For Quick Alerts
ALLOW NOTIFICATIONS  
For Daily Alerts

ಡೋರ್‌ ಮ್ಯಾಟ್‌ ಸ್ವಚ್ಛಗೊಳಿಸಲು ಇಲ್ಲಿದೆ ಸಿಂಪಲ್‌ ಟಿಪ್ಸ್‌

|

ಅಮೇರಿಕಾದ ನಂಬರ್ 1 ಕ್ಲೀನಿಂಗ್ ತಜ್ಞರಾಗಿರುವ ಮಿಸ್ಟರ್ ಡಾನ್ ಅಸ್ಲೆಟ್ ಅವರು ಹೇಳುವ ಪ್ರಕಾರ ಸರಿಯಾದ ರೀತಿಯಲ್ಲಿ ಮ್ಯಾಟಿಂಗ್ ಮಾಡಿದರೆ ಸ್ವಚ್ಛತೆಗೆ ತೆಗೆದುಕೊಳ್ಳುವ ಅಂದಾಜು 200 ಘಂಟೆಗಳ ಕಾರ್ಮಿಕರ ಶ್ರಮವನ್ನು ಇದು ಉಳಿಸುತ್ತದೆಯಂತೆ.

How To Clean Your Door Mats Easily

ಆದರೆ ನಿಮ್ಮ ಫ್ಲೋರ್ ಮ್ಯಾಟ್ ಗಳು ಅದರ ಕೆಲಸವನ್ನು ಪರ್ಫೆಕ್ಟ್ ಆಗಿ ಮಾಡಿದಾಗ ನೀವು ಅದರ ಸ್ವಚ್ಛತೆಯನ್ನು ಕೂಡ ಆಗಾಗ ಮಾಡಬೇಕಾಗುತ್ತದರ. ಹಾಗಾದ್ರೆ ನಿಮ್ಮ ಮನೆಯ ಅಥವಾ ಆಫೀಸಿನ ಮ್ಯಾಟ್ ಗಳನ್ನು ಕ್ಲೀನ್ ಮಾಡುವುದಕ್ಕೆ ಇರುವ ಸುಲಭವಾದ ಮತ್ತು ಬೆಸ್ಟ್ ವಿಧಾನ ಯಾವುದು?

ನಿಮ್ಮ ಮ್ಯಾಟ್ ನಲ್ಲಿ ಸಿಲುಕಿ ಹಾಕಿಕೊಳ್ಳುವ ಕಠಿಣವಾದ ಕೊಳಕನ್ನು ತೆಗೆದು ಹಾಕುವುದಕ್ಕೆ ನಾವು ಇಲ್ಲಿ ನಿಮಗೆ ಸಹಾಯವಾಗುವ 5 ಪ್ರಮುಖ ವಿಧಾನವನ್ನು ತಿಳಿಸಿಕೊಡುತ್ತಿದ್ದೇವೆ. ಸರಿಯಾದ ಯಾವ ವಿಧಾನದಲ್ಲಿ ಮ್ಯಾಟ್ ಸ್ಚಚ್ಛಗೊಳಿಸಬಹುದು? ಮುಂದೆ ಓದಿ ತಿಳಿದುಕೊಳ್ಳಿ.

ವಾಷಿಂಗ್ ಮಷಿನ್

ವಾಷಿಂಗ್ ಮಷಿನ್

ತೊಳೆಯಲು ಯೋಗ್ಯವಾಗಿರುವ ಮ್ಯಾಟ್ ಗಳನ್ನು ತೊಳೆಯುವುದಕ್ಕೆ ಎರಡು ಆಯ್ಕೆಗಳಿವೆ. ಒಂದು ಮಷಿನ್ ವಾಷ್ ಅದು ದೇಶೀಯ ಯಂತ್ರ ಅಥವಾ ವಾಣಿಜ್ಯ ಯಂತ್ರ ಯಾವುದಾದರೂ ಸರಿ.ಎರಡನೆಯದ್ದು ನೀವೇ‌ ಕೈಯಾರೆ ತೊಳೆಯುವುದು. ಎರಡನೆಯದ್ದು ಹೆಚ್ಚು ಪ್ರಾಯೋಗಿಕವಾಗಿರುವ, ಸುಲಭವಾಗಿರುವ ಮತ್ತು ಇದು ಅಗ್ಗದ ವಿಧಾನ ಕೂಡ ಹೌದು ಎಂಬುದನ್ನು ಸಪರೇಟ್ ಆಗಿ ಹೇಳಬೇಕಾಗಿಲ್ಲ.

ನೀವು ನಿಮ್ಮ ಎಂಟ್ರೆಂಸ್ ನ ಮ್ಯಾಟ್ ತೊಳೆಯಲು ಯೋಗ್ಯವೇ ಅಥವಾ ಇಲ್ಲವೇ ಎಂಬುದನ್ನು ಮ್ಯಾಟ್ ಸಪ್ಲೈಯರ್ ಬಳಿ ತಿಳಿದುಕೊಳ್ಳಿ ಅಥವಾ ಸ್ವಚ್ಛತಾ ಸೂಚನೆಗಳನ್ನು ಓದಿ ಅನುಸರಿಸಿ. ಮೊದಲನೆಯದಾಗಿ ಮ್ಯಾಟ್ ನ್ನು ತೊಳೆಯಬಹುದೇ ಎಂದು ಪರೀಕ್ಷಿಸಿ, ಎರಡನೆಯದಾಗಿ ನೀವು ಖರೀದಿಸಿದ ಮ್ಯಾಟಿನ ತೂಕವನ್ನು ಗಮನಿಸಿ.

ಒದ್ದೆಯ ಮತ್ತು ಶುಷ್ಕವಾಗಿರುವ ವ್ಯಾಕ್ಯೂಮ್ ಕ್ಲೀನರ್

ಒದ್ದೆಯ ಮತ್ತು ಶುಷ್ಕವಾಗಿರುವ ವ್ಯಾಕ್ಯೂಮ್ ಕ್ಲೀನರ್

ಈಗಾಗಲೇ ತಿಳಿಸಿರುವ ಸಲಹೆ ಒಂದರಂತೆ ನೀವು ನಿಮ್ಮ ಮ್ಯಾಟ್ ಸಪ್ಲೈಯರ್ ಬಳಿ ನೀವು ಖರೀದಿಸಿರುವ ಮ್ಯಾಟ್ ತೊಳೆಯಲು ಯೋಗ್ಯವೇ ಎಂಬುದನ್ನು ಪರೀಕ್ಷೆ ಮಾಡಿಕೊಳ್ಳಿ. ಈ ರೀತಿಯ ಕ್ಲೀನರ್ ಸುಲಭವಾಗಿ ಲಭ್ಯವಿರುವುದಿಲ್ಲ.ಹಾಗಾಗಿ ವಾಣಿಜ್ಯ ಹಾಗು ಕೈಗಾರಿಕಾ ಸ್ಥಳಗಳಲ್ಲಿ ಹೆಚ್ಚು ಬಳಕೆಗೆ ಯೋಗ್ಯವಾಗಿರುತ್ತದೆ. ಆದರೆ ಒಂದು ವೇಳೆ ನಿಮ್ಮ ಬಳಿ ಮನೆಯಲ್ಲಿ ಲಭ್ಯವಿದ್ದರೆ ಖಂಡಿತ ಬಳಸಲು ಯೋಗ್ಯವಾಗಿರುವ ವಿಧಾನವಾಗಿದೆ. ಹೆಚ್ಚು ಶಕ್ತಿಯಾಲಿಯಾಗಿರುವ ಮೋಟರ್ ಇದರಲ್ಲಿ ಇರುವುದರಿಂದಾಗಿ ಅಡಗಿ ಕುಳಿತಿರುವ ಸಣ್ಣ ಸಣ್ಣ ಕೊಳೆ ಕೂಡ ಮ್ಯಾಟ್ ನಿಂದ ಹೊರತೆಗೆಯುವುದಕ್ಕೆ ಇದು ಅನುಕೂಲಕರವಾಗಿರುತ್ತದೆ. ಇನ್ನಷ್ಟು ಸ್ವಚ್ವಗೊಳಿಸುವುದಕ್ಕಾಗಿ ನೀವು ಮ್ಯಾಟ್ ನ್ನು ಒದ್ದೆ ಮಾಡಿ ಪುನಃ ಡ್ರೈ ಮಾಡಿ.

ಕಾರ್ಪೆಟ್ ಕ್ಲೀ‌ನರ್

ಕಾರ್ಪೆಟ್ ಕ್ಲೀ‌ನರ್

ಹೆಚ್ಚಿನ ಬ್ಯುಸಿನೆಸ್ ಸ್ಥಳಗಳಲ್ಲಿ ಮತ್ತು ಕೆಲವರ ಮನೆಗಳಲ್ಲಿ ಕಾರ್ಪೆಟ್ ಕ್ಲೀನರ್ ನ ವ್ಯವಸ್ಥೆ ಇರುತ್ತದೆ. ಕಾರ್ಪೆಟ್ ಕ್ಲೀನರ್ ಆಳವಾದ ಸ್ವಚ್ಛತೆಯನ್ನು ನೀಡುತ್ತದೆ ಮತ್ತು ಕೊಳೆಯನ್ನು ಹೊರ ತೆಗೆಯಲು ಇದು ನೆರವಾಗುತ್ತದೆ.ಸಲಹೆ 2 ರಲ್ಲಿ ಇರುವಂತೆ ಒದ್ದೆಯ ಮತ್ತು ಡ್ರೈ ವ್ಯಾಕ್ಯೂಮ್ ಕ್ಲೀನರ್ ಬಳಕೆಯಂತೆ ಕಾರ್ಪೆಟ್ ಕ್ಲೀನರ್ ಒದ್ದೆಯಾದಾಗಲೂ ಕೊಳೆಯನ್ನು ತೆಗೆಯುತ್ತದೆ ಮತ್ತು ನಿಮ್ಮ ಮ್ಯಾಟ್ ನ್ನು ಡ್ರೈ ಮಾಡುತ್ತದೆ. ಒಳಾಂಗಣ ಮ್ಯಾಟ್ ಗಳ ಸ್ವಚ್ಛತೆಗೆ ಇದು ನೆರವಾಗುತ್ತದೆ.

 ವ್ಯಾಕ್ಯೂಮ್

ವ್ಯಾಕ್ಯೂಮ್

ನಿಮ್ಮ ಮ್ಯಾಟ್ ಗಳ ನಿರ್ವಹಣೆಗೆ ಪ್ರತಿದಿನ ವ್ಯಾಕ್ಯೂಮ್ ಮಾಡುವುದು ಬಹಳ ಸೂಕ್ತವಾಗಿದೆ. ಕಡಿಮೆ‌ ಓಡಾಟ ಇರುವ ಪ್ರದೇಶದಲ್ಲಿರುವ ಮ್ಯಾಟ್ ಗಳ ನಿರ್ವಹಣೆಯನ್ನು ದೀರ್ಘಾವಧಿಗೆ ಒಮ್ಮೆ ಮಾಡಿದರೂ ಸಾಕಾಗುತ್ತದೆ. ಆದರೆ ಅತೀ ಹೆಚ್ಚು ಜನ ಓಡಾಡುವ ಪ್ರದೇಶದಲ್ಲಿರುವ ಮ್ಯಾಟ್ ಗಳನ್ನು ನಾವು ಈಗಾಗಲೇ ತಿಳಿಸಿರುವ ಸಲಹೆ 1,2,3 ಈ ಮೂರು ವಿಧಾನದಲ್ಲೂ ಸ್ವಚ್ಛಗೊಳಿಸಬಹುದು.

ಬಟ್ಟೆಯಿಂದ ಅಥವಾ ಒರೆಸೋ ಕೋಲಿನಿಂದ ತೊಳೆಯಿರಿ

ಬಟ್ಟೆಯಿಂದ ಅಥವಾ ಒರೆಸೋ ಕೋಲಿನಿಂದ ತೊಳೆಯಿರಿ

ಈ ಸಲಹೆಯು ರಬ್ಬರ್ ಮ್ಯಾಟ್ ಗಳ ಸ್ವಚ್ಛತೆಗೆ ಹೇಳಿ ಮಾಡಿಸಿದ್ದಾಗಿದೆ. ಬಾರ್ ಗಳು, ಅಡುಗೆ ಮನೆ ಕಡೆಗಳಲ್ಲಿ ಹಾಕಲಾಗಿರುವ ಮ್ಯಾಟ್ ಗಳನ್ನು ಹೀಗೆ ಸ್ವಚ್ಛಗೊಳಿಸಬಹುದು. ಪ್ರತಿದಿನದ ಸ್ವಚ್ಛಗೊಳಿಸುವಿಕೆ ನಡೆಸುವಾಗ ಒರೆಸೋ ಬಟ್ಟೆಯಿಂದ ಒರೆಸಿಕೊಳ್ಳಬಹುದು. ಯಾವುದೇ ಬಗೆಯ ರಾಸಾಯನಿಕವನ್ನು ಬಳಸಬಹುದೇ ಎಂಬ ಬಗ್ಗೆ‌ ಮ್ಯಾಟ್ ಸಪ್ಲೈಯರ್ ಬಳಿ ಪರಿಶೀಲಿಸಿಕೊಳ್ಳಿ.ರಬ್ಬರ್ ನ್ನು ಆ ಕೆಮಿಕಲ್ ಗಳು ಡ್ಯಾಮೇಜ್ ಮಾಡಬಾರದು ಅಥವಾ ತುಂಡಾಗುವಂತೆ ಮಾಡಬಾರದು. ಸಲಹೆ‌ ಒಂದರಲ್ಲಿ ಹೇಳಿರುವಂತೆ ನೀವು ಮ್ಯಾಟ್ ನ್ನು ಸರಳವಾಗಿ ಹೊರಗೆ ತೆಗೆದುಕೊಂಡು ಹೋಗಿ ಕುಡುಗಿಕೊಳ್ಳಿ ಮತ್ತು ಹಗ್ಗದ‌ ಮೇಲೆ ನೇತುಹಾಕಿ ಒಣಗುವಂತೆ ಮಾಡಬಹುದು. ಬಟ್ಟೆಯ ಮ್ಯಾಟ್ ಗೆ‌ ಅನುಸರಿಸುವ ವಿಧಾನವನ್ನು ಇದಕ್ಕೂ ಕೂಡ ಅನುಸರಿಸಿಕೊಳ್ಳಬಹುದು.

English summary

How To Clean Your Door Mats Easily

Here we are discussing about How To Clean Your Door Mats. if your floor mats are to do their job effectively every so often they will need to be cleaned. So what's the best and easiest way to do this? Read more.
X
Desktop Bottom Promotion