For Quick Alerts
ALLOW NOTIFICATIONS  
For Daily Alerts

ಮೈಕ್ರೋಫೈಬರ್ ಬಟ್ಟೆಯನ್ನು ತೊಳೆಯುವುದು ಹೇಗೆ?

By Super
|

ಯಪ್ಪಾ ಯಾಕಾದರೂ ಈ ಹೆಣ್ಣು ಜನ್ಮ ಇದೆಯೋ ಎಂದು ಮನೆಯೊಡತಿಯರಿಗೆ ಕಿರಿಕರಿ ಮೂಡಿಸೋ ಕೆಲಸ ಅಂದರೆ ಬಟ್ಟೆ ಒಗೆಯೋದು. ಇತ್ತೀಚಿಗೆ ಹೆಚ್ಚುತ್ತಿರುವ ಕೊಳ್ಳುಭಾಕ ಸಂಸ್ಕೃತಿಯಿಂದಾಗಿ ಮನೆತುಂಬಾ ಬಟ್ಟೆಗಳದ್ದೇ ಸಾಮ್ರಾಜ್ಯ.ಇವುಗಳಲ ಗುಣಮಟ್ಟ, ಸ್ವರೂಪ ಮತ್ತು ಬಟ್ಟೆ ತಯಾರಿಕೆಗೆ ಬಳಸಿದ ವಸ್ತುಗಳ ಆಧಾದರದಲ್ಲಿ ಅವುಗಳ ಸ್ವಚ್ಛತೆ ಹಾಗೂ ನಿರ್ವಹಣೆಯನ್ನು ರೂಡಿಸಿಕೊಳ್ಳಬೇಕಾಗಿರುವುದು ಅನಿವಾರ್ಯ.

ರೇಷ್ಮೆ, ಪಾಲಿಯೆಸ್ಟರ‍್, ಖಾದಿ, ಇವುಗಳ ಸರದಿಯಲ್ಲೇ ಮೈಕ್ರೋಪೈಬರ್ ಬಟ್ಟೆಗಳೂ ಬಂದಿವೆ.ಮೆತ್ತಗಿನ ಜತೆಗೆ ಬೆಚ್ಚಗಿನ ಅನುಭವ ನೀಡುವುದರಿಂದ ಈ ಬಟ್ಟೆ ಇವತ್ತು ಎಲ್ರ ಸಂಗಾತಿಯೇನೋ ಹೌದು. ಆದರೆ ಇದರ ನಿರ್ವಹಣೆ ಮಾತ್ರ ಕಷ್ಟ ಕಷ್ಟ!

ಈ ಕಷ್ಟವನ್ನು ನಿವಾರಿಸೋಕೆ ಇಲ್ಲಿದೆ ಸುಲಭ ಉಪಾಯ.

How To Wash Microfiber Clothes

1)ನಿತ್ಯ ಬಳಸುವ ಗಡುಸಾದ ಬಟ್ಟೆಗಳಿಂದ ಮೈಕ್ರೋಪೈಬರ್ ವಸ್ತ್ರವನ್ನು ಬೇರ್ಪಡಿಸಿ ಇಡಬೇಕು, ಬಟ್ಟೆ ನೆನೆಸುವಾಗಲೂ ಅಷ್ಟೇ,ಇತರ ಬಟ್ಟೆಗಳೊಂದಿಗೆ ನೆನಸಿಡದೆ ಪ್ರತ್ಯೇಕವಾಗಿ ನೆನಸಿಟ್ಟು ತೋಳೆಯಬೇಕು.

2) ಬಟ್ಟೆ ನೆನೆಹಾಕುವುದಕ್ಕಿಂತ ಮುಂಚೆ ಒಂದು ಬಕೇಟ್ನಲ್ಲಿ ಶುದ್ಧವಾದ ತಣ್ಣಿರು ಶೇಖರಿಸಿಟ್ಟುಕೊಳ್ಳಬೇಕು. ನಂತರ ಒಂದು ಅಥವಾ ಬಟ್ಟೆಗಳ ಪ್ರಮಾಣಕ್ಕೆ ಅನುಗುಣವಾಗಿ ಸೋಪಿನಪುಡಿ ಹಾಕಿ ಚೆನ್ನಾಗಿ ನೊರೆ ತರಿಸಿದ ಬಳಿಕವೇ ಬಟ್ಟೆಗಳನ್ನು ನೆನೆನಹಾಕಬೇಕು.

3) ಒಮ್ಮೆ 6 ರಿಂದ 8 ಬಟ್ಟೆ ತೊಳೆದ ನಂತರ ಸೋಪಿನ ನೀರು ಬದಲಿಸಬೇಕು.

4) ಬಟ್ಟೆಗಳನ್ನು ಜಾಲಿಸಿ ತೊಳೆದು ನಂತರ ತಣ್ಣನೆಯ ಅಥವಾ ಬಿಸಿಲು ಇಲ್ಲದ ಪ್ರದೇಶದಲ್ಲಿ ಒಣಹಾಕಬೇಕು.

5) ಇವು ತುಂಬಾ ಗಲೀಜಾಗಿದ್ಬದರೆ, ಒಂದೊಂದೇ ಬಟ್ಟೆಗಳನ್ನು ಪ್ರತ್ಯೇಕವಾಗಿ ತೊಳೆಯಬೇಕು. ತಣ್ಣನೆಯ ಅಥವಾ ಸ್ವಲ್ಪ ಕಾಯಿಸಿದ ನೀರನ್ನು ಬಳಸಿ ನೆನೆಸಿಟ್ಟರೆ ಕಲೆ ಬೇಗ ಹೋಗುತ್ತದೆ.

6) ಬಿಸಿಲಿಗಿಂತ ಹೆಚ್ಚಾಗಿ ಗಾಳಿಯಲ್ಲಿ ಒಣಗಿಸುವುದರಿಂದ ಮೈಕ್ರೋಪೈಬರ‍್ ಬಟ್ಟೆ ಹೆಚ್ಚುದಿನ ಬಾಳಿಕೆ ಬರುತ್ತದೆ.

ವಾಷಿಂಗ್ ಮಷಿನ್ ಬಳಸುವುದಿದ್ದರೆ:

1) ವಾಷಿಂಗ್ ಮಷಿನ್ನಲ್ಲಿ ಈ ಬಟ್ಟೆಗಳನ್ನು ತೊಳೆಯುವಾಗ ಗಲೀಜಾದ ಬಟ್ಟೆ, ನಂಜಾದ ಅಥವಾ ವಿಷಯುಕ್ತ ದ್ರಾವಣ ತಗುಲಿದ ಬಟ್ಟೆಗಳನ್ನು ಪ್ರತ್ಯೇಕವಾಗಿ ತೊಳೆಯಬೇಕು.

2) ಆಯಿಲ್, ಗ್ರಿಸ್ ಅಥವಾ ಇತರೆ ಜಿಡ್ಡು ಕಲೆಯಾದ ಬಟ್ಟೆಗಳನ್ನು ಜಾಸ್ತಿ ಸಮಯ ನೆನೆಹಾಕಬಾರದು. ಸ್ವಲ್ಪ ಸಮಯದಲ್ಲೇ ತೊಳೆದು ಹಾಕಬೇಕು.

3) ವಾಷಿಂಗ್ ಮಷಿನ್ನಲ್ಲಿ ಬಟ್ಟೆಗಳಿಗೆ ಅನುಗುಣವಾಗಿ ನೀರಿನ ಪ್ರಮಾಣ ಇಟ್ಟುಕೊಳ್ಳಬೇಕು. ಸ್ವಲ್ಪ ಪ್ರಮಾಣದಲ್ಲಿ, ಮಧ್ಯಮ ಪ್ರಮಾಣದಲ್ಲಿ ಹಾಗೂ ದೊಡ್ಡದಾದ ಪ್ರಮಾಣದಲ್ಲಿ ನೀರಿರನ್ನು ಬಳಸಿದರೆ ಬಟ್ಟೆಗಳು ಹೆಚ್ಚು ಸ್ವಚ್ಚವಾಗುತ್ತವೆ.

4) ತಣ್ಣನೇ ನೀರಿನಲ್ಲಿ ತೊಳೆದು ನಂತರ ನೆರಳಿನಲ್ಲಿ ಒಣಗಲು ಹಾಕಬದುದು ಅಥವಾ ವಾಷಿಂಗ್ ಮಿಷನ್ನಲ್ಲೇ ಬಾರಕ್ಕೆ ಅನುಗುಣವಾಗಿ ಒಣಗಿಸಬಹುದು.

5) ವಾಷಿಂಗ್ ಮಿಷನ್ನಲ್ಲಿ ಸೋಪಿನ ಪುಡಿಹಾಕುವಾಗ ಸೋಪಿನ ಕವರ್ ಮೇಲೆ ತಿಳಿಸಿದ ಪ್ರಮಾಣದಲ್ಲೇ ಪುಡಿ ಬಳಸುವುದರಿಂದ ಬಟ್ಟೆಗಳ ಬಣ್ಣ ಹಾಗೂ ಗುಣಮಟ್ಟ ಹಾಗೇ ಉಳಿಯುತ್ತದೆ.

6) ಹೆಚ್ಚಿಗೆ ಉಳಿದ ಮಸಿಯಾದ ಹಾಗೂ ಗಲೀಜಾದ ಬಟ್ಟೆಗಳನ್ನು ಪ್ರತ್ಯೇಕವಾಗಿ ತಣ್ಣನೆ ನೀರು ಅಥವಾ ಬಿಸಿ ನೀರಿನಲ್ಲಿ ತೊಳೆಯುವುದು ಸೂಕ್ತ ಹಾಗೂ ಪರಿಣಾಮಕಾರಿ

7) ವಾಷಿಂಗ್ ಮಿಷನ್ನಲ್ಲಿ ಬಟ್ಟೆ ಒಣಗಿಸಬಹುದು ಅಥವಾ ಮನೆಯಲ್ಲಿ ಸ್ಥಳಾವಕಾಶ ವಿದ್ದರೆ ಗಾಳಿಯಲ್ಲಿ ಒಣಗಿಸಿದರೆ ಸೂಕ್ತ.

ಸಲಹೆ ಮತ್ತು ಎಚ್ಚರಿಕೆ:

ಈ ಬಟ್ಟೆಗಳನ್ನು ಒಗೆಯಲು ಮಾರ್ಜಕಗಳನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕು. ಕೆಲವೊಂದು ಸಾಬೂನು ಅಥವಾ ಸಾಬೂನು ಪೌಡರ್ಗಳಲ್ಲಿ ಹೆಚ್ಚಿನ ಪ್ರಮಾಣದ ರಾಸಾಯನಿಕ ಅಡಕವಾಗಿರುವುದರಿಂದ ಬಟ್ಟೆ ಬಹುಬೇಗ ಹಾಳಾಗುತ್ತದೆ. ಮಾರ್ಜಕಗಳ ಪೊಟ್ಟಣದಲ್ಲಿ ನಮೂದಿಸಿರುವ ಪ್ರಮಾಣಗಳನ್ನು ನೋಡಿಯೇ ಅವುಗಳನ್ನು ಬಳಸುವುದು ನಿಮ್ಮ ಜಾಣತನ.

ಬಹುಬೇಗ ಒಣಗಿಸುವ ಉದ್ದೇಶದಿಂದ ಬಿಸಿಲು ಅಥವಾ, ಒಣಗಿಸುವ ಯಂತ್ರಗಳಲ್ಲಿಟ್ಟು ಒಣಗಿಸಬಹುದು. ಆದರೆ ತುಂಬಾ ಹೊತ್ತು ಹಾಗೆಯೇ ಬಿಡುವುದರಿಂದ ಈ ಬಟ್ಟೆಗಳು ಬಹುಬೇಗ ಹಾಳಾಗುತ್ತದೆ. ಇಂದನ ಉಳಿಸುವ ಉದ್ದೇಶವೂ ನಿಮಗಿದ್ದರೆ, ಡ್ರಾಯರ್ನಲ್ಲಿ ಬಟ್ಟೆ ಒಣಹಾಕುವಾಗ ಒಪ್ಪವಾಗಿ ನೇತು ಹಾಕಿ. ಇದರಿಂದಾಗಿ ಶಾಖ ಸಮಪ್ರಮಾಣದಲ್ಲಿ ಬಟ್ಟೆಯ ಎಲ್ಲೆಡೆ ಹಾಯ್ದು ಕಡಿಮೆ ಸಮಯದಲ್ಲಿ ಒಣಗುತ್ತದೆ.

English summary

How To Wash Microfiber Clothes | Tips For Clothes Washing | ಮೈಕ್ರೋಫೈಬರ್ ಬಟ್ಟೆಯನ್ನು ತೊಳೆಯುವುದು ಹೇಗೆ?| ಬಟ್ಟೆ ತೊಳೆಯಲು ಟಿಪ್ಸ್

Microfiber cloths have worked their way into household tasks that rags, sponges or other cleaning utensils used to do. The specially woven synthetic cloths will last a long time if you know how to take care of them.
X
Desktop Bottom Promotion