For Quick Alerts
ALLOW NOTIFICATIONS  
For Daily Alerts

ಸ್ವಚ್ಛತೆಯೇ ಮನೆಯ ನಿಜವಾದ ಶಕ್ತಿ

By CM Prasad
|

ಸ್ವಚ್ಛತೆ ಎಂದಾಕ್ಷಣ ಈಗಿನ ಜನಾಂಗಕ್ಕೆ ಮೊದಲು ನೆನಪಾಗುವುದು ಸ್ವಚ್ಛ ಭಾರತ್ ಅಭಿಯಾನ. ಹೌದು ಭಾರತ ಸರ್ಕಾರ ಸ್ವಚ್ಛತೆಗೆ ಆದ್ಯತೆ ನೀಡಲು ಸ್ವಚ್ಛ ಭಾರತ ಅಭಿಯಾನದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸ್ವಚ್ಛತೆಯನ್ನು ಎಲ್ಲೆಡೆ ಅನುಸರಿಸಲು ಈ ಯೋಜನೆಯು ಸಹಕಾರಿಯಾಗುತ್ತಿದೆ. "ಸ್ವಚ್ಛತೆಯನ್ನು ಯಾರು ಕಾಪಾಡುತ್ತಾರೋ ಅವರು ಸದಾಕಾಲ ಅನಾರೋಗ್ಯದಿಂದ ದೂರವಿರುತ್ತಾರೆ" ಈ ಸತ್ಯವನ್ನು ಒಮ್ಮೆ ಎಲ್ಲರೂ ನಂಬಲೇಬೇಕು.

ಹೌದು! ದಿನನಿತ್ಯ ನಿಮ್ಮ ಮನೆಯನ್ನು ಎಷ್ಟು ಸ್ವಚ್ಛವಾಗಿಟ್ಟುಕೊಳ್ಳುತ್ತೀರೋ ನಿಮ್ಮ ಮನೆಯ ಸದಸ್ಯರ ಆರೋಗ್ಯ ಸಹ ಸುಸ್ಥಿತಿಯಲ್ಲಿರುತ್ತದೆ. ಇದನ್ನು ಪಾಲಿಸಬೇಕಾದರೆ ನೀವು ಕೆಲ ವಿಧಾನಗಳನ್ನು ಅಥವಾ ಅಭ್ಯಾಸಗಳನ್ನು ಅನುಸರಿಸಬೇಕಾಗುತ್ತದೆ. ನೀವು ಬೆಳಗ್ಗೆ ಎದ್ದಾಗಿನಿಂದಲೇ ಸ್ವಚ್ಛತಾ ಕಾರ್ಯವನ್ನು ನಿಮ್ಮ ಹಾಸಿಗೆಯಿಂದಲೇ ಮೊದಲು ಪ್ರಾರಂಭಿಸಿ. ನಿಮ್ಮ ಹಾಸಿಗೆಯನ್ನು ಸರಿಮಾಡಿಕೊಳ್ಳುವುದು, ನಿಮ್ಮ ಅಡುಗೆ ಮನೆಯನ್ನು ಸ್ವಚ್ಛಪಡಿಸಿಕೊಂಡು ಪಾತ್ರೆಗಳನ್ನು ಸರಿಯಾದ ಜಾಗಕ್ಕೆ ಜೋಡಿಸಿಡಿ. ಗುಡಿಸಿದ ಕಸವನ್ನು ಕಸದ ಬುಟ್ಟಿಗೆ ಹಾಕುವುದು. ಮನೆಯ ಸ್ವಚ್ಛತೆ- ಮೋಡಿ ಮಾಡುವ ಅಂಟುವಾಳ ಕಾಯಿ!

ಹೀಗೆ ಸ್ವಚ್ಛಗೊಳಿಸಲು ಅನೇಕ ಒಳ್ಳೆಯ ಅಭ್ಯಾಸಗಳಿವೆ. ಇದರಿಂದ ನಿಮ್ಮ ಮನೆಯ ಲಕ್ಷಣ ಹೆಚ್ಚಾಗಿ ಮನೆಯಲ್ಲಿನ ತಾಜಾತನ ಹೆಚ್ಚಲು ನೆರವಾಗುತ್ತದೆ. ಈ ಲೇಖನದಲ್ಲಿ ಈ ರೀತಿಯ ಒಳ್ಳೆಯ ಅಭ್ಯಾಸಗಳನ್ನು ಸರಳವಾಗಿ ಅನುಸರಿಸಲು ನೆರವಾಗುವಂತೆ ವಿಶೇಷವಾಗಿ ನಿಮಗಾಗಿ ನೀಡಲಾಗಿದೆ. ಈ ಅಭ್ಯಾಸಗಳನ್ನು ಕ್ರಮವಾಗಿ ಅನುಸರಿಸಿ ನಿಮ್ಮ ಮನೆಯನ್ನು ಶುಚಿಯಾಗಿ ಇರಿಸಿಕೊಳ್ಳಿ. ನಾವು ನೀಡಿರುವ ವಿಶಿಷ್ಟ ಸಂಗತಿಗಳನ್ನು ನೀವು ಓದಲೇಬೇಕು...

ಹಾಸಿಗೆಯನ್ನು ಸಿದ್ಧಪಡಿಸಿ

ಹಾಸಿಗೆಯನ್ನು ಸಿದ್ಧಪಡಿಸಿ

ಬೆಳಗ್ಗೆ ನೀವು ಎದ್ದ ಕೂಡಲೇ ಹಾಸಿಗೆಯನ್ನು ಸರಿಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಹಾಸಿಗೆ ಹೊದಿಕೆ ಮತ್ತು ಬೆಡ್ ಶೀಟ್ ಅನ್ನು ಸರಿಪಡಿಸಿಕೊಳ್ಳಿ. ಇದೊಂದು ಒಳ್ಳೆಯ ಅಭ್ಯಾಸವಾಗಿದ್ದು, ಪ್ರತಿ ದಿನ ಅನುಸರಿಸುವುದರಿಂದ ನಿಮ್ಮ ಕೋಣೆಯ ಅಂದ ಹೆಚ್ಚಾಗುತ್ತದೆ.

ಅಡುಗೆ ಮನೆಯ ಸ್ವಚ್ಛತೆ

ಅಡುಗೆ ಮನೆಯ ಸ್ವಚ್ಛತೆ

ಅಡುಗೆ ಮನೆಯ ಹಲಗೆಗಳನ್ನು ಸ್ವಚ್ಛಗೊಳಿಸಿ. ಭೋಜನದ ನಂತರ ಅಲ್ಲಿರುವ ಮಸಾಲೆ ತುಂಬಿದ ಬಟ್ಟಲುಗಳನ್ನು ಪ್ರತ್ಯೇಕಿಸಿ. ಇದು ನಿಮ್ಮ ಸ್ವಚ್ಛತಾ ಕಾರ್ಯದ ಸಮಯವನ್ನು ಉಳಿಸುವುದಲ್ಲದೆ ಅಡುಗೆ ಮನೆಯ ಅಂದವನ್ನು ಹೆಚ್ಚಿಸುತ್ತದೆ.

ಪಾದರಕ್ಷೆಗಳನ್ನು ಬಾಗಿಲ ಬಳಿಯೇ ಬಿಡಿ

ಪಾದರಕ್ಷೆಗಳನ್ನು ಬಾಗಿಲ ಬಳಿಯೇ ಬಿಡಿ

ನೀವು ಮನೆಗೆ ಬಂದ ತಕ್ಷಣ ಬಾಗಿಲಿನಲ್ಲಿಯೇ ನಿಮ್ಮ ಪಾದರಕ್ಷೆಗಳನ್ನು ಬಿಡಲು ಅಭ್ಯಾಸ ಮಾಡಿಕೊಳ್ಳಿ. ಇದೊಂದು ಉತ್ತಮವಾದ ಅಭ್ಯಾಸವಾಗಿದ್ದು, ರೋಗಕ್ಕೆ ಕಾರಣವಾಗುವ ಸೂಕ್ಷ್ಮಾಣುಗಳನ್ನು ಮನೆಗೆ ತರುವಲ್ಲಿ ಈ ಪಾದರಕ್ಷೆಗಳು ಕಾರಣವಾಗುತ್ತವೆ.

ಕಸವನ್ನು ನೆಲದ ಮೇಲೆ ಬಿಡದಿರಿ

ಕಸವನ್ನು ನೆಲದ ಮೇಲೆ ಬಿಡದಿರಿ

ಹೆಚ್ಚು ಸಮಯ ಕಸವನ್ನು ನೆಲದ ಮೇಲೆ ಹಾಗೆಯೇ ಬಿಡದಿರಿ. ಏಕೆಂದರೆ ಅದರಿಂದ ಕೀಟಗಳು ಮತ್ತು ಸೂಕ್ಷ್ಮ ಜೀವಿಗಳು ಮನೆಗೆ ಅಹ್ವಾನಿಸಿದಂತಾಗುತ್ತದೆ. ವಿನೆಗರ್ ಮತ್ತು ಲಿಂಬೆ ರಸದ ಮಿಶ್ರಣದಿಂದ ವಾರಕ್ಕೊಮ್ಮೆ ಮನೆಯ ಎಲ್ಲಾ ಸ್ಥಳಗಳ ಕಸವನ್ನು ಸ್ವಚ್ಛಗೊಳಿಸಲು ಪ್ರಯತ್ನಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕಸವನ್ನು ನೆಲದ ಮೇಲೆ ಬಿಡದಿರಿ

ಕಸವನ್ನು ನೆಲದ ಮೇಲೆ ಬಿಡದಿರಿ

ಇದರಿಂದ ನಿಮ್ಮ ಮನೆಯ ಸೌಂದರ್ಯ ಹೆಚ್ಚಾಗಿ ಸದಸ್ಯರು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ.

English summary

Ways to Maintain a Clean Home

"One who maintains cleanliness, keeps away diseases" This is a factor we all should follow when it comes to looking after our humble abode. Keeping the house clean on a daily basis helps to keep the family members healthy. It is important to follow a set ground rules or habits everyday so that the house doesn't suffer a messy look.
Story first published: Friday, January 8, 2016, 18:15 [IST]
X
Desktop Bottom Promotion