For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ಪಾಸಿಟಿವ್ ಶಕ್ತಿಯನ್ನು ಹೆಚ್ಚಿಸಲು ಒಂದಿಷ್ಟು ಸರಳ ವಾಸ್ತು ಶಾಸ್ತ್ರ

|

ಕೆಲವೊಮ್ಮೆ ಸಮಸ್ಯೆಗಳಿಗೆ ಕಾರಣಗಳು ಸ್ಪಷ್ಟವಾಗಿ ತಿಳಿಯುತ್ತವೆ ಹೀಗಾದ ಸಂದರ್ಭದಲ್ಲಿ ಇದಕ್ಕೆ ಪರಿಹಾರ ಸುಲಭವಾಗಿರುತ್ತದೆ ಆದರೆ ಸಮಸ್ಯೆಯ ಮೂಲವೇ ತಿಳಿಯದ ಸಂದರ್ಭದಲ್ಲಿ ಪರಿಹಾರವಾದರೂ ಹೇಗೆ ಕಂಡುಹಿಡಿಯಲು ಸಾಧ್ಯ. ಹೀಗೆ ನಿಮ್ಮ ಜೀವನದಲ್ಲೂ ಹಲವುಬಾರಿ ಯಾವುದೇ ಸರಿಯಾದ ಕಾರಣವಿಲ್ಲದೆ ಸಮಸ್ಯೆಗಳು ಎದುರಾಗಿರಬಹುದು.

ಯಾವುದೇ ವೈದ್ಯರಲ್ಲಿ ಹೋದರೂ ಅನಾರೋಗ್ಯವೇ ಗುಣವಾಗುವುದಿಲ್ಲ, ಯಾವುದೇ ವ್ಯವಹಾರದಲ್ಲೂ ಲಾಭವಾಗುವುದಿಲ್ಲ ಹೀಗೆ ಅನೇಕ ವೇಳೆ ಏನೇ ಮಾಡಿದರೂ ನಷ್ಟವೇ ಆಗುತ್ತಿರಬಹುದು. ನಿಮ್ಮ ಪ್ರಯತ್ನದ ಹೊರತಾಗಿಯೂ ನಿಮ್ಮ ಯಶಸ್ಸಿನಲ್ಲಿ ನಿಮ್ಮ ಕೈ ಹಿಡಿಯುವ ಇನ್ನೂ ಅನೇಕ ವಿಷಗಳಿವೆ. ಇತ್ತೀಚಿನ ಒತ್ತಡದ ದಿನಚರಿಗಳಲ್ಲಿ ನಮ್ಮ ಆರೋಗ್ಯ ಯಾಕೆ ಹಾಳಗುತ್ತಿದೆ, ಸಂಪತ್ತು ಏನಾಗುತ್ತಿದೆ ಸಂಬಂಧಗಳು ಯಾಕೆ ಹಾಳಾಗುತ್ತಿವೆ ಎಂದು ತಿಳಿಯಲು ನಮ್ಮಿಂದ ಆಗುತ್ತಿಲ್ಲ.

ಇವುಗಳಲ್ಲಿ ಹೆಚ್ಚಿನವು ವಾಸ್ತು ಅಥವಾ ಫೆಂಗ್ ಶುಯಿ ಯಲ್ಲಿರುವ ದೋಷದ ಕಾರಣದಿಂದ ಆಗುತ್ತಿವೆ. ಇಲ್ಲಿ ಕೊಟ್ಟಿರುವ ಕೆಲವು ಸಲಹೆಗಳು ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ವಾಸ್ತು ಮತ್ತು ಫೆಂಗ್ ಶುಯಿ ಪರಿಣತರು ನೀಡಿರುವ ಕೆಲವು ಸಲಹೆಗಳು ನಿಮ್ಮ ಬದುಕನ್ನು ಹಸನು ಮಾಡಲು ಸಹಕಾರಿಯಾಗಿವೆ. ಅವುಗಳಲ್ಲಿ ಕೆಲವು ಪ್ರಮುಖವಾದವು ಇಲ್ಲಿವೆ....

ಮನೆಯಲ್ಲಿ ಪಾಸಿಟಿವ್ ಶಕ್ತಿ ಹೆಚ್ಚಿಸಲು ವಾಸ್ತು ಶಾಸ್ತ್ರ

ಮನೆಯ ದಿಕ್ಕು

ಮನೆಯ ದಿಕ್ಕು

ಮನೆಯ ದಿಕ್ಕುಗಳನ್ನು ಕಂಡು ಹಿಡಿಯಲು ಮೊದಲು ಕೈಯಲ್ಲಿ ದಿಕ್ಸೂಚಿಯನ್ನು ಹಿಡಿದುಕೊಂಡು ಮನೆಯ ಮಧ್ಯಭಾಗದಲ್ಲಿ ನಿಂತುಕೊಳ್ಳಿ. ಮನೆಯ ಮುಖ್ಯದ್ವಾರ ಮನೆಯ ಬಾಯಿ ಇದ್ದಂತಿದ್ದು ಶಕ್ತಿಯನ್ನು ತರುವಂತದಾಗಿರುತ್ತದೆ. ಅಲ್ಲದೆ ಇದು ಆನೇಕ ಕಷ್ಟಗಳು ಮತ್ತು ದೌರ್ಭಾಗ್ಯವನ್ನು ತರುತ್ತದೆ. ಹಾಗಾಗಿ ನಿಮ್ಮ ಮನೆಯ ಮುಖ್ಯದ್ವಾರ ದಕ್ಷಿಣ ಅಥವಾ ಪಶ್ಚಿಮಾಭಿಮುಖವಾಗಿದ್ದಲ್ಲಿ ಮನೆಯ ಹೊರಬಾಗಿಲಿಗೆ ಎರಡು ಹನುಮಾನ್‍ ಜೀ ಟೈಲ್ಸ್‌ಗಳನ್ನು ಹಾಕಿ ನಂತರ ಆಗುವ ಬದಲಾವಣೆಯನ್ನು ನೀವೇ ನೋಡಿ.

ದೇವರಮನೆ ಅಥವಾ ಪೂಜಾ ಕೋಣೆ

ದೇವರಮನೆ ಅಥವಾ ಪೂಜಾ ಕೋಣೆ

ದೇವರಮನೆ ಅಥವಾ ಪೂಜಾ ಕೋಣೆ ಎಲ್ಲಾ ವಾಸ್ತು ನಿಯಮಗಳ ರಾಜನಿದ್ದಂತೆ. ಇದನ್ನು ಈಶಾನ್ಯ ದಿಕ್ಕಿನಲ್ಲಿ ಬರುವಂತೆ ಇಡೀ ಆಗ ನೋಡಿ ನೀವು ಅಂದುಕೊಂಡಂತೆ ಎಲ್ಲವೂ ನಡೆಯುತ್ತವೆ. ಹಾಗಾಗಿ ನೀವು ಪ್ರಾರ್ಥನೆ ಮಾಡುವ ಸಮಯದಲ್ಲಿ ಪೂರ್ವಾಭಿಮುಖವಾಗಿ ಕುಳಿತು ಪ್ರಾರ್ಥನೆ ಮಾಡಿ.

ಅಡುಗೆ ಮನೆ

ಅಡುಗೆ ಮನೆ

ಅಡುಗೆ ಮನೆಯು ಸಮೃದ್ಧಿಯ ಸಂಕೇತವಾಗಿರುತ್ತದೆ. ಹಾಗಾಗಿ ಅಡಿಗೆ ಮನೆಯು ಆಗ್ನೇಯ ದಿಕ್ಕಿನಲ್ಲಿರಬೇಕು. ಹಾಗೇನಾದರೂ ಆಗದೇ ಅಡಿಗೆ ಮನೆಯು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇದ್ದಲ್ಲಿ ಅದು ಹಣಕಾಸಿನ ಹಾಗೂ ಅನೇಕ ಆರೋಗ್ಯದ ಸಮಸ್ಯೆಗೆ ಕಾರಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಮೇಲ್ಛಾವಣಿಯಲ್ಲಿ (ಸೀಲಿಂಗ್) ಮೂರು ಕಂಚಿನ ಬಟ್ಟಲುಗಳನ್ನು ತಲೆಕೆಳಕಾಗಿ ನೇತುಹಾಕಿ ಆದರೆ ಅದನ್ನು ಸ್ಟವ್‌ ಮೇಲೆ ನೇರವಾಗಿ ನೇತು ಹಾಕಬೇಡಿ.

ಮಲಗುವ ಕೋಣೆ

ಮಲಗುವ ಕೋಣೆ

ಮಲಗುವ ಕೋಣೆ ಸ್ಥಿರತೆಯನ್ನು ಕಾಪಾಡುವಂತಹದ್ದು ಆ ಕೋಣೆಯ ಬಾಗಿಲು ನೈಋತ್ಯ ದಿಕ್ಕಿಗೆ ಇರಬೇಕು. ಮತ್ತು ನೀವು ದಕ್ಷಿಣಾಭಿಮುಖವಾಗಿ ಅಥವಾ ಪಶ್ಚಿಮಾಭಿಮುಖವಾಗಿ ತಲೆ ಹಾಕಿ ಮಲಗಬೇಕು. ಆದರೆ ಮನೆಯ ಯಜಮಾನ ಯಾವುದೇ ಕಾರಣಕ್ಕೂ ಈಶಾನ್ಯ ದಿಕ್ಕಿಗೆ ತಲೆಹಾಕಿ ಮಲಗಬಾರದು.

ಮನೆಯಲ್ಲಿ ಕನ್ನಡಿಯನ್ನು ಇಡುವ ಸ್ಥಾನ...

ಮನೆಯಲ್ಲಿ ಕನ್ನಡಿಯನ್ನು ಇಡುವ ಸ್ಥಾನ...

ನಿಲುವುಗನ್ನಡಿಯಲ್ಲಿ ನೋಡಿದಾಗ ನಿಮ್ಮ ತಿಜೋರಿ ಅಥವಾ ಗಲ್ಲಾಪೆಟ್ಟಿಗೆ ಕಾಣುವಂತಿರಬಾರದು.

ಅಮೂಲ್ಯ ವಸ್ತುಗಳನ್ನು ಪಶ್ಚಿಮಾಭಿಮುಖ ಗೋಡೆಯಲ್ಲಿಡಬೇಕು...

ಅಮೂಲ್ಯ ವಸ್ತುಗಳನ್ನು ಪಶ್ಚಿಮಾಭಿಮುಖ ಗೋಡೆಯಲ್ಲಿಡಬೇಕು...

ಅಮೂಲ್ಯ ಆಭರಣ, ಚಿನ್ನ ಬೆಳ್ಳಿ, ನಗದು ಹಣವನ್ನು ಇಡುವ ಆಲ್ಮೇರಾವನ್ನು ಮನೆಯ ಪಶ್ಚಿಮಾಭಿಮುಖ ಗೋಡೆಗೆ ಆನಿಸಿಡಬೇಕು. ಅಂದರೆ ಆಲ್ಮೇರಾವನ್ನು ತೆರೆದರೆ ಇದು ಪೂರ್ವದಿಕ್ಕಿಗೆ ತೆರೆಯುವಂತಿರಬೇಕು. ಇದು ಸಾಧ್ಯವಾಗದಿದ್ದರೆ ನೈಋತ್ಯ ದಿಕ್ಕಿನಲ್ಲಿಟ್ಟು ತೆರೆದಾಗ ಉತ್ತರ ಅಥವಾ ಪೂರ್ವ ದಿಕ್ಕಿಗೆ ತೆರೆಯುವಂತಿರಬೇಕು. ಇದೂ ಸಾಧ್ಯವಾಗದಿದ್ದರೆ ದಕ್ಷಿಣಾಭಿಮುಖವಾಗಿ ಇರಿಸಿ ಉತ್ತರ ದಿಕ್ಕಿನತ್ತ ಬಾಗಿಲು ತೆರೆಯುವಂತಿರಬೇಕು. ಇದರಿಂದ ಸಮೃದ್ಧಿ ಮತ್ತು ನೆಮ್ಮದಿ ನೆಲೆಸುತ್ತದೆ.

ಮನೆಯ ನಲ್ಲಿಗಳು ತೊಟ್ಟಿಕ್ಕಬಾರದು

ಮನೆಯ ನಲ್ಲಿಗಳು ತೊಟ್ಟಿಕ್ಕಬಾರದು

ಮನೆಯಲ್ಲಿ ಅಥವಾ ವಾಣಿಜ್ಯ ಸ್ಥಳಗಳಲ್ಲಿರುವ ಯಾವುದೇ ನಲ್ಲಿಯಿಂದ ನೀರು ತೊಟ್ಟಿಕ್ಕದಂತೆ ನೋಡಿಕೊಳ್ಳುವುದು ಅಗತ್ಯ. ಯಾವಾಗ ತೊಟ್ಟಿಕ್ಕುವುದು ಕಂಡುಬಂದಿತೋ ತಕ್ಷಣವೇ ಇದನ್ನು ರಿಪೇರಿ ಮಾಡಿಸಬೇಕು. ನೀರು ಪೋಲಾಗುವುದು ಹಣ ಪೋಲಾದಂತೆ ಎಂದು ವಾಸ್ತು ತಿಳಿಸುತ್ತದೆ.

ಹಣಕಾಸಿನ ಸಮಸ್ಯೆ ಇದ್ದರೆ

ಹಣಕಾಸಿನ ಸಮಸ್ಯೆ ಇದ್ದರೆ

ಒಂದು ವೇಳೆ ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆ ಇದ್ದರೆ ಅಥವಾ ಈಗಿರುವುದಕ್ಕಿಂತಲೂ ಹೆಚ್ಚಿನ ವರಮಾನವನ್ನು ಬಯಸುವುದಾದರೆ ನಿಮ್ಮ ಮನೆಯ ಆವರಣದಲ್ಲಿ ಆಗ್ನೇಯ ದಿಕ್ಕಿನಲ್ಲೊಂದು ಕಿತ್ತಳೆ ಗಿಡ ನೆಟ್ಟು ಚೆನ್ನಾಗಿ ಪೋಷಿಸಿ.

ಲಕ್ಷ್ಮಿ ದೇವರ ಪಟ

ಲಕ್ಷ್ಮಿ ದೇವರ ಪಟ

ಮನೆಯಲ್ಲಿ ಸಂಪತ್ತು ಸದಾ ತುಂಬಿರಲು ಲಕ್ಷ್ಮಿದೇವರ ಪಟ ಅಥವಾ ಮುದ್ರಿತ ಗೋಡೆಯ ಟೈಲ್ಸ್ ಅನ್ನು ಮನೆಯ ಪ್ರಧಾನ ಬಾಗಿಲಿಗೆ ಎದುರಾಗಿ, ಅಂದರೆ ಮನೆಯ ಒಳಗೆ ಅಡಿಯಿಡುತ್ತಿದ್ದಂತೆಯೇ ಕಾಣುವಂತೆ ಇರಿಸಿ. ಆದರೆ ಇದಕ್ಕೆ ಎದುರಾಗಿ ಪಾದರಕ್ಷೆಗಳು ಅಥವಾ ಪಾದರಕ್ಷೆಗಳ ಕಪಾಟು ಇರಿಸಕೂಡದು. ಒಂದು ಜೊತೆ ಲಕ್ಷ್ಮೀಪಾದಗಳನ್ನು ಮನೆಯ ಪ್ರಧಾನ ಬಾಗಿಲಿನ ಬಳಿ ಇರಿಸಿ. ಇವುಗಳು ಮನೆಯೊಳಕ್ಕೆ ಹೋಗುವ ದಿಕ್ಕಿನಲ್ಲಿರಬೇಕು. ಇದರಿಂದ ಮನೆಯಲ್ಲಿ ಸಮೃದ್ಧಿ ಆಗಮಿಸುತ್ತದೆ.

ಮನೆಯ ಪ್ರಧಾನ ಬಾಗಿಲು

ಮನೆಯ ಪ್ರಧಾನ ಬಾಗಿಲು

ನಿಮ್ಮ ಮನೆಯ ಪ್ರಧಾನ ಬಾಗಿಲು ನಿಮ್ಮ ಮನೆಯ ಎಲ್ಲಾ ಬಾಗಿಲುಗಳಿಗಿಂತ ದೊಡ್ಡದಾಗಿರಬೇಕು. ಬೇರೆಲ್ಲಾ ಬಾಗಿಲುಗಳು ಕೊಂಚವಾದರೂ ಇದಕ್ಕಿಂತ ಚಿಕ್ಕದಾಗಿರುವಂತೆ ನೋಡಿಕೊಳ್ಳಿ. ಪ್ರಧಾನ ಬಾಗಿಲು ಎರಡು ಹಲಗೆಗಳನ್ನು ಹೊಂದಿರಬೇಕು. ಇದು ಮನೆಯ ಒಳಭಾಗಕ್ಕೆ ತೆರೆಯುವಂತೆ, ಹಿಡಿಕೆ ಇರುವ ಭಾಗ ಮೇಲಿನಿಂದ ನೋಡಿದರೆ ಪ್ರದಕ್ಷಿಣವಾಗಿ ತೆರೆಯುವಂತಿರಬೇಕು. ಈ ಬಾಗಿಲು ಮನೆಗೆ ಶುಭ ತರುತ್ತದೆ.

ಒಣಗಿದ ಹೂವುಗಳು ಮನೆಮಯಲ್ಲಿರುವುದು ತರವಲ್ಲ

ಒಣಗಿದ ಹೂವುಗಳು ಮನೆಮಯಲ್ಲಿರುವುದು ತರವಲ್ಲ

ವಾಸ್ತುಶಾಸ್ತ್ರದ ಪ್ರಕಾರ ಒಂದು ದಿನದ ಬಳಿಕ ಬಾಡಿದ ಮತ್ತು ಒಣಗಿದ ಹೂವುಗಳಲ್ಲಿ ಧನಾತ್ಮ ಶಕ್ತಿ ಖಾಲಿಯಾಗಿ ಉಳಿದಿದ್ದ ಸ್ಥಳದಲ್ಲಿ ಹೊರಗಿನ ಋಣಾತ್ಮಕ ಶಕ್ತಿ ಆಗಮಿಸುವುದರಿಂದ ಮನೆಯಲ್ಲಿ ಋಣಾತ್ಮಕ ಪರಿಣಾಮಗಳನ್ನು ಕಾಣಬಹುದು. ಈಗಾಗಲೇ ಇರುವ ತೊಂದರೆಗಳು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಬಹುದು. ಒಂದು ವೇಳೆ ಒಣ ಹೂವುಗಳಿಂದ ಅಲಂಕರಿಸುವ ಹವ್ಯಾಸವಿದ್ದರೆ ಪ್ರತಿ ಪಕಳೆಯನ್ನೂ ಬಣ್ಣದ ನೀರಿನಲ್ಲಿ ಮುಳುಗಿಸಿ ಒಣಗಿಸಿಯೇ ಉಪಯೋಗಿಸಬಹುದು ಎಂದು ವಾಸ್ತುಶಾಸ್ತ್ರ ಹೇಳುತ್ತದೆ.

ಬಾತ್‌ರೂಮ್ ಹಾಗೂ ಟಾಯ್ಲೆಟ್

ಬಾತ್‌ರೂಮ್ ಹಾಗೂ ಟಾಯ್ಲೆಟ್

ಬಾತ್‌ರೂಮ್ ಮತ್ತು ಟಾಯ್ಲೆಟ್‌ಗಳು ಕಷ್ಟವನ್ನು ತರುವ ಶಕ್ತಿಯನ್ನು ಹೊಂದಿರುವ ಸ್ಥಳವಾಗಿದ್ದು, ಇವು ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನಲ್ಲಿರಬೇಕು. ಇವುಗಳು ಯಾವುದೇ ಕಾರಣಕ್ಕೂ ಉತ್ತರ ಅಥವಾ ಈಶಾನ್ಯ ದಿಕ್ಕಿಗೆ ಎಂದಿಗೂ ಇರಬಾರದು. ಹಾಗೆ ಇದ್ದಲ್ಲಿ ಅದು ಹಣಕಾಸು, ಆರೋಗ್ಯ ಮತ್ತು ಶೈಕ್ಷಣಿಕ ಸಮಸ್ಯೆಗಳನ್ನು ತರುತ್ತವೆ.

English summary

Vastu Tips: How to Increase Positive Energy in Home?

Here are some commandments which may help you to increase positive energy in your home. Here are some tips from a Vastu and Feng Shui expert for a life full of harmony.
X
Desktop Bottom Promotion