For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ಹಲ್ಲಿ ಹೋಗಲಾಡಿಸಲು ಸುಲಭ ಉಪಾಯಗಳು

|

ಮನೆಯಲ್ಲಿ ಹಲ್ಲಿಯೊಂದು ತನ್ನ ಪಾಡಿಗೆ ಯಾವುದೋ ಮೂಲೆಯಲ್ಲಿ ಕೂತು ಲೊಚಗುಟ್ಟುತ್ತಿದ್ದರೆ ಆ ಹಲ್ಲಿಯನ್ನು ಓಡಿಸುವುದು ಹೇಗೆ ಎಂಬ ಚಿಂತೆ ನಮ್ಮಲ್ಲಿ ಶುರುವಾಗುವುದು. ಹಲ್ಲಿ ಮನೆಯಲ್ಲಿದ್ದರೆ ಹುಳು ಹುಪ್ಪಟೆ ತಿನ್ನುವುದರಿಂದ ಅವುಗಳ ಸಮಸ್ಯೆ ಇರುವುದಿಲ್ಲ, ಆದರೆ ಸಮಸ್ಯೆಯೆಂದರೆ ಆಕಸ್ಮಿಕವಾಗಿ ತಿನ್ನುವ ಆಹಾರಕ್ಕೆ ಬಿದ್ದು, ಅದನ್ನು ನಾವು ಗಮನಿಸದೇ ಇದ್ದರೆ ಇದರಿಂದ ದೊಡ್ಡ ಅಪಾಯ ಉಂಟಾಗುವುದು. ಆದ್ದರಿಂದ ಹಲ್ಲಿಯನ್ನು ಮನೆಯಿಂದ ಹೊರ ಹಾಕುವವರೆಗೆ ಸಮಧಾನ ಸಿಗುವುದಿಲ್ಲ.

ಹಲ್ಲಿಯನ್ನು ಮನೆಯಿಂದ ಓಡಿಸುವುದು ಸುಲಭದ ಕೆಲಸವಲ್ಲ, ಮನೆ ಎಷ್ಟೇ ಸ್ಚಚ್ಛವಾಗಿಟ್ಟರೂ ಹಲ್ಲಿ ಬರುತ್ತದೆ. ಹಲ್ಲಿ ಬರುವುದನ್ನು ತಡೆಗಟ್ಟಲು ಆರು ತಿಂಗಳಿಗೊಮ್ಮೆ ಮನೆಗೆ ಕೀಟ ನಾಶಕ ಹೊಡಿಸಬಹುದು. ಆದರೆ ಪ್ರತಿ ಆರು ತಿಂಗಳಿಗೊಮ್ಮೆ ಮನೆಯ ವಸ್ತುಗಳನ್ನು ಹೊರ ಹಾಕಿ ಕೀಟ ನಾಶಕ ಸಿಂಪಡಿಸುವುದು ಸ್ವಲ್ಪ ಕಷ್ಟದ ಕೆಲಸ.

ಆದ್ದರಿಂದ ಕೆಲವೊಂದು ಸರಳ ಟ್ರಕ್ಸ್ ಬಳಸಿ ಹಲ್ಲಿಯನ್ನು ಮನೆಯಿಂದ ಹೊರಹಾಕಬಹುದು:

ಐಸ್‌ ವಾಟರ್ ಚಮಕ್

ಐಸ್‌ ವಾಟರ್ ಚಮಕ್

ಹಲ್ಲಿಯನ್ನು ಹೊರಕ್ಕೆ ಹಾಕಲು ಪ್ರಯತ್ನಿಸುವಾಗ ಅದು ಓಡಿ ಹೋಗಿ ಮೂಲೆ ಸೇರಿ ನಮ್ಮ ಕೈಯಿಂದ ತಪ್ಪಿಸಿಕೊಳ್ಳುತ್ತದೆ. ಕಬೋರ್ಡ್, ಸೆಲ್ಫ್‌ ಸಂಧಿಯಲ್ಲಿ ಸೇರಿಕೊಂಡರೆ ಮತ್ತೆ ಅದನ್ನು ಓಡಿಸುವುದು ಕಷ್ಟ. ಆದ್ದರಿಂದ ಹಲ್ಲಿಯನ್ನು ಕಂಡ ತಕ್ಷಣ ಐಸ್‌ ನೀರು ಎರಚಿ. ಐಸ್‌ ನೀರು ಅದರ ಮೇಲೆ ಬಿದ್ದರೆ ಅದಕ್ಕೆ ಬೇಗನೆ ಓಡಲು ಸಾಧ್ಯವಾಗುವುದಿಲ್ಲ. ಆಗ ಅದನ್ನು ಮೆಲ್ಲನೆ ಗುಡಿಸಿ ತೆಗೆದು ಹೊರಹಾಕಬಹುದು.

ಮೊಟ್ಟೆಯ ಸಿಪ್ಪೆ

ಮೊಟ್ಟೆಯ ಸಿಪ್ಪೆ

ಮನೆಯಲ್ಲಿ ಹಲ್ಲಿ ಕಾಟ ಅಧಿಕವಿದಾಗ ಮೊಟ್ಟೆ ಸಿಪ್ಪೆ ಇಟ್ಟರೆ ಹಲ್ಲಿಗಳು ಇಲ್ಲವಾಗುವುದು. ಮೊಟ್ಟೆಯ ಸಿಪ್ಪೆಯನ್ನು ಮನೆಯ ಮೂಲೆ-ಮೂಲೆಯಲ್ಲಿ ಇಟ್ಟರೆ ಹಲ್ಲಿ ಬರುವುದಿಲ್ಲ. ಹೀಗೆ ಮೊಟ್ಟೆಯ ಸಿಪ್ಪೆ ಇಡುವಾಗ ಅದರಲ್ಲಿರುವ ಮೊಟ್ಟೆಯ ಬಿಳಿ ಹಾಗೂ ಹಳದಿಯನ್ನು ತೆಗೆದು ಇಡಬೇಕು, ಸ್ವಲ್ಪ ಇದ್ದರೆ ಅದರಿಂದ ದುರ್ವಾಸನೆ ಉಂಟಾಗುವುದು. ಇನ್ನು ತುಂಬಾ ದಿನ ಮೊಟ್ಟೆಯ ಸಿಪ್ಪೆ ಇಡಬೇಡಿ, ಇದರಲ್ಲಿ ಉತ್ಪತ್ತಿಯಾಗುವ ಬ್ಯಾಕ್ಟಿರಿಯಾ ಅಪಾಯಕಾರಿ. ಆದ್ದರಿಂದ ಹಲ್ಲಿಯನ್ನು ಓಡಿಸಲು ಇಟ್ಟ ಮೊಟ್ಟೆಯನ್ನು ತೆಗೆಯಲು ಮರೆಯಬೇಡಿ.

ಹೊಗೆ ಸೊಪ್ಪಿನ ರಸ

ಹೊಗೆ ಸೊಪ್ಪಿನ ರಸ

ಹೊಗೆ ಸೊಪ್ಪನ್ನು ನೀರಿಗೆ ಹಾಕಿ ಎರಡು ಗಂಟೆ ಬಿಡಿ. ಹೊಗೆ ಸೊಪ್ಪಿನ ರಸ ನೀರಿಗೆ ಬಿಡಲಿ. ಈಗ ಆ ನೀರನ್ನು ಸ್ಪ್ರೇ ಬಾಟಲಿನಲ್ಲಿ ತುಂಬಿ ಮನೆ ತುಂಬಾ, ಮನೆಯ ಮೂಲೆ-ಮೂಲೆಯಲ್ಲಿ ಸ್ಪ್ರ್ರೇ ಮಾಡಿದರೆ ಅದರ ಘಾಟು ವಾಸನೆಗೆ ಹಲ್ಲಿ ಓಡಿ ಹೋಗುವುದು.

ಈರುಳ್ಳಿ ಮತ್ತು ಬೆಳ್ಳುಳ್ಳಿ ಚಮತ್ಕಾರ

ಈರುಳ್ಳಿ ಮತ್ತು ಬೆಳ್ಳುಳ್ಳಿ ಚಮತ್ಕಾರ

ಈರುಳ್ಳಿ ಕತ್ತರಿಸಿದಾಗ ಕೆಲವರ ಕಣ್ಣಿನಲ್ಲಿ ನೀರು ಬರುತ್ತದೆ. ಅದಕ್ಕೆ ಅದರ ಪ್ರಮುಖ ಗಾಟು ಕಾರಣ. ಈ ಘಾಟು ಹಲ್ಲಿಗೂ ಆಗಿ ಬರುವುದಿಲ್ಲ. ಈರುಳ್ಳಿ ಕತ್ತರಿಸಿ ಮನೆಯ ಮೂಲೆ-ಮೂಲೆಯಲ್ಲಿ ಇಡುವುದರಿಂದ ಅದರ ವಾಸನೆಗೆ ಹಲ್ಲಿ ಅಡುಗೆ ಮನೆ ಕಡೆಗೆ ಬರುವುದೇ ಇಲ್ಲ.

ಈರುಳ್ಳಿ ಜೊತೆ ಬೆಳ್ಳುಳ್ಳಿ ಕೂಡ ಕತ್ತರಿಸಿ ಇಟ್ಟರೆ ತುಂಬಾ ಒಳ್ಳೆಯದು. ಇದರ ವಾಸನೆಗೆ ಇತರ ಕ್ರಿಮಿಗಳೂ ಬರುವುದಿಲ್ಲ.

ನವಿಲುಗರಿ

ನವಿಲುಗರಿ

ಮನೆಯ ಗೋಡೆಯಲ್ಲಿ ಅಲಂಕಾರಕ್ಕೆ ನವಿಲು ಗಿರಿ ಇಡುವುದನ್ನು ನೋಡಿರಬಹುದು. ಆದರೆ ಈ ರೀತಿ ನವಿಲು ಗಿರಿ ಇಡುವುದರಿಂದ ದೊರೆಯವ ಮತ್ತೊಂದು ಪ್ರಯೋಜನವೆಂದರೆ ಹಲ್ಲಿ ಕಾಟ ಇಲ್ಲವಾಗುವುದು. ನವಿಲು ಗರಿ ನೋಡಿ ಅದೇನೋ ದೊಡ್ಡ ಪ್ರಾಣಿಯಿರಬಹುದೆಂದು ಹಲ್ಲಿ ಆ ಕಡೇ ಸುಳಿಯವುದೇ ಇಲ್ಲ.

ಕಾಫಿ ಹುಡಿ

ಕಾಫಿ ಹುಡಿ

ಕಾಫಿ ಹುಡಿಯನ್ನು ಮನೆಯ ಮೂಲೆ-ಮೂಲೆಯಲ್ಲಿ ಇಡುವುದರಿಂದ ಹಲ್ಲಿ ಕಾಟ ಇಲ್ಲವಾಗುವುದು. ಕಾಫಿ ಪುಡಿ ಜೊತೆ ತಂಬಾಕು ಸೇರಿಸಿ, ಅದನ್ನು ಉಂಡೆ ಕಟ್ಟಿ ಮನೆಯ ಮೂಲೆ-ಮೂಲೆಯಲ್ಲಿ ಇಟ್ಟರೆ ಹಲ್ಲಿ ಕಾಟ ಇಲ್ಲದೆ ನಿರಾಳವಾಗಬಹುದು.

ಈ ಸಿಂಪಲ್ ಟಿಪ್ಸ್ ನಿಮಗೆ ಇಷ್ಟವಾಗಿರಬಹುದು ಅಲ್ವೇ? ಇವುಗಳನ್ನು ಟ್ರೈ ಮಾಡಿ ನೋಡಿ, ನಿಮ್ಮ ಮನೆಯಲ್ಲಿ ಹಲ್ಲಿ ಸಮಸ್ಯೆ ಇಲ್ಲವಾಗುವುದು.

English summary

Natural Ways to Get Rid Of Lizards From Your Homes

Lizards are harmless but if it fall down in food then will be very dangerous. here we have given simple to get rid from lizards.
X
Desktop Bottom Promotion