For Quick Alerts
ALLOW NOTIFICATIONS  
For Daily Alerts

ಗೋಡೆಯ ಮೇಲಿನ ಬಣ್ಣಗಳಿಗೂ ಮನಸ್ಸಿಗೂ ಇದೆಂಥಾ ಸಂಬಂಧ?

|

ಈಗಿನ ಕಾಲದಲ್ಲಿ ಶ್ರೀಮಂತರಿಂದ ಮಧ್ಯಮವರ್ಗದ ಜನರವರೆಗೆ ಪ್ರತಿಯೊಬ್ಬರು ತಮ್ಮ ಮನೆಯ ಸೌಂದರ್ಯ ಇನ್ನೊಬ್ಬರ ಕಣ್ಣು ಕುಕ್ಕುವಂತೆ ಇರಬೇಕೆಂದು ಬಯಸುತ್ತಾರೆ. ಇದಕ್ಕಾಗಿ ತಮಗೆ ಇಷ್ಟವಾದ ಆಯ್ಕೆಗಳನ್ನು ಕೆಲವರು ತಾವೇ ಮಾಡಿಕೊಂಡರೆ ಇನ್ನು ಕೆಲವರು ಒಳಾಂಗಣ ವಿನ್ಯಾಸಗಾರರ ಸಲಹೆ ಪಡೆಯಲು ಮುಂದಾಗುತ್ತಾರೆ.

How Your Wall Colour Affects Your Mood? | Boldsky Kannada
Colour Psychology

ಒಳಾಂಗಣ ವಿನ್ಯಾಸಗಾರರು ಸೂಚಿಸುವ ಒಂದೊಂದು ವಿನ್ಯಾಸ ಶೈಲಿಗಳು ಎಂತಹವರನ್ನೂ ನಿಶ್ಶಬ್ದವಾಗಿಸಿಬಿಡುತ್ತವೆ. ಅವರ ಯೋಚನಾ ಶಕ್ತಿ, ತೋರಿಸಿದ ಯಾವುದೇ ಜಾಗದಲ್ಲಿ ಅವರ ಗ್ರಹಿಕೆಯ ಶಕ್ತಿ ನಿಜಕ್ಕೂ ಅದ್ಭುತ ಮತ್ತು ಅವಿಸ್ಮರಣೀಯ.

ಆದರೂ ಸಹ ವಿನ್ಯಾಸಗಾರರು ಮನೆಯನ್ನು ನೋಡಿ ಕೇವಲ ಸಲಹೆಗಳನ್ನು ಕೊಟ್ಟು ಆಯ್ಕೆಯನ್ನು ಮನೆಯ ಮಾಲೀಕರಿಗೆ ಬಿಡುತ್ತಾರೆ. ಹಾಗೆ ನೋಡಿದರೆ ಕೆಲವೊಂದು ಸಂದರ್ಭಗಳಲ್ಲಿ ಆಯ್ಕೆಯನ್ನು ವಿನ್ಯಾಸಗಾರರೇ ತೆಗೆದುಕೊಂಡರೆ ಒಳ್ಳೆಯದು.

ಏಕೆಂದರೆ ಇಂತಹ ಹಲವಾರು ಮನೆಗಳ ವಿನ್ಯಾಸ ಸಿದ್ದಪಡಿಸಿ ಭೇಷ್ ಎನಿಸಿಕೊಂಡ ಪ್ರತಿಭೆ ಅನುಭವ ಎರಡೂ ಅವರಿಗಿರುತ್ತದೆ.

ವಾಸ್ತುಗಳ ಅನುಗುಣವಾಗಿ ಮನೆಯ ಮಂದಿ ಬಣ್ಣಗಳನ್ನು ಆಯ್ಕೆ ಮಾಡುವುದು ಒಂದು ಕಡೆ. ವಿನ್ಯಾಸಗಾರರ ಆಯ್ಕೆ ಒಂದು ಕಡೆ. ವಿನ್ಯಾಸಗಾರರ ಪ್ರಕಾರ ಮನೆಯ ಮೂಲೆ ಮೂಲೆಗಳಲ್ಲಿ ಬಳಸಿದ ಒಂದೊಂದು ಬಣ್ಣವೂ ಮನೆಯ ಸದಸ್ಯರ ಮನಸ್ಸಿನ ಮೇಲೆ ಪ್ರಭಾವ ಬೀರುವಂತಹ ಶಕ್ತಿ ಪಡೆದಿರುತ್ತವೆ.

ಮನಸ್ಸಿಗೂ ಬಣ್ಣಕ್ಕೂ ಏನು ಸಂಬಂಧ ಎಂಬುದನ್ನು ಬಣ್ಣ ಮನೋವಿಜ್ಞಾನ ತಜ್ಞರು ಬಹಳ ಚೆನ್ನಾಗಿ ವಿವರಿಸುತ್ತಾರೆ.

ಬಣ್ಣ ಮನೋವಿಜ್ಞಾನ ಎಂದರೇನು?

ಬಣ್ಣ ಮನೋವಿಜ್ಞಾನ ಎಂದರೇನು?

ಇದನ್ನು ಅರ್ಥ ಮಾಡಿಕೊಳ್ಳಲು ಕೆಲವೊಂದು ಉದಾಹರಣೆಗಳನ್ನು ಸೂಚಿಸಲೇಬೇಕು. ನಾವು ಯಾವಾಗಲಾದರೂ, ಇಡೀ ಗೋಡೆಯ ತುಂಬಾ ಅಥವಾ ಎಲ್ಲಿಯಾದರೂ ಕೆಂಪು ಬಣ್ಣ ನೋಡಿದ ತಕ್ಷಣ ನಮ್ಮಲ್ಲಿ ಉತ್ಸಾಹ ಮತ್ತು ತೀವ್ರತರದ ಭಾವನೆಗಳು ವ್ಯಕ್ತವಾಗಲು ಪ್ರಾರಂಭವಾಗುತ್ತವೆ. ಅದೇ ಹಚ್ಚ ಹಸಿರು ಬಣ್ಣ ನೋಡಿದಾಗ ನಮ್ಮ ಮನಸ್ಸಿಗೆ ಏನೋ ಒಂದು ಬಗೆಯ ಶಾಂತಿ ಮತ್ತು ಪುನಶ್ಚೇತನ ದೊರೆತಂತಹ ಅನುಭವ ಉಂಟಾಗುತ್ತದೆ.

ಇನ್ನು ಕಿತ್ತಳೆ ಬಣ್ಣ ನೋಡಿದಾಗ ಸಾಧಾರಣವಾಗಿ ನಾವು ಮಕ್ಕಳಲ್ಲಿ ಮಕ್ಕಳಾಗಿ ವರ್ತಿಸುವ ರೀತಿ ಉತ್ತೇಜಿತ ಮನಸ್ಥಿತಿಯ ಉತ್ಸಾಹ ತುಂಬಿ ತುಳುಕಾಡುತ್ತದೆ. ಇದಕ್ಕೆ ಏನು ಕಾರಣವಿರಬಹುದು ಎಂದು ಹಲವಾರು ಬಾರಿ ನಾವು ಯೋಚಿಸಲು ಮುಂದಾಗುತ್ತೇವೆ.

ಇದಕ್ಕೆ ಬಣ್ಣ ಮನೋವಿಜ್ಞಾನ ತಜ್ಞರು ಹೇಳುವ ಪ್ರಕಾರ ಮನುಷ್ಯನ ಭಾವನೆಗಳನ್ನು ವ್ಯಕ್ತ ಪಡಿಸುವ ಶಕ್ತಿ ಬಣ್ಣಗಳಿಗೆ ಇದೆ ಎಂದು ಹೇಳುತ್ತಾರೆ ಮತ್ತು ಮನುಷ್ಯನ ಈ ಬಗೆಯ ಎಲ್ಲಾ ಭಾವನೆಗಳಿಗೆ ಬಣ್ಣಗಳೇ ಕಾರಣ ಎಂದು ಹೇಳುತ್ತಾರೆ. ಮನೆಗಳಲ್ಲಿ ಮನೆಯ ಯಜಮಾನ ತನಗಿಷ್ಟವಾಗುವ ಮತ್ತು ತನ್ನ ಮನೆ ಚಂದ ಕಾಣುವ ಬಣ್ಣಗಳನ್ನು ತುಂಬಿಸಲು ಮುಂದಾಗುತ್ತಾನೆ.

ಅಂದರೆ ನಾವು ಗಮನಿಸಿರುವ ಹಾಗೆ ಶ್ರೀಮಂತರ ಮನೆಗಳಲ್ಲಿ ಬಹಳಷ್ಟು ರಾಜ ವೈಭೋಗದ ಜೀವನ ನಡೆಸುವವರು ತಮ್ಮ ಮನೆಯ ಅಂದಕ್ಕೆ ಹೆಚ್ಚಾಗಿ ಆಯ್ಕೆ ಮಾಡುವುದು ಬಿಳಿ ಮತ್ತು ಬೂದು ಬಣ್ಣದ ಮಿಶ್ರಣವನ್ನು. ಮಾಧ್ಯಮ ವರ್ಗದ ಜನರು ಇನ್ನೊಂದು ಬಣ್ಣಗಳ ಸಂಯೋಜನೆಯನ್ನು ಆಯ್ಕೆ ಮಾಡುತ್ತಾರೆ.

ಮನಸ್ಸಿಗೂ ಬಣ್ಣಗಳಿಗೂ ಇರುವ ಸಂಬಂಧ

ಮನಸ್ಸಿಗೂ ಬಣ್ಣಗಳಿಗೂ ಇರುವ ಸಂಬಂಧ

ಮನುಷ್ಯನ ಮನಸ್ಸು ಅಷ್ಟು ಸುಲಭದ್ದಲ್ಲ. ಹೆಚ್ಚು ಸಂಕೀರ್ಣತೆಯನ್ನು ಹೊಂದಿದ ಭಾವನೆಗಳ ಗೂಡು ಎಂದರೆ ತಪ್ಪಿಲ್ಲ. ಒಬ್ಬ ಮನುಷ್ಯ ತಾನೇ ಇರುವ ಸ್ಥಳವನ್ನು ಮತ್ತು ತನ್ನ ಸುತ್ತಮುತ್ತಲಿನ ವಾತಾವರಣವನ್ನು ಹೇಗೆ ಗ್ರಹಿಸುತ್ತಾನೆ ಎಂದು ಯಾರಿಗೂ ಅಷ್ಟು ಸುಲಭವಾಗಿ ಹೇಳಲು ಬರುವುದಿಲ್ಲ.

ಅಷ್ಟೇ ಏಕೆ ಆತನಿಗೂ ಕೂಡ ಅದು ಕಷ್ಟ ಸಾಧ್ಯ. ಏಕೆಂದರೆ ಒಂದು ವಿಚಾರದ ಮೇಲೆ ಆತ ಒಂದು ಕ್ಷಣ ಅಂದುಕೊಂಡ ಭಾವನೆ ಮತ್ತೊಂದು ಕ್ಷಣಕ್ಕೆ ಬದಲಾಗಿರುತ್ತದೆ. ಇದು ಬಣ್ಣಗಳ ವಿಷಯದಲ್ಲೂ ನಡೆಯುತ್ತದೆ. ಕೆಲವೊಂದು ಬಣ್ಣಗಳನ್ನು ಮನುಷ್ಯ ನೋಡಿದಾಗ ಅವನ ಭಾವನೆಗಳು ಅದಕ್ಕೆ ತಕ್ಕಂತೆ ಗಮನಾರ್ಹವಾಗಿ ಬದಲಾಗುತ್ತಿರುತ್ತವೆ.

ಇದು ಕೇವಲ ಇಂದು, ನೆನ್ನೆಯ ವಿಷಯವಂತೂ ಅಲ್ಲ. ಮನುಷ್ಯ ಮಂಗನಿಂದ ಮಾನವನಾಗಿ ಬದಲಾದ ಕ್ಷಣದಿಂದ ಇದು ನಡೆಯುತ್ತಲೇ ಬಂದಿದೆ. ಮನೋವಿಜ್ಞಾನ ಇದನ್ನು ಕೆದಕುತ್ತಾ ಹೋದರೆ ಸಾವಿರಾರು ವರ್ಷಗಳ ಇತಿಹಾಸ ಇದ್ದಂತೆ ಕಂಡು ಬರುತ್ತದೆ. ಏಕೆಂದರೆ ಹರಪ್ಪ ಮೊಹೆಂಜದಾರೋ ಕಾಲದಿಂದಲೂ ಇದಕ್ಕೆ ಪುಷ್ಟಿ ಕೊಡುವ ಅಂತಹ ಅನೇಕ ಉದಾಹರಣೆಗಳು ಹಿಂದಿನ ಚರಿತ್ರೆಯಲ್ಲಿ ಬಹಳಷ್ಟು ಸಿಕ್ಕಿವೆ.

ತಜ್ಞರು ಬಣ್ಣಗಳಿಗೆ ವಿಶೇಷ ಗಮನಕೊಡಲು ಕಾರಣವೇನು?

ತಜ್ಞರು ಬಣ್ಣಗಳಿಗೆ ವಿಶೇಷ ಗಮನಕೊಡಲು ಕಾರಣವೇನು?

ಇಲ್ಲಿ ತಜ್ಞರು ಎಂದರೆ ಮನೆಯ ಒಳಾಂಗಣ ವಿನ್ಯಾಸಕಾರರು ಅಂದರೆ ಇಂಟೀರಿಯರ್ ಡಿಸೈನರ್ಸ್. ಸಾಮಾನ್ಯವಾಗಿ ಮನೆಯ ಯಜಮಾನ ತನ್ನ ಮನೆಯ ಸಂಪೂರ್ಣ ಪೈಂಟಿಂಗ್ ಮತ್ತು ಡಿಸೈನಿಂಗ್ ಜವಾಬ್ದಾರಿಗಳನ್ನು ಇವರುಗಳಿಗೆ ನೀಡಿದಾಗ, ಇವರು ಹಲವಾರು ಆಯಾಮಗಳನ್ನು ಗಮನದಲ್ಲಿಟ್ಟುಕೊಂಡು ಮನೆಯ ಪ್ರತಿ ಕೋಣೆಯಲ್ಲೂ ಎಷ್ಟೆಷ್ಟು ಜಾಗ ಲಭ್ಯವಿದೆ ಎನ್ನುವ ಆಧಾರದ ಮೇಲೆ ತಮ್ಮದೇ ಆದ ರೀತಿಯಲ್ಲಿ ಮನೆಯ ಮಾಲೀಕರಿಗೆ ವಿನ್ಯಾಸದ ಬಗ್ಗೆ ಸಲಹೆ ಕೊಡುತ್ತಾರೆ.

ಒಬ್ಬ ಮನೆಯ ಮಾಲೀಕನಿಗೆ ತನ್ನ ಮನೆ ಸಂಪೂರ್ಣವಾಗಿ ನಿರ್ಮಾಣವಾದ ಮೇಲೆ ನೋಡಲು ಇದೇ ರೀತಿ ಕಾಣಬೇಕೆಂಬ ಕನಸಿರುತ್ತದೆ. ಅವನ ಸ್ವಂತ ಆಯ್ಕೆಗಳಿಗೆ ಯಾವುದೇ ಧಕ್ಕೆ ಬರದಂತೆ ಒಳಾಂಗಣ ವಿನ್ಯಾಸಕಾರರು ತಮ್ಮ ರೂಪುರೇಷೆಗಳನ್ನು ಸಿದ್ದಪಡಿಸಿ ಆಯ್ಕೆಯನ್ನು ಮನೆಯ ಮಾಲೀಕರಿಗೆ ಬಿಟ್ಟಿರುತ್ತಾರೆ.

ಮನೆ ಇರುವ ಜಾಗದಲ್ಲಿ ಅದರ ಸುತ್ತಮುತ್ತಲಿನ ವಾತಾವರಣವನ್ನು ಗಮನಿಸಿ ವಿನ್ಯಾಸಗಾರರು ಕೊಡುವ ಸಲಹೆಗಳನ್ನು ಮನೆಯ ಮಾಲೀಕ ನನ್ನ ಮನಸ್ಸಿನಲ್ಲಿ ತನ್ನ ಮನೆಯ ವಿನ್ಯಾಸ ಈ ರೀತಿ ಮೂಡಿಬಂದರೆ ಹೇಗಿರುತ್ತದೆ ಎಂದು ಕಲ್ಪಿಸಿಕೊಂಡು ಅದರಂತೆ ಒಪ್ಪಿಕೊಳ್ಳುತ್ತಾರೆ.

ಆದರೆ ಕೆಲವೊಂದು ಬಾರಿ ತಮಗೆ ಇಷ್ಟವಿಲ್ಲದಿದ್ದರೂ ಮನೆಯ ಕೆಲವೊಂದು ಭಾಗಗಳಿಗೆ ಕೆಲವೊಂದು ನಿರ್ದಿಷ್ಟ ಬಣ್ಣಗಳು ಸೂಕ್ತವಾಗಿ ಕಾಣುತ್ತವೆ. ಮೊದಲು ಭಾರವಾದ ಮನಸ್ಸಿನಿಂದ ಒಪ್ಪಿಕೊಂಡು ನಂತರ ಸಂತೋಷ ಪಡಬೇಕಾದ ಸಂದರ್ಭ ಎದುರಾಗುತ್ತದೆ.

ಬಣ್ಣಗಳಿಗೂ ಜಾಗಗಳಿಗೂ ಯಾವ ಬಗೆಯ ಸಂಬಂಧ?

ಬಣ್ಣಗಳಿಗೂ ಜಾಗಗಳಿಗೂ ಯಾವ ಬಗೆಯ ಸಂಬಂಧ?

ಬಣ್ಣಗಳು ಜಾಗಗಳನ್ನು ನಿರ್ವಹಣೆ ಮಾಡುತ್ತವೆ ಎಂಬ ಮಾತಿದೆ. ಬಣ್ಣಗಳ ಶಕ್ತಿ ಅಂತಹದ್ದು. ಮನೆಯ ಯಾವುದೇ ಒಂದು ಭಾಗದ ನೋಟವನ್ನು ಮೊದಲಿಗಿಂತ ಚೆನ್ನಾಗಿ ಕಾಣುವಂತೆ ಬದಲಾಯಿಸುವ ತಂತ್ರಗಾರಿಕೆ ಬಣ್ಣಗಳಲ್ಲಿ ಅಡಗಿದೆ.

ಮನೆಯ ಮಾಲೀಕರ ಸಹಿತ ಮನೆಯಲ್ಲಿ ವಾಸ ಮಾಡುವ ಪ್ರತಿಯೊಬ್ಬ ಸದಸ್ಯರ ಮನಸ್ಸಿನ ಭಾವನೆಗಳನ್ನು ತಮ್ಮತ್ತ ಸೆಳೆಯುವ ಮತ್ತು ತಮ್ಮದೇ ಆದ ರೀತಿಯಲ್ಲಿ ವ್ಯಕ್ತಪಡಿಸುವಂತೆ ಮಾಡುವ ಜಾಣ್ಮೆ ಮನೆಯ ವಿನ್ಯಾಸಕ್ಕೆ ಬಳಸಿದ ಬಣ್ಣಗಳಲ್ಲಿ ಇರುತ್ತದೆ. ಇದಕ್ಕೆ ಒಂದು ಒಳ್ಳೆಯ ಉದಾಹರಣೆಯೆಂದರೆ ನಾವು ಯಾವಾಗಲಾದರೂ ಕಾಫಿ ಡೇ ಅಥವಾ ಅದೇ ರೀತಿಯ ಇನ್ನಾವುದಾದರೂ ಸ್ಥಳಗಳಿಗೆ ಹೋದಾಗ ನಮ್ಮ ಮನಸ್ಸು ಬಹಳಷ್ಟು ಶಕ್ತಿಯುತವಾಗಿ ಮತ್ತು ಬುದ್ಧಿವಂತಿಕೆಯಿಂದ ಕೆಲಸ ಮಾಡಲು ಪ್ರಾರಂಭಿಸುತ್ತದೆ.

ನಾವು ಕೇವಲ ಕಾಫಿ ಕುಡಿಯುವುದರಿಂದ ನಮ್ಮ ಮನಸ್ಸಿನ ಮೇಲೆ ಈ ರೀತಿ ಪ್ರಭಾವ ಬೀರಿರಬಹುದು ಎಂದು ಅಂದುಕೊಳ್ಳುತ್ತೇವೆ. ಆದರೆ ನಿಜ ಸಂಗತಿ ಅಲ್ಲಿನ ಬಿಳಿ ಮತ್ತು ಕಂದು ಅಥವಾ ಬಿಳಿ ಮತ್ತು ಬೂದು ಬಣ್ಣದ ಮಿಶ್ರಣದಿಂದ ನಮ್ಮ ಮನಸ್ಸಿನ ಭಾವನೆ ನಮ್ಮ ಊಹೆಗೂ ಮೀರಿ ಬದಲಾಗಿರುತ್ತದೆ.

ಈಗಿನ ವಿನ್ಯಾಸಗಾರರು ಹೇಳುವ ಪ್ರಕಾರ ನಗರ ಪ್ರದೇಶಗಳಲ್ಲಿ ಕಟ್ಟಿರುವ ಮನೆಗಳು ಸಾಮಾನ್ಯವಾಗಿ ರಿಯಲ್ ಎಸ್ಟೇಟ್ ಮಿತಿಗಳಿಗೆ ಹೊಂದಿಕೊಂಡಿರುತ್ತವೆ. ಕೆಲವು ಮನೆಗಳು ಚಿಕ್ಕವಾಗಿದ್ದರೆ ಇನ್ನು ಕೆಲವು ದೊಡ್ಡ ಮನೆಗಳು ಎನಿಸಿಕೊಳ್ಳುತ್ತವೆ.

ಮನೆಗಳ ಗಾತ್ರಕ್ಕೆ ಮತ್ತು ಮನೆಯೊಳಗಿನ ಕೊಠಡಿಗಳ ಜಾಗಗಳನ್ನು ನೋಡಿಕೊಂಡು ಅದಕ್ಕೆ ತಕ್ಕನಾದ ಬಣ್ಣಗಳ ಆಯ್ಕೆ ಜೊತೆಗೆ ವಿನ್ಯಾಸದ ಆಯ್ಕೆ ಮಾಡಬೇಕಾಗುತ್ತದೆ. ಶ್ರೀಮಂತರ ಆಯ್ಕೆ ಒಂದು ತರವಾದರೆ ಮಧ್ಯಮ ವರ್ಗದ ಜನರ ಮನೆಯ ಆಯ್ಕೆ ಮತ್ತು ವಿನ್ಯಾಸದ ಆಯ್ಕೆ ಬೇರೆ ರೀತಿಯೇ ಇರುತ್ತದೆ. ಮನೆಯ ಮಾಲೀಕರ ಆಯ್ಕೆಗಳಿಗೆ ತಕ್ಕಂತೆ ವಿನ್ಯಾಸಗಾರರು ಶುಲ್ಕ ವಿಧಿಸುತ್ತಾರೆ.

ಯಾವ ಬಣ್ಣಗಳು ಯಾವ ಭಾವನೆಗಳನ್ನು ಪ್ರತಿನಿಧಿಸುತ್ತವೆ?

ಯಾವ ಬಣ್ಣಗಳು ಯಾವ ಭಾವನೆಗಳನ್ನು ಪ್ರತಿನಿಧಿಸುತ್ತವೆ?

ಬಣ್ಣಗಳು ಸಾಮಾನ್ಯವಾಗಿ ಎರಡು ಬಗೆಗಳಲ್ಲಿ ವಿಂಗಡಿಸಲ್ಪಡುತ್ತವೆ. ಇವುಗಳು ಮನುಷ್ಯರ ಮಾನಸಿಕ ಭಾವನೆಗಳ ಮೇಲೆ ಅವುಗಳ ಗುಣಗಳಿಗೆ ತಕ್ಕಂತೆ ಪ್ರಭಾವ ಬೀರುತ್ತವೆ. ಅವುಗಳೆಂದರೆ,

1. ತಂಪಾದ ಅಥವಾ ಶಾಂತ ಸ್ವಭಾವದ ಬಣ್ಣಗಳು.

2. ಬಿಸಿಯಾದ ಅಥವಾ ಉತ್ತೇಜಿತ ಬಣ್ಣಗಳು.

ಎಲ್ಲಾ ಬಣ್ಣಗಳು ಬೇರೆ ಬೇರೆ ಮನುಷ್ಯರಿಗೆ ತಕ್ಕಂತೆ ತಮ್ಮದೇ ಆದ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಹೊಂದಿವೆ. ಉದಾಹರಣೆಗೆ, ಕೆಂಪು ಬಣ್ಣ ಕೆಲವು ಜನರಲ್ಲಿ ರಕ್ತದ ಒತ್ತಡವನ್ನು ಹೆಚ್ಚು ಮಾಡಿದರೆ ಇನ್ನೂ ಕೆಲವರಲ್ಲಿ ಶಕ್ತಿ ಮತ್ತು ಚೈತನ್ಯದ ಜೊತೆಗೆ ಮನಸ್ಸಿನ ಸಂತೋಷವನ್ನು ದುಪ್ಪಟ್ಟು ಮಾಡುತ್ತದೆ. ಒಟ್ಟಾರೆಯಾಗಿ, ಕೆಂಪು ಬಣ್ಣವನ್ನು ಉತ್ತೇಜಿತ ಬಣ್ಣವೆಂದು ಕರೆಯಲಾಗುತ್ತದೆ.

ಮನೆಯ ಒಳಾಂಗಣ ವಿನ್ಯಾಸದಲ್ಲಿ ಕೆಂಪು ಬಣ್ಣವನ್ನು ಸಮತೋಲನವಾಗಿ ಬಳಸಿದರೆ, ಮನೆಯ ಸದಸ್ಯರ ಭಾವನೆಗಳು ಪ್ರಬಲವಾಗಿ, ಉತ್ತೇಜಕ ಮನಸ್ಥಿತಿಯನ್ನು ಹೊಂದಿರುತ್ತವೆ. ಇದು ಮನುಷ್ಯನ ಮನಸ್ಸಿನ ಮೇಲೆ ಯಾವುದೇ ಶಾಂತ ರೀತಿಯ ಸ್ವಭಾವ ಉಂಟು ಮಾಡುವುದಿಲ್ಲ.

ಇನ್ನು ಕಪ್ಪು ಬಣ್ಣದ ವಿಚಾರವಾಗಿ ಹೇಳುವುದಾದರೆ, ಕಪ್ಪು ಬಣ್ಣವನ್ನು ದಿಟ್ಟ ಸ್ವಭಾವಕ್ಕೆ ಹೆಸರಾದ ಬಣ್ಣವೆಂದು ಪರಿಗಣಿಸಲಾಗಿದೆ. ಕೆಲವು ಶ್ರೀಮಂತ ಮನೆತನದವರು ತಮ್ಮ ಮನೆಯ ವಿನ್ಯಾಸದಲ್ಲಿ ಒಳ್ಳೆಯ ನೋಟ ಕಾಣಸಿಗಲೆಂದು ಕಪ್ಪು ಬಣ್ಣವನ್ನು ಅಲ್ಲಲ್ಲಿ ಬಳಸಿರುತ್ತಾರೆ. ಇದು ಪ್ರತಿಷ್ಠೆಯ ಪ್ರತೀಕ ಒಂದು ಕಡೆಯಾದರೆ ಮನೆಯ ಸದಸ್ಯರ ಭಾವನೆಗಳಲ್ಲಿ ನಾಯಕತ್ವದ ಗುಣವನ್ನು ಕಾಪಾಡುವ ವಿಚಾರ ಇನ್ನೊಂದು ಕಡೆ ಆಗಿರುತ್ತದೆ.

ಒಳಾಂಗಣ ವಿನ್ಯಾಸಕಾರರು ನಮ್ಮ ಭಾರತ ದೇಶಕ್ಕೆ ಮತ್ತು ಇಲ್ಲಿನ ಜನರಿಗೆ ಸೂಕ್ತವಾದ ಕೆಲವು ಬಣ್ಣಗಳನ್ನು ತುಂಬಾ ಆಲೋಚನೆ ಮಾಡಿ ಆಯ್ಕೆ ಮಾಡಿದ್ದಾರೆ. ಇದಕ್ಕೆ ಕಾರಣ ನಮ್ಮ ಭಾರತದ ಇಡೀ ವರ್ಷದ ವಾತಾವರಣವನ್ನು ನಾವು ನೋಡುವುದಾದರೆ, ವರ್ಷದಲ್ಲಿ ಸುಮಾರು ಒಂಬತ್ತು ತಿಂಗಳು ಕೇವಲ ಬಿಸಿಯ ತಾಪಮಾನವನ್ನು ಒಟ್ಟಾರೆಯಾಗಿ ಭಾರತದ ಜನತೆ ಕಾಣುತ್ತಾರೆ. ಹಾಗಾಗಿ,

ಭಾರತೀಯ ಮನೆಗಳಿಗೆ ಸೂಕ್ತವಾದ ಬಣ್ಣಗಳು ಎಂದರೆ ಬಿಳಿ ಬಣ್ಣ, ಬೂದು ಬಣ್ಣ ಮತ್ತು ಅಲ್ಲಲ್ಲಿ ನೀಲಿ ಮತ್ತು ಗುಲಾಬಿ ಬಣ್ಣದ ಶೇಡ್ ಗಳು ನೋಡಲು ಚಂದ ಕಾಣಿಸುತ್ತವೆ ಜೊತೆಗೆ ಮನೆಯಲ್ಲಿ ತಂಪಾದ ವಾತಾವರಣವನ್ನು ನಿರ್ಮಾಣ ಮಾಡಿ ಮನೆಯ ಸದಸ್ಯರ ಮನಸ್ಸಿನಲ್ಲಿ ಶಾಂತ ಸ್ವಭಾವವನ್ನು ಹೆಚ್ಚಾಗುವಂತೆ ಮಾಡುತ್ತವೆ. ಈಗಿನ ನಗರ ಪ್ರದೇಶಗಳ ನಾಗರಿಕ ವಾಸ ಸ್ಥಳಗಳಲ್ಲಿ ಇದು ಅನಿವಾರ್ಯ ಎಂಬುದು ಅವರ ವಾದ.

ಕೆಂಪು ಮತ್ತು ಕಿತ್ತಳೆ

ಕೆಂಪು ಮತ್ತು ಕಿತ್ತಳೆ

  • ಕೆಂಪು ಮತ್ತು ಕಿತ್ತಳೆ ಬಣ್ಣಗಳು ಸದಾ ಶಕ್ತಿ, ಸಹ, ಪ್ರೀತಿ, ಮಮತೆ ಮತ್ತು ಚಟುವಟಿಕೆಯ ಭಾವನೆಗಳನ್ನು ಬಿತ್ತುವುದರಿಂದ ಇವುಗಳನ್ನು ಸಾಧಾರಣವಾಗಿ ಪಾರ್ಟಿ ಮಾಡುವ ಸ್ಥಳಗಳು, ಶುಭ ಕಾರ್ಯಕ್ರಮಗಳನ್ನು ಆಯೋಜಿಸುವ ಸ್ಥಳಗಳು ಮತ್ತು ಹೋಂ ಥಿಯೇಟರ್ ಇಟ್ಟಂತಹ ಸ್ಥಳಗಳಲ್ಲಿ ಬಳಸಬಹುದು.
  • ಗುಲಾಬಿ ಮತ್ತು ನೀಲಿ

    ಗುಲಾಬಿ ಮತ್ತು ನೀಲಿ

    • ಗುಲಾಬಿ ಮತ್ತು ನೀಲಿ ಬಣ್ಣದ ಶೇಡ್ ಗಳು ಹೆಚ್ಚಾಗಿ ಪುಟ್ಟ ಮಕ್ಕಳ ಕೋಣೆಗಳಲ್ಲಿ ಬಳಸಲು ಯೋಗ್ಯವಾಗಿರುತ್ತವೆ. ಜೊತೆಗೆ ಸಂಗಾತಿಗಳು ಮಲಗುವ ಕೋಣೆಗಳಲ್ಲಿ ಬಳಸಬಹುದು. ಏಕೆಂದರೆ ನೀಲಿ ಮತ್ತು ಗುಲಾಬಿ ಬಣ್ಣಗಳು ಹೆಚ್ಚಾಗಿ ಪ್ರೀತಿ, ಪ್ರಣಯ, ತಮಾಷೆ ಮತ್ತು ಆರಾಮವಾಗಿ ಇರುವ ವಾತಾವರಣವನ್ನು ಪ್ರತಿನಿಧಿಸುತ್ತವೆ.
    • ಕಪ್ಪು ಮತ್ತು ಕಂದು

      ಕಪ್ಪು ಮತ್ತು ಕಂದು

      • ಮನೆಯ ಪೀಠೋಪಕರಣಗಳಿಗೆ ಮತ್ತು ಪ್ರತಿನಿತ್ಯ ಉಪಯೋಗಿಸುವ ಹಲವಾರು ವಸ್ತುಗಳಿಗೆ ಕಪ್ಪು ಮತ್ತು ಹೆಚ್ಚಿನ ಕಂದು ಬಣ್ಣಗಳ ಉಪಯೋಗ ಒಳ್ಳೆಯದು. ಏಕೆಂದರೆ ಇವು ಶಕ್ತಿ ಮತ್ತು ಅತ್ಯಾಧುನಿಕತೆಯ ಪ್ರತೀಕವಾಗಿರುತ್ತವೆ.
English summary

How Colour Psychology Affects Your Mood

Here we are discussing about How Colour Psychology Affects Your Mood.We spoke to a few experts and they gave us insights on how colours deeply affect our emotions and state of mind and they have different colour plans for different kinds of spaces. Read more.
X
Desktop Bottom Promotion