For Quick Alerts
ALLOW NOTIFICATIONS  
For Daily Alerts

ಯಾವ ಬಟ್ಟೆಯನ್ನು ಬಿಸಿ ನೀರಿನಲ್ಲಿ ನೆನೆಹಾಕಬಾರದು?

|
Which Clothes Should Not Wash In Hot Water
ಬಟ್ಟೆಯನ್ನು ಒಗೆಯುವ ಮುನ್ನ ಏನು ಮಾಡುತ್ತೇವೆ? ಬಟ್ಟೆಯನ್ನು ಬಕೆಟ್ ನೀರಿನಲ್ಲಿ ಸೋಪು ಪುಡಿ ಹಾಕಿ ಅದರಲ್ಲಿ ಅರ್ಧ ಗಂಟೆ ನೆನೆ ಹಾಕಿ ನಂತರ ಶುದ್ಧ ನೀರಿನಿಂದ ಚೆನ್ನಾಗಿ ತೊಳೆದು ಒಣ ಹಾಕುತ್ತೇವೆ ಅಲ್ವಾ? ಆದರೆ ಕೆಲವೊಂದು ಬಟ್ಟೆಗಳನ್ನು ನೆನೆ ಹಾಕುವಾಗ ನೋಡಿ ಹಾಕಬೇಕು. ಏಕೆಂದರೆ ಆ ಬಟ್ಟೆ ಕಲರ್ ಹೋಗುವುದಾದರೆ ಅದರ ಜೊತೆ ನೆನೆ ಹಾಕಿದ ಬೇರೆ ಬಟ್ಟೆಗಳು ಹಾಳಾಗುತ್ತವೆ. ಅಲ್ಲದೆ ಮತ್ತೆ ಕೆಲವು ಬಟ್ಟೆಗಳಲ್ಲಿ ತುಂಬಾ ಕೊಳೆ ಇದ್ದರೆ ಬಿಸಿ ನೀರಿನಲ್ಲಿ ನೆನೆ ಹಾಕಬೇಕಾಗುತ್ತದೆ, ಆದರೆ ಹಾಗೇ ನೆನೆ ಹಾಕಿ ನಂತರ ತೆಗೆದು ನೋಡಿದರೆ ಬಟ್ಟೆ ಕಲರ್(ಬಣ್ಣ) ಹೋಗಿರುತ್ತದೆ, ಇಲ್ಲದಿದ್ದರೆ ಸುಕ್ಕಾಗಿ ಹೋಗುವುದು, ಈ ರೀತಿ ಉಂಟಾಗದಂತೆ ಬಟ್ಟೆಯನ್ನು ಬಿಸಿ ನೀರಿನಲ್ಲಿ ಯಾವ ಬಟ್ಟೆ ತೊಳೆಯಬಾರದು ತಿಳಿಯಲು ಮುಂದೆ ಓದಿ:

ಫ್ಯಾಬ್ರಿಕ್ ಬಟ್ಟೆ: ಫ್ಯಾಬ್ರಿಕ್ ಬಟ್ಟೆಯನ್ನು ಬಿಸಿ ನೀರಿಗೆ ಹಾಕುವ ಮೊದಲು ಯೋಚಿಸಿ. ಏಕೆಂದರೆ ಈ ಬಟ್ಟೆಯನ್ನು ಬಿಸಿ ನೀರಿಗೆ ಹಾಕಿದರೆ ಬಟ್ಟೆ ಚಿಕ್ಕದಾಗುವುದು. ಆದ್ದರಿಂದ ನಂತರ ಹಾಕುವಾಗ ಬಟ್ಟೆ ತುಂಬಾ ಬಿಗಿಯಾಗುವುದು ಅಥವಾ ಧರಿಸಲು ಸಾಧ್ಯವಾಗದೇ ಹೋಗಬಹುದು. ಆದ್ದರಿಂದ ಫ್ಯಾಬ್ರಿಕ್ ಬಟ್ಟೆಯನ್ನು ಬಿಸಿ ನೀರಿಗೆ ಹಾಕದಿರುವುದು ಒಳ್ಳೆಯದು.

ಕಾಟನ್ ಬಟ್ಟೆ: ಕಾಟನ್ ಬಟ್ಟೆಗಳಲ್ಲಿ ಕೆಲವೊಂದು ಬಟ್ಟೆ ಬಣ್ಣ ಹೋಗುತ್ತದೆ. ಅಂಹ ಬಟ್ಟೆಗಳನ್ನು ಪ್ರತ್ಯೇಕವಾಗಿ ತಣ್ಣೀರಿನಲ್ಲಿ ನೆನೆಹಾಕಬೇಕು.ಬಿಸಿ ನೀರಿನಲ್ಲಿ ಹಾಕುವ ಸಾಹಸ ಮಾಡಿದರೆ ಬಟ್ಟೆ ಬಣ್ಣ ಮಾಸುವುದು.

ಉಣ್ಣೆ ಬಟ್ಟೆ ಅಥವಾ ನೂಲು ಏಳುವ ಬಟ್ಟೆ : ಉಣ್ಣೆ ಬಟ್ಟೆ ಅಥವಾ ನೂಲು ಏಳುವ ಬಟ್ಟೆಯನ್ನು ಬಿಸಿ ನೀರಿನಲ್ಲಿ ಹಾಕಿದರೆ ಅದರ ನೂಲು ಸಡಿಲವಾಗುವುದು.

ಸಲಹೆ: 1.ಬಟ್ಟೆಗಳನ್ನು ಬಿಸಿ ನೀರಿನಲ್ಲಿ ನೆನೆ ಹಾಕುವ ಮುನ್ನ ಬಟ್ಟೆಯನ್ನು ಕೊಂಡು ತರುವಾಗ ಬಟ್ಟೆ ಜೊತೆ ಕೊಟ್ಟ ಚೀಟಿಯಲ್ಲಿ ಬರೆದಿರುವ ಸೂಚನೆಯನ್ನು ಓದಿರಬೇಕು.

2. ಹೊಸ ಬಟ್ಟೆ ತಂದಾಗ ಬಣ್ಣ ಹೋಗುತ್ತಿದೆಯೇ ಎಂದು ಪರೀಕ್ಷಿಸಲು ಬಟ್ಟೆಯ ಸ್ವಲ್ಪ ಭಾಗಕ್ಕೆ ನೀರು ಹಾಕಿ ಹಿಂಡಿ ನೋಡಬೇಕು.

3. ಯಾವುದೇ ಬಟ್ಟೆಯನ್ನು 20 ನಿಮಿಷಕ್ಕಿಂತ ಅಧಿಕ ಬಿಸಿ ನೀರಿನಲ್ಲಿ ಇಡಬಾರದು.

4. ಹೊಸ ಕಾಟನ್ ಬಟ್ಟೆ ತಂದಾಗ ಅರ್ಧ ಬಕೆಟ್ ನೀರಿನಲ್ಲಿ ಸ್ವಲ್ಪ ಉಪ್ಪು ಹಾಕಿ ಅದರಲ್ಲಿ ಬಟ್ಟೆಯನ್ನು 15 ನಿಮಿಷ ನೆನೆಸಿ ನಂತರ ಒಗೆದರೆ ಬಣ್ಣ ಹೆಚ್ಚಾಗಿ ಹೋಗುವುದಿಲ್ಲ.

English summary

Which Clothes Should Not Wash In Hot Water | Tips For House Keeping | ಯಾವ ಬಗೆಯ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ಒಗೆಯಬಾರದು | ಮನೆ ನಿರ್ವಣೆಗೆ ಕೆಲ ಸಲಹೆಗಳು

If you wash clothes in a hot water you will get a faded fabric material. This is because hot water damages the quality of your fabric. You have to be very careful before soaking your clothes in hot water.
Story first published: Friday, June 15, 2012, 12:39 [IST]
X
Desktop Bottom Promotion