For Quick Alerts
ALLOW NOTIFICATIONS  
For Daily Alerts

ಟವಲ್ ಗೂ ಕೂಡ ಸ್ಪೆಷಲ್ ಕೇರ್ ಬೇಕು

|
Tips to Remove Mildew Smell from Towel
ಪ್ರತಿನಿತ್ಯ ಬಳಸುವ ಟವಲನ್ನು ಮುಖದ ಬಳಿ ಇಟ್ಟಾಗ ಹಸಿ ವಾಸನೆ ಹೊಡೆಯುತ್ತಿದೆಯಾ? ತೇವವಿದ್ದಾಗ ಅದನ್ನು ಒಣಗಲು ಹಾಕದೆ ಮುದುರಿದಂತೆ ಬಿಡುವುದೇ ಈ ರೀತಿ ಮುಗ್ಗು ವಾಸನೆಗೆ ಕಾರಣ. ಆದ್ದರಿಂದ ಟವಲಿನಿಂದ ಹಸಿ ವಾಸನೆ ಹೋಗಲಾಡಿಸಿ ಸುವಾಸನೆಯಿಂದಿರಿಸುವ ಕೆಲವು ಸಲಹೆಗಳು ಇಲ್ಲಿವೆ.

ಟವಲ್ ನಿಂದ ಹಸಿ ವಾಸನೆ ಹೋಗಿಸುವುದು ಹೇಗೆ?

1. ಟವಲ್ ತೇವ ಮತ್ತು ದಪ್ಪವಿರುವುದರಿಂದ ಬ್ಯಾಕ್ಟೀರಿಯಾ ಸೇರಿಕೊಳ್ಳುವ ಸಾಧ್ಯತೆ ಹೆಚ್ಚು. ಟವಲ್ ನಿಂದ ಒರೆಸಿಕೊಂಡ ನಂತರ ಬಿಸಿಲಿರುವ ಜಾಗದಲ್ಲಿ ಅದನ್ನು ಒಣಹಾಕಿ. ಇದರಿಂದ ಬ್ಯಾಕ್ಟೀರಿಯಾ ಕೂಡ ಇಲ್ಲದಾಗುತ್ತೆ ಮತ್ತು ವಾಸನೆಯೂ ಬರುವುದಿಲ್ಲ.

2. ಟವಲನ್ನು ಪ್ರತಿನಿತ್ಯವೂ ಬಳಸುವುದರಿಂದ ವಾರಕ್ಕೊಮ್ಮೆ ಅದನ್ನು ಚೆನ್ನಾಗಿ ಶುದ್ಧಗೊಳಿಸುವುದು ಮುಖ್ಯ. ಬಿಸಿ ನೀರಿನಲ್ಲಿ ಡಿಟರ್ಜೆಂಟ್ ಹಾಕಿ 30-45 ನಿಮಿಷ ನೆನೆಸಿದ ನಂತರ ಒಗೆದು ಒಣಗಿಹಾಕಬೇಕು.

3. ಟವಲ್ ನಿಂದ ಕೆಟ್ಟ ವಾಸನೆ ಹೋಗಿಸುವ ಸುಲಭ ಉಪಾಯವೆಂದರೆ ಅಡುಗೆ ಸೋಡಾ ಬಳಕೆ. ಬಿಸಿ ನೀರಿಗೆ ಅಡುಗೆ ಸೋಡಾ ಬೆರೆಸಿ 20-30 ನಿಮಿಷ ನೆನೆಸಿ ಒಗೆದರೆ ವಾಸನೆ ಇರುವುದಿಲ್ಲ.

4. ಟವಲ್ ನಲ್ಲಿ ಸೇರಿಕೊಂಡಿರುವ ಧೂಳು ಮತ್ತು ಕಲೆ ತೆಗೆಯಲು ಮೃದು ಬ್ರಶ್ ಉಪಯೋಗಿಸಿ.

5. ಟವಲ್ ಘಮ ಘಮ ಎನ್ನಬೇಕೆಂದಿದ್ದರೆ ಲಭ್ಯವಿರುವ ಫ್ಯಾಬ್ರಿಕ್ ಕಂಡೀಶನರ್ ಬಳಸಬಹುದು. ಇದು ಹೆಚ್ಚು ಕಾಲ ಸುವಾಸನೆ ಉಳಿದುಕೊಳ್ಳುವಂತೆ ಮಾಡುತ್ತೆ.

6. ಫ್ಯಾಬ್ರಿಕ್ ಕಂಡೀಶನರ್ ನಿಮಗೆ ಇಷ್ಟವಿಲ್ಲವೆಂದರೆ ವೈಟ್ ವಿನೆಗರ್ ಬಳಸಬಹುದು. ಇದು ಟವಲ್ ಅತಿ ಬೇಗನೆ ಶುದ್ಧಗೊಳ್ಳುವಂತೆ ಮಾಡುತ್ತದೆ.

7. ಟವಲ್ ಬಟ್ಟೆ ದಪ್ಪವಿರುವುದರಿಂದ ಒಣಗಿಸಲು ಡ್ರೈಯರ್ ಬಳಸಬಹುದು.

English summary

Tips to Remove Mildew Smell from Towel | Maintainance of Towel | ಟವಲ್ ನಿಂದ ಹಸಿ ವಾಸನೆ ಹೋಗಿಸುವ ವಿಧಾನ | ಟವಲ್ ಶುದ್ಧವಾಗಿಡುವುದು ಹೇಗೆ?

Having a stinky towel? A towel starts stinking when it is left out wet. Preventing the towels from getting molds can help get rid of damp smell from it. Here are few tips to remove mildew smell from towels.
Story first published: Wednesday, November 9, 2011, 17:34 [IST]
X
Desktop Bottom Promotion