For Quick Alerts
ALLOW NOTIFICATIONS  
For Daily Alerts

ವಿವಿಧ ಬಗೆಯ ತುಳಸಿ ಗಿಡಗಳು

|

ಇಂದು ಚಾಂದ್ರಮಾನ ಕಾರ್ತಿಕಮಾಸದ ಶುಕ್ಲಪಕ್ಷದ 12ನೇ ದಿನ. ಅಂದರೆ ದ್ವಾದಶಿ, ವಿಷ್ಣು ಸ್ವರೂಪಿ ನೆಲ್ಲಿಕಾಯಿ ಗಿಡದೊಂದಿಗೆ ತುಳಸಿಯ ವಿವಾಹವನ್ನು ಶ್ರದ್ಧಾ ಭಕ್ತಿಯಿಂದ ಮಾಡುವ ಶುಭ ದಿನ. ತುಳಸಿ ವಿವಾಹ ಆಚರಣೆಯ ವಿಶೇಷ ತುಳಸಿಯ ವಿವಿಧ ಬಗೆಗೆಗಳು, ಅವುಗಳ ವಿಶೇಷತೆಯ ಬಗ್ಗೆ ಮುಂದೆ ಲೇಖನದಲ್ಲಿ ತಿಳಿಯೋಣ.

List Of Basil Plant

ಕರ್ನಾಟಕದಲ್ಲಿ ಸಾಮಾನ್ಯವಾಗಿ ಎರಡು-ಮೂರು ಬಗೆಯ ತುಳಸಿ ಗಿಡಗಳಿವೆ. ಅವುಗಳಲ್ಲಿ ಕೃಷ್ಣ ತುಳಸಿ, ಬಿಳಿ ತುಳಸಿ, ಕಪ್ಪು ತುಳಸಿಯನ್ನು ಹೆಚ್ಚಾಗಿ ಕಾಣಬಹುದ. ಭಾರತದ ಇತರ ಕಡೆ ಇನ್ನೂ ಅನೇಕ ಜಾತಿಯ ತುಳಸಿ ಗಿಡಗಳಿವೆ. ಇಲ್ಲಿ ನಾವು ವಿಶ್ವದಲ್ಲಿ ಕಾಣ ಸಿಗುವ ತುಳಸಿ ಗಿಡಗಳಲ್ಲಿ, ಕೆಲವು ಬಗೆಯ ತುಳಸಿ ಗಿಡಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇನೆ ನೋಡಿ:

ಕೃಷ್ಣ ತುಳಸಿ

ಕೃಷ್ಣ ತುಳಸಿ

ಕೃಷ್ಣ ತುಳಸಿ ಹೆಚ್ಚಿನ ಮನೆಗಳಲ್ಲಿ ಕಂಡು ಬರುತ್ತದೆ. ಇದರ ರಸ ಬಳಸಿ ಕೆಮ್ಮಿಗೆ ಮನೆ ಮದ್ದು ಮಾಡಬಹುದು. ಇದರಲ್ಲಿ ಅನೇಕ ಔಷಧೀಯ ಗುಣಗಳಿವೆ.

ಬಿಳಿ ತುಳಸಿ

ಬಿಳಿ ತುಳಸಿ

ಈ ತುಳಸಿಯನ್ನು ಪೂಜೆ ಮಾಡುವಾಗ, ದೇವರ ಮೂರ್ತಿಗೆ ಅಲಂಕಾರ ಮಾಡಲು ಹೆಚ್ಚಾಗಿ ಬಳಸಲಾಗುವುದು.

ಸಿಹಿ ತುಳಸಿ

ಸಿಹಿ ತುಳಸಿ

ಈ ತುಳಸಿ ಗಾಢವಾದ ಸುವಾಸನೆಯನ್ನು ಹೊಂದಿರುತ್ತದೆ, ನೋಡಲು ತುಂಬಾ ಫ್ರೆಶ್ ಆಗಿರುತ್ತದೆ.

ಲೆಟ್ಯೂಸೆ ತುಳಸಿ

ಲೆಟ್ಯೂಸೆ ತುಳಸಿ

ಇದರ ಎಲೆ ಅಗಲವಾಗಿರುತ್ತದೆ, ಗಿಡ್ಡವಾಗಿ ಅಗಲವಾಗಿ ಬೆಳೆಯುತ್ತದೆ, ಸಿಹಿ ತುಳಸಿಯಷ್ಟು ಅಲ್ಲದಿದ್ದರೂ ಸುಹಾಸನೆಯನ್ನು ಹೊಂದಿರುತ್ತದೆ.

ಮಾಮೂತ್ ತುಳಸಿ

ಮಾಮೂತ್ ತುಳಸಿ

ಇಟಲಿ ಮೂಲದ ತುಳಸಿ ಗಿಡವಾಗಿದೆ. ಇದು ಸುಮಾರು 18 ಇಂಚಿನಷ್ಟು ಎತ್ತರವಾಗಿ ಬೆಳೆಯುತ್ತದೆ. ಇದನ್ನು ಸಲಾಡ್ ನಲ್ಲಿ ಬಳಸುತ್ತಾರೆ.

ಜಿನೋವೆಸೆ ತುಳಸಿ

ಜಿನೋವೆಸೆ ತುಳಸಿ

ಈ ತುಳಸಿ ಗಿಡ ಸಾಮಾನ್ಯವಾಗಿ ಯೋರೋಪ್ ದೇಶದಲ್ಲಿ ಕಂಡು ಬರುತ್ತದೆ.

ನಫಾರ್ ತುಳಸಿ

ನಫಾರ್ ತುಳಸಿ

ಇದು ಜಿನೋವೆಸೆ ತುಳಸಿಯಲ್ಲಿ ಮತ್ತೊಂದು ಬಗೆಯ ತುಳಸಿಯಾಗಿದೆ.

ಸ್ಪೈಸಿ ಗ್ಲೋಬ್ ತುಳಸಿ

ಸ್ಪೈಸಿ ಗ್ಲೋಬ್ ತುಳಸಿ

ಇದು ಪೊದೆ ಪೊದೆಯಾಗಿ ಬೆಳೆಯುತ್ತದೆ. ಇದನ್ನು ಹೂ ಕುಂಡದಲ್ಲಿ, ಹೂ ತೋಟದಲ್ಲಿ ಬೆಳೆದರೆ ನೋಡಲು ಆಕರ್ಷಕವಾಗಿ ಕಾಣುತ್ತದೆ. ಇದು ಗ್ರೀಕ್ ನಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

ಫಿನೋ ವರ್ಡೆ

ಫಿನೋ ವರ್ಡೆ

ಈ ತುಳಸಿ ಗಿಡ ಚಿಕ್ಕದಾಗಿದ್ದು ಅದರ ಎಲೆ ಕೂಡ ತುಂವಾ ಚಿಕ್ಕದಾಗಿರುತ್ತದೆ. ಇದು ಹೆಚ್ಚು ಸುವಾಸನೆಯನ್ನು ಹೊಂದಿರುವುದಿಲ್ಲ.

ಗ್ರೀಕ್ ಯಾವನಿ ತುಳಸಿ

ಗ್ರೀಕ್ ಯಾವನಿ ತುಳಸಿ

ಇದು ಕೂಡ ಗ್ರೀಕ್ ನಲ್ಲಿ ಕಾಣಸಿಗುವ ಮತ್ತೊಂದು ಬಗೆಯ ತುಳಸಿಯಾಗಿದೆ.

 ಬಾಕ್ಸ್ ವುಡ್

ಬಾಕ್ಸ್ ವುಡ್

ಈ ಗಿಡವನ್ನು ತುಂಬಾ ಬಿಸಿಲಿರುವ ಕಡೆ ನೆಡಬೇಕು. ಈ ಗಿಡ ಹೂ ತೋಟದಲ್ಲಿದ್ದರೆ ತುಂಬಾ ಆಕರ್ಷಕವಾಗಿ ಕಾಣುತ್ತದೆ.

 ಪರ್ಪಲ್ ರಫಲ್ಸ್ ತುಳಸಿ

ಪರ್ಪಲ್ ರಫಲ್ಸ್ ತುಳಸಿ

ಇದು ಕಡು ನೇರಳೆ ಬಣ್ಣದ ತುಳಸಿ ಗಿಡವಾಗಿದೆ. ಆದ್ದರಿಂದ ಈ ತುಳಸಿ ಗಿಡ ನೋಡಲು ಮನಮೋಹಕವಾಗಿದೆ.

 ಮ್ಯಾಜಿಕಲ್ ಮಿಷಲ್

ಮ್ಯಾಜಿಕಲ್ ಮಿಷಲ್

ಇದು ಕೂಡ ತುಂಬಾ ಅಪರೂಪದ ತುಳಸಿ ಗಿಡವಾಗಿದೆ. ಇದರ ಗುಣ ಕಪ್ಪು ತುಳಸಿಗೆ ಸಮವಾಗಿದೆ.

ಡಾರ್ಕ್ ಓಪಲ್ ಬೇಸಿಲ್

ಡಾರ್ಕ್ ಓಪಲ್ ಬೇಸಿಲ್

ಇದು ಕಡು ನೇರಳೆ ಬಣ್ಣದಲ್ಲಿದ್ದು ತುಂಬಾ ಆಕರ್ಷಕವಾಗಿ ಬೆಳೆಯುತ್ತದೆ.

English summary

List Of Basil Plant |Tips For Home And Gardening | ವಿವಿಧ ಬಗೆಯ ತುಳಸಿ ಗಿಡಗಳು | ಮನೆ ಮತ್ತು ಕೈ ತೋಟಕ್ಕೆ ಟಿಪ್ಸ್

This list of basil cultivars is a comprehensive list of cultivated varieties of basil. They are used in a variety of ways: as culinary herbs, landscape plants, healing herbs, teas, and for worship.
X
Desktop Bottom Promotion