Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಸಂಕ್ರಾಂತಿ ಹಬ್ಬ: ಅಡುಗೆ ಮನೆಯ ಅಲಂಕಾರ ಅಚ್ಚುಕಟ್ಟಾಗಿರಲಿ
ಸಂಕ್ರಾಂತಿಗೆ ಅಡುಗೆ ಮನೆಯನ್ನು ಯಾವ ರೀತಿಯಲ್ಲಿ ನೀವು ಸಿಂಗರಿಸಬೇಕು ಎಂಬುದಕ್ಕಾಗಿ ಇಂದಿನ ಲೇಖನದಲ್ಲಿ ಸಲಹೆಗಳನ್ನು ನೀಡುತ್ತಿದ್ದೇವೆ....ಮುಂದೆ ಓದಿ...
ಸಂಕ್ರಾಂತಿ ಇಲ್ಲವೇ ಪೊಂಗಲ್ ಹಬ್ಬ ಬಂದೇಬಿಟ್ಟಿದೆ. ಎಳ್ಳು ಬೆಲ್ಲಿನ ಸ್ವಾದವನ್ನು ಉಣಬಡಿಸುತ್ತಾ ಸಿಹಿಕಹಿಗಳನ್ನು ಜೀವನದಲ್ಲಿ ಸಮಾನವಾಗಿ ಸ್ವೀಕರಿಸಬೇಕು ಎಂಬ ಅರ್ಥವನ್ನು ಈ ಹಬ್ಬ ನಮ್ಮಲ್ಲಿ ಮೂಡಿಸುತ್ತಿದೆ. ಹಬ್ಬಕ್ಕೆ ಮನೆಯನ್ನು ಸಿಂಗರಿಸುವುದು ಸಾಮಾನ್ಯವಾಗಿದ್ದರೂ ಅಡುಗೆ ಮನೆಯ ಸಿಂಗಾರ ಅತಿಮುಖ್ಯವಾಗಿರುತ್ತದೆ. ಸುಗ್ಗಿ ಹಬ್ಬ ಮಕರ ಸಂಕ್ರಾಂತಿ ಹಬ್ಬದ ವೈಶಿಷ್ಟ್ಯವೇನು?
ಹಾಗಿದ್ದರೆ ಸಂಕ್ರಾಂತಿಗೆ ಅಡುಗೆ ಮನೆಯನ್ನು ಯಾವ ರೀತಿಯಲ್ಲಿ ನೀವು ಸಿಂಗರಿಸಬೇಕು ಎಂಬುದಕ್ಕಾಗಿ ಇಂದಿನ ಲೇಖನದಲ್ಲಿ ಸಲಹೆಗಳನ್ನು ನೀಡುತ್ತಿದ್ದೇವೆ. ಮನೆಯ ಒಳಾಂಗಣ ಕೊಠಡಿ, ಡ್ರಾಯಿಂಗ್ ರೂಮ್, ಬಾಲ್ಕನಿ ಮೊದಲಾದ ಅಲಂಕಾರ ವಿಧಾನಗಳಿಗಿಂತಲೂ ಅಡುಗೆ ಮನೆಯ ಅಲಂಕಾರ ತುಸು ಕಷ್ಟವಾಗಿರುತ್ತದೆ. ಏಕೆಂದರೆ ನೀವಿಲ್ಲಿ ಮಾಡುವ ಅಲಂಕಾರ ನಿಮಗೆ ಅಡುಗೆ ಮಾಡಲು ಅನುಕೂಲವನ್ನು ಉಂಟುಮಾಡುವಂತೆ ಇರಬೇಕು.
ಅಂತೆಯೇ ಅಲಂಕಾರ ಪದ್ಧತಿ ಕೂಡ ಸಾಂಪ್ರದಾಯಿಕವಾಗಿರಬೇಕು. ರಂಗೋಲಿಯನ್ನು ಬಿಡಿಸಿಕೊಂಡು, ಕಬ್ಬನ್ನು ಅಡುಗೆ ಮನೆಯಲ್ಲಿ ಇರಿಸಿ ಸಿಂಗಾರ ಮಾಡುವುದು ಹೀಗೆ ಮೊದಲಾದ ಅಲಂಕಾರಗಳನ್ನು ನಿಮಗೆ ಅಡುಗೆ ಮನೆಯ ನೋಟವನ್ನು ಹೆಚ್ಚಿಸಲು ಈ ಅಲಂಕಾರಗಳನ್ನು ಮಾಡಬಹುದಾಗಿದೆ. ಬನ್ನಿ ಹಾಗಿದ್ದರೆ ಈ ಅಲಂಕಾರ ವಿಧಾನಗಳೇನು ಎಂಬುದನ್ನು ಕಂಡುಕೊಳ್ಳೋಣ.

ಶುಚಿಯಾಗಿರಿಸಿಕೊಳ್ಳಿ
ಅಡುಗೆ ಮನೆಯ ಮೂಲೆಗಳನ್ನು ಸ್ವಚ್ಛವಾಗಿ ಗುಡಿಸಿ ಶುಚಿಯಾಗಿರಿಸಿಕೊಳ್ಳಿ. ಮೂಲೆಗಳಲ್ಲಿ ನೀವು ಜೋಡಿಸಿರುವ ಸಾಮಾನುಗಳನ್ನು ನಿವಾರಿಸಿಕೊಂಡು ಅಡುಗೆ ಮನೆಯ ಅಲಂಕಾರವನ್ನು ಮಾಡಿಕೊಳ್ಳಿ.

ತೋರಣದ ಅಲಂಕಾರ
ಮಾವಿನ ಎಲೆಗಳಿಂದ ತಯಾರಿಸಿದ ತೋರಣವನ್ನು ಅಡುಗೆ ಮನೆಯ ಮುಂಭಾಗಿಲಿಗೆ ಕಟ್ಟಿಕೊಳ್ಳಿ. ಹಬ್ಬ ಹರಿದಿನಗಳಂದು ಮಾವಿನ ತೋರಣ ಅತ್ಯವಶ್ಯಕವಾಗಿದೆ.

ರಂಗೋಲಿ ಅಲಂಕಾರ
ಹೆಚ್ಚಿನ ತಮಿಳು ಭಾಷಿಗರ ಮನೆಗಳಲ್ಲಿ ಪೊಂಗಲ್‌ನಂದು ರಂಗೋಲಿ ಅಲಂಕಾರ ಅದ್ಭುತವಾಗಿರುತ್ತದೆ. ಬಿಳಿ ಬಣ್ಣದ ಹುಡಿಯನ್ನು ಬಳಸಿಕೊಂಡು ರಂಗೋಲಿಯನ್ನು ಬಿಡಿಸುತ್ತಾರೆ.

ಬಣ್ಣಗಳಿಂದ ತುಂಬುವುದು
ಮನೆಯ ಅಡುಗೆ ಕೋಣೆಯ ಮುಂಭಾಗ ಅಥವಾ ನೀವು ಪೊಂಗಲ್ ತಯಾರಿಸುವಲ್ಲಿ ರಂಗೋಲಿಯನ್ನು ಬಿಡಿಸಿ. ಕ್ರಿಯಾತ್ಮಕತೆಯನ್ನು ಬಳಸಿಕೊಂಡು ರಂಗೋಲಿ ರಚನೆ ಮಾಡಬಹುದಾಗಿದೆ.

ಥೀಮ್ ಇರಿಸುವುದು
ನಿಮ್ಮ ಪೂರ್ವಜರ ಮನೆಯಲ್ಲಿ ಪೊಂಗಲ್ ಆಚರಣೆ ಎಂದಲ್ಲಿ ಈ ರೀತಿಯ ರಂಗೋಲಿಯನ್ನು ಬಿಡಿಸಿ

ಇಟ್ಟಿಗೆ ಮತ್ತು ಮರದ ಕಟ್ಟಿಗೆ
ಇಟ್ಟಿಗೆ ಮತ್ತು ಮರದ ಕಟ್ಟಿಗೆಯನ್ನು ಬಳಸಿಕೊಂಡು ಪೊಂಗಲ್ ತಯಾರಿಯನ್ನು ಮಾಡುವುದು ಆಚರಣೆಯಾಗಿದೆ. ಬೇಕಿದ್ದಲ್ಲಿ ಸೀಮೆಎಣ್ಣೆಯನ್ನು ಕಟ್ಟಿಗೆಯ ಮೇಲೆ ಹೊಯ್ದುಕೊಂಡು ಬೆಂಕಿಯನ್ನು ಹೊತ್ತಿಸಿಕೊಳ್ಳಬಹುದಾಗಿದೆ.

ಕಬ್ಬು
ಈ ಹಬ್ಬದಲ್ಲಿ ಕಬ್ಬಿಗೆ ಪ್ರಧಾನ ಆದ್ಯತೆ. ಪೊಂಗಲ್ ಅನ್ನು ಕಬ್ಬು ಸಂಕೇತಿಸುತ್ತದೆ. ಮೂರು ಕಬ್ಬನ್ನು ಜೊತೆಯಾಗಿ ಕಟ್ಟಿ ಪೊಂಗಲ್ ತಯಾರಿಸುವ ಸ್ಥಳದಲ್ಲಿ ಟೆಂಟ್‌ನಂತೆ ಕಟ್ಟಿಕೊಳ್ಳಿ.

ಸಕ್ಕರೆ ಪೊಂಗಲ್ ತಯಾರಿ
ಮಣ್ಣಿನ ಮಡಿಕೆಯಲ್ಲಿ ಎಲ್ಲಾ ಸಾಮಾಗ್ರಿಗಳನ್ನು ಇರಿಸಿಕೊಂಡು ಪೊಂಗಲ್ ತಯಾರಿಯನ್ನು ಮಾಡಿ. ಇದನ್ನು ಬೇಯಲು ಬಿಡಿ ಮತ್ತು ಆವಿ ಹೊರಬರುವಂತೆ ಮಾಡಿ. ಪೊಂಗಲ್ ಅನ್ನು ಸಿದ್ಧಪಡಿಸುವಾಗ ಕಿಟಕಿಗಳನ್ನು ತೆರೆದಿರಿ.

ಪೊಂಗಲ್ ಖಾದ್ಯ
ನೆಲದಲ್ಲಿ ತಾಜಾ ಬಾಳೆಎಲೆಯನ್ನು ಹಾಸಿಕೊಂಡು ನಿಮ್ಮ ಕುಟುಂಬದವರಿಗೆ ಖಾದ್ಯವನ್ನು ಉಣಬಡಿಸಿ. ಸಾಂಪ್ರಾದಾಯಿಕ ರೀತಿಯಲ್ಲಿ ನಿಮ್ಮ ಹಬ್ಬವನ್ನು ಆಚರಿಸಿಕೊಳ್ಳಿ ಎಂಬುದಾಗಿ ನಾವು ಸಲಹೆಯನ್ನು ನೀಡುತ್ತೇವೆ.



Click it and Unblock the Notifications
