For Quick Alerts
ALLOW NOTIFICATIONS  
For Daily Alerts

ಹೊಸ ಮನೆಯ ವಾಸ್ತವ್ಯಕ್ಕಾಗಿ ಇಲ್ಲಿದೆ ಸರಳ ಟಿಪ್ಸ್

By Jaya subramanya
|

ಹೊಸ ಮನೆಗೆ ಕಾಲಿಡುತ್ತಿದ್ದೀರಿ ಎಂದಾದಲ್ಲಿ ಆ ಪುಟ್ಟ ಗೂಡಿನಲ್ಲಿ ನಿಮ್ಮದೇ ಆದ ಸ್ವರ್ಗವನ್ನು ಹೊಂದಿಸಬೇಕಾಗುತ್ತದೆ ಅಲ್ಲವೇ? ನಿಮಗೆ ಅನುಕೂಲಕರವಾಗಿ ನಿಮ್ಮ ಹೊಸ ಮನೆಯನ್ನು ಮಾರ್ಪಡಿಸುವ ಮುನ್ನ ನಿಮಗೆ ಬೇಕಾದ ಸೌಲಭ್ಯಗಳನ್ನು ಇಲ್ಲಿ ನೀವು ಜೋಡಿಸಬೇಕು ಅಲ್ಲವೇ? ಹಳೆಯ ಮನೆಯಿಂದ ಹೊಸ ಮನೆಗೆ ನೀವು ಬಂದಾಗ ನಿಮಗೆ ಇನ್ನಷ್ಟು ಹೊಸ ಸ್ಥಳ ದೊರಕಿರಬಹುದು.

ಆ ಸಂದರ್ಭದಲ್ಲಿ ಇನ್ನಷ್ಟು ಆರಾಮದಾಯಕವಾಗಿ ವಸ್ತುಗಳನ್ನು ನಿಮಗೆ ಜೋಡಿಸಿಡಬಹುದು ಅಲ್ಲವೇ? ಹಳೆಯ ಮನೆಯಿಂದ ಹೊಸ ಮನೆಗೆ ಕಾಲಿಡುವಾಗ ಅಲ್ಲಿ ಯಾವುದೂ ಗೊಂದಲವನ್ನುಂಟು ಮಾಡಬಾರದು. ಎಲ್ಲವೂ ಯಥಾ ಪ್ರಕಾರವೇ ಇರಬೇಕು. ಮನೆಯನ್ನು ಸುಂದರವಾಗಿ ಜೋಡಿಸುವುದೂ ಒಂದು ಕಲೆಯಾಗಿದ್ದು ಇದ್ದ ವ್ಯವಸ್ಥೆಗಳನ್ನೇ ಬಳಸಿಕೊಂಡು ಈ ಕೆಲಸವನ್ನು ಸುಸೂತ್ರವಾಗಿ ನೆರವೇರಿಸಿಕೊಳ್ಳಬಹುದಾಗಿದೆ. ಮನೆಯಲ್ಲಿರುವ ಸೌಲಭ್ಯ ಮತ್ತು ಸುತ್ತಲಿನ ವಾತಾವರಣವನ್ನು ನೋಡಿಕೊಂಡು ಮನೆಯನ್ನು ಹೊಂದಿಸಬಹುದಾಗಿದೆ. ಮನೆ ಸಣ್ಣದಾದರೂ ಪರವಾಗಿಲ್ಲ, ಅಚ್ಚುಕಟ್ಟಾಗಿ ಇಟ್ಟುಕೊಳ್ಳಿ

ಇಂದಿನ ಲೇಖನದಲ್ಲಿ ನಿಮ್ಮ ಹೊಸ ಮನೆಯನ್ನು ಹೇಗೆ ಸುಂದರಗೊಳಿಸಬೇಕು ಎಂಬುದನ್ನು ಅತಿ ಸರಳ ವಿಧಾನಗಳಲ್ಲಿ ನಾವು ತಿಳಿಸುತ್ತಿದ್ದೇವೆ. ನಿಮ್ಮ ವೈಯಕ್ತಿಕ ಸ್ಥಳವಾಗಿರುವ ನಿಮ್ಮ ಮನೆಯನ್ನು ವಿಶೇಷವಾಗಿಸಲು ನೀವು ಬಯಸುತ್ತೀರಿ ಅಲ್ಲವೇ? ಹಾಗಿದ್ದರೆ ಇಲ್ಲೂ ನೀವು ಕೆಲವೊಂದು ಟಿಪ್ಸ್‌ಗಳನ್ನು ಅನುಸರಿಸಬೇಕಾಗಿದ್ದು ಇದರ ಮೂಲಕ ಮನೆಯನ್ನು ಅಂದಗಾಣಿಸಬಹುದಾಗಿದೆ. ಹಾಗಿದ್ದರೆ ಹೊಸ ಮನೆಯ ಅಂದವನ್ನು ದುಪ್ಪಟ್ಟುಗೊಳಿಸುವ ಟಿಪ್ಸ್‌ಗಳನ್ನು ನಾವು ಇಲ್ಲಿ ತಿಳಿಸುತ್ತಿದ್ದು ಇದನ್ನು ಬಳಸಿಕೊಂಡು ಮನೆಯ ಜೋಡಣೆಯನ್ನು ನಿಮಗೆ ಮಾಡಿಕೊಳ್ಳಬಹುದಾಗಿದೆ.

ಸಾಮಾನು ಜೋಡಣೆ

ಸಾಮಾನು ಜೋಡಣೆ

ನೀವು ಪ್ಯಾಕಿಂಗ್ ಮಾಡಲು ಆರಂಭಿಸಿದಾಗ, ನಿಮ್ಮ ಬಳಿ ಸಾಕಷ್ಟು ಬಾಕ್ಸ್‌ಗಳಿವೆ ಎಂಬುದನ್ನು ಖಾತ್ರಿಪಡಿಸಿ. ಬಾಕ್ಸ್‌ನಲ್ಲಿ ಪ್ಯಾಕ್ ಮಾಡಿದ ನಂತರ ಅದರ ಮೇಲೆ ಹೆಸರು ಬರೆಯಿರಿ. ನಿಮ್ಮ ಹೊಸ ಮನೆಗೆ ಹೋದಾಗ ಇದು ನಿಮಗೆ ಸಹಾಯ ಮಾಡುತ್ತದೆ. ಇದರಿಂದ ಸುಲಭವಾಗಿ ನಿಮ್ಮ ಹೊಸ ಮನೆಗೆ ನಿಮಗೆ ಕಾಲಿಡಬಹುದಾಗಿದೆ ಅಂತೆಯೇ ವಸ್ತುಗಳನ್ನು ಹುಡುಕುವ ಕಷ್ಟ ಕೂಡ ಇರುವುದಿಲ್ಲ.

ಹೊಸ ಮನೆಯ ಕೆಲಸ ಸಂಪೂರ್ಣ ಮುಗಿದಿರಲಿ

ಹೊಸ ಮನೆಯ ಕೆಲಸ ಸಂಪೂರ್ಣ ಮುಗಿದಿರಲಿ

ಇದು ಹೆಚ್ಚು ಮುಖ್ಯವಾಗಿರುವ ಸಲಹೆಯಾಗಿದೆ. ನಿಮ್ಮ ಹೊಸ ಮನೆಗೆ ಕಾಲಿಡುವ ಮುನ್ನ, ಇಲ್ಲಿ ಕೆಲಸ ಸಂಪೂರ್ಣವಾಗಿದೆ ಎಂಬುದನ್ನು ಕಂಡುಕೊಳ್ಳಿ. ಬಳಸಲು ಸಿದ್ಧವಾಗಿರುವ ಮನೆಗೆ ಹೋಗಿ. ಮನೆ ಅಪೂರ್ಣವಾಗಿ ಅಲ್ಲಿಗೆ ನೀವು ಕಾಲಿಡುತ್ತಿದ್ದೀರಿ ಎಂದಾದಲ್ಲಿ ನಿಮ್ಮ ವಸ್ತುಗಳು ಹಾನಿಗೆ ಒಳಗಾಗಬಹುದು.

ಸರದಿ ಪ್ರಕಾರ ಪ್ಯಾಕ್ ಮಾಡಿ

ಸರದಿ ಪ್ರಕಾರ ಪ್ಯಾಕ್ ಮಾಡಿ

ನಿಮ್ಮ ಪ್ಯಾಕಿಂಗ್ ಅನ್ನು ಸರಳವಾಗಿಸಲು, ಸರದಿ ಪ್ರಕಾರ ಈ ಕೆಲಸವನ್ನು ಮುಗಿಸಿಕೊಳ್ಳಿ. ಹೊಸ ಮನೆಯಲ್ಲಿ ಅನ್‌ಪ್ಯಾಕ್ ಮಾಡುವಾಗ ಈ ವಿಧಾನ ನಿಮಗೆ ಸಹಾಯ ಮಾಡುತ್ತದೆ.

ಸಹಾಯ ಪಡೆದುಕೊಳ್ಳಿ

ಸಹಾಯ ಪಡೆದುಕೊಳ್ಳಿ

ಹೆಚ್ಚಿನ ಜನರು ತಮ್ಮಷ್ಟಕ್ಕೇ ಪ್ಯಾಕಿಂಗ್ ಮತ್ತು ಸರಿಸುವ ಕೆಲಸವನ್ನು ಮಾಡುತ್ತಾರೆ. ನಿಮ್ಮ ಕುಟುಂಬದ ಬಳಿ ಸಹಾಯವನ್ನು ಪಡೆದುಕೊಂಡು ಪ್ಯಾಕಿಂಗ್ ಕೆಲಸವನ್ನು ಸುಲಭಗೊಳಿಸಬಹುದಾಗಿದೆ. ಸಹಾಯ ಕೇಳಲು ಹಿಂಜರಿಯದಿರಿ. ನಿಮ್ಮ ಸಹಾಯಕ್ಕೆ ಇನ್ನಷ್ಟು ಜನರಿದ್ದಾರೆ ಎಂದಾದಲ್ಲಿ ಪ್ಯಾಕಿಂಗ್ ಕೆಲಸ ಆದಷ್ಟು ಸುಲಭವಾಗಿ ಮುಗಿಸಬಹುದಾಗಿದೆ.

ಫ್ರಾಗೈಲ್ ಬಾಕ್ಸ್‌ಗಳು

ಫ್ರಾಗೈಲ್ ಬಾಕ್ಸ್‌ಗಳು

ಇದು ಅತಿ ಮುಖ್ಯವಾದ ತಲೆಯಲ್ಲಿಟ್ಟುಕೊಳ್ಳಬೇಕಾದ ಅಂಶವಾಗಿದೆ. ಹೊಸ ಮನೆಗೆ ಹೋಗುವಾಗ, ನಿಮ್ಮ ಫ್ರಾಗೈಲ್ ಬಾಕ್ಸ್‌ಗಳನ್ನು ಪಕ್ಕಕ್ಕಿರಿಸಿಕೊಳ್ಳಿ. ಇದನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ.ನಿಮ್ಮದೇ ಸ್ವಂತ ವಾಹನವನ್ನು ಬಳಸುತ್ತಿದ್ದೀರಿ ಎಂದಾದಲ್ಲಿ, ಈ ಬಾಕ್ಸ್‌ಗಳನ್ನು ನಿಮ್ಮ ಕಾರಿನಲ್ಲಿ ಇರಿಸಿಕೊಳ್ಳಬಹುದು ಮತ್ತು ಬೇರೆ ಸಾಗಣೆ ವಾಹನಗಳ ಅಪಾಯಗಳನ್ನು ತಡೆಗಟ್ಟಬಹುದು.

English summary

Moving Into A New Home: 5 Tips To Remember

Moving into a new home? Well, firstly, congratulations! Before you make yourself comfortable in your humble abode, there are certain things that you should do to make your home a beautiful place to live in. Some of these tips that are mentioned here will help you to make moving more organised and easier.
X
Desktop Bottom Promotion