For Quick Alerts
ALLOW NOTIFICATIONS  
For Daily Alerts

ರಕ್ತದಾನಕ್ಕೂ ಮೊದಲು ಈ ಬಗ್ಗೆ ನೀವು ತಿಳಿಯಲೇಬೇಕು

|

ರಕ್ತದಾನ ಮಹಾದಾನ ಎಂದು ಹೇಳಲಾಗುತ್ತದೆ. ರಕ್ತದಾನ ಮಾಡಿದರೆ ಅದರಿಂದ ಹಲವಾರು ಮಂದಿಯ ಪ್ರಾಣ ಕಾಪಾಡಬಹುದಾಗಿದೆ. ಪ್ರತಿಯೊಂದು ಕ್ಷಣವು ಯಾರಿಗಾದರೊಬ್ಬರಿಗೆ ರಕ್ತವು ಬೇಕಾಗಿರುವುದು. ಅದರಲ್ಲೂ ಪ್ರಮುಖವಾಗಿ ಶಸ್ತ್ರಚಿಕಿತ್ಸೆ, ಗಂಭೀರ ಗಾಯ ಮತ್ತು ದೀರ್ಘಕಾಲದ ಅನಾರೋಗ್ಯವಿದ್ದರೆ ಆಗ ರಕ್ತವು ಬೇಕಾಗಿರುವುದು. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂ ಎಚ್ ಒ) ಪ್ರಕಾರ ರಕ್ತದಾನವು ಹಲವಾರು ಆಶಯ ಮೂಡಿಸುವುದು ಮತ್ತು ದೀರ್ಘಕಾಲಿಕ ಅನಾರೋಗ್ಯ ಇರುವಂತಹ ಜನರಿಗೆ ಇದು ಉತ್ತಮ ಗುಣಮಟ್ಟದ ಜೀವನ ನಡೆಸಲು ಸಹಕಾರಿ ಆಗಿರುವುದು.
ರಕ್ತದಾನ ಮಾಡುವುದು ತುಂಬಾ ಸರಳ ಮತ್ತು ಇದು ಹಲವಾರು ಜನರ ಜೀವನದಲ್ಲಿ ಬದಲಾವಣೆಗಳನ್ನು ಬಿಡುಗಡೆ ಮಾಡುವುದು. ರಕ್ತದಾನ ಮಾಡಲು ನಿರ್ಧಾರ ಮಾಡಿದ್ದರೆ ಆಗ ನೀವು ರಕ್ತದಾನಕ್ಕೆ ಮೊದಲು, ಆ ವೇಳೆ ಮತ್ತು ಬಳಿಕ ಏನು ಮಾಡಬೇಕು ಎಂದು ತಿಳಿಯದೆ ಇದ್ದರೆ ಆಗ ನೀವು ಈ ಮಾರ್ಗದರ್ಶನವನ್ನು ಪಾಲಿಸಿಕೊಂಡು ಹೋಗಿ..

Blood Donation
ರಕ್ತದಾನಕ್ಕೆ ಮೊದಲು ಏನು ಮಾಡಬೇಕು?

ರಕ್ತದಾನಕ್ಕೆ ಮೊದಲು ಏನು ಮಾಡಬೇಕು?

ರಕ್ತದಾನ ಮಾಡುವ ಕೆಲವು ವಾರಗಳಿಗೆ ಮೊದಲು ನೀವು ಕಬ್ಬಿನಾಂಶವು ಹೆಚ್ಚಾಗಿ ಇರುವಂತಹ ಆಹಾರಗಳಾಗಿರುವಂತಹ ಸಮುದ್ರಾಹಾರ, ಮಾಂಸ, ಬಸಳೆ, ಬೀನ್ಸ್ ಮತ್ತು ಗೆಣಸು ತಿನ್ನಬೇಕು. ಇದರಿಂದ ಕಡಿಮೆ ಹಿಮೋಗ್ಲೋಬಿನ್ ಮಟ್ಟದ ಅಪಾಯವು ತಪ್ಪುವುದು. ನಿಮ್ಮ ವೈದ್ಯಕೀಯ ಇತಿಹಾಸದ ಬಗ್ಗೆ ಮಾಹಿತಿ ಇರುವಂತಹ ಫಾರ್ಮ್ ಅನ್ನು ನೀವು ರಕ್ತದಾನಕ್ಕೆ ಮೊದಲು ತುಂಬಬೇಕು. ಇದರಲ್ಲಿ ರಕ್ತದಿಂದ ಬರುವಂತಹ ಯಾವುದೇ ಸೋಂಕು ಇದೆಯಾ ಎಂದು ನೋಡುವರು. ಅದೇ ರೀತಿಯಾಗಿ ಯಾವುದೇ ಔಷಧಿ ತೆಗೆದುಕೊಳ್ಳುತ್ತಲಿದ್ದರೆ ಮತ್ತು ಪೋಷಕಾಂಶದ ಕೊರತೆ ಇದ್ದರೆ ಆಗ ನೀವು ಇದನ್ನು ಹೇಳಬೇಕು.

ರಕ್ತಹೀನತೆ ಮತ್ತು ರಕ್ತದೊತ್ತಡ ಇಲ್ಲದೆ ಇದ್ದರೆ ಆಗ ರಕ್ತದ ಸ್ಯಾಂಪಲ್ ತೆಗೆದುಕೊಳ್ಳಲಾಗುತ್ತದೆ. ರಕ್ತದ ಸ್ಯಾಂಪಲ್ ಪಾಸಿಟಿವ್ ಆಗಿದ್ದರೆ ಆಗ ವೈದ್ಯರು ರಕ್ತದಾನಕ್ಕೆ ಅವಕಾಶ ನೀಡುವರು.

ರಕ್ತದಾನದ ವೇಳೆ ಏನು ಮಾಡಬೇಕು

ರಕ್ತದಾನದ ವೇಳೆ ಏನು ಮಾಡಬೇಕು

ನಿಮಗೆ ಆರಾಮವಾಗಿ ಕುಳಿತುಕೊಳ್ಳಲು ಅಥವಾ ಮಲಗಲು ಸೂಚಿಸಲಾಗುತ್ತದೆ. ಕೈಗೆ ನಂಜುನಿರೋಧಕ ಸೊಲ್ಯೂಷನ್ ಹಾಕಿ ಸ್ವಚ್ಛ ಮಾಡುವರು ಮತ್ತು ಕೈಯ ಮೇಲ್ಭಾಗಕ್ಕೆ ರಕ್ತದೊತ್ತಡ ಹೆಚ್ಚಿಸಲು ಬಿಗಿಯಾಗಿ ಕಟ್ಟಲಾಗುವುದು. ಇದರಿಂದ ರಕ್ತವು ನಾಳಗಳಲ್ಲಿ ತುಂಬುವುದು ಮತ್ತು ರಕ್ತನಾಳವು ಸರಿಯಾಗಿ ಕಾಣುವುದು.

ಇದರ ಬಳಿಕ ಸೂಜಿಯನ್ನು ಕೈಯ ರಕ್ತನಾಳಕ್ಕೆ ಚುಚ್ಚಲಾಗುತ್ತದೆ. ಇದರಲ್ಲಿ ಇರುವಂತಹ ಪ್ಲಾಸ್ಟಿಕ್ ಟ್ಯೂಬ್ ನ ಮೂಲಕ ರಕ್ತವು ಬ್ಯಾಗ್ ಗೆ ಹರಿದು ಹೋಗುವುದು. ದೇಹದಿಂದ ಕೇವಲ 400 ಮಿ.ಲೀ. ರಕ್ತವನ್ನು ಮಾತ್ರ ತೆಗೆಯಲಾಗುವುದು ಮತ್ತು ಇದಕ್ಕೆ ಸುಮಾರು 15 ನಿಮಿಷ ಬೇಕಾಗುತ್ತದೆ. ಇದು ಪೂರ್ತಿಗೊಂಡ ಬಳಿಕ ಸೂಜಿ ತೆಗೆದು, ಆ ಭಾಗಕ್ಕೆ ಸಣ್ಣ ಬ್ಯಾಂಡೇಜ್ ಹಾಕುವರು.

ರಕ್ತದಾನದ ಬಳಿಕ ಏನು ಮಾಡಬೇಕು?

ರಕ್ತದಾನದ ಬಳಿಕ ಏನು ಮಾಡಬೇಕು?

ರಕ್ತದಾನದ ಬಳಿಕ ಯಾವುದೇ ರೀತಿಯ ತುರಿಕೆ, ಊತ, ರಕ್ತ ಹೆಪ್ಪುಗಟ್ಟುವಿಕೆ ಮತ್ತು ನೋವು ನಿವಾರಣೆ ಮಾಡಲು ಸ್ವಲ್ಪ ಸಮಯ ಕೈಯನ್ನು ಮೇಲಿನ ಭಾಗಕ್ಕೆ ಹಿಡಿದುಕೊಳ್ಳಿ. ಬೇಕಿದ್ದರೆ ಲಘು ಉಪಾಹಾರ ಮಾಡಬಹುದು ಮತ್ತು ಮುಂದಿನ 24 ಗಂಟೆಗಳ ಕಾಲ ಯಾವುದೇ ರೀತಿಯ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಡಿ.

2-3 ವಾರಗಳ ಬಳಿಕ ರಕ್ತದ ಮಟ್ಟವು ಮತ್ತೆ ಅದೇ ಮಟ್ಟಕ್ಕೆ ಬರುವುದು. ರಕ್ತದಾನದ ಬಳಿಕ ಬೇಗನೆ ಚೇತರಿಕೆ ಪಡೆಯಲು ಕೆಲವೊಂದು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

ರಕ್ತದಾನದ ಬಳಿಕ ಇವುಗಳನ್ನು ತಪ್ಪದೇ ಮಾಡಿ

ರಕ್ತದಾನದ ಬಳಿಕ ಇವುಗಳನ್ನು ತಪ್ಪದೇ ಮಾಡಿ

* ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಿರಿ.

* ಸಂತೋಷವಾಗಿರಿ ಮತ್ತು ಧನಾತ್ಮಕವಾಗಿರಿ.

* ಆರಾಮದಾಯಕ ಬಟ್ಟೆ ಧರಿಸಿ.

* ನಿಶ್ಯಕ್ತಿ, ನೋವು ಕಾಣಿಸುತ್ತಿದ್ದರೆ ವೈದ್ಯರನ್ನು ಭೇಟಿ ಮಾಡಿ.

* ಧೂಮಪಾನ ಮತ್ತು ಮದ್ಯಪಾನ ಮಾಡಬೇಡಿ.

English summary

What Should Do Before, During And After Blood Donation

If you have decided to donate blood and don't know what to expect before, during and after blood donation. We will guide you as to what to do.
Story first published: Friday, December 27, 2019, 18:58 [IST]
X
Desktop Bottom Promotion