ಮನೆಯನ್ನು ಮನಕ್ಕೊಪ್ಪುವಂತೆ ಶೃಂಗರಿಸುವುದು ಹೇಗೆ?

Posted By: Jaya Subramanaya
Subscribe to Boldsky

ನೀವು ಸುಂದರವಾಗಿ ಕಟ್ಟಿಸುವ ನಿಮ್ಮ ಕನಸಿನ ಮನೆ ಹೀಗಿರಬೇಕು ಹಾಗಿರಬೇಕು ಎಂಬ ಕಲ್ಪನೆ ನಿಮ್ಮ ಮನದಲ್ಲೆ ಇದ್ದೇ ಇರುತ್ತದೆ. ನೀವು ಲಕ್ಷ ರೂಪಾಯಿ ಖರ್ಚು ಮಾಡಿ ಕಟ್ಟಿಸಿದ ಮನೆ ನಿಮ್ಮ ಮನಸ್ಸಿಗೆ ತೃಪ್ತಿಯನ್ನು ನೀಡುವಂತಿರಬೇಕು. ಅಂತೆಯೇ ಮನೆಯನ್ನು ನೋಡಿ ಹೆಚ್ಚಿನವರು ಮೆಚ್ಚಿಕೊಳ್ಳಬೇಕು ಎಂಬ ಬಯಕೆ ನಿಮ್ಮಲ್ಲಿರುತ್ತದೆ.

ಇನ್ನೊಂದು ವಿಷಯ ಏನೆಂದರೆ ನಿಮ್ಮ ಮನೆಯನ್ನು ನೀವು ಎಷ್ಟೇ ದೊಡ್ಡದಾಗಿ ಕಟ್ಟಿಸಿ ಅದರಲ್ಲಿ ಸುಂದರತೆ ಮತ್ತು ನಾವೀನ್ಯತೆ ಇಲ್ಲ ಎಂದಾದಲ್ಲಿ ನಿಮ್ಮ ಮನೆ ಸುಂದರ ಸೌಧವಾಗಿರುತ್ತದೆಯೇ ವಿನಃ ಮನೆಯ ಭಾವುಕತೆ ಇಲ್ಲಿರುವುದಿಲ್ಲ. ಸುಂದರವಾದ ಬಂಗಲೆಯಲ್ಲಿ ಜೀವಂತಿಕೆಯೇ ಇಲ್ಲದಂತೆ ನೀವು ಓಡಾಡಿದ ಅನುಭವ ನಿಮಗಾಗುತ್ತದೆ. ಇಂತಹ ಪರಿಸ್ಥಿತಿ ನಿಮ್ಮ ಮನೆಗೆ ಬರುವುದು ಬೇಡ ಎಂದಾದಲ್ಲಿ ಇಂದಿನ ಲೇಖನದಲ್ಲಿ ನಾವು ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದು ಅದನ್ನು ಇಂದಿಲ್ಲಿ ಕಂಡುಕೊಳ್ಳೋಣ.

ನೀವು ಅತ್ಯುತ್ತಮ ಗುಣಮಟ್ಟದ ವಿನ್ಯಾಸಗಳನ್ನು ನಿಮ್ಮ ಮನೆಗೆ ಮಾಡಿಸಿದ್ದರೂ ಕೆಲವೊಂದು ಮುಖ್ಯ ಬದಲಾವಣೆಗಳನ್ನು ಅಳವಡಿಸಿಕೊಂಡಿಲ್ಲ ಎಂದಾದಲ್ಲಿ ಇಂದಿಲ್ಲಿ ಕೆಲವೊಂದು ಸಲಹೆಗಳನ್ನು ನಾವು ನೀಡುತ್ತಿದ್ದೇವೆ. ನಿಮ್ಮ ಮನೆಯ ಮೂಲೆಯಲ್ಲೂ ನೀವು ಸುಂದರತೆಯನ್ನು ಮೇಳೈಸಿರೆ ಮಾತ್ರವೇ ನಿಮ್ಮ ಮನೆ ಚಿಕ್ಕದಾಗಿದ್ದರೂ ಚೊಕ್ಕದಾಗಿ ಕಾಣುತ್ತದೆ. ಹಾಗಿದ್ದರೆ ಆ ಏಳು ಸಲಹೆಗಳೇನು ಎಂಬುದನ್ನು ನಾವಿಲ್ಲಿ ಅರಿತುಕೊಳ್ಳೋಣ. ಈ ಏಳು ಸಲಹೆಗಳು ತುಂಬಾ ದುಬಾರಿಯಾಗಿರುವಂತಹ ಅಂಶಗಳನ್ನು ನಿಮಗೆ ನೀಡುತ್ತಿಲ್ಲ. ನಿಮ್ಮ ಬಜೆಟ್‌ಗೆ ಹೊಂದಿಕೊಂಡು ನಿಮ್ಮ ಮನೆಯನ್ನು ಹೇಗೆ ಸುಂದರವಾಗಿ ಮಾಡಬಹುದು ಎಂಬುದೇ ಇಲ್ಲಿರುವ ಸಲಹೆಯಾಗಿದೆ. ಮನೆಯನ್ನು ಸುಮ್ಮನೆ ಕಟ್ಟಡಗಳಿಂದ ಕಟ್ಟದೆ ನಿಮ್ಮ ಆಸಕ್ತಿಯನ್ನು ತುಂಬಿಕೊಂಡು ಅದಕ್ಕೊಂದು ಜೀವ ನೀಡಿ ಕಟ್ಟಿದರೆ ಮನೆ ಮನಕ್ಕೊಪ್ಪುವಂತಿರುತ್ತದೆ.

ಬೆಳಕಿನ ವ್ಯವಸ್ಥೆ

ಬೆಳಕಿನ ವ್ಯವಸ್ಥೆ

Image Courtesy

ಮನೆಯಲ್ಲಿ ಉತ್ತಮ ಬೆಳಕಿನ ವ್ಯವಸ್ಥೆ ಇದ್ದರೆ ಮತ್ತು ಗಾಳಿ ಬೆಳಕು ಚೆನ್ನಾಗಿ ಬರುತ್ತಿದ್ದರೆ ಆ ಮನೆ ನೆಮ್ಮದಿಯ ಬೀಡಾಗಿರುತ್ತದೆ. ಉಸಿರುವ ಕಟ್ಟಿಸುವ ಪರಿಸ್ಥಿತಿ ಅಲ್ಲಿರುವುದಿಲ್ಲ. ನಿಮ್ಮ ಮನೆಯಲ್ಲಿ ಕಿಟಕಿಯು ಉತ್ತಮವಾದ ಆಕಾರವನ್ನು ಪಡೆದುಕೊಂಡಿದೆ ಹಾಗೂ ಅಲ್ಲಿ ಚೆನ್ನಾಗಿ ಬೆಳಕು ಬರುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅಡುಗೆ ಮನೆಯ ವಿನ್ಯಾಸದ ಸಮಯದಲ್ಲಿ ಬೆಳಕಿನ ವ್ಯವಸ್ಥೆ ಬಗ್ಗೆ ಸರಿಯಾದ ಅಂದಾಜನ್ನು ನೀವು ಮಾಡಬೇಕು.

ಸ್ಟೋರೇಜ್ ರೂಮ್

ಸ್ಟೋರೇಜ್ ರೂಮ್

Image Courtesy

ನಿಮ್ಮ ಮನೆಯಲ್ಲಿ ಬೇಡದೇ ಇರುವ ವಸ್ತುಗಳನ್ನು ವ್ಯವಸ್ಥಿತವಾಗಿ ಜೋಡಿಸಲು ಬೃಹದಾಕಾರದ ಸ್ಟೋರ್ ರೂಮ್‌ನ ವ್ಯವಸ್ಥೆಯನ್ನು ನೀವು ಮಾಡಬೇಕು. ಇಲ್ಲಿ ಕೂಡ ಬೆಳಕು ಮತ್ತು ಗಾಳಿಯ ವ್ಯವಸ್ಥೆಯನ್ನು ನೀವು ನಿಖರವಾಗಿ ಹೊಂದಿಸಿರಬೇಕು. ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದೇ ಸುಂದರವಾಗಿ ಜೋಡಿಸಿ ಮತ್ತು ಈ ಕೊಠಡಿಯಲ್ಲಿ ಕೂಡ ಒಂದು ನಿಖರತೆಯನ್ನು ಕಾಪಾಡಿಕೊಳ್ಳಿ.

ಸಾಕಷ್ಟು ಸ್ಥಳಾವಕಾಶ ಇರಲಿ

ಸಾಕಷ್ಟು ಸ್ಥಳಾವಕಾಶ ಇರಲಿ

Image Courtesy

ನಿಮ್ಮ ಮನೆಯಲ್ಲಿ ನಾವು ಮೊದಲೇ ತಿಳಿಸಿದಂತೆ ಗಾಳಿ ಬೆಳಕು ಎಷ್ಟು ಮುಖ್ಯವೋ ಅಂತೆಯೇ ಸಾಕಷ್ಟು ಸ್ಥಳಾವಕಾಶವನ್ನು ಕಾಪಾಡಿಕೊಳ್ಳಿ. ವಸ್ತಗಳನ್ನು ಸರಿಯಾಗಿ ಜೋಡಿಸಲು ವ್ಯವಸ್ಥಿತವಾದ ಸ್ಥಳವನ್ನು ನೀವು ಹೊಂದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ದೊಡ್ಡ ಕಿಟಕಿ ಮತ್ತು ಬಾಗಿಲುಗಳು ಈಗಿನ ಟ್ರೆಂಡ್ ಆಗಿದ್ದು ಇಂತಹುದೇ ವ್ಯವಸ್ಥೆಯನ್ನು ನಿಮ್ಮ ಮನೆಗೂ ನೀವು ಮಾಡಿ.

ಶೈಲಿಯನ್ನು ನೀಡಿ

ಶೈಲಿಯನ್ನು ನೀಡಿ

Image Courtesy

ತೀರಾ ಹಿಂದಿನ ಮಾದರಿಯ ಸ್ಟೈಲ್ ಅನ್ನು ನಿಮ್ಮ ಮನೆಗೆ ಆಕಾರ ನೀಡುವಲ್ಲಿ ಬಳಸದೆಯೇ ಈಗಿನ ನವೀನ ಮಾದರಿಯ ವಿನ್ಯಾಸವನ್ನು ನಿಮ್ಮ ಮನೆಯನ್ನು ಸುಂದರಗೊಳಿಸುವಲ್ಲಿ ಬಳಸಿ. ಬಣ್ಣಗಳ ಆಯ್ಕೆಯನ್ನು ಉತ್ತಮವಾಗಿ ಮಾಡಿ. ಇಲ್ಲಿ ನಿಮ್ಮ ಕ್ರಿಯಾತ್ಮಕತೆಯನ್ನು ಬಳಸಿ.

ಪೀಠೋಪಕರಣಗಳ ಆಯ್ಕೆ ಮನಕ್ಕೊಪ್ಪುವಂತಿರಲಿ

ಪೀಠೋಪಕರಣಗಳ ಆಯ್ಕೆ ಮನಕ್ಕೊಪ್ಪುವಂತಿರಲಿ

Image Courtesy

ನಿಮ್ಮ ಮನೆಯಲ್ಲಿ ಇತರ ವ್ಯವಸ್ಥೆಗಳಿರುವಂತೆ ಸೋಫಾ ಸೆಟ್‌ಗಳು, ದಿವಾನಾ ಕೂಡ ಮುಖ್ಯ ಕಾರ್ಯವನ್ನು ನಿರ್ವಹಿಸುತ್ತವೆ. ನಿಮ್ಮ ಮನೆಯ ಪೀಠೋಪಕರಣಗಳ ಆಯ್ಕೆಯತ್ತ ನೀವು ಕಟ್ಟುನಿಟ್ಟಿನ ಗಮನವನ್ನು ನೀಡಬೇಕು. ಹಳೆಯ ಮಾದರಿಯ ಪೀಠೋಪಕರಣಗಳನ್ನು ಆಯ್ಕೆಮಾಡಿಕೊಳ್ಳದೆ ನವೀನ ಮಾದರಿಯ ಪೀಠೋಪಕರಣಗಕ್ಕೆ ಪ್ರಾಮುಖ್ಯತೆಯನ್ನು ನೀಡಿ.

ಹಸಿರು ಗಿಡಗಳ ಬಳಕೆ ಮಾಡಿ

ಹಸಿರು ಗಿಡಗಳ ಬಳಕೆ ಮಾಡಿ

Image Courtesy

ಮನೆಯಲ್ಲಿ ಸಾಕಷ್ಟು ಸ್ಥಳಾವಕಾಶ ಇದೆ ಎಂದಾದಲ್ಲಿ ಹೂಕುಂಡಗಳ ಬಳಕೆ ಅಂತೆಯೇ ಫ್ಯಾಷನ್ ಗಿಡಗಳ ಬಳಕೆಯನ್ನು ಮನೆಯೊಳಗೆ ಮಾಡಿ. ಇದರಿಂದ ನಿಮ್ಮ ಮನೆಗೂ ಆಧುನಿಕ ಸ್ಪರ್ಶವನ್ನು ನೀವು ನೀಡಿದಂತಾಗುತ್ತದೆ. ಆದರೆ ಈ ಗಿಡಗಳ ಆರೈಕೆಯನ್ನು ನೀವು ಮಾಡಬೇಕಾಗುತ್ತದೆ. ಆದಷ್ಟು ಫ್ಯಾಶನ್ ಗಿಡಗಳ ಬಳಕೆಯನ್ನು ಮಾಡಿ.

ಮನೆಯ ಅಲಂಕಾರ

ಮನೆಯ ಅಲಂಕಾರ

Image Courtesy

ಮನೆಯ ಅಲಂಕಾರ ಎಂಬುದು ಮನೆಯೊಡತಿಯ ಕೈಚಳಕದಲ್ಲಡಗಿದೆ. ಇದಕ್ಕಾಗಿ ಸ್ತ್ರೀಯರು ಹೆಚ್ಚಿನ ಗಮನವನ್ನು ನೀಡಬೇಕು. ಇದರ ಜೊತೆಗೆ ನಿಮ್ಮ ಪತಿ ಕೂಡ ಮನೆಯ ಅಲಂಕಾರದಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ ಎಂದಾದಲ್ಲಿ ಅದೊಂದು ಪ್ಲಸ್ ಪಾಯಿಂಟ್. ಚಿತ್ರಕಲೆಗಳು, ಬಿದಿರಿನ ಬೊಂಬೆಗಳು, ಮರದ ಕೆತ್ತನೆಗಳು ಹೀಗೆ ನಿಮ್ಮ ಬಜೆಟ್‌ಗೆ ಹೊಂದುವಂತಹ ವಸ್ತುಗಳನ್ನು ಮನೆಯಲ್ಲಿ ಜೋಡಿಸಿ.

English summary

Amazing Ideas To Make Your Home A Living Heaven

When you plan to create a home that is a reflection of who you are, much work is at hand.Whether you are trying to buy a new house or simply renovating your old one, knowing the different style and interior options would make it easier to design and build new structures for that extra appeal. This challenge can definitely be met and brilliantly so. Here are a few ideas that you didn't know about, which will surprise you. 'It's not how big the house is, it's how happy the home is.' Your home is something much more than just a place of shelter. Imagine walking into a house with 4 bare walls and a haphazard state.