For Quick Alerts
ALLOW NOTIFICATIONS  
For Daily Alerts

ಆ್ಯಂಟಿಕ್ ಫರ್ನೀಚರ್ ಗೆದ್ದಲನ್ನು ಹೀಗೆ ನಾಶಮಾಡಿ

|

ಮನೆಯಲ್ಲಿರುವ ಹಳೇ ಮರದ ಫರ್ನೀಚರ್ ಗಳಿಗೆ ಗೆದ್ದಲು ಕಟ್ಟಿ ಹಾಳಾಗುವುದನ್ನು ನಾವು ನೋಡಿರುತ್ತೇವೆ. ಗೆದ್ದಲು ಹುಳುಗಳು ಮರದಲ್ಲಿ ಗೂಡು ಕಟ್ಟಿಕೊಂಡು ಅದನ್ನೇ ಆಹಾರವಾಗಿಸಿಕೊಳ್ಳುತ್ತವೆ. ಮರ ಹಳೆಯದಾಗಿ ಅದರಲ್ಲಿ ತೇವಾಂಶವಿದ್ದರೆ ಗೆದ್ದಲುಗಳು ಅಂತಹ ಮರಕ್ಕೆ ಬೇಗ ಹತ್ತಿಕೊಳ್ಳುತ್ತವೆ. ಇವು ಅಂತಹ ಮರದ ಪೀಠೋಪಕರಣಗಲ್ಲಿ ದೀರ್ಘಸಮಯದವರೆಗೆ ಉಳಿದುಬಿಡುತ್ತವೆ.
ಈ ಸಮಸ್ಯೆಯಿಂದ ಪಾರಾಗಲು ಇಲ್ಲಿವೆ ಕೆಲವು ಪರಿಹಾರಗಳು. ಗೆದ್ದಲು ಹತ್ತಿದ ತಕ್ಷಣ ಈ ಮಾರ್ಗವನ್ನು ಅನುಸರಿಸಿ ಸ್ವಚ್ಛಗೊಳಿಸಿಬಿಟ್ಟರೆ ಫರ್ನೀಚರ್ ಹಾಳಾಗುವುದು ತಪ್ಪುತ್ತದೆ. ಇಷ್ಟು ಸರಳ ಉಪಾಯಗಳಿರುವಾಗ ಫರ್ನೀಚರ್ ಮಾರುವ ಯೋಚನೆ ಬಿಡಿ.

Killing Termites In Antique Furniture

ನೀವು ಹೀಗೆ ಮಾಡಿ:
1. ಗೆದ್ದಲು ಕಂಡುಬಂದ ತಕ್ಷಣ ಫರ್ನೀಚರ್ ತೆಗೆದು ಗಾಳಿ ಮತ್ತು ಬಿಸಿಲಿನಲ್ಲಿ ಸುಮಾರು 4 ಗಂಟೆಗಳವರೆಗೆ ಇಟ್ಟುಬಿಡಿ.
2. ಗೆದ್ದಲಿನ ಪರಿಹಾರಕ್ಕೆ ನೈಸರ್ಗಿಕ ಪರಿಹಾರಗಳು ಕೂಡ ಇವೆ. ಉದಾಹರಣೆಗೆ ನಿಂಬೆಹಣ್ಣನ್ನು ಗೆದ್ದಲು ನಾಶಕವಾಗಿ ಬಳಸಬಹುದು.
3. ಉಪ್ಪು ಕೂಡ ಗೆದ್ದಲು ನಾಶಕ ಗುಣವನ್ನು ಹೊಂದಿದೆ. ಹಾಗಾಗಿ ಉಪ್ಪನ್ನು ಕೂಡ ಬಳಸಬಹುದು.
4. ಇನ್ನೊಂದು ವಿಧಾನವೆಂದರೆ ಕೆಂಪು ಮೆಣಸಿನ ಪುಡಿಯನ್ನು ಗೆದ್ದಲಿನ ಗೂಡಿನ ಮೇಲೆ ಚೆಲ್ಲುವುದು. ಇದು ಕೂಡ ಗೆದ್ದಲನ್ನು ನಾಶ ಮಾಡುತ್ತದೆ.
5. ಗೆದ್ದಲು ಕಹಿಯ ವಾಸನೆಯನ್ನು ಸಹಿಸಿಕೊಳ್ಳುವುದಿಲ್ಲ. ಆದ್ದರಿಂದ ನೀವು ಹಾಗಲಕಾಯಿ ರಸವನ್ನು ಗೆದ್ದಲ ಗೂಡಿನ ಹತ್ತಿರ ಹಾಕಿಬಿಡಿ. ಇವು ಕೂಡ ಗೆದ್ದಲನ್ನು ಬಹುಮಟ್ಟಿಗೆ ನಿಯಂತ್ರಿಸುವಲ್ಲಿ ಸಹಕಾರಿ.
ಇವು ನಿಮ್ಮ ಹಳೆಯ ಮತ್ತು ಅಮೂಲ್ಯ ಫರ್ನೀಚರ್ ಗಳನ್ನು ಕಾಪಾಡಿಕೊಳ್ಳಲು ಸಹಕಾರಿ.

English summary

Killing Termites In Antique Furniture

One of the problems which you might face when you have antique furniture at home is a termite infestation. This breed of termite nests, feeds and lives in wood which is old and has little to no moisture present in it.
Story first published: Friday, November 29, 2013, 15:47 [IST]
X
Desktop Bottom Promotion