾಗುತ್ತದೆ.

English summary

Importance Of Keeping Cow At Home

Kamadhenu Cow has heavenly powers, and is effective in attracting profits from land and agricultural field.
Story first published: Monday, February 17, 2020, 17:22 [IST]
X
Desktop Bottom Promotion