For Quick Alerts
ALLOW NOTIFICATIONS  
For Daily Alerts

ಬಟ್ಟೆಗಳಲ್ಲಿನ ಬೂಜು, ಶಿಲೀಂದ್ರ ತೆಗೆಯಲು ಸಿಂಪಲ್‌ ಟಿಪ್ಸ್‌

|

ಹವಾಮಾನ ಇಲಾಖೆ ಈ ವರ್ಷ ಸಾಮಾನ್ಯ ಮಾನ್ಸೂನ್ ಮಾರುತಗಳು ಬೀಸುವುದರಿಂದ ಮಳೆಗಾಲ ಸಾಮಾನ್ಯವಾಗಿರುತ್ತದೆ ಎಂಬ ಮುನ್ಸೂಚನೆ ನೀಡಿದೆ. ಇದು ಮಳೆಗಾಲದ ಸೊಬಗನ್ನು ಅನುಭವಿಸಲು ಸಂತೋಷದ ಕಾರಣವಾದರೂ ಇದರ ಜೊತೆಗೇ ಕಲವಾರು ಸಮಸ್ಯೆಗಳನ್ನೂ ತರುವುದರಿಂದ ಕಳವಳವೂ ಉಂಟಾಗುತ್ತದೆ.

How To Avoid Mildew On Clothes

ವಿಶೇಷವಾಗಿ ಗಾಳಿಯಲ್ಲಿ ತುಂಬಿಕೊಳ್ಳುವ ತೇವಾಂಶದ ಕಾರಣದಿಂದ ಬಟ್ಟೆ ಮತ್ತು ಚರ್ಮದ ವಸ್ತುಗಳ ಮೇಲಿನ ಶಿಲೀಂಧ್ರ ಅಥವಾ ಬೂಜು (ಬೂಸು) ಅವುಗಳಲ್ಲಿ ಪ್ರಮುಖವಾಗಿದೆ. ಬಟ್ಟೆ ಮತ್ತು ಚರ್ಮದ ವಸ್ತುಗಳನ್ನು ಹಾಳು ಮಾಡದಂತೆ ಶಿಲೀಂಧ್ರ, ಬೂಜು ಮತ್ತು ಬುಗುಟನ್ನು ನೀವು ಹೇಗೆ ತಡೆಯುತ್ತೀರಿ? ಶಿಲೀಂಧ್ರ, ಬೂಜು ಮತ್ತು ಬುಗುಟನ್ನು ನಿವಾರಿಸುವ ಅತ್ಯುತ್ತಮ ಪರಿಹಾರಗಳನ್ನು ನೋಡೋಣ.

ಬಿಸಿಲಿನಿಂದ ಒಣಗಿದ್ದ ಭೂಮಿಯ ಮೇಲೆ ಬೀಳುವ ಮೊದಲ ಕೆಲವು ಮಳೆಹನಿಗಳಿಂದ ವಾತಾವರಣದಲ್ಲಿ ಮೂಡುವ ಮಣ್ಣಿನ ಪರಿಮಳ ಮನಸ್ಸಿಗೆ ಮುದ ನೀಡುವುದು ಮಾತ್ರವಲ್ಲ ಹೊಸ ಜೀವನದ ಭರವಸೆಯನ್ನೂ ನೀಡುತ್ತದೆ.

ಆಗಸದ ತುಂಬಾ ಮಳೆ ಮೋಡಗಳು ಕವಿದು ತಾಪಮಾನದಲ್ಲಿನ ಹಠಾತ್ ಕುಸಿತ ಮತ್ತು ತಂಪಾದ ಗಾಳಿ ಎದುರಾದ ಬಳಿಕ ಸುರಿಯುವ ವರ್ಷಾಧಾರೆ ಯಾರಿಗಿಷ್ಟವಿಲ್ಲ? ಘರ್ಜಿಸುವ ಗುಡುಗು ಮತ್ತು ಚಲಿಸುವ ಬೂದು ಮೋಡಗಳ ನಡುವೆ ಕಣ್ಣಾಮುಚ್ಚಾಲೆಯಾಡುವ ಸೂರ್ಯನ ಕಿರಣಗಳು ನಮ್ಮನ್ನು ಮಂತ್ರಮುಗ್ಧವಾಗಿಸುತ್ತವೆ.

ಈ ಸಂದರ್ಭ ಅದೆಷ್ಟು ಕವಿಗಳಿಗೆ ಲೇಖಕರಿಗೆ ಸ್ಪೂರ್ತಿ ನೀಡಿದೆಯೋ ಗೊತ್ತಿಲ್ಲ, ಆದರೆ ಪರಿಣಾಮವಾಗಿ ಹಲವಾರು ಕವಿತೆ ಕಥೆ ಕಾದಂಬರಿಗಳು ಮೂಡಿರುವುದಂತೂ ಸುಳ್ಳಲ್ಲ. ಆದರೆ ಮಳೆಗಾಲದೊಂದಿಗೇ ಕೆಲವು ಸೂಕ್ಷ್ಮಜೀವಿಗಳೂ ಗಾಳಿಯಲ್ಲಿ ತೇಲುತ್ತಾ ನಮ್ಮ ಮನೆಯಂಗಳಕ್ಕೆ ಆಗಮಿಸಿ ನಮ್ಮ ಅತಿಥಿಗಳಾಗುತ್ತವೆ. ಆದರೆ ಈ ಅತಿಥಿಗಳು ಸುಮ್ಮನೆ ಬಂದು ಊಟ ಮಾಡಿ ಹೋದರೆ ತೊಂದರೆಯಿಲ್ಲ, ಬದಲಿಗೆ ಇವು ನಿಮ್ಮ ಮನೆಯಲ್ಲಿಯೇ ಠಿಕಾಣಿ ಹೂಡಿ ವಂಶಾಭಿವೃದ್ದಿಗಾಗಿ ಮನೆಕಟ್ಟಿಕೊಳ್ಳುವುದು ಮಾತ್ರ ನಮಗೆ ಬೇಕಾಗಿಲ್ಲ.

ಬೂಸು, ಬುಗುಟು ಅಥವಾ ಶಿಲೀಂಧ್ರಗಳು ಈ ತೊಂದರೆ ನೀಡುವ ಸೂಕ್ಷ್ಮಜೀವಿಗಳಲ್ಲಿ ಪ್ರಮುಖವಾಗಿವೆ. ಮಳೆಗಾಲ ಪ್ರಾರಂಭವಾದ ಮೊದಲ ಕೆಲವು ದಿನಗಳಲ್ಲಿ ಇವುಗಳು ಬಂದಿದ್ದು ಗೊತ್ತೇ ಆಗುವುದಿಲ್ಲ. ಏನಿದ್ದರೂ ಇವು ನಿಮ್ಮ ಮನೆಯಲ್ಲಿ ಎಲ್ಲೆಲ್ಲಿ ಬಟ್ಟೆ ಅಥವಾ ನಾರುಗಳಿವೆಯೋ ಅಲ್ಲೆಲ್ಲಾ ತಮ್ಮ ಇರುವಿಕೆಯನ್ನು ಪ್ರಕಟಿಸಲು ತೋರಗೊಡುತ್ತವೆ. ಆಗಲೇ ನಮಗೆ ಈ ಅನಾವಶ್ಯಕ ಅತಿಥಿಗಳ ಬಗ್ಗೆ ಅರಿವು ಮೂಡುತ್ತದೆ. ಇವು ಮಳೆಗಾಲದ ಸಂಭ್ರಮವನ್ನೆಲ್ಲಾ ಹಾಳುಮಾಡುವ ಜೊತೆಗೇ ಆರೋಗ್ಯದ ಮೇಲೂ ಪ್ರಭಾವ ಬೀರುತ್ತವೆ.

ಬನ್ನಿ, ಇವನ್ನು ನಿಗ್ರಹಿಸುವ ಕೆಲವು ಕ್ರಮಗಳನ್ನು ನೋಡೋಣ

ಸಿಲಿಕಾ ಜೆಲ್ ಬಳಸಿ

ಸಿಲಿಕಾ ಜೆಲ್ ಬಳಸಿ

ಮನೆ ಸುಧಾರಣಾ ಮಳಿಗೆಗಳಲ್ಲಿ ಪರಿಮಳಯುಕ್ತ ಮತ್ತು ಸರಳ ಸಿಲಿಕಾ ಜೆಲ್ ಸ್ಯಾಶೆ ಅಥವಾ ಚಿಕ್ಕ ಪೊಟ್ಟಣಗಳು ಸಿಗುತ್ತವೆ. ಜನಪ್ರಿಯ ಆನ್‌ಲೈನ್ ಮಳಿಗೆಗಳಿಂದಲೂ ಅವುಗಳನ್ನು ಖರೀದಿಸಬಹುದು. ಹೆಚ್ಚಿನ ಎಲೆಕ್ಟ್ರಾನಿಕ್ ಸರಕುಗಳ ಪ್ಯಾಕಿಂಗ್ ವಸ್ತುಗಳ ಒಳಗೆ ಸಿಲಿಕಾ ಜೆಲ್ ಇರುವ ಚಿಕ್ಕ ಪೊಟ್ಟಣಗಳನ್ನು ಸಹ ನೀವು ಕಾಣಬಹುದು. ಚೂಯಿಂಗ್ ಗಮ್ ಸುತ್ತುವರೆದಿರುವ ಕಾಗದದ ಒಳಗೂ ಇವೆ.

ಈ ಪೊಟ್ಟಣಗಳನ್ನು ನಿಮ್ಮ ಬೀರುಗಳಲ್ಲಿ ಅಥವಾ ಬೇರೆಡೆ ನೀವು ಬಟ್ಟೆ ಮತ್ತು ಬೂಟುಗಳನ್ನು ಸಂಗ್ರಹಿಸಿ ಮತ್ತು ಸಂಗ್ರಹಿಸಿ. ಈ ಪೊಟ್ಟಣಗಳನ್ನು ಕತ್ತರಿಸಿ ನೋಡಿದಾಗ ಒಳಗೆ ಸಕ್ಕರೆಯಂತೆಯೇ ಕಾಣುವ ಸಿಲಿಕಾ ಜೆಲ್ ಕಾಣಬಹುದು. ಇದು ಸೇವನೆಗೆ ಅಪಾಯಕಾರಿಯಾಗಿರುವ ಕಾರಣ ಮಕ್ಕಳ ಕೈಗೆ ಸಿಗದಂತೆ ಜಾಗ್ರತೆ ವಹಿಸುವುದು ಅಗತ್ಯ.

ಇವು ವಾತಾವರಣದಿಂದ ನೀರಿನಂಶವನ್ನು ಹೀರಿಕೊಳ್ಳುವ ಮೂಲಕ ಇದರೊಂದಿಗಿರುವ ಶಿಲೀಂಧ್ರದ ಅತಿಸೂಕ್ಷ್ಮ ಪರಾಗರೇಣುಗಳನ್ನೂ ಹೀರಿಕೊಳ್ಳುತ್ತವೆ. ಸಾಕಷ್ಟು ಪೊಟ್ಟಣಗಳನ್ನು ಖರೀದಿಸಿ ಉದಾರವಾಗಿ ಬಳಸಿ, ಶಿಲೀಂಧ್ರ ಮುಕ್ತ ಮಳೆಗಾಲಕ್ಕಾಗಿ ಅವುಗಳನ್ನು ಬಟ್ಟೆಗಳ ನಡುವೆ ಮತ್ತು ನಿಮ್ಮ ಬೀರುವಿನಲ್ಲಿರುವ ಎಲ್ಲಾ ಅರೆಗಳಲ್ಲಿಯೂ ಇರಿಸಿ.

ಆಗಾಗ್ಗೆ ಬಟ್ಟೆಗಳನ್ನು ಬಿಸಿಲಿಗೆ ಒಣಗಿಸಿ

ಆಗಾಗ್ಗೆ ಬಟ್ಟೆಗಳನ್ನು ಬಿಸಿಲಿಗೆ ಒಣಗಿಸಿ

ಮಳೆಗಾಲದ ಕೆಲವು ದಿನಗಳಲ್ಲಿ ಮೋಡವಿಲ್ಲದೇ ಬಿಸಿಲು ಬೀಳುತ್ತವೆ. ಈ ದಿನಗಳನ್ನು ನೀವು ಸದುಪಯೋಗಿಸಿಕೊಳ್ಳಬೇಕು. ನಿಮ್ಮ ಮನೆಯ ಎಲ್ಲಾ ಬಾಗಿಲುಗಳು ಮತ್ತು ಕಿಟಕಿಗಳನ್ನು ತೆರೆದಿಡಿ ಮತ್ತು ಸೂರ್ಯನ ಬೆಳಕನ್ನು ಪ್ರವೇಶಿಸಲು ಅನುವು ಮಾಡಿಕೊಡಿ. ನಿಮ್ಮ ಬಟ್ಟೆಗಳು ಮತ್ತು ಪಾದರಕ್ಷೆಗಳನ್ನು ಸಂಗ್ರಹಿಸಿರುವ ಎಲ್ಲಾ ಡ್ರಾಯರ್‌ಗಳು ಮತ್ತು ಬೀರುಗಳನ್ನು ಬಿಸಿಲಿಗೆ ಒಡ್ಡಿಕೊಳ್ಳುವಂತೆ ತೆರೆದಿಡಿ.

ಸಾಧ್ಯವಾದರೆ ಎಲ್ಲವನ್ನೂ ಹೊರಗಿನ ಬಿಸಿಲಿನಲ್ಲಿ ಒಣಗಲು ಬಿಡಿ. ಉತ್ತಮ ಗಾಳಿಯ ಪ್ರಸರಣವನ್ನು ರಚಿಸಲು ಫ್ಯಾನ್ ಅನ್ನು ಆಗಾಗ ಚಲಾಯಿಸಿ. ಹಾಗೆ ಮಾಡುವುದರಿಂದ ನಿಮ್ಮ ಮನೆಯೊಳಗಿನ ಗಾಳಿಯು ಬೆಚ್ಚಗಾಗಲು ಮತ್ತು ಅದರ ತೇವಾಂಶವನ್ನು ಕಳೆದುಕೊಳ್ಳಲು ಅನುವು ಮಾಡಿಕೊಡುತ್ತದೆ.

ನಿಮಗೆ ಸಮಯ ಮತ್ತು ತಾಳ್ಮೆ ಇದ್ದರೆ ನಿಮ್ಮ ಬಟ್ಟೆ ಮತ್ತು ಪಾದರಕ್ಷೆಗಳನ್ನು ಬಾಲ್ಕನಿಯಲ್ಲಿ, ಟೆರೇಸ್‌ನಲ್ಲಿ ಅಥವಾ ಕಿಟಕಿ ಗ್ರಿಲ್‌ನಲ್ಲಿ ಇರಿಸಿ. ಸೂರ್ಯನಿಂದ ಬರುವ ಶಾಖವು ನಿಮ್ಮ ವಸ್ತುಗಳ ತೇವಾಂಶವನ್ನು ಆವಿಯಾಗಿಸಿ ಒಣಗಲು ಮತ್ತು ತಾಜಾವಾಗಿ ಇರಿಸಲು ನೆರವಾಗುತ್ತದೆ.

ನೆನಪಿಡಿ, ಮಳೆಗಾದಲ್ಲಿ ಬಿಸಿಲು ಸಿಗದೇ ಇದ್ದರೆ ಆಗಾಗ ಈ ಎಲ್ಲಾ ವಸ್ತುಗಳ ಮೇಲೆ ಬಿಸಿ ಗಾಳಿಯನ್ನು ಹಾಯಿಸಿ ಒಣಗಿರುವಂತೆ ಮಾಡಿ. ಹಿಂದಿನ ದಿನಗಳಲ್ಲಿ ಈ ಕೆಲಸಕ್ಕಾಗಿ ಮನೆಯೊಳಗೆ ಹೊಗೆ ಹಾಕುತ್ತಿದ್ದರು. ಆದರೆ ಹೊಗೆ ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು. ಹಾಗಾಗಿ ಬಿಳಿ ಗಾಳಿಯ ಡ್ರೈಯರ್ ಬಳಕೆ ಉತ್ತಮ. ಇದು ನಿಮ್ಮ ಬಟ್ಟೆಗಳ ಮೇಲೆ ಶಿಲೀಂಧ್ರಗಳ ಬೆಳವಣಿಗೆಯಾಗದಂತೆ ತಡೆಯುತ್ತದೆ.

ಬಟ್ಟೆಗಳನ್ನು ವಿನೆಗರ್ ಬೆರೆತ ನೀರಿನಿಂದ ನೆನೆಸಿ ಹಿಂಡಿ ಒಣಗಿಸಿ

ಬಟ್ಟೆಗಳನ್ನು ವಿನೆಗರ್ ಬೆರೆತ ನೀರಿನಿಂದ ನೆನೆಸಿ ಹಿಂಡಿ ಒಣಗಿಸಿ

ಬಟ್ಟೆಗಳನ್ನು ಒಗೆದ ಬಳಿಕ ಇವನ್ನು ಶಿರ್ಕಾ ಬೆರೆಸಿದ ನೀರಿನಲ್ಲಿ ನೆನೆಸಿ ಹಿಂಡಿ ಒಣಗಿಸಿ. ಮೆಶೀನ್ ಒಗೆತದಲ್ಲಿ ಒಗೆದ ಬಳಿಕ ಕೇವಲ rinse ಎಂದಿರುವನ್ನು ಆಯ್ದುಕೊಂಡು ಒಳಗೆ ಕೊಂಚ ಶಿರ್ಕಾ ಹಾಕಿ ಮತ್ತೊಮ್ಮೆ ಚಲಾಯಿಸಿ. ಅಥವಾ ಸಾಮಾನ್ಯ ಒಗೆತದಲ್ಲಿ fabric softner ದ್ರವದ ಜೊತೆಗೂ ಹಾಕಿ ಒಗೆಯಬಹುದು. ಏಕೆಂದರೆ ಶಿರ್ಕಾ ಅಂಶವಿರುವಲ್ಲಿ ಶಿಲೀಂಧ್ರಗಳು ಬೆಳೆಯಲಾರವು. ಒಂದು ಬಕೆಟ್ ನೀರಿಗೆ ¾ ಕಪ್ ಬಿಳಿ ಶಿರ್ಕಾ ಬೆರೆಸಿದರೆ ಸಾಕು. ಈ ನೀರು ಕೇವಲ ಬಟ್ಟೆಗಳನ್ನು ಶಿಲೀಂದ್ರ ಮೊದಲಾದವುಗಳಿಂದ ಮುಕ್ತವಾಗಿರಿಸುವ ಜೊತೆಗೇ ಇತರ ವಾಸನೆಗಳನ್ನೂ ನಿವಾರಿಸುತ್ತದೆ.

ಚರ್ಮದ ವಸ್ತುಗಳ ಮೇಲಿನಿಂದ ಶಿಲೀಂಧ್ರವನ್ನು ನಿವಾರಿಸಿ

ಚರ್ಮದ ವಸ್ತುಗಳ ಮೇಲಿನಿಂದ ಶಿಲೀಂಧ್ರವನ್ನು ನಿವಾರಿಸಿ

ಮಳೆಗಾಲದ ಕೆಲವೇ ದಿನಗಳಲ್ಲಿ ಚರ್ಮದ ವಸ್ತುಗಳ ಮೇಲೆ ಅತಿ ಶೀಘ್ರವಾಗಿ ಶಿಲೀಂಧ್ರಗಳು ಮೂಡುತ್ತವೆ. ಇದನ್ನು ನಿವಾರಿಸಲು ಒಂದಂಶ ಶಿರ್ಕಾ ಮತ್ತು ಎರಡಂಶ ನೀರು ಬೆರೆತ ದ್ರವದಲ್ಲಿ ಬಟ್ಟೆಯನ್ನು ಅದ್ದಿ ಚರ್ಮದ ವಸ್ತುಗಳನ್ನು ಒಮ್ಮುಖವಾಗಿ ಒರೆಸುತ್ತಾ ಹೋಗಿ. ಹೀಗೆ ಎಲ್ಲಾ ಭಾಗವನ್ನು ಸ್ವಚ್ಛವಾಗಿಸಿದ ಬಳಿಕ ಇವನ್ನು ಚೆನ್ನಾಗಿ ಒಣಗಿಸಿ ಗಾಳಿಯಾಡತಂತಹ ಪ್ಲಾಸ್ಟಿಕ್ ಚೀಲಗಳಲ್ಲಿರಿಸಿ ಮುಚ್ಚಿ ಒಣಸ್ಥಳದಲ್ಲಿ ಸಂಗ್ರಹಿಸಿ.

ಚರ್ಮದ ವಸ್ತುಗಳನ್ನು ಆಗಾಗ ಪಾಲಿಶ್ ಮಾಡುತ್ತಿರಿ

ಚರ್ಮದ ವಸ್ತುಗಳನ್ನು ಆಗಾಗ ಪಾಲಿಶ್ ಮಾಡುತ್ತಿರಿ

ಚರ್ಮದ ಉತ್ಪನ್ನಗಳನ್ನು ಆಗಾಗ ಪಾಲಿಶ್ ಮಾಡುವ ಮೂಲಕ ಇದಕ್ಕೆ ಹೊಳಪು ಬರುವುದು ಮಾತ್ರವಲ್ಲ ತೆಳುವಾದ ಲೇಪನ ತೇವಾಂಶ ಮತ್ತು ಶಿಲೀಂಧ್ರಗಳಿಂದಲೂ ರಕ್ಷಿಸುತ್ತದೆ. ಚರ್ಮದ ಕೈಗವಸು, ಬೆಲ್ಟ್, ಪಾದರಕ್ಷೆ, ಶೂ, ಜಾಕೆಟ್, ಪೀಠೋಪಕರಣಗಳು ಮೊದಲಾದವನ್ನು ಶಿಲೀಂಧ್ರದ ಧಾಳಿಯಿಂದ ರಕ್ಷಿಸಲು ಬಣ್ಣವಿಲ್ಲದ ಚರ್ಮದ ಪಾಲಿಶ್ ನಿಂದ ಆಗಾಗ ಪಾಲಿಶ್ ಮಾಡುತ್ತಿರಬೇಕು. ವಿಶೇಷವಾಗಿ ಮಳೆಗಾಲದಲ್ಲಿ ಹೆಚ್ಚು ಹೆಚ್ಚಾಗಿ ಪಾಲಿಶ್ ಮಾಡುತ್ತಿರಬೇಕು. ಅಲ್ಲದೇ ನಿಮ್ಮ ವಸ್ತುಗಳನ್ನು ಆಗಾಗ ತೆರೆದು ಶಿಲೀಂಧ್ರ ಬಂದಿದೆಯೇ ಎಂದು ಗಮನಿಸುತ್ತಲೂ ಇರಬೇಕು.

ಬಟ್ಟೆಗಳಿಂದ ಶಿಲೀಂಧ್ರದ ಕಲೆ ನಿವಾರಿಸುವುದು ಹೇಗೆ?

ಬಟ್ಟೆಗಳಿಂದ ಶಿಲೀಂಧ್ರದ ಕಲೆ ನಿವಾರಿಸುವುದು ಹೇಗೆ?

ಸಮಪ್ರಮಾಣದಲ್ಲಿ ತಾಜಾ ನಿಂಬೆ ರಸ ಮತ್ತು ಉಪ್ಪನ್ನೆ ಬೆರೆಸಿ ಈ ದ್ರವವನ್ನು ಗೋಚರಿಸುವ ಶಿಲೀಂಧ್ರದ ಕಲೆಗಳ ಮೇಲೆ ನೇರವಾಗಿ ಹಚ್ಚಿ. ಈ ಬಟ್ಟೆಗಳನ್ನು ನೆನೆಸುವ ಮತ್ತು ತೊಳೆಯುವ ಮೊದಲು ಐದು ನಿಮಿಷಗಳ ಕಾಲ ಹಾಗೇ ಬಿಡಿ. ನಿಂಬೆ ಪ್ರಕೃತಿಯಲ್ಲಿ ಆಮ್ಲೀಯವಾಗಿದೆ ಮತ್ತು ಬಟ್ಟೆಯ ಬಣ್ಣದ ಮೇಲೂ ಪ್ರಭಾವ ಬೀರಬಹುದು ಆದ್ದರಿಂದ, ಐದು ನಿಮಿಷಗಳಿಗಿಂತ ಹೆಚ್ಚು ಕಾಲ ಅದನ್ನು ಇರಿಸಬೇಡಿ.

English summary

How To Avoid Mildew in Clothes

Here we are discussing about How To Avoid Mildew On Clothes. How do you prevent fungus, mildew and mold from ruining clothes and leather goods? Take a look at top solutions for mildew, fungus and mold. Read more.
X
Desktop Bottom Promotion