For Quick Alerts
ALLOW NOTIFICATIONS  
For Daily Alerts

ಇಡ್ಲಿ ಬಗ್ಗೆ ಇಲ್ಲಿದೆ ಸ್ವಾರಸ್ಯಕರ ಸಂಗತಿಗಳು!

|

ಇವತ್ತು ನಿಮ್ಮನೆಯಲ್ಲಿ ಬೆಳಿಗ್ಗೆ ತಿಂಡಿಗೇನು? ಅಯ್ಯೋ ನಾಳೆ ಏನ್ ತಿಂಡಿ ಮಾಡೋದು? ಬೆಳಿಗ್ಗೆ ನನ್ನ ಯಜಮಾನ್ರಿಗೆ ಬೇಗ ಹೋಗ್ಬೇಕಂತೆ ಸುಲಭವಾಗಿ, ಬೇಗ ಆಗೋ ತಿಂಡಿ ಯಾವುದು? ಇವತ್ತು ತಿಂಡಿ ಮಾಡೋಕೇ ಬೇಜಾರು, ಹೋಟೆಲ್ ನಿಂದ ಏನಾದ್ರೂ ತರಿಸೋಣ್ವ? ಇಂಥ ಪ್ರಶ್ನೆಗಳಿಗೆಲ್ಲ ಉತ್ತರ ಏನು ಹೇಳಿ? ಸರಿ ಉತ್ತರ ಇಡ್ಲಿ.

ರುಚಿ ರುಚಿಯಾದ ಆ ಮೆತ್ತನೇಯ ಇಡ್ಲಿ ನೆನಪು ಮಾಡಿಕೊಂಡ್ರೆ ಬಾಯಲ್ಲೆಲ್ಲಾ ನೀರೂರತ್ತೆ ಅಲ್ವ? ಒಂದು ವಿಶೇಷವಾದ ತಿಂಡಿ ಅಂತ ನೆನಪು ಮಾಡಿಕೊಂಡ್ರೆ ಮನಸ್ಸಿಗೆ ಮೊದಲು ಬರೋದೇ ಇಡ್ಲಿ ಮತ್ತು ಚಟ್ನಿ, ಅಥವಾ ಇಡ್ಲಿ ಮತ್ತು ಸಾಂಬಾರ್.

ಭಾರತದಲ್ಲೇ ಅತ್ಯಂತ ಜನಪ್ರಿಯವಾದ ಹಾಗೂ ಇಷ್ಟವಾದ ತಿಂಡಿ ಈ ಇಡ್ಲಿ. ಈ ರುಚಿಕರ ತಿಂಡಿಯನ್ನ ಕೊಡುಗೆಯಾಗಿ ಕೊಟ್ಟ ದಕ್ಷಿಣ ಭಾರತದ ಭಾಣಸಿಗರಿಗೆ ಒಂದು ಸಲಾಂ ಹೇಳಲೇ ಬೇಕು!

ಇಡ್ಲಿ ರುಚಿ ಸವಿದವರಿಗೆ ಗೊತ್ತು

ಇಡ್ಲಿ ರುಚಿ ಸವಿದವರಿಗೆ ಗೊತ್ತು

• ಇಡ್ಲಿ ಅತ್ಯಂತ ಬೇಗ ಹಾಗೂ ಸುಲಭವಾಗಿ ಮಾಡಬಹುದಾದಂತಹ ತಿಂಡಿಗಳಲ್ಲಿ ಒಂದು. ಸಾಮಾನ್ಯವಾಗಿ ಹೋಟೆಲ್ ಗಳಲ್ಲಿಯೂ ಯಾವುದೇ ಸಮಯಕ್ಕೆ ಅದರಲ್ಲೂ ಬೆಳ್ಳಂಬೆಳಗ್ಗೆಯೂ ತಯಾರಿರೋ ತಿಂಡಿ ಅಂದ್ರೆ ಅದ್ ಇಡ್ಲಿ ಮಾತ್ರ

ಪೌಷ್ಠಿಕ ಆಹಾರ

ಪೌಷ್ಠಿಕ ಆಹಾರ

• ಅನೇಕ ಆಹಾರ ತಜ್ಞರೂ ಕೂಡ ಇಡ್ಲಿ ಆರೋಗ್ಯಕರವಾದ ಮತ್ತು ದೇಹಕ್ಕೆ ಪೌಷ್ಠಿಕತೆಯನ್ನು ನೀಡುವಂತಹ ಆಹಾರ ಎಂದು ಪರಿಗಣಿಸಿದ್ದಾರೆ. ಇಡ್ಲಿಯನ್ನ ನಮ್ಮ ಪ್ರತಿದಿನದ ಆಹಾರದಲ್ಲಿ ಒಂದಾಗಿ ಸೇವಿಸೋದ್ರಿಂದ ತೂಕ ಇಳಿಸಲು ಕೂಡ ಸಹಾಯಕ ಎಂದು ಅಭಿಪ್ರಾಯಪಟ್ಟಿದ್ದಾರೆ.

ಉತ್ತಮ ಜೀರ್ಣಶಕ್ತಿ

ಉತ್ತಮ ಜೀರ್ಣಶಕ್ತಿ

• ಇಡ್ಲಿಯಲ್ಲಿ ಅಷ್ಟೊಂದು ಕ್ಯಾಲರಿ ಇಲ್ಲದೇ ಇರುವುದರಿಂದ ಇದು ಹೆಚ್ಚು ಆರೋಗ್ಯಕರ. ಇದನ್ನು ಆವಿಯಲ್ಲಿಯೇ ಬೇಯಿಸುವುದರಿಂದ ಉತ್ತಮ ಜೀರ್ಣಶಕ್ತಿಯನ್ನು ಹೊಂದಿದೆ.

700 ದಶಕದಲ್ಲೇ ಇತ್ತು ಇಡ್ಲಿ

700 ದಶಕದಲ್ಲೇ ಇತ್ತು ಇಡ್ಲಿ

• 700 ದಶಕದಲ್ಲಿ ಇಡ್ಲಿಯನ್ನು ಕಂಡುಹಿಡಿಯಲಾಯಿತು ಎಂದು ವರದಿಯಾಗಿದೆ. ಕ್ರಿ.ಶ 920 ರಲ್ಲಿ ಶಿವಕೋಟಿಯಾಚಾರ್ಯರಿಂದ ವಡ್ಡಾರಾಧನೆ ಎಂಬ ಕನ್ನಡ ಬರಹದಲ್ಲಿ ಇಡ್ಲಿಯ ಬಗ್ಗೆ ಮೊದಲಿನ ಉಲ್ಲೇಖವಿದೆ. ಕನ್ನಡ ರಾಜ ಮತ್ತು ವಿದ್ವಾಂಸ ಮೂರನೇ ಸೋಮೇಶ್ವರ ತನ್ನ ವಿಶ್ವಕೋಶದಲ್ಲಿ ಕ್ರಿ.ಶ 1130ರಲ್ಲಿ ಸಂಸ್ಕೃತದಲ್ಲಿಯೂ ಇಡ್ಲಿಯನ್ನು ಉಲ್ಲೇಖಿಸಿದ್ದಾನೆ.

ವಿವಿಧ ರೀತಿಯ ಇಡ್ಲಿ ಇದೆ ಗೊತ್ತಾ

ವಿವಿಧ ರೀತಿಯ ಇಡ್ಲಿ ಇದೆ ಗೊತ್ತಾ

• ಇಡ್ಲಿ ಅಂದ್ರೆ ಕೇವಲ ಅಕ್ಕಿಯಿಂದ ಮಾಡಿದ್ದು ಮಾತ್ರವಲ್ಲ, ಜನರು ರವೆ ಇಡ್ಲಿಯನ್ನು ಕೂಡ ಅಷ್ಟೇ ಇಷ್ಟಪಡುತ್ತಾರೆ. ಹುರಿದ ಇಡ್ಲಿ, ಚಾಕಲೇಟ್ ಇಡ್ಲಿ, ಖಾರ ಇಡ್ಲಿ ಹೀಗೆ ವಿವಿಧ ರೀತಿಯಲ್ಲಿಯೂ ಇಡ್ಲಿಯನ್ನು ತಯಾರು ಮಾಡಬಹುದು.

ಬೆಂಗಳೂರಿನ ರುಚಿ ಇನ್ನೆಲ್ಲೂ ಸಿಗಲ್ಲ

ಬೆಂಗಳೂರಿನ ರುಚಿ ಇನ್ನೆಲ್ಲೂ ಸಿಗಲ್ಲ

* ಕರ್ನಾಟಕದಲ್ಲಿ ಅದರಲ್ಲೂ ನಮ್ಮ ಬೆಂಗಳೂರಿನಲ್ಲಿ ಅತ್ಯಂತ ರುಚಿಕರವಾದ ಇಡ್ಲಿ ಸಾಮಾನ್ಯವಾಗಿ ಯಾವುದೇ ಹೋಟೇಲ್ ಗಳಲ್ಲಿ ಲಭ್ಯ. ಅದರಲ್ಲೂ ಮಲ್ಲಿಗೆ ಇಡ್ಲಿ, ತಟ್ಟೆ ಇಡ್ಲಿ, ಕೊಟ್ಟೆ ಇಡ್ಲಿ (ಎಲೆಯಲ್ಲಿ ಮಾಡುವುದು) ಹೀಗೆ ನಾನಾ ರೀತಿಯ ಇಡ್ಲಿಗಳು ದೊರೆಯುತ್ತವೆ.

ಚಟ್ನಿ ಸಹಾ ಸಿಕ್ಕಾಪಟ್ಟೆ ಫೇಮಸ್‌

ಚಟ್ನಿ ಸಹಾ ಸಿಕ್ಕಾಪಟ್ಟೆ ಫೇಮಸ್‌

* ಬೆಂಗಳೂರಿನ 'ಎಸ್ ಎಲ್ ವಿ' ಮತ್ತು 'ಬ್ರಾಹ್ಮಣರ ತಿಂಡಿ' ಹೋಟೆಲ್ ಗಳಲ್ಲಿ ಇಡ್ಲಿ ಹಾಗೂ ಅದರ ಜೊತೆಗೆ ಕೊಡುವ ಚಟ್ನಿ ಸಿಕ್ಕಾಪಟ್ಟೆ ಜನಪ್ರಿಯ.

ರೆಡಿಮೇಡ್‌ ಇಡ್ಲಿ ಸಹ ಸಿದ್ಧ

ರೆಡಿಮೇಡ್‌ ಇಡ್ಲಿ ಸಹ ಸಿದ್ಧ

* ಈಗ ರೆಡಿಮೇಡ್, ಶುದ್ಧ ಇಡ್ಲಿ ಹಿಟ್ಟುಗಳೂ ಮಾರುಕಟ್ಟೆಯಲ್ಲಿ ಲಭ್ಯ. ಹಾಗಾಗಿ ಬ್ಯಾಚುಲರ್ಸ್ ಗಳೂ ಕೂಡ ಸುಲಭವಾಗಿ ಇಡ್ಲಿ ಮಾಡಿಕೊಂಡು ಸವಿಯಬಹುದು.

ಇಡ್ಲಿ ಉಳಿದರೆ ರುಚಿಕರ ಉಪ್ಪಿಟ್ಟು!

ಇಡ್ಲಿ ಉಳಿದರೆ ರುಚಿಕರ ಉಪ್ಪಿಟ್ಟು!

* ಬೆಳಗಿನ ಇಡ್ಲಿ ಉಳಿದರೆ ಸಂಜೆ ಇಡ್ಲಿ ಉಪ್ಪಿಟ್ಟು ತಯಾರು ಮಾಡಬಹುದು ಅನ್ನೊದು ಯಾವ ಹೆಂಗಸರಿಗೆ ತಾನೇ ಗೊತ್ತಿಲ್ಲ!

ಮತ್ತೆ ಇನ್ಯಾಕೆ ತಡ, ಬನ್ನಿ ಇವತ್ತೆ ಈ ಇಡ್ಲಿ ರುಚಿ ನೋಡ್ಕೊಂಡು ಬರೋಣ. ಹಾಗೆಯೇ ಮನೆಯಲ್ಲೂ ತಯಾರುಮಾಡಿ ಮನೆಯವರ ಮೆಚ್ಚುಗೆ ಗಳಿಸಿಕೊಳ್ಳೊದನ್ನೂ ಮರಿಬೇಡಿ. ಇಡ್ಲಿ ರುಚಿ ಸವಿದವರೇ ಬಲ್ಲ!

English summary

Mind Blowing Facts About Idli

Here we are discussing about Mind Blowing Facts About Idli. we have to salute south Indians for creating such delicious items of the world.Read more.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X