For Quick Alerts
ALLOW NOTIFICATIONS  
For Daily Alerts

ಮನೆಯ ಆಕರ್ಷಕ ಅಲಂಕಾರಕ್ಕಾಗಿ ಸೂಪರ್ ಟಿಪ್ಸ್

By Hemanth
|

ಮನೆ ಕಟ್ಟುವಾಗ ಮನೆ ಹೊರಗೆ ಹೇಗೆ ಅಂದವಾಗಿರಬೇಕೋ ಅದೇ ರೀತಿ ಮನೆಯ ಒಳಗಿನ ಅಲಂಕಾರವೂ ಇರಬೇಕಾಗುತ್ತದೆ. ಮನೆಯೊಳಗಿನ ಅಲಂಕಾರವೂ ನಿಮ್ಮ ಸೃಜನಾತ್ಮಕತೆಯನ್ನು ಎತ್ತಿ ತೋರಿಸುತ್ತದೆ.

ಮನೆಯೊಳಗಿರುವ ಸಾಮಾನುಗಳನ್ನು ಬಳಸಿಕೊಂಡು ಒಳಾಂಗಣ ಅಲಂಕಾರವನ್ನು ಮಾಡಿಕೊಳ್ಳಲು ಸ್ವಲ್ಪ ಹೆಚ್ಚಿನ ಸೃಜನಾತ್ಮಕತೆ ಬೇಕಾಗುತ್ತದೆ. ಇಂದಿನ ಈ ಲೇಖನದಲ್ಲಿ ಮನೆಯನ್ನು ಅಲಂಕರಿಸಲು ಇರುವಂತಹ ಕೆಲವೊಂದು ಅತ್ಯುತ್ತಮ ವಿಧಾನಗಳ ಬಗ್ಗೆ ಚರ್ಚಿಸುವ.

Best Ways To Decorate Your Home

ದುಬಾರಿಯಾಗಿರುವಂತಹ ಒಳಾಂಗಣ ಸಾಮಾನುಗಳನ್ನು ತೆಗೆದುಕೊಳ್ಳುವ ಬದಲು ಮನೆಯೊಳಗೆ ಇರುವಂತಹ ಸಾಮಾನುಗಳಿಂದ ಅಲಂಕಾರ ಮಾಡಿಕೊಳ್ಳಬಹುದು. ಕೆಲವೊಂದು ಸರಳ ವಿಧಾನಗಳಿಂದ ನೀವು ಅವುಗಳನ್ನು ಬಳಸಿಕೊಳ್ಳಬಹುದು. ಒಳಾಂಗಣ ಅಲಂಕಾರಕ್ಕೆ ಸ್ವಲ್ಪ ಮಟ್ಟಿಗೆ ಕಲಾತ್ಮಕತೆ, ಸ್ವಲ್ಪ ಹಣ ಇದ್ದರೆ ಮನೆಯನ್ನು ಉತ್ತಮವಾಗಿ ವಿನ್ಯಾಸಗೊಳಿಸಬಹುದು.

ನಿಮ್ಮ ಮನೆಯ ಅಲಂಕಾರಕ್ಕೆ ಬೇಕಾದಷ್ಟು ಉಪಾಯಗಳಿವೆ. ಮನೆ ಅಲಂಕಾರಕ್ಕೆ ಯಾವುದೇ ಖರ್ಚು ಮಾಡದೆ ಹಣ ಉಳಿಸಲು ಯಾರಿಗೆ ತಾನೆ ಮನಸ್ಸಿರುವುದಿಲ್ಲ? ನಾವಿಲ್ಲಿ ನಿಮಗೆ ನೆರವಾಗಲು ಬಂದಿದ್ದೇವೆ. ನಿಮ್ಮ ವೆಚ್ಚಕ್ಕೆ ಹೊಂದಿಕೊಳ್ಳುವ ಕೆಲವೊಂದು ಸರಳ ಅಲಂಕಾರ ಟಿಪ್ಸ್‌ಗಳು ಇಲ್ಲಿವೆ. ಮನೆಯ ಅಲಂಕಾರಕ್ಕೂ ಸ್ವಲ್ಪ ಆದ್ಯತೆ ನೀಡಿ ಸ್ವಾಮಿ..!

ಕ್ಯಾನ್ವಾಸ್

ಖಾಲಿಯಾಗಿರುವ ಗೋಡೆಗಳ ಮೇಲೆ ಸುಂದರವಾಗಿರುವಂತಹ ಕ್ಯಾನ್ವಾಸ್ ಗಳನ್ನು ತೂಗು ಹಾಕಿ. ವಿವಿಧ ಬಣ್ಣಗಳಿಂದ ಕೂಡಿರುವಂತಹ ಕ್ಯಾನ್ವಾಸ್ ನಿಂದ ನಿಮ್ಮ ಕೋಣೆಯ ದೊಡ್ಡ ಕೋಣೆಗಳು ತುಂಬಿಕೊಳ್ಳುತ್ತದೆ. ಇದು ನಿಮ್ಮ ಮನೆಯನ್ನು ಅಲಂಕರಿಸಲು ಅತ್ಯುತ್ತಮ ವಿಧಾನ.

ಸಣ್ಣ ಊಟದ ಕೋಣೆ ದೊಡ್ಡದಾಗಿ ಕಾಣಿಸುತ್ತದೆ
ಊಟ ಮಾಡುವಂತಹ ಕೋಣೆಯು ಸಣ್ಣದಿದ್ದರೂ ಅದರಲ್ಲಿ ನೀವು ದುಂಡಗಿನ ಟೇಬಲ್ ಮತ್ತು ಚೇರ್‌ಗಳನ್ನು ಬಳಸಿ. ಇದರಿಂದ ನಿಮಗೆ ತೃಪ್ತಿಯಾಗಿಲ್ಲವೆಂದಾದರೆ ಆಗ ಪಾರದರ್ಶಕವಾಗಿರುವಂತಹ ಟೇಬಲ್ ಅಳವಡಿಸಿ. ಆಗ ಆ ಜಾಗಕ್ಕೆ ಒಂದು ಬೇರೆಯೇ ಆದ ವಿನ್ಯಾಸ ಸಿಗುತ್ತದೆ.

ಎತ್ತರ ಹೆಚ್ಚಿಸಿ
ನಿಮ್ಮ ಊಟದ ಕೋಣೆಯ ಗೋಡೆಗಳಿಗೆ ಲಂಬವಾಗಿರುವ ಪಟ್ಟಿಯಂತೆ ಬಣ್ಣ ಹಚ್ಚಿ. ಇದರಿಂದ ನಿಮ್ಮ ಊಟದ ಕೋಣೆ ಎತ್ತರವಾಗಿ ಕಾಣಿಸುತ್ತದೆ. ಕೋಣೆಯ ಮೂಲೆಗಳಿಗೆ ಮಂದವಾಗಿರುವ ಬಣ್ಣವನ್ನು ಹಚ್ಚಿದರೆ ಆಗ ಕೋಣೆ ತುಂಬಾ ವಿಭಿನ್ನವಾಗಿ ಕಾಣಿಸುತ್ತದೆ. ಮನೆ ಸಣ್ಣದಾದರೂ ಪರವಾಗಿಲ್ಲ, ಆಕರ್ಷಕವಾಗಿರಲಿ

ತಟಸ್ಥ
ತುಂಬಾ ನಿರಾಸಕ್ತಿಯ ಬಣ್ಣವನ್ನು ಆಯ್ಕೆ ಮಾಡುವಂತವರಿಗಾಗಿ ಈ ಟಿಪ್ಸ್. ನಿಮ್ಮ ಊಟದ ಕೋಣೆಗೆ ತಟಸ್ಥ ಬಣ್ಣವನ್ನು ಆಯ್ಕೆ ಮಾಡಿದರೆ ಅದು ತುಂಬಾ ನಿರಾಸಕ್ತಿಯಾಗಿರುತ್ತದೆ. ನಿಮಗೆ ಗಾಢವಾದ ಬಣ್ಣಗಳು ಇಷ್ಟವಿಲ್ಲವೆಂದಾದರೆ ಇತರ ಸಾಕಷ್ಟು ಆಯ್ಕೆಗಳು ನಿಮ್ಮಲ್ಲಿವೆ.

ಊಟದ ತಟ್ಟೆಗಳಲ್ಲೂ ಕಲೆ


ತಟ್ಟೆಯಲ್ಲಿ ಊಟ ಮಾತ್ರ ಮಾಡುವುದಲ್ಲ, ಅದರಲ್ಲೂ ಕಲೆ ಅರಳಿಸಲು ನಿಮಗೆ ತಿಳಿದಿರಬೇಕು. ಗಾಢ ಬಣ್ಣವಿರುವ ತಟ್ಟೆಗಳನ್ನು ನೀವು ತೂಗಾಡಿಸಿ ವಿನ್ಯಾಸಗೊಳಿಸಬಹುದು. ಹತ್ತು ಬಣ್ಣಗಳ ತಟ್ಟೆಗಳು ನಿಮ್ಮ ಊಟದ ಕೋಣೆಯ ಮೆರಗು ಹೆಚ್ಚಿಸುತ್ತದೆ. ಈ ತಟ್ಟೆಗಳನ್ನು ಯಾವುದೇ ವಿನ್ಯಾಸ ಅಥವಾ ರೀತಿಯಿಂದ ತೂಗಾಡಿಸಿದರೂ ಅದು ಅಮೋಘವಾಗಿ ಕಾಣಿಸುತ್ತದೆ. ಇದು ಮನೆಯನ್ನು ಅಲಂಕರಿಸುವ ಅತ್ಯುತ್ತಮ ವಿಧಾನ.
English summary

Best Ways To Decorate Your Home

When it comes to doing interiors of your house you need to be a little creative to make the best use of household items used as interior objects. Today in this article we here to share the best ways to decorate your home. Try to best use the household items as decorative objects than spending on expensive interiors. With these simple hacks you can make best use of them.
Story first published: Thursday, July 16, 2015, 19:16 [IST]
X
Desktop Bottom Promotion