For Quick Alerts
ALLOW NOTIFICATIONS  
For Daily Alerts

ಫ್ರಿಡ್ಜ್‌ನಲ್ಲಿ ಆಹಾರಗಳನ್ನು ಸುರಕ್ಷಿತವಾಗಿಡಲು ಟ್ರಿಕ್ಸ್ ಮತ್ತು ಟಿಪ್ಸ್

|

ನಾವು ದಿನ ನಿತ್ಯ ಬಳಸುವ ಆಹಾರ ವಸ್ತುಗಳಲ್ಲಿ ಕೆಲವೊಂದು ಆಹಾರ ಪದಾರ್ಥಗಳನ್ನು ಎಷ್ಟು ಸಮಯ ಬೇಕಾದರೆ ಸಂಗ್ರಹಿಸಿಟ್ಟು ಬಳಸಬಹುದು, ಇನ್ನು ಕೆಲವು ಆಹಾರ ವಸ್ತುಗಳು ವಾರಟಗ್ಟಲೆ ಇಟ್ಟು ಬಳಸಬಹುದು, ಮತ್ತೆ ಕೆಲವು ಆ ದಿನ ಬಳಸಲು ಮಾತ್ರ ಯೋಗ್ಯವಾಗಿರುತ್ತದೆ.

ಈಗ ಬಹುತೇಕ ಮನೆಗಳಲ್ಲಿ ಫ್ರಿಡ್ಜ್‌ ಇರುವದರಿಂದ ಬೇಗ ಹಾಳಾಗುವ ಆಹಾರ ವಸ್ತುಗಳನ್ನು ಅದರಲ್ಲಿ ಸಂಗ್ರಹಿಸಿಟ್ಟು ಬಳಸುವುದು ಅಧಿಕವಾಗಿದೆ. ಕೆಲವೊಂದು ಆಹಾರಗಳನ್ನು ಫ್ರಿಡ್ಜ್‌ನಲ್ಲಿ ಇಡುವಾಗ ಸರಿಯಾದ ಉಷ್ಣಾಂಶದಲ್ಲಿ ಇಡುವುದು ಕೂಡ ಅವಶ್ಯಕ. ನಾವಿಲ್ಲಿ ಫ್ರಿಡ್ಜ್‌ನಲ್ಲಿ ಯಾವ ಆಹಾರಗಳನ್ನು ಎಷ್ಟು ಸಮಯ ಇಡುವುದು ಸರಕ್ಷಿತ ಎಂಬ ಮಾಹಿತಿ ನೋಡಿದ್ದೇವೆ ನೋಡಿ:

40°F ಅಥವಾ ಅದಕ್ಕಿಂತ ಕಡಿಮೆ ಉಷ್ಣಾಂಶದಲ್ಲಿ ಇಡಬೇಕಾದ ಆಹಾರಗಳು

40°F ಅಥವಾ ಅದಕ್ಕಿಂತ ಕಡಿಮೆ ಉಷ್ಣಾಂಶದಲ್ಲಿ ಇಡಬೇಕಾದ ಆಹಾರಗಳು

ಪೋರ್ಕ್‌ : ಇದನ್ನು 3-5ದಿನದವರೆಗೆ ಇಡಬಹುದು

ಚಿಕನ್: 1-2 ದಿನದವರೆಗೆ ಇಡಬಹುದು

ಕೆಂಪು ಮಂಸ: 1-2 ದಿನದವರೆಗೆ ಇಡಬಹುದು

ಸೂಪ್‌ ಮತ್ತು ಸ್ಟಿವ್ಯೂ: 3-4 ದಿನದವರೆಗೆ ಇಡಬಹುದು

ಮೊಟ್ಟೆ:4-5 ವಾರಗಳವರೆಗೆ ಇಡಬಹುಉದ

0°F ಅಥವಾ ಅದಕ್ಕಿಂತ ಕಡಿಮೆ ಉಷ್ಣತೆಯಲ್ಲಿ ಇಟ್ಟರೆ

0°F ಅಥವಾ ಅದಕ್ಕಿಂತ ಕಡಿಮೆ ಉಷ್ಣತೆಯಲ್ಲಿ ಇಟ್ಟರೆ

ಪೋರ್ಕ್ :4-12 ತಿಂಗಳವರೆಗೆ ಇಟ್ಟು ಬಳಸಬಹುದು

ಚಿಕನ್: 1 ವರ್ಷದವರೆಗೆ ಇಡಬಹುದು

ಕೆಂಪು ಮಾಂಸ: 3-4 ತಿಂಗಳು ಇಟ್ಟು ಬಳಸಬಹುದು

ಸೂಪ್‌ ಮತ್ತು ಸ್ಟಿವ್ಯೂ: 2-3 ತಿಂಗಳವರೆಗೆ

ಮೊಟ್ಟೆ: ಫ್ರೀಜ್ ಮಾಡಬಾರದು

ಉಳಿದ ಆಹಾರವನ್ನು ಫ್ರಿಡ್ಜ್‌ನಲ್ಲಿ ಇಡುವುದಾದರೆ

ಉಳಿದ ಆಹಾರವನ್ನು ಫ್ರಿಡ್ಜ್‌ನಲ್ಲಿ ಇಡುವುದಾದರೆ

* ಆಹಾರ ಉಳಿದಿದ್ದರೆ ಅದನ್ನು ಫ್ರಿಡ್ಜ್‌ನಲ್ಲಿ ಇಡುವುದಾದರೆ ಆಹಾರದ ಬಿಸಿ ಆರಿದ ಮೇಲೆ ಇಡಿ.

* ಬಿಸಿ ಬಿಸಿ ಇರುವು ಯಾವುದೇ ಆಹಾರವನ್ನು ಫ್ರಿಡ್ಜ್‌ನಲ್ಲಿ ಇಡಬೇಡಿ.

ಫ್ರಿಡ್ಜ್‌ನಲ್ಲಿಟ್ಟು ಬಿಸಿ ಮಾಡಿದ ಆಹಾರಗಳನ್ನು ಮತ್ತೆ ಫ್ರಿಡ್ಜ್‌ನಲ್ಲಿ ಇಡಬೇಡಿ

ಫ್ರಿಡ್ಜ್‌ನಲ್ಲಿಟ್ಟು ಬಿಸಿ ಮಾಡಿದ ಆಹಾರಗಳನ್ನು ಮತ್ತೆ ಫ್ರಿಡ್ಜ್‌ನಲ್ಲಿ ಇಡಬೇಡಿ

ಫ್ರಿಡ್ಜ್‌ನಲ್ಲಿಟ್ಟು ಬಿಸಿ ಮಾಡಿದ ಆಹಾರಗಳನ್ನು ಮತ್ತೆ ಫ್ರಿಡ್ಜ್‌ನಲ್ಲಿಟ್ಟು ಬಳಸಿದರೆ ಫುಡ್ ಪಾಯಿಸನ್ ಆಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಆಹಾರಗಳನ್ನು ಫ್ರಿಡ್ಜ್‌ನಲ್ಲಿಟ್ಟು ಮತ್ತೆ-ಮತ್ತೆ ಬಿಸಿ ಮಾಡಿ ತಿನ್ನಬೇಡಿ.

ಬೇಯಿಸಿದ ಆಹಾರ, ಹಸಿ ಆಹಾರ ಜೊತೆಯಲ್ಲೇ ಇಡಬೇಡಿ

ಬೇಯಿಸಿದ ಆಹಾರ, ಹಸಿ ಆಹಾರ ಜೊತೆಯಲ್ಲೇ ಇಡಬೇಡಿ

ಹಸಿ ಮಾಂಸ ಅಥವಾ ಇತರ ಆಹಾರವನ್ನು ಬೇಯಿಸಿದ ಆಹಾರದ ಜೊತೆ ಇಡಬೇಡಿ. ಇದರಲ್ಲಿರುವ ಬ್ಯಾಕ್ಟಿರಿಯಾ ಬೇಯಿಸದ ಆಹಾರಕ್ಕೆ ಹೋಗಿ ಅನೇಕ ಆರೋಗ್ಯ ಸಮಸ್ಯೆ ತರಬಹುದು.

ಆದ್ದರಿಂದ ಬೇಯಿಸಿದ ಆಹಾರ ಹಾಗೂ ಬೇಯಿಸದ ಆಹಾರವನ್ನು ಪ್ರತ್ಯೇಕವಾಗಿ ಇಡಿ.

ಆಹಾರ ಸಂಗ್ರಹಿಸಿಡುವ ಡಬ್ಬಗಳು ಶುಚಿಯಾಗಿರಲಿ

ಆಹಾರ ಸಂಗ್ರಹಿಸಿಡುವ ಡಬ್ಬಗಳು ಶುಚಿಯಾಗಿರಲಿ

ಫ್ರಿಡ್ಜ್‌ನಲ್ಲಿ ಆಹಾರವನ್ನು ಸಂಗ್ರಹಿಸಿಡುವಾಗ ಫ್ರಿಡ್ಜ್‌ ಶುಚಿಯಾಗಿಡಿ ಹಾಗೂ ಅದನ್ನು ಸಂಗ್ರಹಿಸಿಡುವ ಡಬ್ಬಗಳೂ ಶುವಿಯಾಗಿರಬೇಕು. ಮುಚ್ಚಳವಿರುವ ಡಬ್ಬಗಳನ್ನು ಬಳಸಿ ಸಂಗ್ರಹಿಸಿ ಇಡಿ.

ತುಂಬಾ ಸಮಯ ಇಟ್ಟ ವಸ್ತುಗಳನ್ನು ಬಳಸಬೇಡಿ

ತುಂಬಾ ಸಮಯ ಇಟ್ಟ ವಸ್ತುಗಳನ್ನು ಬಳಸಬೇಡಿ

ಫ್ರಿಡ್ಜ್‌ನಲ್ಲಿ ತುಂಬಾ ಸಮಯ ಇಟ್ಟ ಆಹಾರ ವಸ್ತುಗಳನ್ನು ಬಳಸಬೇಡಿ, ಅಲ್ಲದೆ ಫ್ರಿಡ್ಜ್‌ನಲ್ಲಿ ಬೇಯಿಸಿದ ಮೇಲೆ ಇಟ್ಟ ಆಹಾರ ವಸ್ತುಗಳನ್ನು ತೆಗೆದು ಬಳಸಿದ ಬಳಿಕ ನಾಲ್ಕು ಗಂಟೆಗಿಂತ ಅಧಿಕ ಸಮಯ ಹಾಗೇ ಇಟ್ಟು ಬಳಸುವುದು ಮಾಡಬೇಡಿ, ಅಲ್ಲದೆ ಅವುಗಳನ್ನು ಮತ್ತೆ ಫ್ರಿಡ್ಜ್‌ನಲ್ಲಿ ಇಡಬೇಡಿ.

ಆರೋಗ್ಯವಾಗಿರಲು ನಾವು ಯಾವ ಆಹಾರ ಸೇವಿಸುತ್ತೇವೆ ಅನ್ನುವುದರ ಜೊತೆಗೆ ಹೇಗೆ ತಿನ್ನುತ್ತೇವೆ ಅನ್ನುವುದು ಕೂಡ ಮುಖ್ಯವಾಗಿದೆ.

English summary

World Food Safety Day 2021: How to Store Food Long Term In Fridge: Tips and Tricks

World Food Safety Day 2021: How to store food long term in fridge: tips and tricks, read on...
X
Desktop Bottom Promotion