For Quick Alerts
ALLOW NOTIFICATIONS  
For Daily Alerts

ವಾಸ್ತುಶಾಸ್ತ್ರದ ಪ್ರಕಾರ ಮನೆಯ ಅಗ್ನೇಯ ದಿಕ್ಕು ಅಶುಭವಂತೆ! ಯಾಕೆ ಗೊತ್ತೇ?

|

ವಾಸ್ತುಶಾಸ್ತ್ರದ ಪ್ರಕಾರ ಮನೆಯ ಪ್ರತಿಯೊಂದು ಮೂಲೆ ಹಾಗೂ ದಿಕ್ಕುಗಳಿಗೆ ತನ್ನದೇ ಆಗಿರುವಂತಹ ಮಹತ್ವವಿದೆ. ಇದೇ ಕಾರಣಕ್ಕಾಗಿ ಒಂದೊಂದು ದಿಕ್ಕುಗಳನ್ನು ಕೂಡ ವಾಸ್ತುಶಾಸ್ತ್ರದಲ್ಲಿ ಅದರ ಕೆಟ್ಟದು ಹಾಗೂ ಒಳ್ಳೆಯದಕ್ಕೆ ಅನುಗುಣವಾಗಿ ವಿಂಗಡಣೆ ಮಾಡಲಾಗಿದೆ. ವಾಸ್ತು ಪ್ರಕಾರ ಕೆಲವು ದಿಕ್ಕುಗಳು ಮನೆಗೆ ಒಳ್ಳೆಯದನ್ನು ಉಂಟು ಮಾಡಬಹುದು. ಇನ್ನು ಕೆಲವು ನಕಾರಾತ್ಮಕ ಶಕ್ತಿ ತರಬಹುದು. ಇದರಿಂದ ಮನೆಯಲ್ಲಿ ಯಾವಾಗಲೂ ಒತ್ತಡ, ಆತಂಕ, ದುಃಖ, ಕಲಹ ಇರಬಹುದು. ಅದರಲ್ಲೂ ಮನೆಯಲ್ಲಿನ ಅಗ್ನೇಯ ದಿಕ್ಕನ್ನು ಮಥಿಸಿದ್ದು ಎಂದು ಹೇಳಲಾಗುತ್ತದೆ. ಈ ದಿಕ್ಕು, ಅಸೂಯೆ, ದ್ವೇಷ ಮತ್ತು ಇತರ ಕೆಲವೊಂದು ಕೆಟ್ಟ ಗುಣಗಳನ್ನು ವ್ಯಕ್ತಿಯಲ್ಲಿ ತರುವುದು ಎಂದು ವಾಸ್ತು ಶಾಸ್ತ್ರವು ಹೇಳುತ್ತದೆ.

ಈ ದಿಕ್ಕಿನಿಂದಾಗಿ ಆತಂಕ ಮತ್ತು ಒತ್ತಡವು ವ್ಯಕ್ತಿಯಲ್ಲಿ ಬರುವುದು. ಇದರಿಂದಾಗಿ ನಿರ್ಧಾರ ತೆಗೆದುಕೊಳ್ಳದೆ ಆಗದೇ ಇರುವುದು ಮತ್ತು ಆತ್ಮವಿಶ್ವಾಸದ ಕೊರತೆ ಕಾಣಿಸುವುದು. ಈ ದಿಕ್ಕನ್ನು ಅಗ್ನಿಯ ನಿರ್ದೇಶನ ಅಥವಾ ಅಗ್ನಿಯ ದಿಕ್ಕು ಎಂದು ಕರೆಯಲಾಗುವುದು. ಈ ದಿಕ್ಕಿನ ಬಗ್ಗೆ ವಾಸ್ತಶಾಸ್ತ್ರದಲ್ಲಿ ಹಲವಾರು ನಿಯಮಗಳು ಇವೆ. ಇದನ್ನು ನೀವು ಸರಿಯಾಗಿ ಬಳಸಿಕೊಂಡರೆ ಆಗ ಇದರ ಲಾಭಗಳನ್ನು ಪಡೆದುಕೊಳ್ಳಬಹುದು. ಈ ದಿಕ್ಕಿನ ವಾಸ್ತು ನಿಯಮದ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು. ಇದರ ಬಗ್ಗೆ ನೀವು ಮುಂದೆ ಓದುತ್ತಾ ಸಾಗಿರಿ.

ಅಗ್ನೇಯ ದಿಕ್ಕಿನಲ್ಲಿರುವ ಬಾಗಿಲುಗಳು

ಅಗ್ನೇಯ ದಿಕ್ಕಿನಲ್ಲಿರುವ ಬಾಗಿಲುಗಳು

ವಾಸ್ತುಶಾಸ್ತ್ರದ ಪ್ರಕಾರ ಎಲ್ಲಾ ದಿಕ್ಕುಗಳನ್ನು ವಿವಿಧ ಬಾಗಿಲುಗಳಾಗಿ ವಿಂಗಡಿಸಲಾಗಿದೆ ಎಂದು ಹೇಳಲಾಗುತ್ತದೆ(ವಾಸ್ತುಶಾಸ್ತ್ರದಲ್ಲಿ ಇದನ್ನು ಅಮೂರ್ತದ ಬಾಗಿಲು). 6ನೇ ಮತ್ತು 7ನೇ ಬಾಗಿಲು ಅಗ್ನೇಯ ದಿಕ್ಕಿನಲ್ಲಿ ಇರಬೇಕು. ಇನ್ನೊಂದು ಕಡೆಯಲ್ಲಿ ಈ ದಿಕ್ಕು ಬದ್ಧತೆ, ಸತ್ಯ ಮತ್ತು ಮನೋಬಲ ಪ್ರತೀಕವಾಗಿದೆ. ಅದೇ ರೀತಿಯಾಗಿ ಇದು ಕೋಪಕ್ಕೆ ಸಂಬಂಧಿಸಿರುವ ದಿಕ್ಕು ಕೂಡ. ಈ ದಿಕ್ಕು ಭುಜಗಳಲ್ಲಿ ನೋವು ಉಂಟು ಮಾಡುವುದು.

Most Read: ಈ ವಾಸ್ತು ಟಿಪ್ಸ್ ಬಳಸಿ ಶ್ರೀಮಂತಿಕೆ ನಿಮ್ಮದಾಗಿಸಿ

ಅಗ್ನೇಯ ದಿಕ್ಕಿನ ವಾಸ್ತು ಸಮಸ್ಯೆಗಳು

ಅಗ್ನೇಯ ದಿಕ್ಕಿನ ವಾಸ್ತು ಸಮಸ್ಯೆಗಳು

ಈ ದಿಕ್ಕು ಜನರನ್ನು ಅತಿಯಾಗಿ ಆಲೋಚನೆ ಮಾಡುವಂತೆ ಮಾಡುವುದು. ಆದರೆ ಇದೆಲ್ಲವೂ ನೀರಿನಲ್ಲಿಟ್ಟ ಹೋಮದಂತೆ ಆಗುವುದು. ನಕಾರಾತ್ಮಕ ಶಕ್ತಿಗಳು ಪರಿಣಾಮ ಬೀರಿದಾಗ ಈ ದಿಕ್ಕನ್ನು ಚಿಂತೆಯ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಿಂದ ಬರುವಂತಹ ನಕಾರಾತ್ಮಕ ಶಕ್ತಿಗಳು ಉದ್ಯೋಗದಲ್ಲಿ ಸಮಸ್ಯೆ ಉಂಟು ಮಾಡಬಹುದು. ಇದರಿಂದ ವೃತ್ತಿ ಸಮಸ್ಯೆ ಅಥವಾ ಜಗಳ ಉಂಟಾಗಬಹುದು.

ಉದ್ಯೋಗ ಪಡೆಯಲು ಕೆಲವೊಂದು ಆರ್ಥಿಕ ಸಮಸ್ಯೆ ಇತ್ಯಾದಿಗಳು. ಈ ದಿಕ್ಕಿನಿಂದಾಗಿ ಹೃದಯದ ಸಮಸ್ಯೆಯು ಬರಬಹುದು ಮತ್ತು ಖಿನ್ನತೆಯು ಇದನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಬಹುದು. ಪತಿ ಹಾಗೂ ಪತ್ನಿ ಮಧ್ಯೆ ಜಗಳವು ಉಂಟಾಗಬಹುದು. ಈ ಜಗಳವು ತುಂಬಾ ತೀವ್ರ ಮಟ್ಟಕ್ಕೆ ತಲುಪಬಹುದು. ಇದರಿಂದ ಡೈವೋರ್ಸ್ ಅಥವಾ ಅನೈತಿಕ ಸಂಬಂಧ ಏರ್ಪಡಬಹುದು.

Most Read: ಮನೆಯಲ್ಲಿ ಪಾಸಿಟಿವ್ ಶಕ್ತಿ ಹೆಚ್ಚಿಸಲು ವಾಸ್ತು ಶಾಸ್ತ್ರ

ಅಗ್ನೇಯ ದಿಕ್ಕು ತಪ್ಪು ವಾಸ್ತು

ಅಗ್ನೇಯ ದಿಕ್ಕು ತಪ್ಪು ವಾಸ್ತು

ಈ ದಿಕ್ಕಿನಲ್ಲಿ ಶೌಚಾಲಯ, ಮಲಗುವ ಕೋಣೆ ಅಥವಾ ಮನೆಯ ಪ್ರವೇಶದ್ವಾರವು ಇರಲೇಬಾರದು. ಈ ದಿಕ್ಕಿನಲ್ಲಿ ಯಾವುದೇ ರೀತಿಯ ಕನ್ನಡಿಗಳನ್ನು ಹಾಕಬಾರದು. ಈ ದಿಕ್ಕಿನಲ್ಲಿ ಬಾಗಿಲು ಇದ್ದರೆ ಆಗ ಅದರಿಂದ ಕುಟುಂಬದೊಳಗಿನ ಜನರಲ್ಲಿ ಜಗಳವಾಗಬಹುದು. ಈ ದಿಕ್ಕಿನಲ್ಲಿ ಮಲಗುವುದರಿಂದಲೂ ನಕಾರಾತ್ಮಕತೆಯ ದುರಾಭ್ಯಾಸಗಳಾಗಿರುವ ಡ್ರಗ್ಸ್, ಮದ್ಯಪಾನ ಅಥವಾ ಸೆಕ್ಸ್ ಬರಬಹುದು. ಈ ಭಾಗದಲ್ಲಿ ಮನೆಯ ವಿಸ್ತರಣೆ ಅಥವಾ ಅಲ್ಲಿಂದ ಕಡೆಗಣಿಸುವುದು ಕೂಡ ತುಂಬಾ ಅಪವಿತ್ರವೆಂದು ಪರಿಗಣಿಸಲಾಗಿದೆ. ಇದರಿಂದ ಆತಂಕ ಮತ್ತು ಅನಿರ್ಧಾರವು ಕಂಡುಬರುವುದು. ಈ ದಿಕ್ಕಿನಲ್ಲಿ ದಂಪತಿಯು ಮಲಗುವುದನ್ನು ನಿಷೇಧಿಸಬೇಕು. ಈ ದಿಕ್ಕಿನಲ್ಲಿ ಮಲಗಿದರೆ ಆಗ ದಂಪತಿಗಳ ಮಧ್ಯೆ ಕಲಹವೇರ್ಪಡುವುದು. ಮನೆಯ ಈ ಭಾಗವು ತುಂಬಾ ಇಳಿಜಾರು ಆಗಿರಬಾರದು.

Most Read: ಮನೆಯಲ್ಲಿ ಶಾಂತಿ, ನೆಮ್ಮದಿ ಇರಬೇಕೆಂದರೆ-ಈ 8 ವಾಸ್ತು ಟಿಪ್ಸ್ ಅನುಸರಿಸಿ

ಆಗ್ನೇಯ ಭಾಗದ ವಾಸ್ತು ನಿರ್ದೇಶನ

ಆಗ್ನೇಯ ಭಾಗದ ವಾಸ್ತು ನಿರ್ದೇಶನ

ಮನೆಯ ಆಗ್ನೇಯ ಭಾಗದಲ್ಲಿ ವಾಷಿಂಗ್ ಮೆಷಿನ್ ಇಡಬಹುದು. ಅದೇ ರೀತಿಯಾಗಿ ಮಿಕ್ಸರ್ ಕೂಡ ಇಡಬಹುದು. ಈ ಭಾಗದಲ್ಲಿ ಕಾಮಧೇನುವಿನ ಚಿತ್ರವನ್ನು ಇಟ್ಟರೆ ಅದರಿಂದ ಹಣವು ಹರಿದುಬರುವುದು. ಇದು ಸಂಪತ್ತನ್ನು ಕೂಡ ಹೆಚ್ಚು ಮಾಡುವುದು. ಈ ಭಾಗದಲ್ಲಿರುವಂತಹ ಕೋಣೆಗೆ ಹಸಿರು ಅಥವಾ ಕ್ರೀಮ್ ಬಣ್ಣ ಹಚ್ಚಿದರೆ ಆಗ ತುಂಬಾ ಒಳ್ಳೆಯದು. ಈ ದಿಕ್ಕಿನಲ್ಲಿ ಮೊಲಗಳನ್ನು ಇಟ್ಟರೆ ಅದರಿಂದ ಶುಭವೆಂದು ಪರಿಗಣಿಸಲಾಗಿದೆ. ಈ ಭಾಗದಲ್ಲಿ ಕಚೇರಿಯನ್ನು ನಿರ್ಮಾಣ ಮಾಡುವುದು ಸರಿಯಾದ ಕ್ರಮವಲ್ಲ. ಕೆಲಸ ಮಾಡಲು ಕುರ್ಚಿ, ಟೇಬಲ್ ಗಳನ್ನು ಈ ದಿಕ್ಕಿನಲ್ಲಿ ಇಡುವುದು ಕೂಡ ಅಶುಭವೆಂದೇ ಪರಿಗಣಿಸಲಾಗಿದೆ. ಈ ಭಾಗದಲ್ಲಿ ಸ್ಟೋರ್ ರೂಮ್ ಅಥವಾ ಶೂ ರ್ಯಾಕ್ ನ್ನು ಶುಭವೆಂದು ಪರಿಗಣನೆ ಮಾಡಲಾಗಿದೆ.

English summary

Why South East Direction Is Considered Inauspicious

Vastu Shastra is the science that is related to the study of architecture. It is a traditional Hindu system in which auspiciousness and inauspiciousness of directions is discussed. For instance, the southeast direction is known as the direction of fire and various problems might be caused when the Vastu of the southeast direction is wrong.
X
Desktop Bottom Promotion