For Quick Alerts
ALLOW NOTIFICATIONS  
For Daily Alerts

ಸೊಳ್ಳೆ ಕಡಿತದಿಂದ ಪಾರಾಗಬೇಕೆ?

By Super
|

"ರಾಮೇಶ್ವರಕ್ಕೆ ಹೋದರು ಶನೇಶ್ಚರನ ಕಾಟ ತಪ್ಪೋದಿಲ್ಲ" ಎಂಬ ಗಾದೆಯಿದೆ. ಈ ಗಾದೆ ಮಾತು ನಮ್ಮ ಸೊಳ್ಳೆಗಳನ್ನು ನೋಡಿಯೇ ರಚಿಸಿರಬೇಕು. ಮನೆ, ಕಚೇರಿ, ಹೋಟೆಲ್ ಅಥವಾ ಹೊರಗೆ ಉದ್ಯಾನವನದಲ್ಲಿ ವಾಯು ವಿಹಾರ ಮಾಡುವಾಗ ಅಥವಾ ಇನ್ನು ಯಾವ ಜಾಗಕ್ಕೆ ಹೋದರು ನಮಗೆ ಸೊಳ್ಳೆಗಳ ಕಾಟ ತಪ್ಪಿದ್ದಲ್ಲ. ಅದರಲ್ಲಿಯೂ ಕಸವೇ ಎತ್ತದ ನಮ್ಮ ಬೆಂಗಳೂರಿನಂತಹ ನಗರಗಳಲ್ಲಿ ಈ ರಕ್ತ ಬೀಜಾಸುರನ ವಂಶಸ್ಥರಾದ ಸೊಳ್ಳೆಗಳು ಸಾಮಾನ್ಯವಾಗಿ ಬಿಟ್ಟಿವೆ. ಹಿಂದೆ ಒಂದು ಕಾಲವಿತ್ತು, " ಆ ಊರಿನಲ್ಲಿ ಸೊಳ್ಳೆಗಳ ಕಾಟವಂತೆ" ಎಂದು ಹೇಳುತ್ತಿದ್ದರು. ಆದರೆ ಇಂದು ಬಹುತೇಕ ಎಲ್ಲಾ ಊರಿನಲ್ಲಿ ಸಂಜೆಯಾದರೆ ಈ ಸೊಳ್ಳೆಗಳದೆ ಕಾರು ಬಾರು.

ನೀವು ಎಷ್ಟೇ ಎಚ್ಚರಿಕೆಯಿಂದರು, ಸೊಳ್ಳೆಗಳ ಕಡಿತದಿಂದ ನಿಮ್ಮ ತ್ವಚೆಯ ಮೇಲೆ ಬೊಬ್ಬೆಗಳು ಉಂಟಾಗುತ್ತಿವೆಯೇ? ಸೊಳ್ಳೆ ಕಡಿತವು ಕೆಲವು ಇರಬಹುದು, ಆದರೆ ಅವುಗಳ ಕಡಿತವು ನಿಮಗೆ ಕೆರೆತವನ್ನುಂಟು ಮಾಡಿ, ಅಸಹನೀಯವಾದ ಭಾದೆಯನ್ನುಂಟು ಮಾಡುತ್ತವೆ. ಅದರಲ್ಲಿಯೂ ನೀವು ಆಯಾಸವಾಗಿ ಮಲಗಲು ಪ್ರಯತ್ನಿಸುತ್ತಿರುವಾಗ ಇವುಗಳೇನಾದರು ಗುಂಯ್ ಗುಟ್ಟಿ, ಕಚ್ಚಿ ನಿದ್ರಾಭಂಗವುಂಟು ಮಾಡಿದರೆ ಹೇಗಿರುತ್ತದೆ ಯೋಚಿಸಿ. ನೀವು ಕೆರೆದುಕೊಳ್ಳುವುದರಿಂದ ನಿಮಗೆ ಸ್ವಲ್ಪ ಮಟ್ಟಿಗೆ ಆರಾಮ ಸಿಗಬಹುದು. ಆದರೆ ಅವುಗಳಿಂದ ನಿಮಗೆ ಉಂಟಾಗುವ ಬಾವುಗಳು, ಬೊಬ್ಬೆಗಳು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತವೆ.

ಒಮ್ಮೊಮ್ಮೆ ನೀವು ಕೆರೆದುಕೊಂಡರೆ ಅವುಗಳಿಂದ ರಕ್ತ ಸಹ ಸೋರಬಹುದು. ಉಗುರುಗಳಿಂದ ಕೆರೆದುಕೊಂಡಾಗ ಅದರಿಂದ ಇನ್‍ಫೆಕ್ಷನ್ ಸಹ ಆಗಬಹುದು. ಒಂದು ವೇಳೆ ನೀವು ಸೊಳ್ಳೆ ಕಡಿತಗಳಿಂದ ನಿರಂತರವಾಗಿ ನೊಂದಿದ್ದರೆ, ಇಲ್ಲಿ ಕೆರೆತ ಮುಂತಾದ ಭಾದೆಗಳಿಂದ ಪರಿಹಾರ ತೋರುವ ಕೆಲವು ಉಪಾಯಗಳನ್ನು ನಾವಿಲ್ಲಿ ಸೂಚಿಸಿದ್ದೇವೆ.ಇಲ್ಲಿರುವ ಹಲವಾರು ಮದ್ದುಗಳು ಈಗಾಗಲೇ ನಮ್ಮ ಜನಸಾಮಾನ್ಯರು ಬಳಸಿರುವ ಮಾರ್ಗಗಳೇ ಆಗಿವೆ. ಆದರೆ ಈ ಪ್ರತಿ ಮದ್ದಿನ ಹಿಂದೆ ಅಲ್ಪ ಸ್ವಲ್ಪ ವೈಙ್ಞಾನಿಕ ಕಾರಣಗಳು ಅಡಗಿವೆ ಎಂಬುದು ವಿಶೇಷ. ಸುಮ್ಮನೆ ಸೊಳ್ಳೆಗಳಿಂದ ಕಡಿಸಿಕೊಂಡು ಅವುಗಳ ಜನ್ಮ ಜಾಲಾಡುವ ಬದಲು ಈ ಕೆಳಗಿನ ಪರಿಹಾರಗಳನ್ನು ಒಮ್ಮೆ ಪ್ರಯತ್ನಿಸಿ ನೋಡಿ.

1. ಆಲ್ಕೋಹಾಲ್

1. ಆಲ್ಕೋಹಾಲ್

ಸೊಳ್ಳೆ ಕಡಿತಗಳಿಂದ ತುರಿಕೆಯುಂಟಾದರೆ, ಕೆಲವು ಹನಿ ಬೀರ್ ಅನ್ನು ತುರಿಕೆಯಾಗುವ ಸ್ಥಳದಲ್ಲಿ ಲೇಪಿಸಿದರೆ ಉಪಯೋಗವಾಗುವುದಿಲ್ಲ. ಬದಲಿಗೆ ನಿಮ್ಮ ಮನೆಯಲ್ಲಿರುವ ಪ್ರಥಮ ಚಿಕಿತ್ಸೆ ಪೆಟ್ಟಿಗೆಯಲ್ಲಿರುವ ಆಲ್ಕೋಹಾಲ್ ಅನ್ನು ಹೊರತೆಗೆದು ತುರಿಕೆಯಾಗುವ ಸ್ಥಳಕ್ಕೆ ಲೇಪಿಸಿ. ಆ ತುರಿಕೆಯ ಜಾಗವನ್ನು ಅದರಿಂದ ಸ್ವಚ್ಛಗೊಳಿಸಿ. ಇದರಿಂದ ತುರಿಕೆಯು ಹೆಚ್ಚಾಗುವುದನ್ನು ಆಲ್ಕೋಹಾಲ್ ತಪ್ಪಿಸುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಆಲ್ಕೋಹಾಲ್ ಇಲ್ಲವೇ? ಸಾಧಾರಣವಾದ ಸೋಪ್ ಮತ್ತು ನೀರಿನಿಂದ ತುರಿಕೆಯ ಭಾಗಗಳನ್ನು ಸ್ವಚ್ಛಗೊಳಿಸಿ. ಇದು ಸಹ ಪರಿಣಾಮಕಾರಿಯಾಗಿ ಕೆಲಸ ಮಾಡುವುದನ್ನು ನೀವು ಗಮನಿಸಬಹುದು.

2. ನಿಂಬೆ ಹಣ್ಣು ಅಥವಾ ನಿಂಬೆ ರಸ

2. ನಿಂಬೆ ಹಣ್ಣು ಅಥವಾ ನಿಂಬೆ ರಸ

ನಿಂಬೆ ಹಣ್ಣು ಸ್ವಾಭಾವಿಕವಾಗಿ ತುರಿಕೆ ನಿರೋಧಕ, ಬ್ಯಾಕ್ಟೀರಿಯ ನಿರೋಧಕ ಮತ್ತು ಸೂಕ್ಷ್ಮಾಣು ಜೀವಿ ನಿರೋಧಕ ಗುಣಗಳನ್ನು ಹೊಂದಿದೆ. ಸ್ವಲ್ಪ ಪ್ರಮಾಣದ ನಿಂಬೆರಸವನ್ನು ತೆಗೆದುಕೊಂಡು ತುರಿಕೆ ಹಾಗು ಇನ್‍ಫೆಕ್ಷನ್ ಆಗಿರುವ ಭಾಗಕ್ಕೆ ಲೇಪಿಸುವುದರಿಂದ ಆರಾಮವನ್ನು ಪಡೆಯಬಹುದು. ಈ ಪರಿಹಾರವನ್ನು ಆದಷ್ಟು ಒಳಾಂಗಣದಲ್ಲಿ ಬಳಸಿ, ಏಕೆಂದರೆ ಬಿಸಿಲಿನ ಝಳಕ್ಕೆ ನಿಮ್ಮ ತ್ವಚೆಯಲ್ಲಿ ಬೊಬ್ಬೆಗಳುಂಟಾಗಬಹುದು.

3. ಮಂಜು ಗಡ್ಡೆ

3. ಮಂಜು ಗಡ್ಡೆ

ತುರಿಕೆಯನ್ನು ಮತ್ತು ಬೊಬ್ಬೆಗಳನ್ನು ಕಡಿಮೆ ಮಾಡಲು ಮಂಜು ಗಡ್ಡೆಯ ಪ್ಯಾಕ್ ಉಪಯೋಗಕಾರಿ. ಅದರಲ್ಲಿಯೂ ನಿಮಗೇನಾದರು ಹೆಚ್ಚು ಸೊಳ್ಳೆಗಳು ಕಚ್ಚಿದ್ದರೆ, ತಣ್ಣೀರಿನಲ್ಲಿ ಸ್ನಾನ ಮಾಡಿ, ಇಲ್ಲವೇ ತಣ್ಣಗೆ ಕೊರೆಯುವ ಕೆರೆ ಅಥವಾ ಈಜು ಕೊಳದಲ್ಲಿ ಈಜಾಡಿ.

4. ಬೇಕಿಂಗ್ ಸೋಡಾ ಮತ್ತು ವಿಚ್ ಹಝೆಲ್

4. ಬೇಕಿಂಗ್ ಸೋಡಾ ಮತ್ತು ವಿಚ್ ಹಝೆಲ್

ಅತ್ಯಂತ ಮಿತವ್ಯಯದ ತುರಿಕೆ ನಿರೋಧಕ ಪರಿಹಾರ ಬೇಕೆಂದರೆ ಬೇಕಿಂಗ್ ಸೋಡಾ ಮತ್ತು ವಿಚ್ ಹಝೆಲ್‍ನ ಮಿಶ್ರಣವನ್ನು ಸ್ವಲ್ಪ ಗಟ್ಟಿಯಾಗಿ ಮಾಡಿಕೊಂಡು, ಅದನ್ನು ಸೊಳ್ಳೆ ಕಚ್ಚಿದ ಭಾಗಗಳಿಗೆ ಹಚ್ಚಿ 15 ನಿಮಿಷ ಬಿಡಿ. ಬೇಕಿಂಗ್ ಸೋಡಾವು ಅಲ್ಕಾಲೈನ್ ಅಂಶಗಳನ್ನು ಹೊಂದಿದೆ. ಇವುಗಳು ನಿಮ್ಮ ತ್ವಚೆಯಲ್ಲಿನ pH ಪ್ರಮಾಣವನ್ನು ಕಡಿಮೆ ಮಾಡುತ್ತದೆಯಾದ್ದರಿಂದ ತುರಿಕೆ ಹಾಗು ಬಾವುಗಳು ಕಡಿಮೆಯಾಗುತ್ತವೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಹಝೆಲ್ ಇಲ್ಲವಾದಲ್ಲಿ, ನೀರಿನ ಉಪಯೋಗವನ್ನು ಪಡೆಯಿರಿ.

5. ಟೀ ಗಿಡದ ಎಣ್ಣೆ

5. ಟೀ ಗಿಡದ ಎಣ್ಣೆ

ಈ ಎಣ್ಣೆಯು ಸ್ವಾಭಾವಿಕವಾದ ಬಾವು ನಿರೋಧಕ ಗುಣಗಳನ್ನು ಹೊಂದಿದೆ. ಇದು ಮೊಡವೆ ಮುಂತಾದ ಚರ್ಮ ರೋಗಗಳ ನಿವಾರಣೆಗು ಸಹ ಪ್ರಯೋಜನಕಾರಿಯಾಗಿದೆ. ಇದು ಚರ್ಮದಲ್ಲಿನ ತುರಿಕೆ ಮತ್ತು ಇನ್‍ಫೆಕ್ಷನ್ ನಿಯಂತ್ರಿಸಲು ನೆರವಾಗುತ್ತವೆ.

6. ಟೂಥ್‍ಫೇಸ್ಟ್

6. ಟೂಥ್‍ಫೇಸ್ಟ್

ಒಂದು ವೇಳೆ ನಿಮ್ಮ ತ್ವಚೆಯ ಮೇಲೆ ಬಿಳಿಯ ಕಲೆಗಳು ಉಂಟಾಗಿದ್ದರೆ, ಆಲೋಚಿಸಬೇಡಿ. ಅದರ ಮೇಲೆ ಪೆಪ್ಪರ್ ಮಿಂಟ್ ಟೂಥ್‍ಫೇಸ್ಟ್ ಅನ್ನು ಲೇಪಿಸಿ. ತಕ್ಷಣ ಉಪಶಮನವನ್ನು ಪಡೆಯಿರಿ.

7. ಉಪ್ಪು

7. ಉಪ್ಪು

ಸೊಳ್ಳೆ ಕಡಿತದಿಂದ ತಕ್ಷಣ ಉಪಶಮನ ಪಡೆಯಲು, ಕಡಿದ ಭಾಗವನ್ನು ನೀರಿನಿಂದ ಸ್ವಚ್ಛಗೊಳಿಸಿ. ಅದರ ಮೇಲೆ ಉಪ್ಪು ಸವರಿ ಮೆತ್ತಗೆ ಉಜ್ಜಿ ಅಥವಾ ನೀವೇನಾದರು ಬೀಚ್ ಬಳಿ ಇದ್ದರೆ, ಸುಮ್ಮನೆ ಸಮುದ್ರ ಸ್ನಾನ ಮಾಡಿ.

8. ಲೋಳೆ ಸರ

8. ಲೋಳೆ ಸರ

ಲೋಳೆ ಸರದಲ್ಲಿರುವ ತಂಪಾದ ಗುಣಗಳು ಚರ್ಮದಲ್ಲಿನ ತುರಿಕೆ ಮತ್ತು ಬಾವುಗಳಿಗೆ ಆರಾಮವನ್ನು ಒದಗಿಸುತ್ತದೆ.

9. ಅಪಲ್ ಸಿಡೆರ್ ವಿನೆಗರ್

9. ಅಪಲ್ ಸಿಡೆರ್ ವಿನೆಗರ್

ನಿಮ್ಮ ಮನೆಯ ಬಾತ್ ಟಬ್‍ಗೆ ಅಪಲ್ ಸಿಡೆರ್ ವಿನೆಗರ್ ಬೆರೆಸಿ ಸ್ನಾನ ಮಾಡುವುದರಿಂದ ಸನ್ ಬರ್ನ್, ತುರಿಕೆ ಮುಂತಾದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಅಪಲ್ ಸಿಡೆರ್ ವಿನೆಗರ್ ನಲ್ಲಿರುವ ಮಲಿಕ್ ಆಮ್ಲವು ಈ ಸಮಸ್ಯೆಗಳಿಗೆ ರಾಮ ಬಾಣವಾಗಿ ಕೆಲಸ ಮಾಡುತ್ತದೆ. ಒಂದು ವೇಳೆ ಸ್ನಾನದ ನೀರಿಗೆ ಇದನ್ನು ಬೆರೆಸಲು ನಿಮಗೆ ಹಿಡಿಸದಿದ್ದರೆ, ಹತ್ತಿಯನ್ನು ಇದರಲ್ಲಿ ಅದ್ದಿ, ತುರಿಕೆ ಮತ್ತು ಬಾವುಗಳಿರುವ ಜಾಗಕ್ಕೆ ಲೇಪಿಸಿ.

10. ಬಾಳೆಹಣ್ಣಿನ ಸಿಪ್ಪೆ

10. ಬಾಳೆಹಣ್ಣಿನ ಸಿಪ್ಪೆ

ಬಾಳೆ ಹಣ್ಣಿನ ಸಿಪ್ಪೆಯ ಒಳ ತಿರುಳನ್ನು ಸೊಳ್ಳೆ ಕಚ್ಚಿದ ಭಾಗಕ್ಕೆ ಲೇಪಿಸುವುದರಿಂದ ಸೊಳ್ಳೆ ಕಡಿತದಿಂದ ಉಂಟಾದ ಸಮಸ್ಯೆಗೆ ಉಪಶಮನ ಪಡೆಯಬಹುದು.

11. ಎಂಜಲು

11. ಎಂಜಲು

ಇದು ಒಂದು ಹಳೆಯ ಔಷಧಿ!. ಸುಮ್ಮನೆ ನಿಮ್ಮ ಬೆರಳಿನ ಮೇಲೆ ಎಂಜಲನ್ನು ಉಗುಳಿ, ಅದನ್ನು ಸೊಳ್ಳೆ ಕಡಿದ ಭಾಗಕ್ಕೆ ಲೇಪಿಸಿ, ಒಣಗಲು ಬಿಡಿ. ಖರ್ಚಿಲ್ಲದೆ ನಿಮ್ಮ ಸಮಸ್ಯೆ ದೂರವಾಗುತ್ತದೆ.

12. ಹೊಡೆಯಿರಿ

12. ಹೊಡೆಯಿರಿ

ಇದು ವಿಚಿತ್ರವಾದರು ಸತ್ಯ! ಸೊಳ್ಳೆ ಕಡಿಯಿತು ಎಂದು ಕೆರೆದುಕೊಳ್ಳದೆ, ಆ ಭಾಗಕ್ಕೆ ಒಂದು ಏಟು ಕೊಡಿ. ಇದರಿಂದ ನಿಮ್ಮ ಮೆದುಳು ತುರಿಕೆ ಮತ್ತು ನೋವಿನ ನಡುವೆ ಯಾವುದರ ಬಗ್ಗೆ ಗಮನ ಹರಿಸಬೇಕು ಎಂಬ ಗೊಂದಲಕ್ಕೆ ಬಿದ್ದು, ನಿಮ್ಮ ಸಮಸ್ಯೆ ಮಾಯವಾಗುತ್ತದೆ.

English summary

Natural Mosquito Bite Remedies

Many of these are folk remedies used in the holistic community with little to no scientific evidence to back them up, but then again, many people swear these work. Instead of just suffering, it may be worth giving them a try.
X
Desktop Bottom Promotion