For Quick Alerts
ALLOW NOTIFICATIONS  
For Daily Alerts

ಮರದ ಪೀಠೋಪಕರಣಗಳಿಗೆ ಹೊಸ ಲುಕ್ ನೀಡಲು ಟಿಪ್ಸ್

|
Tips To Maintain Wood Furniture
ಮನೆಯಲ್ಲಿ ಅಜ್ಜನ ಕಾಲದ ಮರದ ಪೀಠೋಪಕರಣಗಳು ಇದ್ದರೆ ಅದು ಸ್ವಲ್ಪ ಹಳೆಯದಾಗಿದೆ ಆದ್ದರಿಂದ ಅದನ್ನು ಬಿಸಾಡಿ ಅಥವಾ ಮಾರಿ ಒಳ್ಳೆಯ ವಿನ್ಯಾಸದ ಪೀಠೋಪಕರಣಗಳನ್ನು ತರುವ ಎಂದು ಯೋಚನೆ ಮಾಡುತ್ತೇವೆ ಹೊರತು ಅದನ್ನು ಹೊಸ ಪೀಠೋಪಕರಣಗಳ ರೀತಿ ಮಾಡಬಹುದು ಎಂದು ಯೋಚಿಸಲು ಹೋಗುವುದಿಲ್ಲ.

ಹಳೆಯ ಮರದ ವಸ್ತುಗಳನ್ನು ಬಿಸಾಡಿದರೆ ನಷ್ಟ ತುಂಬಾ ಏಕೆಂದರೆ ಈಗೀನ ಉಪಕರಣಗಳು ತುಂಬಾ ಆಕರ್ಷಕವಾಗಿ ಕಣ್ಣಿಗೆ ಕಂಡರೆ ಅದರಷ್ಟೇ ಗಟ್ಟಿಮುಟ್ಟಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಈ ಕೆಳಗ್ಗೆ ಕೆಲ ಸಲಹೆಗಳನ್ನು ನೀಡಲಾಗಿದೆ. ಅವುಗಳಂತೆ ಮಾಡಿದರೆ ಮರದ ಹಳೆಯ ಪೀಠೋಪಕರಣಗಳು ಹೊಸ ವಸ್ತಗಳಂತೆ ಕಾಣುವುದು.

1. ವರ್ಷದಲ್ಲಿ 3-4 ಬಾರಿ ಮರದ ಪೀಠೋಪಕರಣಗಳನ್ನು ತೊಳೆಯಬೇಕು. ಹೀಗೆ ತೊಳೆಯಲು ಸೋಪು ನೀರನ್ನು ಬಳಸಬೇಕು. ಸೋಪು ನೀರನ್ನು ಹಾಕಿ ಬ್ರೆಷ್ ನಿಂದ ಚೆನ್ನಾಗಿ ಉಜ್ಜಿ ತೊಳೆಯಬೇಕು. ನಂತರ ಹತ್ತಿ ಬಟ್ಟೆಯನ್ನು ನೀರಿನಲ್ಲಿ ಅದ್ದಿ ಅದನ್ನು ಹಿಂಡಿ ಚೆನ್ನಾಗಿ ಒರೆಸಬೇಕು.

2. ನೀರು ಬಿದ್ದು ಜಾಡು ಕಾಣುತ್ತಿದ್ದರೆ (ಬಿಳಿಯಾಗಿದ್ದರೆ) ಆ ಭಾಗಕ್ಕೆ ಟೂತ್ ಪೇಸ್ಟ್ ಹಾಕಿ ಒದ್ದೆ ಬಟ್ಟೆಯಿಂದ ಉಜ್ಜಬೇಕು. ನಂತರ ಒದ್ದೆ ಬಟ್ಟೆಯಿಂದ ಉಜ್ಜಬೇಕು.

3. ಪೋಠೋಪಕರಣಗಳಿಗೆ ಗ್ರೀಸ್ ಆಗಿದ್ದರೆ ಕೂಡಲೇ ಸ್ವಲ್ಪ ಉಪ್ಪನ್ನು ಚಿಮುಕಿಸಿ ಆ ಭಾಗವನ್ನು ಸ್ವಲ್ಪ ಎಣ್ಣೆ ಹಾಕಿ ಉಜ್ಜಬೇಕು.

4. ಮರದ ಪೀಟೋಪಕರಣಗಳಿಗೆ ಗೆರೆ ಬಿದ್ದಿದ್ದರೆ ಪೇಯಿಂಟ್ ಹಚ್ಚಿದರೆ ಹೊಸ ವಸ್ತುವಿನಂತೆ ಕಾಣುವುದು.

5. ಬಿಸಿ ನೀರಿಗೆ ವಿನಿಗರ್ ಹಾಕಿ ಉಜ್ಜಿದರೆ ಕೂಡ ಮರದ ವಸ್ತುಗಳು ಆಕರ್ಷಕವಾಗಿ ಕಾಣುವುದು.

6. ತಿಂಗಳಿಗೊಮ್ಮೆ ಎಣ್ಣೆ ಪಾಲಿಶ್ ಮಾಡಿದರೆ ಪೀಠೋಪಕರಣಗಳು ಸದಾ ಹೊಸ ವಸ್ತುವಿನಂತೆ ಕಾಣುತ್ತವೆ.

7. ತೆಂಗಿನೆಣ್ಣೆಗೆ ಸ್ವಲ್ಪ ನಿಂಬೆರಸ ಬೆರೆಸಿ ಮೃದುವಾದ ಬಟ್ಟೆಯಲ್ಲಿ ಒರೆಸಿದರೆ ಎಣ್ಣೆ ಅಂಶ ಮರದ ಪೀಠೋಪಕರಣಗಳು ಆಕರ್ಷಕವಾಗಿ ಕಾಣುವುದು.

English summary

Tips To Maintain Wood Furniture | Tips For Home Improvement | ಮರದ ಪೀಠೋಪಕರಣಗಳ ನಿರ್ವಹಣೆಗೆ ಕೆಲ ಸಲಹೆಗಳು

If you have old wood furniture at home don't throw that one because it's very old. You can make old furniture as new one if you use these tips.
X
Desktop Bottom Promotion