For Quick Alerts
ALLOW NOTIFICATIONS  
For Daily Alerts

ಬೋನ್ಸಾಯಿ ಹೆಚ್ಚಿಸುತ್ತೆ ಮನೆಯ ಅಂದ

|
Tips For Bonsai Gardening
ಮನೆ ಮುಂದೆ ಗಿಡದಲ್ಲಿ ಅರಳಿದ ಹೂಗಳ ಸೌಂದರ್ಯವನ್ನು ಮನಸ್ಸು ಉಲ್ಲಾಸಗೊಳ್ಳುತ್ತದೆ. ಆದರೆ ನಗರ ಪ್ರದೇಶಗಳಲ್ಲಿ ಗಿಡಗಳನ್ನು ಬೆಳೆಸಲು ಅಷ್ಟು ಸ್ಥಳಾವಕಾಶವಿರುವುದಿಲ್ಲ. ಅಂತಹವರಿಗೆ ವರದಾನ ಈ ಬೋನ್ಸಾಯಿ ಗಿಡ. ಮನೆ ಅಂದವನ್ನು ಹೆಚ್ಚಿಸುವ ಬೋನ್ಸಾಯಿ ಗಿಡಗಳ ಆರೈಕೆ ಹೀಗಿರಲಿ.

1. ಗಿಡಗಳ ಆಯ್ಕೆ: ಬೋನ್ಸಾಯಿ ಗಿಡಗಳಲ್ಲಿ 3 ವಿಧಗಳಿವೆ. 1. ಫಿಕಸ್, 2. ಜ್ಯೂನಿಪರ್, ಚೈನ್ಸ್ ಎಲ್ಮ್. ಈ ಗಿಡಗಳನ್ನು ಆಯ್ಕೆ ಮಾಡುವಾಗ ನೀವು ಇರುವ ಭೌಗೋಳಿಕ ಪ್ರದೇಶಕ್ಕೆ ಯಾವ ಗಿಡ ಸೂಕ್ತ ಎಂದು ತಿಳಿದುಕೊಳ್ಳಿ.

2.ಮಣ್ಣು:
ಗಿಡಗಳನ್ನು ನಡುವಾಗ ಹೂವಿನ ಕುಂಡದಲ್ಲಿ ಫಲವತ್ತಾದ ಮಣ್ಣನ್ನು ತುಂಬ ಬೇಕು.

3. ಗಿಡಗಳನ್ನು ಕತ್ತರಿಸುವುದು: ಈ ಗಿಡಗಳನ್ನು ಆಗಾಗ ಕತ್ತರಿಸುತ್ತಾ ಇರಬೇಕು. ಕೆಳಗಡೆ ತುಂಬಾ ರೆಂಬೆಗಳು ಮಧ್ಯೆದಲ್ಲಿ ಸ್ವಲ್ಪ ಕಡಿಮೆ, ಮೇಲ್ಭಾಗದಲ್ಲಿ ಸ್ವಲ್ಪವೇ ರೆಂಬೆ ಇರುವಂತೆ ಕತ್ತರಿಸಿದರೆ ಗಿಡದ ಅಂದ ಹೆಚ್ಚುತ್ತದೆ.

4. ಪ್ರತಿದಿನ ಗಿಡವನ್ನು ನೆನೆಸಬೇಕು. ಸೂರ್ಯನ ಕಿರಣಗಳು ಗಿಡದ ಮೆಲೆ ಸರಿಯಾಗಿ ಬೀಳುವಂತೆ ಇರಬೇಕು.

ಬೋನ್ಸಾಯಿ ಗಿಡಗಳಿಗೆ ಅಧಿಕ ಸ್ಥಳಾವಕಾಶ ಬೇಕಾಗಿಲ್ಲ. ಇದು ನಿಮ್ಮ ಮನೆಯ ಚೆಲುವನ್ನು ಹೆಚ್ಚಿಸುವುದರ ಜೊತೆಗೆ ಆಮ್ಲಜನಕ ಬಿಡುಗಡೆ ಮಾಡುವುದರಿಂದ ಉಸಿರಾಟಕ್ಕೆ ಶುದ್ಧ ಗಾಳಿ ಸಿಗುವುದು.

English summary

Tips For Bonsai Gardening | Tips For gardening | ಬೋನ್ಸಾಯಿ ಕೈತೋಟಕ್ಕೆ ಕೆಲ ಸಲಹೆ | ಕೈತೋಟದ ಅಂದಕ್ಕೆ ಕೆಲ ಸಲಹೆ

Bonsai art isn't as easy as we think, some tips and personal experiences shared will help to make your own best green garden in living, dining and kitchen space. Take a look.
X
Desktop Bottom Promotion