For Quick Alerts
ALLOW NOTIFICATIONS  
For Daily Alerts

ಮಲಗುವ ಕೋಣೆ ಸ್ವಚ್ಛ ಹಾಗೂ ಆಕರ್ಷಕವಾಗಿ ಕಾಣಬೇಕೆಂದರೆ ಹೀಗೆ ಮಾಡಿ

|

ದಿನವಿಡೀ ಮನೆಯಿಂದಾಚೆ ದುಡಿದು ಬಂದವರಿಗೆ ಒಂದಿಷ್ಟು ಸಮಾಧಾನ ಹಾಗೂ ಆರಾಮದಾಯಕ ಅನುಭವ ನೀಡುವ ಸ್ಥಳವೆಂದರೆ ಮನೆಯಲ್ಲಿರುವ ಮಲಗುವ ಕೋಣೆ. ಒಂದರ್ಥದಲ್ಲಿ ಹೇಳುವುದಾದರೆ ಮಲಗುವ ಕೋಣೆಯೇ ನಮ್ಮ ನಿಜವಾದ ಅಸ್ತಿತ್ವ ಇರುವ ಸ್ಥಳವಾಗಿರುತ್ತದೆ. ನಮ್ಮ ವೈಯಕ್ತಿಕ ವಿಚಾರಗಳಿಗೂ ಸಾಕಷ್ಟು ಸ್ಥಳಾವಕಾಶ ನೀಡುವ ಸ್ಥಳವೂ ಹೌದು.

ಮಲಗುವ ಕೋಣೆಯೇ ನಮಗೆ ಹೆಚ್ಚಿನ ಸಮಾಧಾನ ಹಾಗೂ ವಿಶ್ರಾಂತಿಯನ್ನು ನೀಡುವ ಸ್ಥಳವಾದ್ದರಿಂದ ಅದರ ಸ್ವಚ್ಛತೆ ಹಾಗೂ ವಿಷಯಗಳನ್ನು ಆಸಕ್ತಿದಾಯಕವಾಗಿರುವಂತೆ ನೋಡಿಕೊಳ್ಳಬೇಕು. ಮಲಗುವ ಕೋಣೆಯನ್ನು ಸುಸಜ್ಜಿತವಾಗಿಟ್ಟುಕೊಂಡರೆ ದಣಿದು ಬಂದ ಮನಸ್ಸಿಗೆ ಸಮಾಧಾನ, ಒಂದಿಷ್ಟು ಚೈತನ್ಯ ಹಾಗೂ ಉತ್ಸಾಹ ಭರಿತ ಭಾವನೆಯನ್ನು ನೀಡುತ್ತದೆ. ಅದೇ ಮಲಗುವ ಕೋಣೆಯು ಆಸಕ್ತಿದಾಯಕವಾಗಿಲ್ಲ ಅಥವಾ ಸ್ವಚ್ಛತೆಯಿಂದ ಕೂಡಿಲ್ಲ ಎಂದಾದರೆ ಒಂದು ಬಗೆಯ ಬೇಸರ ಹಾಗೂ ಕಿರಿಕಿರಿಯ ಭಾವನೆ ಕಾಡಬಹುದು. ಮನೆ ಮಂದಿಯೊಂದಿಗೆ ವಿನಾಕಾರಣ ಮುನಿಸು ಹಾಗೂ ಅಸಮಧಾನ ಕಾಡುವುದು.

Instant Ways to keep Your Bedroom clean and Makeover

ಮಲಗುವ ಕೋಣೆ ಸುಸಜ್ಜಿತವಾಗಿ ಇದ್ದರೆ ಸಾಕಷ್ಟು ಸಕಾರಾತ್ಮಕ ಶಕ್ತಿಯು ನೆಲೆಸುವುದು. ಇದರಿಂದ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸುಧಾರಣೆ, ಆಸಕ್ತಿ ಹಾಗೂ ಮನೆ ಮಂದಿಯ ಜೊತೆ ಉತ್ತಮ ಸಂಬಂಧವನ್ನು ಕಲ್ಪಿಸುವುದು. ಅದೇ ಅನುಚಿತ ರೀತಿಯಲ್ಲಿ ಮಲಗುವ ಕೋಣೆಯಿರುವುದು ಅಥವಾ ಸೂಕ್ತ ರೀತಿಯ ಜೋಡಣೆ ಮತ್ತು ಸ್ವಚ್ಛತೆ ಇಲ್ಲದೆ ಹೋದರೆ ಋಣಾತ್ಮಕ ಶಕ್ತಿಯು ಪ್ರವೇಶ ಪಡೆಯುವುದು. ಜೊತೆಗೆ ಒಂದಿಷ್ಟು ಹಾನಿ, ನೋವು ಮತ್ತು ಕಿರಿಕಿರಿಯನ್ನು ಅನುಭವಿಸ ಬೇಕಾಗುವುದು.

ನೀವು ನಿಮ್ಮ ಮಲಗುವ ಕೋಣೆಯನ್ನು ಸ್ವಚ್ಛ ಹಾಗೂ ಆಕರ್ಷಣೆಯಿಂದ ಕೂಡಿರುವಂತೆ ಮಾಡಲು ಪ್ರಯತ್ನಿಸುವಿರಿ, ಹೊಸ ಹೊಸ ಆಲೋಚನೆಗಳಂತೆ ಮಲಗುವ ಕೋಣೆಯು ಆಕರ್ಷಕವಾಗಿರುವಂತೆ ಮಾಡುವಿರಿ, ಹಳೆಯ ಸ್ಥಳವಾದರೂ ಹೊಸ ನೋಟದಿಂದ ಕೂಡಿರುವಂತೆ ಮಾಡಲು ಬಯಸುತ್ತೀರಾದರೆ ಸಾಕಷ್ಟು ಸಲಹೆ ಹಾಗೂ ಮಾರ್ಗಗಳನ್ನು ಈ ಮುಂದೆ ಬೋಲ್ಡ್ ಸ್ಕೈ ಪರಿಚಯಿಸಿದೆ.

ಆಕರ್ಷಕ ರಗ್/ಕಂಬಳಿ ಬಳಕೆ

ಆಕರ್ಷಕ ರಗ್/ಕಂಬಳಿ ಬಳಕೆ

ಮಲಗುವ ಕೋಣೆಗೆ ಆಗಮಿಸುತ್ತಿದ್ದಂತೆ ಕಣ್ಣು ನೋಡುವುದು ಮಲಗುವ ಹಾಸಿಗೆಯನ್ನು. ಮಲಗುವ ಕೋಣೆಯಲ್ಲಿ ಆಸಕ್ತಿದಾಯಕ ಅಥವಾ ಸುಂದರ ರಗ್/ಕಂಬಳಿಯನ್ನು ಬಳಸುವುದರಿಂದ ಒಂದಿಷ್ಟು ಖುಷಿಯನ್ನು ನೀಡುವುದು. ನಿಮ್ಮ ಕೋಣೆಯ ಗೋಡೆಗೆ ಹಾಗೂ ಬೆಡ್‍ನ ಹಾಸಿಗೆಯ ಮೇಲಿರುವ ರಗ್‍ಗಳಿಗೆ ಹೊಂದಾಣಿಕೆಯಾಗುವ ಬಣ್ಣಗಳಿಂದ ಕೂಡಿರಬೇಕು. ರಗ್‍ನ ಸೂಕ್ತ ಅಳತೆ ಹಾಗೂ ಬಣ್ಣಗಳು ನಿಮ್ಮ ಮಲಗುವ ಕೂಣೆಯನ್ನು ಬೆಚ್ಚಗೆ ಹಾಗೂ ಸ್ನೇಹಶೀಲವಾಗಿರುವಂತೆ ಮಾಡುವುದು.

Most Read: ಮನೆಯಲ್ಲಿ ಶಾಂತಿ-ನೆಮ್ಮದಿ ಇರಬೇಕೇ? ಗೋಡೆಗಳ ಬಣ್ಣ ಹೀಗಿರಲಿ

ಒಳಾಂಗಣ ಗಿಡಗಳ ಜೋಡಣೆ

ಒಳಾಂಗಣ ಗಿಡಗಳ ಜೋಡಣೆ

ಒಳಾಂಗಣ ಗಿಡವನ್ನು ಮಲಗುವ ಕೋಣೆಯಲ್ಲಿ ಜೋಡಿಸುವುದರಿಂದ ಎರಡು ಉಪಯೋಗವನ್ನು ಪಡೆದುಕೊಳ್ಳಬಹುದು. ಒಂದು ಕೋಣೆಗೆ ಸುಂದರ ನೋಟವನ್ನು ನೀಡುವುದು. ಇನ್ನೊಂದು ಕಾರಣ ತಾಜಾ ಗಾಳಿಯು ಕೋಣೆಯ ಒಳಗೆ ಸುಳಿದಾಡುವುದು. ಜೊತೆಗೆ ಗಾಳಿಯನ್ನು ಶುಚಿಗೊಳಿಸುವುದು. ಸೂಕ್ತವಾದ ಒಳಾಂಗಣ ಗಿಡಗಳ ಆಯ್ಕೆ ಮಾಡಿ ಇಡುವುದರಿಂದ ಋಣಾತ್ಮಕ ಶಕ್ತಿಯೂ ದೂರ ಸರಿಯುವುದು.

ಹೊಸ ಬೆಡ್‍ಶೀಟ್‍ಗಳ ಬಳಕೆ

ಹೊಸ ಬೆಡ್‍ಶೀಟ್‍ಗಳ ಬಳಕೆ

ಋತುಗಳಿಗೆ ಅನುಗುಣವಾಗಿ ಬೆಡ್‍ಶೀಟ್‍ಗಳನ್ನು ಬದಲಿಸಿಕೊಳ್ಳಬೇಕು. ಆಗ ಮಲಗುವ ಕೋಣೆಯ ಕೇಂದ್ರಬಿಂದುವಾದ ಹಾಸಿಗೆ ಅಥವಾ ಬೆಡ್ ಆಕರ್ಷಕವಾಗಿ ಕಾಣುವುದು. ಜೊತೆಗೆ ಬೆಚ್ಚನೆಯ ಅನುಭವ ನೀಡುವುದು. ಹೂವಿನ ಮುದ್ರಣ ಇರುವ ಬೆಡ್ ಶೀಟ್‍ಗಳು ಹಾಗೂ ಕೆಲವು ನಿಮ್ಮ ಮೆಚ್ಚಿನ ಬಣ್ಣಗಳ ಬೆಡ್ ಶೀಟ್‍ಗಳು ಒಂದಿಷ್ಟು ಖುಷಿಯನ್ನು ನೀಡುವುದು. ನೀವು ಬೆಡ್ ಶೀಟ್ ಆಯ್ಕೆ ಮಾಡುವಾಗ ಅದರ ವಿನ್ಯಾಸ ಹಾಗೂ ಗಾತ್ರದ ಬಗ್ಗೆಯೂ ಕಾಳಜಿ ನೀಡಬೇಕು.

ವಾಲ್ ಪೇಪರ್ ಬಳಕೆ

ವಾಲ್ ಪೇಪರ್ ಬಳಕೆ

ಮಂಕಾದ ಮಲಗುವ ಕೋಣೆಯನ್ನು ಆಕರ್ಷಕವಾಗಿ ಕಾಣುವಂತೆ ಮಾಡುವ ಇನ್ನೊಂದು ಸಂಗತಿ ಕೋಣೆಯ ಗೋಡೆಗಳು. ಮಲಗುವ ಕೋಣೆಯ ಗೋಡೆಯ ಬಣ್ಣ ಬದಲಾವಣೆ, ಕೆಲವು ಆಸಕ್ತಿದಾಯಕ ಚಿತ್ರಗಳ ಜೋಡಣೆ ಮಾಡುವುದರಿಂದ ಮನಸ್ಸು ಶಾಂತ ಹಾಗೂ ವಿನೋದದಿಂದ ಕೂಡಿರುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಗೋಡೆ ಅಲಂಕಾರಿ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ಬಳಸಿ.

ಗೋಡೆಯ ವರ್ಣಚಿತ್ರಗಳು

ಗೋಡೆಯ ವರ್ಣಚಿತ್ರಗಳು

ಈ ಮೊದಲೆ ನೀವು ಹಾಕಿರುವ ಗೋಡೆಯ ವರ್ಣ ಚಿತ್ರವು ಹಳೆಯತಾಗಿದೆ ಅಥವಾ ಬಣ್ಣವನ್ನು ಕಳೆದುಕೊಂಡಿದೆ ಎಂದಾದರೆ ಮೊದಲು ಅದನ್ನು ಬದಲಿಸಿ. ಕಪ್ಪು-ಬಿಳುಪು ಅಥವಾ ವರ್ಣರಂಜಿತವಾದ ಜ್ಯಾಮಿತಿಯ ಮಂಡಲದ ವರ್ಣ ಚಿತ್ರವನ್ನು ಹಾಕಿ. ಇದು ನಿಮ್ಮ ಕಣ್ಣುಗಳಿಗೆ ಹೆಚ್ಚಿನ ತಂಪು ಹಾಗೂ ಉತ್ತಮ ವ್ಯಕ್ತಿತ್ವದ ಸೃಷ್ಟಿಗೆ ಸಹಾಯ ಮಾಡುವುದು. ಬೇಣದ ಬತ್ತಿ, ಹೂಗಳ ಜೋಡಣೆ ಹಾಗೂ ಒಳಾಂಗಣ ಅಲಂಕಾರವನ್ನು ಕೈಗೊಳ್ಳುವುದರಿಂದ ಕೋಣೆಗೆ ಹೊಸ ಮೆರಗನ್ನು ನೀಡಬಹುದು.

Most Read: ಬೆಡ್‌ರೂಮ್‌ನಲ್ಲಿ ಇಂತಹ ವರ್ಣಚಿತ್ರಗಳನ್ನು ಮಾತ್ರ ಇಡಬೇಡಿ!

ಹಾಸಿಗೆಯ ಸ್ಥಾನ ಬದಲಾವಣೆ

ಹಾಸಿಗೆಯ ಸ್ಥಾನ ಬದಲಾವಣೆ

ನೀವು ಮಲಗುವ ಹಾಸಿಗೆ ಅಥವಾ ಬೆಡ್ ಸೂಕ್ತ ರೀತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ನಾವು ಮಲಗುವ ಸ್ಥಿತಿ ಹಾಗೂ ದಿಕ್ಕು ಸರಿಯಾಗಿದ್ದರೆ ಧನಾತ್ಮಕ ಶಕ್ತಿಯು ನೆಲೆಸಿರುತ್ತದೆ. ಹಾಗೊಮ್ಮೆ ಈ ವರೆಗೆ ನೀವು ಮಲಗುವ ದಿಕ್ಕು ಸೂಕ್ತ ರೀತಿಯಲ್ಲಿ ಇರಲಿಲ್ಲ ಎಂದಾದರೆ ಮೊದಲು ಬದಲಾಯಿಸಿ. ಸೂಕ್ತ ದಿಕ್ಕಿಗೆ ನಿಮ್ಮ ತಲೆಯ ಭಾಗ ಬರುವಂತೆ ಹಾಸಿಗೆ ಇರಬೇಕು.

ಅನಗತ್ಯ ವಸ್ತುಗಳನ್ನು ತೆಗೆಯಿರಿ

ಅನಗತ್ಯ ವಸ್ತುಗಳನ್ನು ತೆಗೆಯಿರಿ

ಕೆಲವೊಮ್ಮೆ ಬೇಡದ ವಸ್ತುಗಳನ್ನು ಕೋಣೆಯಲ್ಲಿ ಜೋಡಿಸಿಡುವ ಸಾಧ್ಯತೆಗಳಿರುತ್ತವೆ. ಈ ರೀತಿ ಮಾಡುವುದರಿಂದ ಮಲಗುವ ಕೋಣೆಯ ನೋಟ ಹಾಳಾಗುವುದು. ಜೊತೆಗೆ ನಿತ್ಯವೂ ಕಿರಿಕಿರಿ ಉಂಟಾಗುತ್ತಲೇ ಇರುತ್ತವೆ. ಹಾಗಾಗಿ ಮಲಗುವ ಕೋಣೆಯಲ್ಲಿ ನಿಮ್ಮ ಅಗತ್ಯತೆಗಳು ಏನು? ಎನ್ನುವುದನ್ನು ಮೊದಲು ಪರಿಶೀಲಿಸಿ. ಅದಕ್ಕೆ ಅನುಗುಣವಾಗಿ ವಸ್ತುಗಳ ಜೋಡಣೆ ಮಾಡಿ. ಅನಗತ್ಯ ವಸ್ತುಗಳನ್ನು ಕೋಣೆಯಿಂದ ಆಚೆಹಾಕಿ. ಆಗ ನಿಮಗೆ ಸಾಕಷ್ಟು ಸ್ಥಳಗಳು ದೊರೆಯುವುದು. ಮನಸ್ಸಿಗೂ ಆಹ್ಲಾದವಾದ ಅನುಭವ ನೀಡುವುದು.

Most Read: ಕಣ್ತುಂಬಾ ನಿದ್ದೆಗಾಗಿ ಕೊಠಡಿಯಲ್ಲಿರಬೇಕಾದ ಸಸ್ಯಸಂಕುಲ

ಕೋಣೆಯ ಪರದೆ/ಕರ್ಟ್‍ನ್ ಬದಲಿಸಿ

ಕೋಣೆಯ ಪರದೆ/ಕರ್ಟ್‍ನ್ ಬದಲಿಸಿ

ಮಲಗುವ ಕೋಣೆಗೆ ಹೊಸ ರಗ್, ಬೆಡ್ ಶೀಟ್, ಗೋಡೆಯ ಫಲಕಗಳು, ಅನಗತ್ಯ ವಸ್ತುಗಳ ನಿವಾರಣೆ ಹಾಗೂ ಹಾಸಿಗೆಯ ದಿಕ್ಕನ್ನು ಬದಲಿಸಿದ ಮೇಲೆ ಕೋಣೆಗೆ ಹಾಕಿರುವ ಪರದೆ ಮಾತ್ರ ಹಳೆಯದ್ದೇ ಆಗಿದ್ದರೆ ನೋಟವು ಬದಲಾವಣೆ ಅಥವಾ ಹೊಸತನ ಅನುಭವವನ್ನು ನೀಡದು. ಹಾಗಾಗಿ ನೀವು ಕೋಣೆಯ ಪರದೆಯನ್ನು ಬದಲಿಸಬೇಕು. ತಿಳಿಯಾದ ಬಣ್ಣದ ಪರದೆಯನ್ನು ಆಯ್ಕೆ ಮಾಡುವುದರಿಂದ ಕಣ್ಣಿಗೆ ತಂಪಾದ ಅನುಭವ ನೀಡುವುದು. ಸೂರ್ಯನ ಕಿರಣವನ್ನು ಕೋಣೆಯೊಳಗೆ ಸಂಪೂರ್ಣವಾಗಿ ನಿರ್ಬಂಧಿಸದೆ ಇದ್ದಾಗ ಸಕಾರಾತ್ಮ ಶಕ್ತಿಯು ಪ್ರವೇಶವನ್ನು ಪಡೆದುಕೊಳ್ಳುವುದು. ಆಗ ಹೊಸ ನೋಟ ಹಾಗೂ ಹೊಸ ಅನುಭವವನ್ನು ಕೋಣೆಯು ನೀಡುತ್ತದೆ. ನಿಯಮಿತವಾಗಿ ಈ ರೀತಿಯ ಬದಲಾವಣೆಯನ್ನು ಅನುಸರಿಸುತ್ತಿದ್ದರೆ ಕೋಣೆಯು ಹೊಸತನದಿಂದ ನಿಮ್ಮನ್ನು ಸ್ವಾಗತಿಸುವುದು.

English summary

Instant Ways to keep Your Bedroom clean and Makeover

If your bedroom is a space which reflects your personal style, it is important to give it a makeover once in a while to keep things interesting. Also, some good interiors here and there, make the place more lively and interesting. Gone are the days when bedrooms have these huge beds in the centre of the space with very little furniture otherwise. It is all about experience nowadays. Creating some cosy corners in the bedroom just lightens up the place.
Story first published: Saturday, October 27, 2018, 12:12 [IST]
X
Desktop Bottom Promotion