ಚಳಿಗಾಲದಲ್ಲಿ ಮರದ ಪೀಠೋಪಕರಣಗಳ ಆರೈಕೆ ಹೀಗಿರಲಿ....

By: hemanth
Subscribe to Boldsky

ಮನೆ ಎಂದ ಮೇಲೆ ಪೀಠೋಪಕರಣಗಳು ಇರಲೇ ಬೇಕು. ಅದರಲ್ಲೂ ಮರದ ಪೀಠೋಪಕರಣಗಳು ಇದ್ದರೆ ಆಗ ಮನೆಗೊಂದು ವಿಶೇಷ ಮೆರಗು ಬರುತ್ತದೆ. ಮರದ ಪೀಠೋಪಕರಣಗಳಲ್ಲಿ ಇರುವಂತಹ ಕೆತ್ತನೆಯ ಕೆಲಸಗಳು ಎಲ್ಲರನ್ನು ಸೆಳೆಯುತ್ತದೆ. ಆದರೆ ಮರದ ಪೀಠೋಪಕರಣಗಳನ್ನು ಚೆನ್ನಾಗಿ ಇಟ್ಟುಕೊಳ್ಳುವುದು ತುಂಬಾ ಮುಖ್ಯ. ಅದರಲ್ಲೂ ಡೈನಿಂಗ್ ಟೇಬಲ್ ಮತ್ತು ಮರದ ಬಾಗಿಲುಗಳ ಬಗ್ಗೆ ಎಚ್ಚರಿಕೆ ವಹಿಸಿಕೊಳ್ಳಬೇಕು. 

Taking Care Of Wood In Winter
 

ಚಳಿಗಾಲದಲ್ಲಿ ಮರದ ಪೀಠೋಪಕರಣಗಳಿಗೆ ಫಂಗಸ್ ಬರುವುದು ಸಹಜ. ಇದರಿಂದ ಅದರ ಅಂದವೇ ಕೆಟ್ಟುಹೋಗುತ್ತದೆ. ಈ ಸಮಯದಲ್ಲಿ ನಾವು ಮರದ ಪೀಠೋಪಕರಣಗಳ ಬಗ್ಗೆ ಎಚ್ಚರಿಕೆಯನ್ನು ವಹಿಸಬೇಕು. ಚಳಿಗಾಲದಲ್ಲಿ ಹೆಚ್ಚಾಗಿ ಧೂಳು ಮುದ್ದೆಯಾಗಿ ಬಂದು ನಿಮ್ಮ ಪೀಠೋಪಕರಣಗಳ ಮೇಲೆ ನಿಲ್ಲುತ್ತದೆ.

ಇದನ್ನು ತೆಗೆದುಹಾಕಬೇಕು. ಮರದ ಪೀಠೋಪಕರಣಗಳನ್ನು ನೋಡಿಕೊಳ್ಳುವ ಕೆಲವೊಂದು ಸರಳ ಸಲಹೆಗಳನ್ನು ನಾವು ನಿಮಗಿಲ್ಲಿ ನೀಡಲಿದ್ದೇವೆ. ಇದನ್ನು ಓದಿಕೊಂಡು ಮರದ ಪೀಠೋಪಕರಣಗಳ ಅಂದ ಉಳಿಸಿಕೊಳ್ಳಿ. 

Taking Care Of Wood In Winter
 

ಧೂಳು ತೆಗೆಯಿರಿ

ಚಳಿಗಾಲದಲ್ಲಿ ಮರದ ಪೀಠೋಪಕರಣಗಳ ಮೇಲೆ ಅಂಟಿಕೊಳ್ಳುವ ಧೂಳನ್ನು ನಿಯಮಿತವಾಗಿ ತೆಗೆಯುತ್ತಿರಬೇಕು. ಇಲ್ಲವಾದಲ್ಲಿ ಪೀಠೋಪಕರಣಗಳ ಮೇಲೆ ಗೆರೆಗಳು ಬೀಳುತ್ತದೆ. ಯಾವಾಗಲೂ ಧೂಳು ತೆಗೆಯಲು ತುಂಬಾ ಮೃಧುವಾಗಿರುವ ಬಟ್ಟೆಯನ್ನು ಉಪಯೋಗಿಸಿ. ಸಿಲಿಕಾನ್ ಇರುವಂತಹ ಯಾವುದೇ ವಸ್ತುವನ್ನು ಬಳಸಬೇಡಿ. ಇದರಿಂದ ಮರಕ್ಕೆ ಹಾನಿಯಾಗುತ್ತದೆ.

Taking Care Of Wood In Winter
 

ಗುಣಮಟ್ಟದ ಕ್ಲೀನರ್ ಗಳನ್ನು ಬಳಸಿ

ಗುಣಮಟ್ಟದ ನೆಲ ಸ್ವಚ್ಛಗೊಳಿಸುವ ದ್ರಾವಣಗಳನ್ನು ಬಳಸಿಕೊಳ್ಳಿ. ಇದರಿಂದ ಮರದ ನೆಲಕ್ಕೆ ಹಾನಿಯಾಗುವುದು ತಪ್ಪುವುದು. ನೆಲದ ಮೇಲೆ ಬಿದ್ದಿರುವ ಧೂಳು, ಕಲೆ ಹಾಗೂ ಗೆರೆಗಳನ್ನು ತೆಗೆಯಲು ವಾರದಲ್ಲಿ ಮೂರು ಸಲ ಇದನ್ನು ಬಳಸಿ. ಕಳಪೆ ಗುಣಮಟ್ಟದ ದ್ರಾವಣವು ಮರಕ್ಕೆ ಹಾನಿಯುಂಟು ಮಾಡುವುದು. ಇದರಿಂದ ಒಳ್ಳೆಯ ಗುಣಮಟ್ಟದ ಉತ್ಪನ್ನಗಳನ್ನು ಬಳಸಿಕೊಳ್ಳಿ.   ಮರದ ಪೀಠೋಪಕರಣಗಳ ನಿರ್ವಹಣೆ ಹೇಗಿರಬೇಕು?

ಓಕ್ ಪೀಠೋಪಕರಣಗಳನ್ನು ಬಳಸಿ

ನೀವು ಗಾರ್ಡನ್ ನಲ್ಲಿ ಪೀಠೋಪಕರಣಗಳನ್ನು ಬಳಸಲು ನಿರ್ಧರಿಸಿದ್ದರೆ ಆಗ ಓಕ್ ಬಳಸಿ. ಇದಕ್ಕೆ ಹೆಚ್ಚಿನ ನಿರ್ವಹಣೆ ಬೇಕಿರುವುದಿಲ್ಲ ಮತ್ತು ಯಾವುದೇ ರಾಸಾಯನಿಕ ಬಳಸಿ ಇದರ ನಿರ್ವಹಣೆ ಮಾಡಬೇಕಿಲ್ಲ. ಧೂಳನ್ನು ತೆಗೆದರೆ ಅದು ಹೊಳೆಯುವಂತೆ ಕಾಣುತ್ತದೆ. 

Taking Care Of Wood In Winter
 

ಮಯೋನಿಸ್

ಮರದ ಪೀಠೋಪಕರಣಗಳ ಮೇಲೆ ಬಿದ್ದಿರುವ ಚಾ, ಕಾಫಿ ಮತ್ತು ನೀರಿನ ಕಲೆಗಳನ್ನು ತೆಗೆಯುವುದು ತುಂಬಾ ಕಷ್ಟ. ಇದಕ್ಕಾಗಿ ಮಯೋನಿಸ್ ನೆರವು ಪಡೆಯಿರಿ. ಸ್ವಲ್ಪ ಮಯೋನಿಸ್ ಹಿಡಿದುಕೊಂಡು ಕಲೆ ಇರುವ ಜಾಗದಲ್ಲಿ ಉಜ್ಜಿದರೆ ಆಗ ಕಲೆಗಳು ಹೊರಟುಹೋಗುತ್ತದೆ.       ಮನೆಯ ಅಂದ ಹೆಚ್ಚಿಸುವ ಪೀಠೋಪಕರಣಗಳ ಆಯ್ಕೆ ಹೀಗಿರಲಿ...

ಹೊಳಪು ಉಳಿಸಿಕೊಳ್ಳಿ

ಚಳಿಗಾಲದಲ್ಲಿ ಇದನ್ನು ಮಾಡಿದರೆ ಆಗ ಹೊಳಪು 6-7 ತಿಂಗಳ ಕಾಲ ಹಾಗೆ ಉಳಿದುಕೊಳ್ಳುತ್ತದೆ. ಕಾರ್ನುಬಾ ಮೇಣದಿಂದ ಮರದ ಪೀಠೋಪಕರಣಗಳಿಗೆ ಪಾಲಿಶ್ ಮಾಡಿಕೊಳ್ಳಿ. ಪಾಲಿಶ್ ಮಾಡಲು ಮೃಧುವಾದ ಬಟ್ಟೆಯನ್ನು ಬಳಸಿಕೊಳ್ಳಿ. ಇದಕ್ಕಾಗಿ ಸ್ವಲ್ಪ ಸಮಯ ಬೇಕಾಗುತ್ತದೆ. ಆದರೆ ಚಳಿಗಾಲದಲ್ಲಿ ನಿಮ್ಮ ಪೀಠೋಪಕರಣಗಳಿಗೆ ಹೊಳಪನ್ನು ನೀಡುತ್ತದೆ.

English summary

Taking Care Of Wood In Winter

Do you have wooden interior in your home? Then, you need proper tips of taking care of wood in winter. Actually, wooden furniture needs special care in every season. Summer care tips are different from winter. Again, you should be careful to keep your wooden furniture in a good condition during the rainy season.
Subscribe Newsletter