For Quick Alerts
ALLOW NOTIFICATIONS  
For Daily Alerts

ಹೂದೋಟ ಕಟ್ಟಿಂಗ್ ಮಾಡಲು ಸುಲಭ ಸರಳ ಸಲಹೆ

|
Best Season To Prune Plants
ಹೂದೋಟದ ಅಂದ ಹೆಚ್ಚಿಸಲು ಆಗಾಗ ಕಟ್ಟಿಂಗ್ ಮಾಡಿಸಬೇಕು. ಸೂಕ್ತ ಸಮಯಕ್ಕೆ ಸರಿಯಾಗಿ ಕಟಾವು ಮಾಡಿ ಆರೈಕೆ ಮಾಡಿದರೆ ಗಿಡಗಳು ಸೊಂಪಾಗಿ ಬೆಳೆಯುತ್ತವೆ. ಗಿಡಗಳನ್ನು ಕಟಾವು ಮಾಡಲು ಜನವರಿ ತಿಂಗಳು ಸೂಕ್ತವಾದ ಸಮಯವಾಗಿದೆ. ಗಿಡಗಳನ್ನು ಕತ್ತರಿಸುವುದರಿಂದ ಆಗುವ ಪ್ರಯೋಜನದ ಬಗ್ಗೆ ತಿಳಿಯಲು ಮುಂದೆ ಓದಿ.

ಗಿಡಗಳನ್ನು ಕತ್ತರಿಸಲು ಚಳಿಗಾಲದ ಅಂತ್ಯ ಮತ್ತು ವಸಂತಕಾಲದ ಆರಂಭ ಸೂಕ್ತ ಕಾಲ. ಆ ಸಮಯದಲ್ಲಿ ಬೇಡದ ಗಿಡ ಮತ್ತು ಒಣ ಕೊಂಬೆಗಳನ್ನು ತೆಗೆಯುವುದರಿಂದ ಗಿಡಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅಲ್ಲದೆ ಈ ರೀತಿ ಕತ್ತರಿಸಿದ ಗಿಡಗಳಲ್ಲಿ ಅಧಿಕವಾಗಿ ಹೂ ಬಿಡುತ್ತವೆ. ಗಿಡಗಳನ್ನು ಕತ್ತರಿಸುವಾಗ ಈ ಕೆಳಗಿನ ಅಂಶಗಳನ್ನು ಮುಖ್ಯವಾಗಿ ಗಮನದಲ್ಲಿಡಬೇಕು.

1. ಗಿಡಗಳನ್ನು ಕತ್ತರಿಸುವಾಗ ಬೇಡದ ಮತ್ತು ಒಣಗಿದ ರೆಂಬೆಗಳನ್ನು ಮತ್ತು ಕಾಯಿಲೆ ಹಿಡಿದ ಗಿಡಗಳನ್ನಷ್ಟೆ ಕತ್ತರಿಸಬೇಕು.

2. ಗಿಡಗಳ ಆರೈಕೆಯಲ್ಲಿ ಸೂರ್ಯನ ಕಿರಣಗಳು ಗಿಡದ ಮೇಲೆ ಬೀಳಬೇಕು. ಒಣ ಎಲೆಗಳಿದ್ದರೆ ಇದರಿಂದ ಸೂರ್ಯನ ಕಿರಣಗಳು ನೇರವಾಗಿ ಬೀಳುವುದಿಲ್ಲ. ಆದ್ದರಿಂದ ಒಣ ಎಲೆಗಳನ್ನು ತೆಗೆಯಬೇಕು.

3. ಗಿಡಗಳು ಹೂ ಬಿಡುವ ಕಾಲದಲ್ಲಿ ಅವುಗಳನ್ನು ಅಧಿಕ ಆರೈಕೆ ಮಾಡಬೇಕು. ಸಾಕಷ್ಟು ಗಿಡಗಳು ಬೇಸಿಗೆ ಕಾಲದಲ್ಲಿ ಅಧಿಕ ಹೂ ಬಿಡುತ್ತದೆ.

4. ಮಣ್ಣಿನ ಆರೈಕೆ: ಮಣ್ಣು ಫಲವತ್ತಾಗಿರಬೇಕು. ವರ್ಷಕ್ಕೊಮ್ಮೆ ಗಿಡಗಳ ಬುಡದಲ್ಲಿ ಮಣ್ಣು ಸ್ವಲ್ಪ ಸಡಿಲ ಮಾಡಿ ಮಣ್ಣನ್ನು ತೇವ ಮಾಡಿ ಅದಕ್ಕೆ ನೈಸರ್ಗಿಕ ಗೊಬ್ಬರ ಅಥವಾ ರಾಸಾಯಿನಿಕ ಗೊಬ್ಬರ ಬಳಸಬೇಕು.

ನಿಮ್ಮ ಕೈ ತೋಟವನ್ನು ಆರೈಕೆ ಮಾಡಲು ಇದು ತಕ್ಕ ಸಮಯವಾಗಿದೆ. ಆರೈಕೆಯಿಂದಾಗಿ ಕೈತೋಟದ ಅಂದ ಮತ್ತಷ್ಟು ಹೆಚ್ಚುವುದು.

Read more about: ತೋಟ ಮನೆ garden home
English summary

Best Season To Prune Plants | Tips For Gardening | ಗಿಡಗಳನ್ನು ಕತ್ತರಿಸಿ ಅರೈಕೆ ಮಾಡಲು ಸೂಕ್ತವಾದ ಸಮಯ | ಕೈತೋಟದ ಆರೈಕೆಗೆ ಕೆಲ ಸಲಹೆ

Since January is the month of pruning plants, we thought of giving you some ideas to prune plants in your home garden. Here are some more home gardening tips.
Story first published: Friday, January 27, 2012, 15:40 [IST]
X
Desktop Bottom Promotion