For Quick Alerts
ALLOW NOTIFICATIONS  
For Daily Alerts

ಬಾತ್‌ರೂಮ್‌‌ ಸಿಂಪಲ್ ಆಗಿದ್ದರೂ ಪರವಾಗಿಲ್ಲ, ಸ್ವಚ್ಛವಾಗಿರಲಿ

|

ಸಾಮಾನ್ಯವಾಗಿ ಒಂದು ಮನೆಯ ಸ್ವಚ್ಛತೆಯನ್ನು ಅವರ ಶೌಚಾಲಯದ ಸ್ಥಿತಿಯ ಮೂಲಕ ಅಳೆಯುವುದು ಹಿರಿಯರು ಅನುಸರಿಸಿಕೊಂಡು ಬಂದಂತಹ ರೀತಿ. ಏಕೆಂದರೆ ಮನೆಯನ್ನು ಚೊಕ್ಕಟವಾಗಿಟ್ಟುಕೊಳ್ಳಲು ಸಾಕಷ್ಟು ಸಮಯಾವಕಾಶ ದೊರಕದೇ ಇದ್ದರೂ ಶೌಚಾಲಯವನ್ನು ಕಡ್ಡಾಯವಾಗಿ ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಮನೆಯವರು ವಹಿಸುವ ಕಾಳಜಿಯನ್ನು ಹಿರಿಯರು ಗಮನಿಸುತ್ತಾರೆ. ಮನೆ ಎಂದರೆ ಎಲ್ಲರಿಗೂ ತಮ್ಮ ಪಾಲಿನ ಸ್ವರ್ಗವಾಗಿದೆ.

ದಿನದ ಜಂಜಾಟಗಳಿಂದ ಸಂಜೆ ಮನೆಗೆ ಹಿಂದಿರುಗಿದ ಬಳಿಕ ಇಡಿಯ ಮನೆಯನ್ನು ಸ್ವಚ್ಛಗೊಳಿಸಲು ತ್ರಾಣವಿಲ್ಲದಿದ್ದರೂ ಶೌಚಾಲಯವನ್ನು ಮಾತ್ರ ಕಡ್ಡಾಯವಾಗಿ ದಿನಕ್ಕೊಮ್ಮೆಯಾದರೂ ಸ್ವಚ್ಛಗೊಳಿಸಲೇಬೇಕು. ಆಗಲೇ ದುರ್ಗಂಧದಿಂದ ಪೂರ್ಣವಾಗಿ ಮುಕ್ತಿ ದೊರಕುತ್ತದೆ.

ಶೌಚಾಲಯದಲ್ಲಿ ಸೋಪು, ಶೇವಿಂಗ್ ಕ್ರೀಮ್, ಶಾಂಪೂ, ಸುಗಂಧ ಪೂಸುವ ಸಾಧನ(room freshener) ಇತ್ಯಾದಿಗಳ ಸಂಯುಕ್ತ ಗಂಧಗಳು ಒಂದು ವಿಚಿತ್ರವಾದ ವಾಸನೆಯನ್ನು ಹೊರಡಿಸುತ್ತಿರುತ್ತದೆ. ಇದು ಕೆಲವೊಮ್ಮೆ ಸಹಿಸಲಸಾಧ್ಯವಾಗುತ್ತದೆ. ಆದರೆ ಇದನ್ನು ನಿವಾರಿಸಲು ಹಲವು ಸುಲಭ ವಿಧಾನಗಳಿವೆ. ಇದಕ್ಕೆ ಮಾರುಕಟ್ಟೆಯಲ್ಲಿ ದೊರಕುವ ದುಬಾರಿ ಬೆಲೆಯ ಮಾರ್ಜಕಗಳ ಅಗತ್ಯವಿಲ್ಲ. ಮನೆಯಲ್ಲಿಯೇ ಇರುವ ಸುಲಭ ಸಾಮಾಗ್ರಿಗಳಿಂದ ಮತ್ತು ಕೊಂಚ ಕಾಳಜಿಯಿಂದ ನಿಮ್ಮ ಶೌಚಾಲಯವನ್ನು ಸಂಪೂರ್ಣವಾಗಿ ದುರ್ಗಂಧದಿಂದ ಮುಕ್ತಗೊಳಿಸಬಹುದು.

Ways To Remove Bad Smell From Bathroom

ಒದ್ದೆ ಬಟ್ಟೆಗಳನ್ನು ಶೌಚಾಲಯದಲ್ಲಿ ಬಿಡದಿರುವುದು, ಬಾಗಿಲನ್ನು ಕೆಲಸಮಯ ತೆರೆದಿಡುವುದು, ಎಕ್ಸ್ ಹಾಸ್ಟ್ ಫ್ಯಾನ್ ಹಾಕುವುದು ಮೊದಲಾದವು ಕೆಲವು ವಿಧಾನಗಳಾಗಿವೆ. ಆದರೆ ಇನ್ನೂ ಫಲಪ್ರದವಾದ ಕೆಲವು ಸುಲಭ ಉಪಾಯಗಳನ್ನು ಕೆಳಗಿನ ನೀಡಲಾಗಿದೆ: ಮನೆಯ ಬಾತ್‌ರೂಮ್‌‌ ಸ್ವಲ್ಪ ದೊಡ್ಡದಾಗಿ ಕಾಣುವಂತೆ ಮಾಡಬೇಕೇ?

ಒದ್ದೆಯಾದ ಬಟ್ಟೆಗಳನ್ನು ಶೌಚಾಲಯದಲ್ಲಿ ಇಟ್ಟುಕೊಳ್ಳಬೇಡಿ
ನಿಮಗೆ ಬೇಕಾದ ವಸ್ತುಗಳನ್ನು ಒಂದು ಕಡೆ ಇಡಿ. ನಿಮ್ಮ ಬಟ್ಟೆಗಳನ್ನೆಲ್ಲ ಒಂದು ಕಡೆ ಇಟ್ಟುಕೊಳ್ಳಲು ಒಂದು ಬಕೆಟ್ ಅಥವಾ ಟಬ್ ಅನ್ನು ಇಡಿ. ನಿಮ್ಮ ಬಟ್ಟೆಗಳನ್ನು ಶೌಚಾಲಯದಲ್ಲಿ ಎಲ್ಲೆಂದರಲ್ಲಿ ಹಾಕಬೇಡಿ. ಒಗೆಯದ ಅಥವಾ ಒದ್ದೆಯಾದ ಬಟ್ಟೆಗಳನ್ನು ಶೌಚಾಲಯದಲ್ಲಿ ತುಂಬಾ ದಿನ ಇಟ್ಟುಕೊಳ್ಳಬೇಡಿ. ಏಕೆಂದರೆ ಇವುಗಳು ದುರ್ವಾಸನೆಗೆ ಎಡೆ ಮಾಡಿಕೊಡುತ್ತವೆ.

ಕಿಟಕಿಗಳನ್ನು ತೆರೆದಿಡಿ
ಸಾಮಾನ್ಯವಾಗಿ ಎಲ್ಲಾ ಶೌಚಾಲಯದಲ್ಲಿಯೂ ಕಿಟಕಿಯನ್ನು ನೀಡಲಾಗಿದ್ದರೂ ಕೆಲವೊಮ್ಮೆ ದುರ್ಗಂಧದ ಇದರ ಮೂಲಕ ಹೊರಹೋಗಲು ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ದುರ್ಗಂಧ ಹಾಗೆ ಉಳಿದು ಬಿಡುತ್ತದೆ. ಇದಕ್ಕಾಗಿ ನೀವು ಮನೆಯಲ್ಲಿರದ ಸಮಯದಲ್ಲಿ ಶೌಚಾಲಯದ ಬಾಗಿಲು ಮತ್ತು ಕಿಟಕಿಗಳನ್ನು ಪೂರ್ಣವಾಗಿ ತೆರೆದಿಟ್ಟು ಹೋಗುವುದರಿಂದ ತಾಜಾಹವೆ ಒಳಬರುತ್ತದೆ ಮತ್ತು ದುರ್ಗಂಧ ಕಿಟಕಿಯ ಮೂಲಕ ಹೊರಹೋಗುತ್ತದೆ.

ಸುಗಂಧ ಪೂಸುವ ಸಾಧನ(room freshener) ಬಳಸಿ
ಇದರಿಂದ ಹೊರಹೊಮ್ಮುವ ಕಣಗಳು ದುರ್ಗಂಧ ಸೂಸುವ ಕಣಗಳ ಜೊತೆ ಸಂಯೋಜನೆ ಹೊಂದಿ ವಾಸನೆಯಿಲ್ಲದ ಕಣಗಳಾಗಿ ಹೊರಹೋಗುವ ಕ್ಷಮತೆ ಪಡೆದಿವೆ. ಇದನ್ನು ಸಿಂಪಡಿಸುವ ಮೂಲಕ ದುರ್ಗಂಧವನ್ನು ನಿಮಿಷಗಳಲ್ಲಿಯೇ ನಿವಾರಿಸಬಹುದು. ಇನ್ನೂ ಉತ್ತಮ ಎಂದರೆ ಕಾಲಕಾಲಕ್ಕೆ ತನ್ನಿಂತಾನೇ ಸಿಂಪಡಿಸುವ ಒಂದು ಯಂತ್ರವನ್ನು ಅಳವಡಿಸುವುದು. ನಿಮಗಿಷ್ಟವಾದ ಯಾವುದೇ ಸುಗಂಧವನ್ನು ಆರಿಸಬಹುದಾದರೂ ಶೌಚಾಲಯಕ್ಕೆ ನೀಲಗಿರಿ ಮತ್ತು ಆಕ್ವಾ ಸುಗಂಧಗಳು ಹೆಚ್ಚು ಸೂಕ್ತವಾಗಿವೆ.

ಆಗಾಗ್ಗೆ ಸ್ವಚ್ಛಗೊಳಿಸುತ್ತಲೇ ಇರಿ
ಸರಿಸುಮಾರು ಪ್ರತಿದಿನ ಅಥವಾ ನಿಮಗೆ ಸಾಧ್ಯವಾದಷ್ಟು ಕಾಲಕಾಲಕ್ಕೆ ಶೌಚಾಲಯದ ಕೋಣೆ ಮತ್ತು ವಿಶೇಷವಾಗಿ ಮೂಲೆಗಳನ್ನು ಸ್ವಚ್ಛಗೊಳಿಸುತ್ತಾ ಇರಿ. ವಾರಕ್ಕೊಮ್ಮೆ ಸಂಪೂರ್ಣವಾಗಿ ತೊಳೆದರೆ ಇತರ ದಿನಗಳಲ್ಲಿ ಕೇವಲ ಪ್ರಮುಖವಾದ ಸ್ಥಳಗಳಲ್ಲಿ (ಅಂದರೆ ಶೌಚಾಲಯದಲ್ಲಿರುವ ಇತರ ವಸ್ತುಗಳನ್ನು ಸ್ಥಳಾಂತರಿಸದೇ) ಸ್ವಚ್ಛಗೊಳಿಸಿ. ವಿಶೇಷವಾಗಿ ನೀರು ಹೊರಹೋಗುವ ಸ್ಥಳಗಳಲ್ಲಿ ಯಾವುದೇ ಕಸಕಡ್ಡಿ ತುಂಬಿಕೊಳ್ಳದಂತೆ ಎಚ್ಚರ ವಹಿಸಿ.

ಅಡುಗೆ ಸೋಡಾ ಬಳಸಿ
ಶೌಚಾಲಯದಲ್ಲಿ ಶೌಚದ ಬೋಗುಣಿ (commode) ಸ್ವಚ್ಛಗೊಳಿಸುವುದೇ ಹೆಚ್ಚಿನ ಶ್ರಮ ಬೇಡುವ ಕೆಲಸವಾಗಿದೆ. ಇದಕ್ಕೆ ಇನ್ನೂ ಸುಲಭ ಉಪಾಯವಿದೆ. ಮೊದಲು ನೀರನ್ನು ಫ್ಲಶ್ ಮಾಡಿ ಖಾಲಿ ಮಾಡಿ. ಬಳಿಕ ಒಂದು ಕಪ್ ಅಡುಗೆ ಸೋಡಾ ಹಾಕಿ ಮುಚ್ಚಳ ಮುಚ್ಚಿ. ಒಂದು ಘಂಟೆಯ ಬಳಿಕ ಮುಚ್ಚಳ ಮುಚ್ಚಿಯೇ ಇದ್ದಂತೆ ಮತ್ತೊಮ್ಮೆ ಫ್ಲಶ್ ಮಾಡಿ. ಕಲೆ, ದುರ್ಗಂಧ ಯಾವುದೂ ಇರುವುದಿಲ್ಲ. ಇದು ಸುಲಭವಾದ ಮತ್ತು ಶ್ರಮವಿಲ್ಲದೇ ಸ್ವಚ್ಛಗೊಳಿಸುವ ಒಂದು ವಿಧಾನವಾಗಿದೆ. ಶೌಚಾಲಯವನ್ನು ಹೀಗೆ ಶುಚಿಯಾಗಿಟ್ಟುಕೊಳ್ಳಿ

ಶಿರ್ಕಾ (ವಿನೇಗರ್) ಬಳಸಿ
ಹಲವರಿಗೆ ಶೌಚಾಲಯದಲ್ಲಿ ಧೂಮಪಾನ ಮಾಡುವ ಅಭ್ಯಾಸವಿರುತ್ತದೆ. ಬಳಿಕ ಹೋದವರಿಗೆ ಈ ವಾಸನೆ ಸಹ್ಯವಾಗುವುದಿಲ್ಲ. ಇದಕ್ಕಾಗಿ ಒಂದು ಟವೆಲ್ಲಿನಲ್ಲಿ ಕೊಂಚ ಶಿರ್ಕಾ ಹಾಕಿ ಚೆನ್ನಾಗಿ ಹಿಂಡಿಕೊಳ್ಳಿ. ಈಗ ಟವೆಲನ್ನು ಬಿಡಿಸಿ ಶೌಚಾಲಯದ ಒಳಭಾಗದಲ್ಲೆಲ್ಲಾ ಓಲಾಡಿಸಿ. ಕೆಲವೇ ನಿಮಿಷಗಳಲ್ಲಿ ಇದು ಶೌಚಾಲಯದಲ್ಲಿದ್ದ ಧೂಮದ ದುರ್ಗಂಧವನ್ನು ಹೀರಿಕೊಳ್ಳುತ್ತದೆ.

English summary

Ways To Remove Bad Smell From Bathroom

Basically, your house is a place where you weave your dreams. Such a place must be tidy enough to soothe you after a long, tiring day. So, every nook and corner must be kept clean. Your bathroom needs some special care. This is the place where the dirt of your body exits. You need more ways to remove smell from bathroom. To know more, read on-
X
Desktop Bottom Promotion