Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಹೊಸ ಟ್ರಿಕ್ಸ್: ಟೈಲ್ಸ್ ನೆಲದ ಸ್ವಚ್ಛತೆಗೆ ನೈಸರ್ಗಿಕ ಟಿಪ್ಸ್
ಮನೆಯ ಸ್ವಚ್ಛತೆಯು ಎಲ್ಲಾ ಗೃಹಿಣಿಯರ ಮುಖ್ಯ ಕರ್ತವ್ಯಗಳಲ್ಲಿ ಒಂದಾಗಿದೆ. ಅದರಲ್ಲೂ ನೆಲದ ಟೈಲ್ಸ್ ಅನ್ನು ಕಲೆ ಕೊಳೆ ಇಲ್ಲದೆ ಸ್ವಚ್ಛವಾಗಿರಿಸಿಕೊಳ್ಳುವುದು ಕೊಂಚ ಜವಬ್ದಾರಿಯ ಕೆಲಸವೇ ಆಗಿದೆ. ನಿಮ್ಮ ಮನೆಯ ಹಾಲ್ನಿಂದ ಹಿಡಿದು ಅಡುಗೆ ಮನೆ ಅಂತೆಯೇ ಬಾತ್ರೂಮ್ನಲ್ಲೂ ಟೈಲ್ಸ್ ಹೊಂದಿರುತ್ತೀರಿ. ನಿತ್ಯವೂ ಬಳಸುವಾಗ ಇವುಗಳಲ್ಲಿ ಕೊಳೆ ತುಂಬಿ ತಮ್ಮ ಹೊಳಪನ್ನು ಕಳೆದುಕೊಂಡು ಬಿಡುತ್ತವೆ.
ಟೈಲ್ಸ್ ಅನ್ನು ಹೊಳೆಯಿಸುವಂತೆ ಮಾಡುವ ರಾಸಾಯನಿಕ ಉತ್ಪನ್ನಗಳು ಮಾರುಕಟ್ಟೆಯಲ್ಲಿ ದೊರೆಯುತ್ತದಾದರೂ ಇವುಗಳಿಂದ ಹಾನಿಯೇ ಅಧಿಕವಾಗಿರುತ್ತದೆ. ನಿತ್ಯವೂ ಈ ಉತ್ಪನ್ನಗಳ ಬಳಕೆ ಟೈಲ್ಸ್ ಎದ್ದು ಬರುವಂತೆ ಮಾಡಬಹುದು. ಅದಾಗ್ಯೂ ಹೆಚ್ಚು ವೆಚ್ಚವನ್ನು ಮಾಡದೇ ನೈಸರ್ಗಿಕವ ವಿಧಾನದಲ್ಲಿ ಟೈಲ್ಸ್ಗಳನ್ನು ಹೊಳೆಯಿಸುವ ವಿಧಾನವನ್ನು ನಿಮ್ಮದಾಗಿಸಿಕೊಳ್ಳುವುದು ಹೇಗೆ ಎಂಬುದನ್ನೇ ಇಂದಿನ ಲೇಖನದಲ್ಲಿ ತಿಳಿಸಲಿರುವೆವು. ಸ್ವಚ್ಛತೆಯೇ ಮನೆಯ ನಿಜವಾದ ಶಕ್ತಿ

ಅಮೋನಿಯಾ
ಬಿಸಿ ನೀರಿಗೆ 1/4 ಕಪ್ನಷ್ಟು ಅಮೋನಿಯಾವನ್ನು ಸೇರಿಸಿ. ಬಟ್ಟೆಯನ್ನು ತೆಗೆದುಕೊಂಡು ಈ ದ್ರಾವಣದಲ್ಲಿ ಬಟ್ಟೆಯನ್ನು ಅದ್ದಿ ನಂತರ ಟೈಲ್ಸ್ ಒರೆಸಿ. ನೆಲದ ಹಿಂದಿನ ಹೊಳೆಯುವಿಕೆಯನ್ನು ಅಮೋನಿಯಾ ಮರಳಿ ತರುತ್ತದೆ ಅಂತೆಯೇ ಕೀಟಾಣುಗಳನ್ನು ತಡೆಗಟ್ಟುತ್ತದೆ.
ಬೋರಾಕ್ಸ್, ವಿನೇಗರ್ ಮತ್ತು ಅಮೋನಿಯಾ
ನಿಮ್ಮ ಟೈಲ್ಸ್ ನೆಲದಲ್ಲಿ ಕೊಳೆ ಗಾಢವಾಗಿ ಅಂಟಿಕೊಂಡಿದೆ ಎಂದಾದಲ್ಲಿ ಬೋರಾಕ್ಸ್, ವಿನೇಗರ್ ಮತ್ತು ಅಮೋನಿಯಾ ಮ್ಯಾಜಿಕ್ ಅನ್ನೇ ಮಾಡಲಿದೆ. 1/4 ಕಪ್ ಬೋರಾಕ್ಸ್, ಅರ್ಧ ಕಪ್ ವಿನೇಗರ್ ಮತ್ತು ಅರ್ಧ ಕಪ್ ಅಮೋನಿಯಾವನ್ನು ನೀರಿಗೆ ಹಾಕಿ. ಈ ದ್ರಾವಣವನ್ನು ಬಳಸಿಕೊಂಡು ಮನೆಯ ಟೈಲ್ಸ್ ನೆಲವನ್ನು ಒರೆಸಿಕೊಳ್ಳಿ ಹಿಂದಿನ ಹೊಳಪು ನಿಮ್ಮ ಟೈಲ್ಸ್ ನೆಲಕ್ಕೆ ಮರಳಿ ಬರುತ್ತದೆ.
ವಿನೇಗರ್
ಒಂದು ಗ್ಯಾಲನ್ ಬಿಸಿ ನೀರನ್ನು ತೆಗೆದುಕೊಂಡು ಬಿಳಿ ಡಿಸ್ಟೆಲ್ಡ್ ವಿನೇಗರ್ ಅನ್ನು ಒಂದು ಭಾಗದಷ್ಟು ಹಾಕಿ. ದ್ರಾವಣವನ್ನು ಚೆನ್ನಾಗಿ ಕಲಸಿಕೊಳ್ಳಿ, ಇದರಿಂದ ವಿನೇಗರ್ ನೀರಿನಲ್ಲಿ ಚೆನ್ನಾಗಿ ಮಿಶ್ರಗೊಳ್ಳುತ್ತದೆ. ನಿಮ್ಮ ನೆಲದ ಟೈಲ್ಸ್ ಅನ್ನು ಸ್ಯಾನಿಟೈಸ್ ಮಾಡುವ ವಿನೇಗರ್ ಹೊಳೆಯುವಂತೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನೆಲ ಒರೆಸುವ ಬಟ್ಟೆಯನ್ನು ತೆಗೆದುಕೊಂಡು ದ್ರಾವಣದಲ್ಲಿ ಅದನ್ನು ಹಿಂಡಿ ನೆಲವನ್ನು ಒರೆಸಿಕೊಳ್ಳಿ. ಮನೆಯ ಸ್ವಚ್ಛತೆಗೆ, ಒಂದಿಷ್ಟು ನೈಸರ್ಗಿಕ ಪರಿಹಾರೋಪಾಯ
ಬೇಕಿಂಗ್ ಸೋಡಾ
ನಿಮ್ಮ ಟೈಲ್ಸ್ ನೆಲ ಗಾಢವಾದ ಕಲೆಯನ್ನು ಹೊಂದಿದೆ ಎಂದಾದಲ್ಲಿ, ಬೇಕಿಂಗ್ ಸೋಡಾ ಅತ್ಯುತ್ತಮವಾದುದು. ಅರ್ಧ ಪ್ರಮಾಣದಷ್ಟು ಬಿಸಿ ನೀರಿಗೆ ಅಷ್ಟೇ ಪ್ರಮಾಣದ ಬೇಕಿಂಗ್ ಸೋಡಾವನ್ನು ಬೆರೆಸಿಕೊಳ್ಳಿ ದಪ್ಪನೆಯ ಪೇಸ್ಟ್ ತಯಾರಿಸಿಕೊಳ್ಳಿ.
ಈಗ ಟೂತ್ ಬ್ರಶ್ ತೆಗೆದುಕೊಂಡು ದ್ರಾವಣಕ್ಕೆ ಅದನ್ನು ಮುಳುಗಿಸಿಕೊಳ್ಳಿ ನಂತರ ಕಲೆ ಇರುವ ಭಾಗವನ್ನು ಉಜ್ಜಿ. 10 ನಿಮಿಷಗಳ ಕಾಲ ಇದನ್ನು ಹಾಗೆಯೇ ಬಿಡಿ. ನಂತರ ಬಿಸಿ ನೀರಿನಿಂದ ನೆಲವನ್ನು ತೊಳೆದುಕೊಳ್ಳಿ. ಸಂಪೂರ್ಣವಾಗಿ ಕಲೆ ಟೈಲ್ಸ್ನಿಂದ ಹೋಗುವವರೆಗೂ ಈ ವಿಧಾನವನ್ನು ಅನುಸರಿಸಿ.
ನೀರು ಮತ್ತು ಹೈಡ್ರೋಜನ್ ಫೆರಾಕ್ಸೈಡ್
ನೀರು ಮತ್ತು ಹೈಡ್ರೋಜನ್ ಫೆರಾಕ್ಸೈಡ್ ಕೂಡ ಟೈಲ್ಸ್ ಕಲೆಯನ್ನು ಹೋಗಲಾಡಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಲಿದೆ. ಸ್ಪ್ರೇ ಬಾಟಲಿಗೆ ಈ ದ್ರಾವಣವನ್ನು ಹಾಕಿಕೊಂಡು ಕಲೆ ಇರುವ ಭಾಗಕ್ಕೆ ಸಿಂಪಡಿಸಿಕೊಳ್ಳಿ, 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ಬೇಕಾದಲ್ಲಿ ಇದೇ ವಿಧಾವನ್ನು ಅನುಸರಿಸಿ. ಮನೆಯ ಸ್ವಚ್ಛತೆ- ಮೋಡಿ ಮಾಡುವ ಅಂಟುವಾಳ ಕಾಯಿ!
ಮರದ ನೆಲ ಕ್ಲೀನರ್
ನೀವು ಮರದ ನೆಲ ಟೈಲ್ಸ್ ಅನ್ನು ಹೊಂದಿದ್ದೀರಿ ಎಂದಾದಲ್ಲಿ, ಕ್ಲೀನರ್ ಅನ್ನು ಬಳಸಿಕೊಂಡು ನೆಲವನ್ನು ಹೊಳೆಯಿಸಿಕೊಳ್ಳಬಹುದಾಗಿದೆ. ವುಡನ್ ಪ್ಲೋರ್ ಕ್ಲೀನರ್ನಲ್ಲಿ ಬಟ್ಟೆಯನ್ನು ಮುಳುಗಿಸಿಕೊಂಡು ಟೈಲ್ಸ್ ಸ್ವಚ್ಛಮಾಡಿಕೊಳ್ಳಿ.
ಪಾತ್ರೆ ತೊಳೆಯುವ ಸೋಪು
ಪಾತ್ರೆ ತೊಳೆಯುವ ಸೋಪಿನ ಚಿಕ್ಕ ತುಂಡನ್ನುನೆಲ ಶುದ್ಧೀಕರಿಸಲು ತಗೆದುಕೊಂಡ ನೀರಿನೊಂದಿಗೆ ಸೇರಿಸಿ ಜಿಡ್ದಾದ ನೆಲವನ್ನು ಒರೆಸಿರಿ. ಇದರಿಂದ ಕಲೆ, ಕೊಳೆ ಮಾಯವಾಗುತ್ತದೆ. ಮೃದುವಾದ ಸ್ಪಾಂಜ್ ಅನ್ನು ಬಳಸಿಕೊಂಡು ನೆಲವನ್ನು ಸ್ವಚ್ಛಮಾಡಿ.



Click it and Unblock the Notifications



