For Quick Alerts
ALLOW NOTIFICATIONS  
For Daily Alerts

ಟೊಮ್ಯಾಟೊ ಚಟ್ನಿಯನ್ನ ಈ ರೀತಿ ಸಂಗ್ರಹಿಸಿಟ್ಟರೆ ಮೂರು ತಿಂಗಳಾದರೂ ಹಾಳಾಗುವುದಿಲ್ಲ!

|

ಆಹಾರವನ್ನು ರುಚಿಕರವಾಗಿ ಮಾಡಲು ಹಲವು ಮಾರ್ಗಗಳಿವೆ, ಆದರೆ ಆ ಆಹಾರವನ್ನು ಹೆಚ್ಚು ಕಾಲ ಬಳಸುವಂತೆ ಮಾಡಲು ದಾರಿಗಳು ಬಹಳ ಕಡಿಮೆ. ಅದರಲ್ಲ ಚಟ್ನಿಯಂತಹ ಸೈಡ್ ಡಿಶ್‌ಗಳನ್ನು ಸಂಗ್ರಹಿಸಿಡುವುದೇ ದೊಡ್ಡ ತಲೆನೋವು. ಏಕೆಂದರೆ ಗಾಳಿ ತಾಗಿದೊಡನೆ ಅವುಗಳು ಹಾಳಾಗುತ್ತವೆ.

ಚಟ್ನಿ ತಿನ್ನಲು ಎಷ್ಟು ರುಚಿಕರವಾಗಿರುತ್ತದೆಯೋ, ಅದನ್ನು ತಯಾರಿಸುವುದು ಕೂಡ ಸುಲಭ. ಇದರಲ್ಲಿ ಹಲವು ವಿಧಗಳಿದ್ದರೂ, ಜನರು ಹಸಿರು ಮತ್ತು ಟೊಮೆಟೊ ಚಟ್ನಿಯನ್ನು ಹೆಚ್ಚು ಇಷ್ಟಪಡುತ್ತಾರೆ. ಅದಕ್ಕಾಗಿಯೇ ಅನೇಕ ಮಹಿಳೆಯರು ಹೆಚ್ಚಿನ ಪ್ರಮಾಣದ ಟೊಮೆಟೊ ಚಟ್ನಿಯನ್ನು ತಯಾರಿಸಿ, ಇಟ್ಟುಕೊಳ್ಳುತ್ತಾರೆ, ಆದರೆ ಅದು ಬೇಗನೆ ಹಾಳಾಗುತ್ತದೆ. ಇಂತಹ ಸಮಸ್ಯೆ ನಿಮಗೂ ಆಗಿದ್ದಲ್ಲಿ, ಚಿಂತಿಸಬೇಡಿ ಏಕೆಂದರೆ ಇಂದು ನಾವು ನಿಮಗೆ ಟೊಮೆಟೊ ಚಟ್ನಿ ಸಂಗ್ರಹಿಸಲು ಕೆಲವು ಸುಲಭ ಸಲಹೆಗಳನ್ನು ಹೇಳುತ್ತಿದ್ದೇವೆ, ಅದನ್ನು ನೀವು ಕೂಡ ಅನುಸರಿಸಬಹುದು.

ಟೊಮೆಟೊ ಚಟ್ನಿ ಸಂಗ್ರಹಿಸಲು ಕೆಲವು ಸುಲಭ ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

ಗಾಜಿನ ಜಾರ್‌ನಲ್ಲಿ ಹಾಕಿ:

ಗಾಜಿನ ಜಾರ್‌ನಲ್ಲಿ ಹಾಕಿ:

ನೀವು ಒಂದು ತಿಂಗಳು ಚಟ್ನಿಯನ್ನು ಸಂಗ್ರಹಿಸಲು ಬಯಸಿದರೆ, ಅದನ್ನು ಗಾಜಿನ ಜಾರ್ನಲ್ಲಿ ಸಂಗ್ರಹಿಸಿ ಮತ್ತು ತಂಪಾದ ಜಾಗದಲ್ಲಿ ಇಡಿ.. ನಿಮಗೆ ಚಟ್ನಿ ಬೇಕಾದಾಗ ಅದನ್ನು ಜಾರ್ ನಿಂದ ತೆಗೆದು ಬಳಸಿ. ಆದರೆ ನೆನಪಿನಲ್ಲಿಡಿ, ಚಟ್ನಿ ತೆಗೆದ ನಂತರ, ಜಾರ್ ಅನ್ನು ಸರಿಯಾಗಿ ಮುಚ್ಚಿ. ಈ ರೀತಿಯಾಗಿ, ನೀವು ತಿಂಗಳು ಪೂರ್ತಿ ಟೊಮೆಟೊ ಚಟ್ನಿಯನ್ನು ಬಳಸಬಹುದು.

ಫ್ರಿಜ್ ನಲ್ಲಿ ಸಂಗ್ರಹಿಸಿ:

ಫ್ರಿಜ್ ನಲ್ಲಿ ಸಂಗ್ರಹಿಸಿ:

ಟೊಮೆಟೊ ಚಟ್ನಿ ಕೂಡ ಶಾಖದಿಂದಾಗಿ ಬೇಗನೆ ಹಾಳಾಗುತ್ತದೆ. ಅದಕ್ಕಾಗಿಯೇ ನೀವು ಚಟ್ನಿ ಸಂಗ್ರಹಿಸಲು ಈ ಸಲಹೆಯನ್ನು ಅಳವಡಿಸಿಕೊಳ್ಳಿ. ಇದಕ್ಕಾಗಿ, ನೀವು ಚಟ್ನಿಯನ್ನು ಒಂದು ಡಬ್ಬಿಗೆ ಹಾಕಿ, ಆ ಪೆಟ್ಟಿಗೆಯನ್ನು ಫ್ರಿಜ್ ನಲ್ಲಿಡಿ, ಇದನ್ನು ಮಾಡುವುದರಿಂದ ಟೊಮೆಟೊ ಚಟ್ನಿ ಬೇಗನೆ ಹಾಳಾಗುವುದಿಲ್ಲ. ಆದರೆ ಚಟ್ನಿಯನ್ನು ಪೆಟ್ಟಿಗೆಯಲ್ಲಿ ಹಾಕಿದ ನಂತರ, ಫ್ರಿಜ್ ನಲ್ಲಿ ಇಡುವುದನ್ನು ಮರೆಯಬೇಡಿ. ಹೀಗೆ ಮಾಡುವುದರಿಂದ ನಿಮ್ಮ ಚಟ್ನಿ ಸುಮಾರು ಎರಡು ತಿಂಗಳ ಕಾಲ ಹಾಳಾಗುವುದಿಲ್ಲ.

ಐಸ್ ಕ್ಯೂಬ್ ರೀತಿ ಸಂಗ್ರಹಿಸಿ:

ಐಸ್ ಕ್ಯೂಬ್ ರೀತಿ ಸಂಗ್ರಹಿಸಿ:

ಟೊಮೆಟೊ ಚಟ್ನಿಯನ್ನು ದೀರ್ಘಕಾಲದವರೆಗೆ ಸಂಗ್ರಹಿಸಲು ಇದು ಅತ್ಯುತ್ತಮ ಮಾರ್ಗವಾಗಿದೆ. ಈ ಹ್ಯಾಕ್ ಅನ್ನು ಅಳವಡಿಸಿಕೊಳ್ಳಲು, ನೀವು ಟೊಮೆಟೊ ಚಟ್ನಿಯನ್ನು ಐಸ್-ಫ್ರೀಜಿಂಗ್ ಟ್ರೇನಲ್ಲಿ ಹಾಕಿ, ಅದನ್ನು ಫ್ರೀಜ್ ಮಾಡಬೇಕು. ನೆನಪಿನಲ್ಲಿಡಿ, ನೀವು ಈ ಸಲಹೆಯನ್ನು ಅನುಸರಿಸುತ್ತಿದ್ದರೆ, ಚಟ್ನಿಗೆ ನೀರನ್ನು ಬಳಸಬೇಡಿ. ಹೀಗೆ ಮಾಡುವುದರಿಂದ ಯಾವಾಗ ಬೇಕಾದರೂ ಟೊಮೆಟೊ ಚಟ್ನಿಯ ಐಸ್ ಕ್ಯೂಬ್‌ಗಳ್ನು ಬಳಸಬಹುದು. ಈ ಮೂಲಕ ಚಟ್ನಿಯನ್ನು ಈ ರೀತಿ ಸುಮಾರು ಮೂರು ತಿಂಗಳು ಬಳಸಬಹುದು.

ಗಾಳಿಯಾಡದ ಡಬ್ಬಿ ಬಳಸಿ:

ಗಾಳಿಯಾಡದ ಡಬ್ಬಿ ಬಳಸಿ:

ಟೊಮೆಟೊ ಚಟ್ನಿ ಹಾಳಾಗಲು ಮುಖ್ಯ ಕಾರಣ ಗಾಳಿ, ಏಕೆಂದರೆ ಗಾಳಿಯಲ್ಲಿರುವ ಬ್ಯಾಕ್ಟೀರಿಯಾಗಳು ಆಹಾರವನ್ನು ಕಲುಷಿತಗೊಳಿಸುತ್ತವೆ, ಇದರಿಂದಾಗಿ ಆಹಾರ ಪದಾರ್ಥಗಳು ಬೇಗ ಹಾಳಾಗುತ್ತವೆ. ವಿಶೇಷವಾಗಿ ಟೊಮೆಟೊ ಚಟ್ನಿ, ಆದ್ದರಿಂದ ನೀವು ಅದನ್ನು ಗಾಳಿಯಾಡದ ಪಾತ್ರೆಯೊಳಗೆ ಶೇಖರಿಸಿಡಬೇಕು. ಈಗ ಮಳೆಗಾಲ ನಡೆಯುತ್ತಿರುವುದರಿಂದ ಚಟ್ನಿ ಹಾಳಾಗುವ ಅಪಾಯ ಹೆಚ್ಚು. ಆದ್ದರಿಂದ, ಗಾಳಿ ಒಳಗೆ ಹೋಗದ ಕಂಟೇನರ್‌ನಲ್ಲಿ ಸಂಗ್ರಹಿಸಿ.

ಚಟ್ನಿಯನ್ನು ಕುದಿಸಿ ಇಡಬಹುದು:

ಚಟ್ನಿಯನ್ನು ಕುದಿಸಿ ಇಡಬಹುದು:

ಮೇಲಿನ ಸಲಹೆಗಳನ್ನು ಅನುಸರಿಸುವುದರ ಜೊತೆಗೆ, ನೀವು ಚಟ್ನಿಯನ್ನು ಬೇಯಿಸಿ ಇಡಬಹುದು. ಚಟ್ನಿಯನ್ನ ಕುದಿಸಿ ಇಟ್ಟರೆ, ಬೇಗ ಹಾಳಾಗುವುದಿಲ್ಲ. ಈ ರೀತಿಯಾಗಿ ನೀವು ಟೊಮೆಟೊ ಚಟ್ನಿಯನ್ನು ದೀರ್ಘಕಾಲ ಸಂಗ್ರಹಿಸಬಹುದು.

English summary

How to Preserve Tomato Chutney for Long Time in Kannada

Here we talking about How to Preserve Tomato Chutney for Long Time in Kannada, read on
X
Desktop Bottom Promotion