For Quick Alerts
ALLOW NOTIFICATIONS  
For Daily Alerts

ಲಿಂಬೆ ಹಣ್ಣು: ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು

By Super
|

ಬೀಜವಿಲ್ಲದಿದ್ದತೆ ಲಿಂಬೆಯಂತಹ ಔಷಧಿ ಇನ್ನೊಂದಿರುತ್ತಿರಲಿಲ್ಲ, ತೊಟ್ಟಿಲ್ಲದಿದ್ದರೆ ಬದನೆಯಂತಹ ವಿಷ ಇನ್ನೊಂದಿರುತ್ತಿರಲಿಲ್ಲ ಎಂದು ಹಳ್ಳಿಯ ಜನತೆ ಗಾಢವಾಗಿ ನಂಬಿದ್ದಾರೆ. ಲಿಂಬೆಯಲ್ಲಿರುವ ಗುಣಗಳನ್ನು ನೂರಾರು ರೂಪದಲ್ಲಿ ಬಳಸಬಹುದು. ಆರೋಗ್ಯದ ವಿಷಯದಲ್ಲಂತೂ ಲಿಂಬೆಯ ಬಳಕೆ ಬಹಳಷ್ಟಿದೆ. ಚರ್ಮದ ಆರೈಕೆ, ಜೀರ್ಣಕ್ರಿಯೆ, ತೂಕ ಇಳಿಸಲು ಹೀಗೇ ಪಟ್ಟಿ ಮಾಡುತ್ತಾ ಹೋದರೆ ಇದರ ಉಪಯೋಗಗಳ ಬಗ್ಗೆ ಒಂದು ಪುಸ್ತಕವನ್ನೇ ಬರೆದುಬಿಡಬಹುದು.

ಮನೆಯ ಸ್ವಚ್ಛತೆಯ ವಿಷಯ ಬಂದಾಗಲೂ ಲಿಂಬೆಯ ಆಮ್ಲೀಯ ಗುಣ ಕೆಲಸಕ್ಕೆ ಬರುತ್ತದೆ. ಇದರಲ್ಲಿರುವ ಸಿಟ್ರಿಕ್ ಆಮ್ಲ ಎಷ್ಟು ಪ್ರಬಲವೆಂದರೆ ಮನೆಯ ನೆಲದಲ್ಲಿ ಅಂಟಿಕೊಂಡಿರುವ ಹಠಮಾರಿ ಬಬ್ಬಲ್ ಗಂನ ಕಲೆಯನ್ನೂ ಸುಲಭವಾಗಿ ತೊಲಗಿಸುತ್ತದೆ.

ಮಾರುಕಟ್ಟೆಯಲ್ಲಿ ಮನೆಯನ್ನು ಸ್ವಚ್ಛಗೊಳಿಸಲು ಹಲವಾರು ಉತ್ಪನ್ನಗಳು ಲಭ್ಯವಿವೆಯಾದರೂ ಇವುಗಳಲ್ಲಿರುವ ಪ್ರಬಲ ರಾಸಾಯನಿಕಗಳು ಕಲೆಗಳನ್ನು ನಿವಾರಿಸಿದ ಬಳಿಕ ಗಾಳಿಯಲ್ಲಿ ಹರಡಿ ಶ್ವಾಸದ ಮೂಲಕ ಮನುಷ್ಯರ ಆರೋಗ್ಯವನ್ನು ಕೆಡಿಸಬಹುದು. ಕೆಲವರಿಗೆ ಇದು ಅಲರ್ಜಿಕಾರಕವಾಗಿದ್ದು ಹಲವು ಹೊಸ ಸಮಸ್ಯೆಗಳನ್ನು ಮೂಡಿಸಬಹುದು. ಸಾಮಾನ್ಯವಾಗಿ ಶ್ವಾಸಕೋಶ ಮತ್ತು ಚರ್ಮವನ್ನು ಈ ಅಲರ್ಜಿಕಾರಕ ಕಣಗಳು ಕಾಡುತ್ತವೆ. ಮನೆಯ ಸ್ವಚ್ಛತೆ- ಮೋಡಿ ಮಾಡುವ ಅಂಟುವಾಳ ಕಾಯಿ!

ಹಣ ಕೊಟ್ಟು ವಿಷವನ್ನು ಸೇವಿಸುವ ಬದಲು ಮನೆಯಲ್ಲಿ ಸದಾ ಲಭ್ಯವಿರುವ ಲಿಂಬೆ ಮತ್ತು ಶಿರ್ಕಾಗಳನ್ನು ನಾವೇಕೆ ಉಪಯೋಗಿಸಬಾರದು? ಈ ಹಾನಿಕಾರಕ ಮತ್ತು ದುಬಾರಿ ಉತ್ಪನ್ನಗಳು ನೀಡುವುದಕ್ಕಿಂತ ಉತ್ತಮವಾದ ಪರಿಣಾಮಗಳನ್ನು ಲಿಂಬೆ ಮತ್ತು ಶಿರ್ಕಾದ ಜೋಡಿ ನೀಡುವುದಾದರೆ ಏಕಾಗಬಾರದು? ನಿಮ್ಮ ಯೋಚನೆಯೂ ಇದೇ ಆದರೆ ಕೆಳಗಿನ ಸ್ಲೈಡ್ ಶೋ ಈ ಜೋಡಿಯನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ಮಾಹಿತಿಯನ್ನು ನೀಡುತ್ತದೆ. ಲಿಂಬೆ ಹಣ್ಣಿನ ಸಿಪ್ಪೆ: ಅದೇನು ಮಾಯೆ, ಅದೇನು ಜಾದೂ!

ಕಿಟಕಿಯನ್ನು ಸ್ವಚ್ಛಗೊಳಿಸಲು ಲಿಂಬೆ ಬಳಸಿ

ಕಿಟಕಿಯನ್ನು ಸ್ವಚ್ಛಗೊಳಿಸಲು ಲಿಂಬೆ ಬಳಸಿ

ಒಂದು ದೊಡ್ಡದಾದ ಲಿಂಬೆಹಣ್ಣನ್ನು ಕತ್ತರಿಸಿ ರಸ ಹಿಂಡಿ ಒಂದು ಮಧ್ಯಮ ಗಾತ್ರದ ಮಗ್ ಅಥವಾ ಕೈಪಾತ್ರೆಯಲ್ಲಿರುವ ನೀರಿಗೆ ಬೆರೆಸಿ. ಇದಕ್ಕೆ ಒಂದು ಚಮಚ ಅಡುಗೆ ಸೋಡಾ ಬೆರೆಸೆ ಚಮಚದಿಂದ ಮಿಶ್ರಗೊಳಿಸಿ. ಈ ದ್ರವದಲ್ಲಿ ಹತ್ತಿಯ ಬಟ್ಟೆಯನ್ನು ಮುಳುಗಿಸಿ ಕೊಳೆಯಾಗಿದ್ದ ಗಾಜಿನ ಕಿಟಕಿ ಮತ್ತು ಕನ್ನಡಿಗಳನ್ನು ಸ್ವಚ್ಛಗೊಳಿಸಿ.

ಕಿಟಕಿಯನ್ನು ಸ್ವಚ್ಛಗೊಳಿಸಲು ಲಿಂಬೆ ಬಳಸಿ

ಕಿಟಕಿಯನ್ನು ಸ್ವಚ್ಛಗೊಳಿಸಲು ಲಿಂಬೆ ಬಳಸಿ

ಮೇಲಿನಿಂದ ಪ್ರಾರಂಭಿಸಿ ಕೆಳಗೆ ಒಮ್ಮುಖವಾಗಿ ಮಾತ್ರ ಒರೆಸಿ, ಸರ್ವಥಾ ಇದರ ವಿರುದ್ಧ ದಿಕ್ಕಿಗೆ ಒರೆಸಬೇಡಿ. ಅಂತೆಯೇ ಎಡದಿಂದ ಬಲಕ್ಕೆ ಅಥವಾ ಬಲದಿಂದ ಎಡಕ್ಕೂ ಒರೆಸಬಹುದು ಆದರೆ ಒಮ್ಮುಖವಾಗಿರುವುದು ಅಗತ್ಯ. ಸುಮಾರು ಐದು ನಿಮಿಷದ ಬಳಿಕ ನವಿರಾದ ಪದರವೊಂದು ಕಂಡೂಕಾಣದಂತಿರುತ್ತದೆ ಇದನ್ನು ಸ್ವಚ್ಛವಾದ ಹತ್ತಿಯ ಬಟ್ಟೆ ಅಥವಾ ಹಳೆಯ ಪತ್ರಿಕೆಯಿಂದ ಒಮ್ಮುಖವಾಗಿ ಒರೆಸಿ, ಕನ್ನಡಿಗಳು ಸ್ಪಟಿಕದಂತೆ ಹೊಳೆಯುತ್ತವೆ.

ಅಡುಗೆಮನೆಯ ಸಿಂಕ್ ಸ್ವಚ್ಛಗೊಳಿಸಲು ಲಿಂಬೆ ಬಳಸಿ

ಅಡುಗೆಮನೆಯ ಸಿಂಕ್ ಸ್ವಚ್ಛಗೊಳಿಸಲು ಲಿಂಬೆ ಬಳಸಿ

ಪಾತ್ರೆ ತೊಳೆದ ನೀರು ಹೊರಹೋಗಲು ಇರುವ ಸಿರಾಮಿಕ್ ಅಥವಾ ಸ್ಟೀಲ್ ನ ಸಿಂಕ್ ನಲ್ಲಿಯೂ ಕೊಂಚಕಾಲದ ಬಳಿಕ ಕೊಳೆ ತುಂಬಿಕೊಳ್ಳುತ್ತದೆ. ಇದಕ್ಕಾಗಿ ಎರಡು ಲಿಂಬೆಗಳನ್ನು ಕತ್ತರಿಸಿ ರಸವನ್ನು ನೇರವಾಗಿ ಸಿಂಕ್ ನ ಮೇಲೆ ಬೀಳುವಂತೆ ಹಿಂಡಿ. ಮುಂದೆ ಓದಿ

ಅಡುಗೆಮನೆಯ ಸಿಂಕ್ ಸ್ವಚ್ಛಗೊಳಿಸಲು ಲಿಂಬೆ ಬಳಸಿ

ಅಡುಗೆಮನೆಯ ಸಿಂಕ್ ಸ್ವಚ್ಛಗೊಳಿಸಲು ಲಿಂಬೆ ಬಳಸಿ

ಈಗ ಕೊಂಚ ಕಲ್ಲುಪ್ಪನ್ನು ಇದರ ಮೇಲೆ ಚಿಮುಕಿಸಿ. ಸುಮಾರು ಐದು ನಿಮಿಷದ ಬಳಿಕ ಹಳೆಯ ಹಲ್ಲುಜ್ಜುವ ಬ್ರಶ್ ಬಳಸಿ ಕೊಳೆ ತುಂಬಿರುವ ಮೂಲೆಗಳನ್ನು ಉಜ್ಜಿ. ನಂತರ ಕೊಂಚವೇ ಬಿಸಿ ಇರುವ ನೀರನ್ನು ಹಾಕಿ ತೊಳೆಯಿರಿ. ಸಿಂಕ್ ಹೊಚ್ಚ ಹೊಸತರಂತೆ ಹೊಳೆಯುತ್ತದೆ.

ಶೌಚಾಲಯದ ಸೀಟ್ ಸ್ವಚ್ಛಗೊಳಿಸಲು

ಶೌಚಾಲಯದ ಸೀಟ್ ಸ್ವಚ್ಛಗೊಳಿಸಲು

ಅತಿಹೆಚ್ಚು ನೈರ್ಮಲ್ಯದ ಅವಶ್ಯಕತೆ ಇರುವ ಶೌಚಾಲಯದ ಕಮೋಡ್ ನ ಕುಳಿತುಕೊಳ್ಳುವ ಕುರ್ಚಿ ಹೊಸತಿದ್ದಾಗ ಬೆಳ್ಳಂಬೆಳ್ಳಗಿದ್ದು ಕಾಲಕಳೆದಂತೆ ಹಳದಿಯಾಗುತ್ತಾ ಹೋಗುತ್ತದೆ. ಇದನ್ನು ಪುನಃ ಮೂಲರೂಪಕ್ಕೆ ತರಲು ಒಂದು ಅಥವಾ ಎರಡು ಲಿಂಬೆಹಣ್ಣುಗಳನ್ನು ನೇರವಾಗಿ ಇದರ ಮೇಲೆ ಹಿಂಡಿ ರಸ ಬೀಳುವಂತೆ ಮಾಡಿ. ಚಿಕ್ಕ ಹತ್ತಿಯುಂಡೆಯಿಂದ ರಸವನ್ನು ಎಲ್ಲೆಡೆಗೆ ಸಮಾನವಾಗಿ ಬರುವಂತೆ ಹರಡಿ.

ಶೌಚಾಲಯದ ಸೀಟ್ ಸ್ವಚ್ಛಗೊಳಿಸಲು

ಶೌಚಾಲಯದ ಸೀಟ್ ಸ್ವಚ್ಛಗೊಳಿಸಲು

ಒಣಗುವ ಮುನ್ನವೇ ಕೊಂಚ ಅಡುಗೆ ಸೋಡಾ ಪುಡಿಯನ್ನು ಈ ರಸ ಹೀರಿಕೊಳ್ಳುವಂತೆ ಚಿಮುಕಿಸಿ. ಒಂದೆರಡು ನಿಮಿಷ ಕಳೆದು ಹಳೆಯ ಬಟ್ಟೆಯೊಂದರಿಂದ ಕೊಂಚವೇ ಒತ್ತಡ ಹಾಕಿ ಒರೆಸಿ. ವಾರಕ್ಕೆರಡು ಬಾರಿ ಈ ವಿಧಾನವನ್ನು ಅನುಸರಿಸುತ್ತಾ ಬಂದರೆ ಶೀಘ್ರವೇ ಮೊದಲಿನ ಬಣ್ಣವನ್ನು ಪಡೆದುಕೊಳ್ಳುತ್ತದೆ.

ಪಾತ್ರೆ ತೊಳೆಯಲು ಲಿಂಬೆಯ ಬಳಕೆ

ಪಾತ್ರೆ ತೊಳೆಯಲು ಲಿಂಬೆಯ ಬಳಕೆ

ಒಂದು ವೇಳೆ ನೀವು ಮಾಂಸಾಹಾರಿಯಾಗಿದ್ದರೆ ಲಿಂಬೆ ನಿಮಗೆ ಅತ್ಯಗತ್ಯವಾಗಿದೆ. ಏಕೆಂದರೆ ನಿಮ್ಮ ಅಡುಗೆಯ ಪಾತ್ರೆಗಳ ತಳಭಾಗದಲ್ಲಿ ಅತಿ ಹೆಚ್ಚು ಕಠಿಣವಾದ ಮತ್ತು ಹಠಮಾರಿಯಾದ ಎಣ್ಣೆಯ ಕಲೆಗಳಿರುತ್ತವೆ. ಇದನ್ನು ಗಸಗಸ ಉಜ್ಜದೇ ಬೇರೆ ಮಾರ್ಗವೇ ಇಲ್ಲ ಎಂದು ತಿಳಿದುಕೊಂಡಿದ್ದರೆ ಇದನ್ನು ಸುಲಭವಾಗಿ ನಿವಾರಿಸಲು ಲಿಂಬೆ ಮತ್ತು ಶಿರ್ಕಾ ನಿಮ್ಮ ಸೇವೆಗೆ ಕಾದಿವೆ. ಸಾಮಾನ್ಯವಾಗಿ ತೊಳೆಯುವಂತೆ ಈ ಪಾತ್ರೆಗಳನ್ನೂ ತೊಳೆದು ನೀರು ಬಸಿದ ಬಳಿಕ ಪ್ರತಿ ಪಾತ್ರೆಯೊಳಗೆ ಐದು ಮಿ.ಲೀ ಶಿರ್ಕಾ ಮತ್ತು ಒಂದು ಲಿಂಬೆಯ ರಸವನ್ನು ಹಾಕಿ ಪಾತ್ರೆಯೊಳಗಿನ ಎಲ್ಲೆಡೆ ತಗಲುವಂತೆ ಹರಡಿ.

ಪಾತ್ರೆ ತೊಳೆಯಲು ಲಿಂಬೆಯ ಬಳಕೆ

ಪಾತ್ರೆ ತೊಳೆಯಲು ಲಿಂಬೆಯ ಬಳಕೆ

ಇದಕ್ಕಾಗಿ ಹತ್ತಿಯುಂಡೆಯ ಅಥವಾ ಬಟ್ಟೆಯ ಚೂರಿನ ನೆರವನ್ನು ಪಡೆಯಬಹುದು. ಐದು ನಿಮಿಷ ಹಾಗೇ ಬಿಡಿ. ಬಳಿಕ ಕೊಂಚ ಬಿಸಿನೀರನ್ನು ಪಾತ್ರೆಯೊಳಕ್ಕೆ ಹಾಕಿ ಉಜ್ಜದೇ ಒಳಗಿನ ದ್ರವ ಕರಗುವಂತೆ ಮಾಡಿ. ನಂತರ ಸೌಮ್ಯವಾದ ಪಾತ್ರೆಯುಜ್ಜುವ ಬ್ರಶ್ ಬಳಸಿ ಒಳಭಾವನ್ನು ಮತ್ತೊಮ್ಮೆ ಒರೆಸಿ ಈ ನೀರೆಲ್ಲಾ ಹೊರಹೋಗುವಂತೆ ಮಾಡಿ. ಇದರಿಂದ ಪಾತ್ರೆಯಲ್ಲಿದ್ದ ಕಲೆ ಮತ್ತು ಹಠಮಾರಿ ಜ್ಜಿಡ್ಡುಗಳ ಜೊತೆಗೇ ಉಳಿದಿದ್ದ ಅಡುಗೆಯ ವಾಸನೆಯೂ ಹೋಗುತ್ತದೆ.

English summary

Tips To Clean Your Home With Lemon

One of the ingredients which is present in every home is lemon. This acidic fruit is one of the many bests you can use to clean your entire home. To get started, all you need to do is get rid of those chemically based products lying around in your home. These harmful products should not be used regularly as it contains properties which could harm your lungs and skin. So, what are you waiting for? Take a look at how you can clean your home with lemon, it will amaze you:
X
Desktop Bottom Promotion