Just In
Don't Miss
- Sports
ಐಪಿಎಲ್ನಲ್ಲಿ ಕೆಟ್ಟ ದಾಖಲೆ ಬರೆದ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ
- Automobiles
ಎಕ್ಸ್ಯುವಿ700 ಎಸ್ಯುವಿ ಕಾರಿನ ಮತ್ತಷ್ಟು ಹೊಸ ಮಾಹಿತಿ ಹಂಚಿಕೊಂಡ ಮಹೀಂದ್ರಾ
- Finance
ಶಾಲೆಯನ್ನ ಅರ್ಧಕ್ಕೆ ತೊರೆದು, 8,000 ರೂ. ವೇತನ ಪಡೆಯುತ್ತಿದ್ದ ನಿಖಿಲ್ ಕಾಮತ್ ಶತಕೋಟ್ಯಧಿಪತಿ ಆಗಿದ್ದೇಗೆ?
- News
ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪೊಲೀಸರ ಬಿಗಿ ರೂಲ್ಸ್
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಅಜಯ್ ದೇವಗನ್-ಅಮಿತಾಭ್ ಸಿನಿಮಾದ ಚಿತ್ರೀಕರಣಕ್ಕೆ ಕೊರೊನಾ ಅಡ್ಡಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಈ 8 ಯೋಗ ಭಂಗಿಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು
ಯೋಗ ಬಲ್ಲವನಿಗೆ ರೋಗವಿಲ್ಲ ಎಂಬ ಮಾತಿದೆ. ಯೋಗ ಅಭ್ಯಾಸ ಮಾಡುತ್ತಿರುವವರಿಗೆ ಅದರ ಪ್ರಯೋಜನದ ಬಗ್ಗೆ ಗೊತ್ತಿರುತ್ತದೆ. ಯೋಗ ಒಂದು ದೈಹಿಕ ಕಸರತ್ತು ಮಾತ್ರವಲ್ಲ ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ.
ಯೋಗವನ್ನು ಯಾರು ಬೇಕಾದರೂ ಮಾಡಬಹುದು ಅಲ್ಲದೆ ಆ ರೀತಿ ಯೋಗ ಮಾಡುವುದರಿಂದ ಪ್ರಯೋಜವನ್ನು ಪಡೆಯಬಹುದು. ಈ ಕೋವಿಡ್ 19 ಸಾಂಕ್ರಾಮಿಕ ರೋಗದ ಸಮಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಡೆ ಗಮನ ನೀಡಬೇಕು. ಅದಕ್ಕೆ ಯೋಗ ನಿಮಗೆ ಸಹಾಯ ಮಾಡುತ್ತದೆ.
ಇಲ್ಲಿ 8 ಯೋಗಾ ಭಂಗಿಗಳ ಬಗ್ಗೆ ಹೇಳಿದ್ದೇವೆ, ಇವು ತುಂಬಾ ಸರಳವಾದ ಯೋಗಾ ಭಂಗಿಗಳಾಗಿವೆ. ಇದನ್ನು ಅಭ್ಯಾಸ ಮಾಡಿದರೆ ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ, ದೇಹ ಫ್ಲಕ್ಸಿಬಲ್ ಆಗಿರುತ್ತದೆ ಹಾಗೂ ಮೂಡ್ ಕೂಡ ಚೆನ್ನಾಗಿರುತ್ತದೆ.

ತಾಡಾಸನ (Mountain Pose)
ಈ ಆಸನ ಮಾಡಲು ಪಾದಗಳನ್ನು ಜೊತೆಯಾಗಿಸಿ ನಿಲ್ಲಿ, ಕೈಗಳನ್ನು ನೇರವಾಗಿ ಮಂಡಿ ಬಳಿ ಇಡಿ. ಮೊಣ ಕಾಲುಗಳನ್ನು ಸ್ವಲ್ಪ ಮೇಲಕ್ಕೆ ಎತ್ತಿ. ನೋಟ ನೇರವಾಗಿರಲಿ, ಭುಜ, ಕೈಗಳು, ಎದೆಯನ್ನು ಬಿಯಾಗಿಸಿ ಉಸಿರಾಡಿ. ನಂತರ ಕೆಲವು ಸೆಕೆಂಡ್ ಉಸಿರು ಬಿಗಿಯಿಡಿದು ನಂತರ ನಿಧಾನಕ್ಕೆ ಬಿಡಿ, ನಂತರ ಮೊದಲಿನ ಭಂಗಿಗೆ ಬನ್ನಿ.

ವೃಕ್ಷಾಸನ (Tree Pose)
ಈ ಭಂಗಿ ಏಕಾಗ್ರತೆ ವೃದ್ಧಿಸಲು ಕೈಡ ಸಹಕಾರಿ. ಋಷಿ ಮುನಿಗಳು ತಪಸ್ಸು ಮಾಡುವಾಗ ಕೂಡ ಈ ಭಂಗಿಯಲ್ಲಿರುತ್ತಿದ್ದರು. ಇದನ್ನು ನಿರಂತರವಾಗಿ ಅಭ್ಯಾಸ ಮಾಡುವುದರಿಂದ ದೇಹದಲ್ಲಿ ಬಲ ಹೆಚ್ಚಾಗುತ್ತದೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಇದನ್ನು ಮಾಡಲು ಎರಡು ಕಾಲನ್ನು ಜೋಡಿಸಿ ನಿಲ್ಲಿ. ಈಗ ಒಂದು ಕಾಲನ್ನು ತೆಗೆದು ಮತ್ತೊಂದು ಕಾಲಿನ ತೊಡೆಯ ಭಾಗಕ್ಕೆ ಇಟ್ಟು ನಿಧಾನಕ್ಕೆ ಕೈಗಳನ್ನು ಮೇಲಕ್ಕೆ ಎತ್ತಿ. ಮೊದಲಿಗೆ ಇದನ್ನು ಮಾಡುವಾಗ ಕಷ್ಟವಾಗಬಹುದು, ಆಗ ನೀವು ಗೋಡೆಯ ಸಹಾಯ ತೆಗೆದು ಮಾಡಬಹುದು.

ಮತ್ಸ್ಯಾಸನ (fish pose)
ದೇಹದ ಫ್ಲಕ್ಸಿಬಿಲಿಟಿ ಹೆಚ್ಚಿಸುವಲ್ಲಿ ಈ ಆಸನ ತುಂಬಾನೇ ಸಹಕಾರಿ. ಈ ಆಸನ ಮಾಡಲು ಆಕಾಶ ಕಡೆ ಮುಖ ಮಾಡಿ ಮಲಗಿ. ಈಗ ದೇಹವನ್ನು ಸ್ವಲ್ಪ ಮೇಲಕ್ಕೆ ಎತ್ತಿ ತಲೆಯನ್ನು ಮ್ಯಾಟ್‌ಗೆ ಮುಟ್ಟಿಸಿ, ಈ ಭಂಗಿಯಲ್ಲಿ ಮೊದ-ಮೊದಲು 30 ಸೆಕೆಂಡ್ ಇಡಿ, ನಂತರ ಇದನ್ನು ಒಂದು ನಿಮಿಷಕ್ಕೆ ಏರಿಸಿ (ಯೋಗ ತರಬೇತಿದಾರರ ಸಲಹೆ ಪಡೆದು ಈ ಭಂಗಿ ಅಭ್ಯಾಸ ಮಾಡಿ).

ವೀರ ಭದ್ರಾಸನ (Warrior Pose)
ಈ ಭಂಗಿ ದೇಹದ ಶಕ್ತ ಹೆಚ್ಚಿಸುತ್ತದೆ. ಹೆಸರೇ ಸೂಚಿಸುವಂತೆ ಯೋಧನ ಭಂಗಿಯಲ್ಲಿ ನಿಲ್ಲುವುದು. ಒಂದು ಕಾಲನ್ನು ಮುಂದೆ ಇಟ್ಟು ಮತ್ತೊಂದು ಕಾಲನ್ನು ಹಿಂದೆ ಇಟ್ಟು, ಕೈಗಳನ್ನು ಕೂಡ ಒಂದು ಕೈ ಮುಂದೆ ತಂದು, ಮತ್ತೊಂದು ಕೈ ಹಿಂದಕ್ಕೆ ತಂದು ಮುಂದಿನ ಮಂಡಿ ಸ್ವಲ್ಪ ಮಡಚಿ ನಿಲ್ಲುವುದು.

ಧನುರಾಸನ (Bow pose)
ಬಿಲ್ಲಿನ ರೀತಿ ದೇಹವನ್ನು ಭಾಗಿಸುವ ಭಂಗಿ ಇದಾಗಿದೆ. ಈ ಆಸನ ನಿಮ್ಮ ಎದೆ ಅಗಲ ಮಾಡುತ್ತದೆ ಹಾಗೂ ನೀವು ಆಳವಾಗಿ ಉಸಿರನ್ನು ತೆಗೆದುಕೊಳ್ಳುವುದರಿಂದ ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ, ಮನಸ್ಸಿಗೆ ನೆಮ್ಮದಿ ಸಿಗುವುದು, ಅಲ್ಲದೆ ಇದು ಜೀರ್ಣಕ್ರಿಯೆಗೂ ಸಹಕಾರಿ.

ಬಾಲಾಸನ (child pose)
ಇದು ತುಂಬಾ ಸರಳವಾದ ಭಂಗಿಯಾಗಿದೆ. ಕಾಲುಗಳನ್ನು ಮಡಚಿ ತಲೆಯನ್ನು ಮ್ಯಾಟ್‌ಗೆ ಮುಟ್ಟುವಂತೆ ಇಟ್ಟು ಮಗು ಮಲಗುವಂತೆ ಮಲಗುವುದು. ಇದು ತುಂಬಾ ಸರಳವಾದ ಆಸನವಾದರೂ ಇದರ ಪ್ರಯೋಜಗಳು ಮಾತ್ರ ತುಂಬಾನೇ ಇದೆ. ಈ ಬಾಲಾಸನ ಹೊಟ್ಟೆಯನ್ನು ಸ್ಟ್ರೆಚ್ ಮಾಡುವುದರಿಂದ ದೇಹದಲ್ಲಿರುವ ಕಶ್ಮಲವನ್ನು ಹೊರ ಹಾಕುತ್ತೆ.

ವಿಪರೀತ ಕರಣಿ (Legs Up The Wall Pose)
ಕಾಲುಗಳನ್ನು ಗೋಡೆಯ ಮೇಲೆ ಇಟ್ಟು ಕೈಗಳನ್ನು ಮ್ಯಾಟ್ ಮೇಲೆ ಇಟ್ಟು 5 ನಿಮಿಷ ಮಲಗಿ. ಇದು ಮಾನಸಿಕ ಒತ್ತಡವನ್ನು ಹೊರ ಹಾಕುತ್ತೆ, ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ನಡೆಯುವುದು. ಇದು ನಿಮ್ಮ ನರಗಳು ಶಾಂತವಾಗಿ ಇರುವಂತೆ ಮಾಡುತ್ತದೆ, ರೋಗ ನಿರೋಧಕ ಶಕ್ತಿ ಹೆಚ್ಚುವುದು.

ಸುಖಾಸನ (Sitting Pose)
ನಂತರ ಸುಖಾಸನದಲ್ಲಿ ಕುಳಿತು ಉಸಿರಾಟದ ವ್ಯಾಯಾಮ ಮಾಡಿ. ಪ್ರಾಣಯಾಮ, ಕಪಾಲಭಾತಿ, ಉಜ್ವೈನ್ ಪ್ರಾಣಯಾಮ ಇವುಗಳನ್ನು ಅಭ್ಯಾಸ ಮಾಡಿ.