For Quick Alerts
ALLOW NOTIFICATIONS  
For Daily Alerts

ಹಾವು ಮುಕ್ತ ಗಾರ್ಡನ್ ಗಾಗಿ ಕೆಲ ಸಲಹೆಗಳು

|
Get Rid Of Snakes From Garden
ತೋಟವೆಂದ ಮೇಲೆ ಹಾವುಗಳು, ಸಣ್ಣಪುಟ್ಟ ಕೀಟಗಳು ಕಾಣಿಸುವುದು ಸಾಮಾನ್ಯ. ಆದರೆ ಹಾವನ್ನು ಕಂಡರೆ ಮಾತ್ರ ಅದನ್ನು ಓಡಿಸುವವರೆಗೆ ಸಮಧಾನವಿರುವುದಿಲ್ಲ. ಕೆಲವೊಮ್ಮೆ ಅದರಿಂದ ನಮ್ಮ ಪ್ರಾಣಕ್ಕೆ ಎಲ್ಲಿ ಅಪಾಯ ಉಂಟಾಗುತ್ತದೊ ಎಂಬ ಭಯದಿಂದ ಅದರ ಪ್ರಾಣವನ್ನು ತೆಗೆದು ಬಿಡುತ್ತೇವೆ! ಪ್ರಾಣಿ ಹಿಂಸೆ ಮಾಡಬೇಡಿ. ನಾಗರಾಜ ನಿಮ್ಮ ನೆಚ್ಚಿನ ಪುಷ್ಪವನಕ್ಕೆ ಬರದಂತೆ ಮಾಡಲು ಈ ರೀತಿ ಮಾಡಿ:

1. ಗಾರ್ಡನ್ ನಲ್ಲಿ ಬೇಡದ ವಸ್ತುಗಳನ್ನು ಗುಡ್ಡೆಹಾಕಬೇಡಿ. ಏಕೆಂದರೆ ಅವುಗಳ ಒಳಗೆ ಹಾವು ಸುರಳಿ ಸುತ್ತಿಕೊಂಡು ಮಲಗುವ ಸಾಧ್ಯತೆ ಹೆಚ್ಚು.

2. ಗಿಡಗಳ ಕೊಂಬೆಗಳನ್ನು ಕತ್ತರಿಸಿ ಹಾಗೇ ಅಲ್ಲಿಯೆ ಬಿಸಾಡಬೇಡಿ. ಕೈತೋಟವನ್ನು ಶುಚಿಯಾಗಿಟ್ಟರೆ ಹಾವು ಬರುವುದಿಲ್ಲ. ಒಂದು ವೇಳೆ ಬಂದರೂ ಅದು ಬೇಗನೆ ಕಾಣುವುದರಿಂದ ಅದರಿಂದ ಆಗುವ ಅಪಾಯವಾಗುವುದನ್ನು ತಪ್ಪಿಸಬಹುದು.

3. ಹಾವುಗಳು ತಂಪಾದ ಸ್ಥಳದಲ್ಲಿ ಇರಲು ಬಯಸುತ್ತದೆ. ಉದ್ದದ ಮರ, ಬಿದ್ದ ಮರದಡಿ, ಇಟ್ಟಿಗೆ ಜೋಡಿಸಿರುವ ಸ್ಥಳಗಳಲ್ಲಿ ಹಾವು ಕಂಡು ಬರುವುದರಿಂದ ಅವುಗಳನ್ನು ಹೂತೋಟದಲ್ಲಿ ಇಡದಿರುವುದು ಒಳ್ಳೆಯದು.

4. ಗುಂಪಾಗಿ ಮತ್ತು ಉದ್ದವಾಗಿ ಬೆಳೆದ ಹುಲ್ಲುಗಳಲ್ಲಿ ಹಾವುಗಳು ಇರುವ ಸಾಧ್ಯತೆ ಹೆಚ್ಚು. ಆದ್ದರಿಂದ ಅವುಗಳನ್ನು ಕಿತ್ತುಹಾಕಬೇಕು.

5. ಬೆಳ್ಳುಳ್ಳಿಯನ್ನು ಜಜ್ಜಿ ಅದನ್ನು ನೀರಿಗೆ ಅದರಿಂದ ಗಾರ್ಡನ್ ಗೆ ಸ್ಪ್ರೇ ಮಾಡಿದರೆ ಹಾವುಗಳು ಬರುವುದಿಲ್ಲ.

6. ಪುದೀನಾ ಅಥವಾ ಕರಿಮೆಣಸಿನ ಗಿಡಗಳನ್ನು ಬೆಳೆಸುವುದು ಒಳ್ಳೆಯದು.
ಹಾವುಗಳನ್ನು ತೋಟದಲ್ಲಿ ಕಂಡರೆ ಅವುಗಳನ್ನು ಕೊಲ್ಲಬೇಡಿ. ಅವುಗಳನ್ನು ಅಲ್ಲಿಂದ ಓಡಿಸುವ ಅಥವಾ ಹಾವು ಹಿಡಿಯುವವರನ್ನು ಕರೆಸಿ ಅದನ್ನು ಅಲ್ಲಿಂದ ಸಾಗಹಾಕಿ.

Read more about: ತೋಟ ಮನೆ garden home
English summary

Tips To Get Rid Of Snakes From Garden | Tips For Gardening | ಹಾವು ಮುಕ್ತ ತೋಟಕ್ಕಾಗಿ ಕೆಲ ಸಲಹೆಗಳು | ತೋಟಗಾರಿಕೆಗೆ ಕೆಲ ಸಲಹೆ

Few plants especially rose, lime and jasmine attracts snakes and spiders. To have a safe garden free from snakes, here are few tips to get rid of snakes from your garden.
Story first published: Monday, February 27, 2012, 17:29 [IST]
X
Desktop Bottom Promotion