For Quick Alerts
ALLOW NOTIFICATIONS  
For Daily Alerts

ದೀಪಾವಳಿ ಹಬ್ಬ: ಪೂಜಾ ಸಾಮಗ್ರಿ, ದೇವರ ವಿಗ್ರಹಗಳ ಸ್ವಚ್ಛತೆ ಹೀಗಿರಲಿ

By Jaya Subramanya
|

ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಬೆಳಕಿನ ಹಬ್ಬವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ದೇಶದ ಜನತೆ ತಮ್ಮನ್ನು ಸಿದ್ಧಮಾಡಿಕೊಳ್ಳುತ್ತಿದ್ದಾರೆ. ಅಂಗಡಿಗಳಲ್ಲಿ ದರಕಡಿತ ಆಫರ್‌ಗಳನ್ನು ಹಬ್ಬದ ಪೂರ್ವಭಾವಿಯಾಗಿ ನೋಡಬಹುದಾಗಿದ್ದು, ವ್ಯಾಪಾರಿಗಳು ಗ್ರಾಹಕರನ್ನು ಆಕರ್ಷಿಸಲು ವಿಶೇಷ ಆಫರ್‌ಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ. ಇನ್ನು ಮನೆಗಳಲ್ಲಂತೂ ಗೃಹಿಣಿಯರು ಮನೆಯನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ದೀಪಗಳ ಹಬ್ಬವೆಂದರೆ ಕತ್ತಲನ್ನು ನಿವಾರಿಸಿ ಬೆಳಕನ್ನು ಬರಮಾಡಿಕೊಳ್ಳುವ ಸೂಚನೆಯಾಗಿದೆ. ನಮ್ಮ ಮನದಲ್ಲಿ ಮನೆ ಮಾಡಿರುವ ಕತ್ತಲನ್ನು ದೂರ ಮಾಡಿ ಜ್ಞಾನದ ದೀವಿಗೆಯನ್ನು ಬೆಳಗಿಸುವ ಕಾರ್ಯವನ್ನು ಈ ದೀಪಾವಳಿಯನ್ನು ನಾವು ಮಾಡಬೇಕಾಗಿದೆ. ಅದಕ್ಕಾಗಿಯೇ ಮನೆ ಮತ್ತು ಮನವನ್ನು ನಾವು ಸ್ವಚ್ಛಗೊಳಿಸಬೇಕಿದೆ.

ಹಬ್ಬದ ಸಡಗರದಲ್ಲಿ ನಿಮ್ಮೊಂದಿಗೆ ಜತೆಗೂಡಿ ಹಬ್ಬವನ್ನು ಆಚರಿಸಲು ನೆಂಟರಿಷ್ಟರು ಬಂದೇ ಬರುತ್ತಾರೆ. ಆ ಸಮಯದಲ್ಲಿ ಅವರನ್ನು ಚೆನ್ನಾಗಿ ಉಪಚರಿಸಬೇಕು. ಅದಕ್ಕಾಗಿ ಗೃಹಿಣಿಯರು ಈಗಿನಿಂದಲೇ ತಿಂಡಿಗಳನ್ನು ಮಾಡುವ ಕಾಯಕದಲ್ಲಿ ಬ್ಯುಸಿಯಾಗಿದ್ದಾರೆ. ಚಿಕ್ಕಮಕ್ಕಳಿಗಂತೂ ಹಬ್ಬದ ಸಂಭ್ರಮವೆನ್ನುವುದೇ ಒಂದು ಕೌತುಕಮಯವಾಗಿದೆ.

ದೀಪಾವಳಿ ವಿಶೇಷ: ಲಕ್ಷ್ಮೀ ದೇವಿಯ ಪೂಜಾ, ವಿಧಿವಿಧಾನ

ದೀಪಾವಳಿಗೆ ಮುಖ್ಯವಾಗಿ ಬೇಕಾಗಿರುವುದು ದೀಪಗಳಾಗಿವೆ. ದೀಪಾವಳಿ ಆಚರಣೆಗೆ ಮುನ್ನವೇ ಮನೆಯಲ್ಲಿ ದೀಪ ಅಂದರೆ ಮಣ್ಣಿನ ಹಣತೆಗಳನ್ನು ಹಚ್ಚಿ ಹಬ್ಬವನ್ನು ಸ್ವಾಗತಿಸಲಾಗುತ್ತದೆ. ಜೊತೆಗೆ ಪೂಜೆಯ ಸಾಮಾಗ್ರಿಗಳನ್ನು ಈ ಸಮಯದಲ್ಲಿ ಜೋಡಿಸಿ ಕೊಳ್ಳಬೇಕಾಗುತ್ತದೆ. ಈ ದೀಪಗಳ ಸ್ವಚ್ಛತೆಯನ್ನು ಬೇಗನೇ ಮಾಡುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ಸಲಹೆಗಳ ಮೂಲಕ ತಿಳಿಸುತ್ತಿದ್ದೇವೆ.

ಮಣ್ಣಿನ ದೀಪಗಳನ್ನು ನೀರಿನಿಂದ ಸ್ವಚ್ಛಗೊಳಿಸಿದರೆ ಸಾಕು, ಆದರೆ, ಇತರ ದೀಪಗಳನ್ನು ಪೂಜಾ ಸಾಮಾಗ್ರಿಗಳ ಎಣ್ಣೆ ಅಂಶವನ್ನು ನಿವಾರಿಸಲು ಕೊಂಚ ಕಠಿಣ ಪರಿಕರಗಳನ್ನು ಉಪಯೋಗಿಸಬೇಕು. ಹಾಗಿದ್ದರೆ ಬನ್ನಿ ನಿಮ್ಮ ಮನೆಯಲ್ಲಿರುವ ವಸ್ತುಗಳನ್ನೇ ಬಳಸಿಕೊಂಡು ಹಣತೆಗಳ ಸ್ವಚ್ಛತೆಯನ್ನು ಮಾಡಿ...

ವಿನೇಗರ್ ಮತ್ತು ಉಪ್ಪು

ವಿನೇಗರ್ ಮತ್ತು ಉಪ್ಪು

ನೀವು ತಾಮ್ರದ ವಿಗ್ರಹಗಳನ್ನು ಹೊಂದಿದ್ದರೆ, ಸ್ವಚ್ಛಗೊಳಿಸಲು ಉತ್ತಮ ಮಾರ್ಗವೆಂದರೆ ವಿನೆಗರ್ ಮತ್ತು ಉಪ್ಪು ಆಗಿದೆ. ಈ ಎರಡು ಪದಾರ್ಥಗಳು ಮನೆಯಲ್ಲಿ ಸುಲಭವಾಗಿ ಲಭ್ಯವಿರುತ್ತವೆ ಮತ್ತು ನಿಮ್ಮ ತಾಮ್ರದ ಮೂರ್ತಿಯನ್ನು ಹೊಳೆಯಿಸಲು ಇದು ಸಹಾಯ ಮಾಡುತ್ತದೆ. ಈ ಮಿಶ್ರಣದಿಂದ ವಿಗ್ರಹವನ್ನು ಮೊದಲು ನಂತರ ಬೆಚ್ಚಗಿನ ನೀರಿನಿಂದ ತೊಳೆಯುವುದು ಸೂಕ್ತವಾಗಿದೆ.

ನಿಂಬೆ ಮತ್ತು ಅಡಿಗೆ ಸೋಡಾ

ನಿಂಬೆ ಮತ್ತು ಅಡಿಗೆ ಸೋಡಾ

ಹಿತ್ತಾಳೆ ವಿಗ್ರಹಗಳನ್ನು ಸ್ವಚ್ಛಗೊಳಿಸಲು ನಿಂಬೆ ಮತ್ತು ಅಡಿಗೆ ಸೋಡಾದ ಮಿಶ್ರಣವು ಉತ್ತಮ ಆಯ್ಕೆಯಾಗಿದೆ. ವಿಗ್ರಹದ ಮೇಲೆ ಮಿಶ್ರಣವನ್ನು ಹಚ್ಚಿ ಅದನ್ನು ಚೆನ್ನಾಗಿ ತೊಳೆದುಕೊಳ್ಳಿ. ಮಿಶ್ರಣವು ವಿಗ್ರಹಗಳಲ್ಲಿ ಉಳಿದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಟೂತ್‌ಪೇಸ್ಟ್

ಟೂತ್‌ಪೇಸ್ಟ್

ಜನರು ಸಾಮಾನ್ಯವಾಗಿ ಬೆಳ್ಳಿಯ ವಿಗ್ರಹಗಳನ್ನು ಹೊಂದಿರುತ್ತಾರೆ ಮತ್ತು ಬೆಳ್ಳಿಯ ವಿಗ್ರಹಗಳನ್ನು ಹೊಂದಿರುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಆದ್ದರಿಂದ ಬೆಳ್ಳಿಯ ವಿಗ್ರಹವನ್ನು ಸ್ವಚ್ಛಗೊಳಿಸುವ ಪರಿಪೂರ್ಣ ವಿಧಾನವೆಂದರೆ, ಉತ್ತಮ ಗುಣಮಟ್ಟದ ಟೂತ್‌ಪೇಸ್ಟ್ ಅನ್ನು ವಿಗ್ರಹದ ಮೇಲೆ ಮೃದುವಾದ ಬ್ರಶ್‌ನಿಂದ ಹಚ್ಚಿ ಮತ್ತು ಅದನ್ನು 10 ನಿಮಿಷಗಳ ಕಾಲ ಬಿಡಿ. ತದನಂತರ ಅದನ್ನು ತೊಳೆದು ಒಣಗಿಸಿ.

ವಾಶಿಂಗ್ ಪೌಡರ್

ವಾಶಿಂಗ್ ಪೌಡರ್

ವಾಶಿಂಗ್ ಪೌಡರ್ ಅನ್ನು ಬೆಳ್ಳಿಯ ವಿಗ್ರಹಗಳನ್ನು ಸ್ವಚ್ಛಗೊಳಿಸಲು ಬಳಸಲಾಗುತ್ತದೆ. ಆದರೆ ಇದನ್ನು ನೀರಿನೊಂದಿಗೆ ಬಳಸಬಾರದು ಎಂದು ನೆನಪಿನಲ್ಲಿಡಿ. ಒಣ ವಾಶಿಂಗ್ ಪೌಡರ್ ಅನ್ನು ಬಳಸಿ ಮತ್ತು ಅದನ್ನು ವಿಗ್ರಹದ ಮೇಲೆ ಉಜ್ಜಿರಿ. ನಂತರ ಅದನ್ನು ಶುಷ್ಕ ಬಟ್ಟೆಯಿಂದ ಸ್ವಚ್ಛಗೊಳಿಸಿ. ಇದು ನಿಮ್ಮ ಬೆಳ್ಳಿಯ ವಿಗ್ರಹವು ಹೊಳೆಯುವಂತೆ ಮಾಡುತ್ತದೆ.

ವಿಭೂತಿ ಪುಡಿ

ವಿಭೂತಿ ಪುಡಿ

ಸಾಂಪ್ರದಾಯಿಕವಾಗಿ, ಜನರು ಬೆಳ್ಳಿಯ ವಿಗ್ರಹಗಳನ್ನು ಸ್ವಚ್ಛಗೊಳಿಸಲು ವಿಭೂತಿ ಪುಡಿಯನ್ನು ಬಳಸುತ್ತಾರೆ. ನೀವು ದೇವಾಲಯದಿಂದ ವಿಭೂತಿಯನ್ನು ತೆಗೆದುಕೊಂಡು ಅದನ್ನು ವಿಗ್ರಹದ ಮೇಲೆ ಉಜ್ಜಿರಿ. ನಂತರ ವಿಗ್ರಹವನ್ನು ಹುಣಿಸೇಹಣ್ಣು ಅಥವಾ ನಿಂಬೆ ರಸದಲ್ಲಿ ಅದ್ದಿ. 10 ನಿಮಿಷಗಳ ನಂತರ, ಅದನ್ನು ನೀರಿನಿಂದ ತೊಳೆಯಿರಿ.

ವಿನೆಗರ್, ಹಿಟ್ಟು ಮತ್ತು ಉಪ್ಪು

ವಿನೆಗರ್, ಹಿಟ್ಟು ಮತ್ತು ಉಪ್ಪು

ಹಿತ್ತಾಳೆಯ ವಿಗ್ರಹವನ್ನು ಸ್ವಚ್ಛಗೊಳಿಸುವ ಮತ್ತೊಂದು ವಿಧಾನವೆಂದರೆ ಬಿಳಿ ವಿನೆಗರ್, ಹಿಟ್ಟು ಮತ್ತು ಉಪ್ಪಿನ ಒಂದು ಪೇಸ್ಟ್ ಅನ್ನು ವಿಗ್ರಹದ ಮೇಲೆ ಹಚ್ಚಿರಿ. ಪರಿಣಾಮ ಬೀರುವವರೆಗೆ ಮಿಶ್ರಣವನ್ನು ಕೈಯಿಂದ ಉಜ್ಜಿರಿ. ಮಿಶ್ರಣವನ್ನು ವಿಗ್ರಹದ ಮೇಲೆ ಸುಮಾರು 20 ರಿಂದ 30 ನಿಮಿಷಗಳ ಕಾಲ ಇರಲು ಬಿಡಿ. ನಂತರ ಅದನ್ನು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಸ್ವಚ್ಛವಾದ ಬಟ್ಟೆಯಿಂದ ಒಣಗಿದ ನಂತರ ಅದನ್ನು ಒಣಗಿಸಿ.

ಫಾಯಿಲ್ ಪೇಪರ್

ಫಾಯಿಲ್ ಪೇಪರ್

ಈ ವಿಧಾನಕ್ಕಾಗಿ ದೊಡ್ಡ ಪಾತ್ರೆಯಲ್ಲಿ ನೀರನ್ನು ಕುದಿಯಲು ಬಿಡಿ ಮತ್ತು ಇದಕ್ಕೆ ಬೇಕಿಂಗ್ ಸೋಡಾ, ಉಪ್ಪು ಮತ್ತು ಫಾಯಿಲ್ ಪೇಪರ್ ಅನ್ನು ನೀರಿಗೆ ಹಾಕಿ. ಬೆಳ್ಳಿಯ ವಿಗ್ರಹವನ್ನು ಈ ನೀರಿನಲ್ಲಿ ಇರಿಸಿ ಮತ್ತು ಅದನ್ನು 5 ನಿಮಿಷಗಳ ಕಾಲ ಇರಲಿ. ಅದು ತಂಪುಗೊಂಡಾಗ ಅದನ್ನು ತೆಗೆದುಕೊಂಡು ಅದನ್ನು ಸೋಪಿನಿಂದ ತೊಳೆಯಿರಿ. ಮೇಲೆ ತಿಳಿಸಿದ ವಿಧಾನಗಳನ್ನು ಬಳಸಿಕೊಂಡು ದೀಪಾವಳಿಗೂ ಮುಂಚೆಯೇ ವಿಗ್ರಹಗಳನ್ನು ಸ್ವಚ್ಛಗೊಳಿಸಲು ಮುಂದಾಗಿ.

English summary

Ways To Clean Idols Before Diwali

Diwali, the festival of crackers and light is celebrated with pomp and pride across India. Apart from temple visits, certain rituals are conducted at home as well during Diwali. Usually Goddess Lakshmi and Lord Ganesh idols are kept and puja is done for five days (only in some parts of the country) or on the day of Diwali.
X
Desktop Bottom Promotion