For Quick Alerts
ALLOW NOTIFICATIONS  
For Daily Alerts

ಮಕ್ಕಳನ್ನು ಪೋಷಿಸುವವರಿಗೆ ಕ್ವಾರಂಟೈನ್‌ ಬಗ್ಗೆ ಶಿಶುತಜ್ಞರು ಏನು ಹೇಳುತ್ತಾರೆ?

|

ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ವಿಶ್ವವನ್ನೇ ವ್ಯಾಪಿಸುತ್ತಿದ್ದು ಇದುವರೆಗೆ ಖಚಿತ ಲಸಿಕೆ ಸಿಗದಿರುವ ಕಾರಣ ಇದರಿಂದ ರಕ್ಷಿಸಿಕೊಳ್ಳುವುದೇ ಏಕಮಾತ್ರ ಮಾರ್ಗವಾಗಿದೆ. ಮಕ್ಕಳಿಗೆ ಮತ್ತು ಹಿರಿಯ ನಾಗರಿಕರಿಗೆ ಈ ವೈರಸ್‍ನ ಸೋಂಕು ಆವರಿಸುವ ಮತ್ತು ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚೇ ಇರುವ ಕಾರಣ ಈ ವ್ಯಕ್ತಿಗಳು ಹೆಚ್ಚೇ ಎಚ್ಚರಿಕೆ ವಹಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ತಿಳಿಸಿದೆ.

What Pediatrician Says About Self-Quarantine and Your Family

ಶಿಶುತಜ್ಞರು ವಿಶೇಷವಾಗಿ ಮಕ್ಕಳು ಮತ್ತು ಅವರ ಪಾಲಕರು ಕಡ್ಡಾಯವಾಗಿ ಹದಿನಾಲ್ಕು ದಿನಗಳ ಸ್ವಯಂ-ಪ್ರತ್ಯೇಕಿಸುವಿಕೆಗೆ ಒಳಗಾಗುವಂತೆ ತಿಳಿಸುತ್ತಾರೆ. ಈ ಮಾತು ಬೆದರಿಕೆ ಎಂದೇ ತೋರುತ್ತದಾದರೂ ಈ ಪ್ರಕ್ರಿಯೆಯನ್ನು ಹೆಚ್ಚು ನಿರ್ವಹಣಾತ್ಮಕ ಮತ್ತು ಕಡಿಮೆ ಒತ್ತಡವನ್ನುಂಟು ಮಾಡಲು ನೀವು ನಿರ್ವಹಿಸಬೇಕಾದ ಹಂತಗಳೂ ಇವೆ.

ಈ ವಿಷಯದಲ್ಲಿ ಪಾಲಕರ ಪ್ರಶ್ನೆಗಳಿಗೆ ಮತ್ತು ಶಿಶುತಜ್ಞರು ನೀಡುವ ಉತ್ತರಗಳನ್ನು ನೋಡೋಣ:

ನನ್ನ ಕುಟುಂಬಕ್ಕೆ ಸ್ವಯಂ-ಪ್ರತ್ಯೇಕಿಸುವಿಕೆ ನಿರ್ವಹಿಸುವಂತೆ ಏಕೆ ಹೇಳಲಾಗುತ್ತದೆ?

ನನ್ನ ಕುಟುಂಬಕ್ಕೆ ಸ್ವಯಂ-ಪ್ರತ್ಯೇಕಿಸುವಿಕೆ ನಿರ್ವಹಿಸುವಂತೆ ಏಕೆ ಹೇಳಲಾಗುತ್ತದೆ?

ಕರೋನವೈರಸ್ ಸೋಂಕಿಗೆ ಒಳಗಾಗುವ ಸಾಧ್ಯತೆಯ ಮೂಲಕ ನೀವು ಮಧ್ಯಮ ಅಥವಾ ಹೆಚ್ಚಿನ ಅಪಾಯದಲ್ಲಿದ್ದೀರಿ ಎಂದು ನಿಮ್ಮ ವೈದ್ಯರು ಭಾವಿಸಿದರೆ ನಿಮ್ಮ ಕುಟುಂಬದ ಸದಸ್ಯರನ್ನು ಅಥವಾ ನಿಮ್ಮ ಇಡೀ ಕುಟುಂಬವನ್ನು ಸ್ವಯಂ-ಪ್ರತ್ಯೇಕಿಸುವಿಕೆಗೆ ವೈದ್ಯರು ನಿಮ್ಮನ್ನು ಪ್ರೋತ್ಸಾಹಿಸಬಹುದು. ನಿಮ್ಮಲ್ಲಿ ಯಾರೊಬ್ಬರಿಗಾದರೂ ಈ ಲಕ್ಷಣಗಳಿದ್ದರೆ ಎಲ್ಲರೂ ಈ ಕಟ್ಟುಪಾಡಿಗೆ ಒಳಗಾಗಬೇಕಾಗುತ್ತದೆ:

  • ಜ್ವರ, ಒಣ ಕೆಮ್ಮು ಮತ್ತು ಉಸಿರಾಟದ ತೊಂದರೆ ಸೇರಿದಂತೆ COVID-19 ನ ಯಾವುದೇ ಲಕ್ಷಣಗಳು, ಅಥವಾ
  • COVID-19 ಗೆ ಸೋಂಕು ತಗಲಿರುವುದು ಖಚಿತವಾಗಿರುವ (ಪಾಸಿಟಿವ್) ಯಾರೊಂದಿಗಾದರೂ (ಆರು ಅಡಿಗಳ ಒಳಗೆ) ನಿಕಟ ಸಂಪರ್ಕದಲ್ಲಿದ್ದರೆ
  • ಸ್ವಯಂ-ಪ್ರತ್ಯೇಕಿಸುವಿಕೆ ಎಂದರೆ ಹೇಗೆ ಅರ್ಥೈಸಿಕೊಳ್ಳಬಹುದು?

    ಸ್ವಯಂ-ಪ್ರತ್ಯೇಕಿಸುವಿಕೆ ಎಂದರೆ ಹೇಗೆ ಅರ್ಥೈಸಿಕೊಳ್ಳಬಹುದು?

    ನಿಮಗೆ ಸೋಂಕು ಆವರಿಸಿದ್ದು ಇದರ ಲಕ್ಷಣಗಳು ಪ್ರಕಟಗೊಳ್ಳಲು ಅಗತ್ಯವಿರುವ ಸಮಯದಲ್ಲಿ ನಿಮ್ಮಿಂದ ಇತರರಿಗೆ ರೋಗ ಹರಡುವುದನ್ನು ತಪ್ಪಿಸಲು ಸ್ವಯಂಪ್ರೇರಿತರಾಗಿ ನೀವೇ ಬೇರೆ ಯಾರ ಸಂಪರ್ಕಕ್ಕೂ ಬಾರದಂತೆ ಪ್ರತ್ಯೇಕವಾಗಿರುವುದೇ ಸ್ವಯಂ-ಪ್ರತ್ಯೇಕಿಸುವಿಕೆ (self-quarantine)

    ಇನ್ನೊಂದು ರೀತಿಯಲ್ಲಿ ಹೇಳುವುದಾದರೆ: ನೀವು ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡದ ಹೊರತು ನಿಮ್ಮ ಮನೆಯಲ್ಲಿಯೇ ಉಳಿಯಬೇಕಾಗುತ್ತದೆ.

    ಸ್ವಯಂ-ಪ್ರತ್ಯೇಕಿಸುವಿಕೆ ಮತ್ತು ಸಾಮಾಜಿಕ ಅಂತರದ ನಡುವಿನ ವ್ಯತ್ಯಾಸವೇನು?

    ಸ್ವಯಂ-ಪ್ರತ್ಯೇಕಿಸುವಿಕೆ ಮತ್ತು ಸಾಮಾಜಿಕ ಅಂತರದ ನಡುವಿನ ವ್ಯತ್ಯಾಸವೇನು?

    ಮೇಲ್ನೋಟಕ್ಕೆ ಎರಡೂ ಒಂದೇ ಅನ್ನಿಸಿದರೂ ಎರಡೂ ಸಂದರ್ಭಗಳಲ್ಲಿ ಇವು ಕೊಂಚ ಭಿನವಾಗುತ್ತವೆ. ಸ್ವಯಂ-ಪ್ರತ್ಯೇಕಿಸುವಿಕೆಯಲ್ಲಿ ನೀವು ಮನೆಯಲ್ಲಿಯೇ ಇರುತ್ತೀರಿ ಮತ್ತು ಇತರ ಜನರಿಂದ ದೂರವಿರುತ್ತೀರಿ. ಸಾಮಾಜಿಕ ಅಂತರದಲ್ಲಿ ಹೊರಗೆ ಹೋಗಬಹುದಾದರೂ ಇತರ ವ್ಯಕ್ತಿಗಳಿಂದ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳುತ್ತೀರಿ.

    ಸಾಮಾಜಿಕ ಅಂತರವು ಸಾಮಾಜಿಕ ಜವಾಬ್ದಾರಿಯಿಂದ ಪ್ರೇರೇಪಿಸಲ್ಪಟ್ಟಿದೆ. ನೀವು ಸಾಧ್ಯವಾದಷ್ಟು ಸಾರ್ವಜನಿಕ ಸ್ಥಳಗಳಿಂದ ದೂರವಿರಿ, ಮತ್ತು ನಿಮ್ಮ ಭೇಟಿಯನ್ನು ಕುಟುಂಬದ ವ್ಯಕ್ತಿಗಳಿಗೆ ಮಿತಿಗೊಳಿಸಿ. ಪ್ರತಿಯೊಬ್ಬರೂ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆಂದು ಭಾವಿಸಿದಾಗಲೂ, ಮತ್ತು COVID-19 ಗೆ ಸೋಂಕಿಗೆ ತೆರೆದುಕೊಳ್ಳದೇ ಇದ್ದರೂ ದಿನಸಿ ಸಾಮಗ್ರಿಗಳಂತಹ ಅಗತ್ಯಗಳಿಗಾಗಿ ನೀವು ಇನ್ನೂ ಮನೆ ಬಿಟ್ಟು ಹೊರ ಹೋಗಬೇಕಾಗಿ ಬರಬಹುದು. ನಿಮ್ಮೆಲ್ಲಾ ಕೆಲಸಗಳನ್ನು ಆದಷ್ಟೂ ಕಡಿಮೆ ಓಡಾಟಗಳಲ್ಲಿ ಪೂರೈಸುವುದು ಮತ್ತು ಆದಷ್ಟೂ ಕಡಿಮೆ ಜನರನ್ನು ಭೇಟಿಯಾಗುವುದು ಈ ಅಂತರ ಕಾಯ್ದುಕೊಳ್ಳುವ ವಿಧಾನಗಳೇ ಆಗಿವೆ.

    ಯಾವೊಬ್ಬ ವ್ಯಕ್ತಿಗೆ COVID-19 ಸೋಂಕು ತಗಲಿರುವುದು ಖಚಿತವಾಗಿದ್ದರೆ ಇವರ ಒಡನಾಟದಲ್ಲಿದ್ದ ಎಲ್ಲರಿಗೂ ಸ್ವಯಂ-ಪ್ರತ್ಯೇಕಿಸುವಿಕೆ ಅನಿವಾರ್ಯವಾಗುತ್ತದೆ. ಇದು ಹೆಚ್ಚಿನ ಸಂದರ್ಭದಲ್ಲಿ ವೈದ್ಯರ ಸೂಚನೆಗಳೊಂದಿಗೆ ಅನ್ವಯವಾಗುತ್ತದೆ. ಆದರೆ ಅನೇಕ ವ್ಯಕ್ತಿಗಳು ಮತ್ತು ಕುಟುಂಬಗಳು ರೋಗಲಕ್ಷಣಗಳನ್ನು ಹೊಂದಿದ್ದರೆ ಅಥವಾ ಅವರು COVID-19 ಗೆ ಧನಾತ್ಮಕವಾಗಿ ಪರೀಕ್ಷಿಸಲ್ಪಟ್ಟ ಯಾರೊಬ್ಬರ ಸುತ್ತಲೂ ಇದ್ದಾರೆ ಎಂದು ತಿಳಿದಿದ್ದರೆ ಅದನ್ನು ಸ್ವಯಂ-ಪ್ರತ್ಯೇಕಿಸುವಿಕೆಗೆ ಸಲಹೆ ಮಾಡುತ್ತಾರೆ. ಸ್ವಯಂ-ಪ್ರತ್ಯೇಕಿಸುವಿಕೆಯಲ್ಲಿದ್ದಾಗ ಯಾವುದೇ ರೋಗಾಣುಗಳ ಸೋಂಕು ನಿಮ್ಮಿಂದ ಆವರಿಸದಂತೆ ನೀವೇ ಸ್ವತಃ ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳುತ್ತೀರಿ. ಉದಾಹರಣೆಗೆ, ಅಗತ್ಯ ವಸ್ತುಗಳಿಗಾಗಿ ಮನೆ ಬಿಟ್ಟು ಹೋಗುವ ಬದಲು, ನೀವು ಸ್ನೇಹಿತರು ಅಥವಾ ನೆರೆಹೊರೆಯವರ ಸಹಾಯ ಯಾಚಿಸುತ್ತೀರಿ.

    COVID-19 ಗಾಗಿ ಸ್ವಯಂ-ಪ್ರತ್ಯೇಕಿಸುವಿಕೆ ಎಷ್ಟು ದಿನಗಳದ್ದಾಗಿರುತ್ತದೆ?

    COVID-19 ಗಾಗಿ ಸ್ವಯಂ-ಪ್ರತ್ಯೇಕಿಸುವಿಕೆ ಎಷ್ಟು ದಿನಗಳದ್ದಾಗಿರುತ್ತದೆ?

    ಇದೀಗ, ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳಿಂದ (ಸಿಡಿಸಿ) ಶಿಫಾರಸು ಎಂದರೆ, COVID-19 ಗೆ ಒಡ್ಡಿಕೊಳ್ಳುವುದನ್ನು ಅಥವಾ ಧನಾತ್ಮಕ COVID-19 ಪರೀಕ್ಷೆಯನ್ನು ತಿಳಿದಿರುವ ಯಾರಾದರೂ 14 ದಿನಗಳವರೆಗೆ ಸ್ವಯಂ-ಪ್ರತ್ಯೇಕಿಸುವಿಕೆಗೆ ಒಳಗಾಗಬೇಕು. ಸೋಂಕಿನ ನಂತರದ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಸರಾಸರಿ 3-5 ದಿನಗಳು ಮತ್ತು ಸೋಂಕಿತ ಜನರಿಂದ ಸೋಂಕು ಹರಡದೇ ಇರಲು ಮುಂದಿನ ಸುಮಾರು 8 ದಿನಗಳು ಬೇಕಾಗುತ್ತದೆ.

    ಮನೆಯಲ್ಲಿ ಪ್ರತ್ಯೇಕವಾಗಿರುವ ಜೊತೆಗೇ ಇತರ ಜನರಿಂದ ದೂರವಿರುವುದರ ಮೂಲಕ, ನನ್ನ ಕುಟುಂಬವು ಸ್ವಯಂ-ಪ್ರತ್ಯೇಕಿಸುವಿಕೆಯ ಸಮಯದಲ್ಲಿ ನಿರ್ದಿಷ್ಟವಾಗಿ ಏನನ್ನಾದರೂ ಮಾಡಬೇಕೇ?

    ಮನೆಯಲ್ಲಿ ಪ್ರತ್ಯೇಕವಾಗಿರುವ ಜೊತೆಗೇ ಇತರ ಜನರಿಂದ ದೂರವಿರುವುದರ ಮೂಲಕ, ನನ್ನ ಕುಟುಂಬವು ಸ್ವಯಂ-ಪ್ರತ್ಯೇಕಿಸುವಿಕೆಯ ಸಮಯದಲ್ಲಿ ನಿರ್ದಿಷ್ಟವಾಗಿ ಏನನ್ನಾದರೂ ಮಾಡಬೇಕೇ?

    ಮನೆಯಲ್ಲಿ ಜೊತೆಯಾಗಿ ವಾಸಿಸುವ ಜನರ ನಡುವೆ ಕನಿಷ್ಠ ಆರು ಅಡಿ ಅಂತರವನ್ನು ಇರಿಸಿ. ನಿಮ್ಮ ಮನೆಯೊಳಗೆ ಅನಾರೋಗ್ಯದ ವ್ಯಕ್ತಿಯನ್ನು ಹೇಗೆ ಪ್ರತ್ಯೇಕಿಸುವುದು ಎಂಬುದರ ಕುರಿತು ಹೆಚ್ಚುವರಿ ಸಲಹೆಗಳಿಗಾಗಿ ಮುಂದಿನ ಪ್ರಶ್ನೆಯನ್ನು ನೋಡಿ.

    ನಿಮ್ಮ ಕೈಗಳನ್ನು ಚೆನ್ನಾಗಿ ಮತ್ತು ಆಗಾಗ ತೊಳೆಯುತ್ತಲೇ ಇರಿ. ಮನೆಯ ಎಲ್ಲ ಸದಸ್ಯರು ತೊಳೆಯದ ಕೈಗಳಿಂದ ಮುಖ ಮುಟ್ಟುವುದನ್ನು ಕಡ್ಡಾಯವಾಗಿ ತಪ್ಪಿಸಬೇಕು.

    ಕೌಂಟರ್‌ಗಳು, ಮೇಜುಗಳು, ಬಾಗಿಲ ಹಿಡಿಕೆಗಳು, ಸ್ನಾನಗೃಹಗಳು, ಫೋನ್‌ಗಳು ಮತ್ತು ಕೀಬೋರ್ಡ್‌ಗಳಂತಹ ಎಲ್ಲಾ ಸಾಮಾನ್ಯವಾಗಿ ಮುಟ್ಟುವ ಮೇಲ್ಮೈಗಳನ್ನು ಪ್ರತಿದಿನ ಸ್ವಚ್ಛಗೊಳಿಸಿದೇ ಉಪಯೋಗಿಸಲು ಮತ್ತು ಉಪಯೋಗಿಸಿದ ನಂತರ ಮತ್ತೊಮ್ಮೆ ಸ್ವಚ್ಛಗೊಳಿಸಲು ಕುಟುಂಬ ಸದಸ್ಯರನ್ನು ಪ್ರೋತ್ಸಾಹಿಸಿ.

    ಯಾರಿಗಾದರೂ ಜ್ವರ ಎದುರಾಗಿದೆಯೇ ಎಂಬುದನ್ನು ಕಂಡುಕೊಳ್ಳಲು ಪ್ರತಿದಿನ ಎರಡು ಬಾರಿ ಎಲ್ಲರ ತಾಪಮಾನವನ್ನು ಪರಿಶೀಲಿಸಿ ಪುಸ್ತಕವೊಂದರಲ್ಲಿ ದಾಖಲಿಸಿ. ಒಣ ಕೆಮ್ಮು ಅಥವಾ ಉಸಿರಾಟದ ತೊಂದರೆ ಮುಂತಾದ ಲಕ್ಷಣಗಳು ಕಾಣಿಸುತ್ತದೆಯೇ ಎಂದು ಪರಿಶೀಲಿಸಿ. ನೀವು ಅಥವಾ ನಿಮ್ಮ ಕುಟುಂಬದ ಸದಸ್ಯರಲ್ಲಿ ಯಾರೊಬ್ಬರೂ ಅನಾರೋಗ್ಯಕ್ಕೆ ಒಳಗಾಗಿದ್ದರೆ, ಮನೆಯಲ್ಲಿಯೇ ಇರಿ ಮತ್ತು ನಿಮ್ಮ ವೈದ್ಯರಿಗೆ ಕರೆ ಮಾಡಿ.

    ನಾಯಿಗಳ ವಾಕಿಂಗ್‌ ಅಥವಾ ಅಂಚೆಯನ್ನು ಪಡೆಯಲು ನಾವು ಹೊರಗೆ ಹೋಗಬಹುದೇ?

    ನಾಯಿಗಳ ವಾಕಿಂಗ್‌ ಅಥವಾ ಅಂಚೆಯನ್ನು ಪಡೆಯಲು ನಾವು ಹೊರಗೆ ಹೋಗಬಹುದೇ?

    ಹೌದು, ಆದರೆ ಮನೆಯಿಂದ ಹೊರಡುವ ಮೊದಲು ಮತ್ತು ಹಿಂದಿರುಗಿದ ಕೂಡಲೇ ನಿಮ್ಮ ಕೈಗಳನ್ನು ತೊಳೆಯಿರಿ ಮತ್ತು ನೀವು ಸ್ಪರ್ಶಿಸುವ ಯಾವುದೇ ಮೇಲ್ಮೈಗಳನ್ನು ಬಟ್ಟೆಯಿಂದ ಒರೆಸಿ ಸ್ವಚ್ಛಗೊಳಿಸಿ. (ಉದಾಹರಣೆಗೆ ಅಂಚೆಯ ಡಬ್ಬಿ) ಈ ಮೂಲಕ ನೀವು ನಿಮ್ಮ ಸೂಕ್ಷ್ಮಜೀವಿಗಳನ್ನು ಇತರ ಮೇಲ್ಮೈಗಳಿಗೆ ಮತ್ತು ಇತರ ಜನರಿಗೆ ಹರಡುವುದನ್ನು ತಪ್ಪಿಸಬಹುದು.

    ಪ್ರತಿ ಸದಸ್ಯರ ಆರೋಗ್ಯ ಹೇಗಿದೆ ಎಂಬ ಮಾಹಿತಿಯ ಎಂಬುದರ ಆಧಾರದ ಮೇಲೆ, ನೀವು ತಾಜಾ ಗಾಳಿ ಮತ್ತು ವ್ಯಾಯಾಮಕ್ಕಾಗಿ ಹೊರಗಡೆ ಹೋಗಬಹುದು - ಇತರರಿಂದ ಆರು ಅಡಿ ದೂರವನ್ನು ಕಾಯ್ದುಕೊಳ್ಳಲು ಮರೆಯದಿರಿ ಮತ್ತು ಸಾರ್ವಜನಿಕ ಸ್ಥಳಗಳನ್ನು ತಪ್ಪಿಸಿ.

    ನಾನೊಬ್ಬ ಪಾಲಕ/ಪಾಲಕಿ ನನಗೇ ಸೋಂಕು ಎದುರಾದರೆ ಏನಾಗುತ್ತದೆ?

    ನಾನೊಬ್ಬ ಪಾಲಕ/ಪಾಲಕಿ ನನಗೇ ಸೋಂಕು ಎದುರಾದರೆ ಏನಾಗುತ್ತದೆ?

    ಪೋಷಕರಾಗಿ ನಿಮ್ಮ ಪಾಲನೆಯ ಜವಾಬ್ದಾರಿಗಳು ನಿಮ್ಮ ಕುಟುಂಬ ಸದಸ್ಯರಿಂದ ಸ್ವಯಂ-ದೂರವಿರುವುದನ್ನು ವಿಶೇಷವಾಗಿ ಕಷ್ಟಕರವಾಗಿಸುತ್ತವೆ. ಆದರೆ ನೀವು COVID-19 ರೋಗಲಕ್ಷಣಗಳೊಂದಿಗೆ (ಅಥವಾ ಯಾವುದೇ ಸಾಂಕ್ರಾಮಿಕ ಕಾಯಿಲೆಯ ಲಕ್ಷಣಗಳು) ಕೆಳಗೆ ಬಂದರೆ, ಒಂದೇ ಮನೆಯಲ್ಲಿ ವಾಸಿಸುವ ಮಕ್ಕಳು ಮತ್ತು ಕುಟುಂಬ ಸದಸ್ಯರನ್ನು ರಕ್ಷಿಸಲು ನೀವು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ:

    • ನಿಮ್ಮ ಮನೆಯ ಮಕ್ಕಳ ಲಾಲನೆ ಪಾಲನೆಯ ಜವಾಬ್ದಾರಿಗಳನ್ನು ನಿಮ್ಮ ಸಂಗಾತಿ ಅಥವಾ ಇತರ ಸದಸ್ಯರಿಗೆ ವಹಿಸಿ, ನೀವು ಕಟ್ಟುನಿಟ್ಟಾಗಿ ಉಳಿದವರಿಂದ ವಿಶೇಷವಾಗಿ ಮಕ್ಕಳು ಮತ್ತು ವೃದ್ದರಾಗಿರುವ ನಿಮ್ಮ ಕುಟುಂಬದ ಸದಸ್ಯರಿಂದ ದೂರವಿರಿ.
    • ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಮೂಗು ಮತ್ತು ಬಾಯಿಯನ್ನು ಮುಚ್ಚಿ.
    • ಕುಟುಂಬದ ಇತರ ಸದಸ್ಯರಿಂದ ಸಾಧ್ಯವಾದಷ್ಟು ಪ್ರತ್ಯೇಕತೆಯನ್ನು ಉಳಿಸಿಕೊಳ್ಳಲು ಮನೆಯ ಒಂದೇ ಕೋಣೆಯಲ್ಲಿ ಅಥವಾ ಪ್ರತ್ಯೇಕ ಮನೆಯಲ್ಲಿಯೇ ಇರಿ. ಸಾಧ್ಯವಾದರೆ, ಪ್ರತ್ಯೇಕ ಶೌಚಾಲಯವನ್ನು ಬಳಸಿ. ನೀವು ಸ್ನಾನಗೃಹವನ್ನು ಹಂಚಿಕೊಂಡರೆ, ಪ್ರತಿ ಬಳಕೆಯ ನಂತರ ನೀವು ಸಂಪರ್ಕಕ್ಕೆ ಬಂದ ಯಾವುದೇ ಮೇಲ್ಮೈಗಳನ್ನು ಸ್ವಚ್ಛ ಗೊಳಿಸಲು ಸೋಪ್ ಮತ್ತು ನೀರು ಅಥವಾ ಸೋಂಕುನಿವಾರಕ ಒರೆಸುವ ಬಟ್ಟೆಗಳನ್ನು ಬಳಸಿ. ಒಮ್ಮೆ ಬಳಸಿದ ಈ ವಸ್ತುಗಳನ್ನು ಮತ್ತೆ ಬಳಸದೇ ತ್ಯಜಿಸಿ.
    • ಆಹಾರ ವಸ್ತುಗಳು, ಖಾದ್ಯಗಳು, ಕನ್ನಡಕ, ಪಾತ್ರೆಗಳು, ಟವೆಲ್ ಅಥವಾ ಹಾಸಿಗೆ ಸೇರಿದಂತೆ ಮನೆಯ ನಿತ್ಯ ಬಳಕೆಯವ ವಸ್ತುಗಳನ್ನು ಹಂಚಿಕೊಳ್ಳಬೇಡಿ. ಅನಾರೋಗ್ಯದ ಕುಟುಂಬ ಸದಸ್ಯರು ಬಳಸುವ ಯಾವುದೇ ವಸ್ತುಗಳನ್ನು ಚೆನ್ನಾಗಿ ತೊಳೆಯಬೇಕು.
    • ಫೋನ್‌ಗಳು, ಬಾಗಿಲ ಹಿಡಿಕೆಗಳು, ಕೀಬೋರ್ಡ್‌ಗಳು, ಫ್ರಿಜ್ ಬಾಗಿಲ ಹಿಡಿಕೆ ಮತ್ತು ಸ್ನಾನಗೃಹದಲ್ಲಿ ಎಲ್ಲರೂ ಸ್ಪರ್ಶಿಸುವ ನಲ್ಲಿ ಮೊದಲಾದ ಸ್ಥಳಗಳ ಮೇಲ್ಮೈಗಳನ್ನು ಪ್ರತಿದಿನ ಸ್ವಚ್ಛಗೊಳಿಸಿ, ಅದರಲ್ಲೂ ಸೋಂಕು ಪೀಡಿತ ವ್ಯಕ್ತಿ ಉಪಯೋಗಿಸಿದ ಸ್ನಾನಗೃಹವನ್ನೇ ಉಳಿದವರು ಉಪಯೋಗಿಸಬೇಕಾದರೆ ಪ್ರತಿ ಬಾರಿ ಆ ವ್ಯಕ್ತಿ ಉಪಯೋಗಿಸಿದ ಬಳಿಕವೂ ಇಡಿಯ ಸ್ನಾನಗೃಹವನ್ನು ಸ್ವಚ್ಛಗೊಳಿಸುವುದು ಅಗತ್ಯವಾಗಿದೆ.
    • ಒಂದು ವೇಳೆ ಪೋಷಕರಿಗೂ ಸೋಂಕು ಆವರಿಸಿದರೆ?

      ಒಂದು ವೇಳೆ ಪೋಷಕರಿಗೂ ಸೋಂಕು ಆವರಿಸಿದರೆ?

      ಇಬ್ಬರಲ್ಲಿ ಯಾರಿಗೆ ಮೊದಲು ಸೋಂಕು ತಗುಲಿತ್ತೋ ಅವರು ಮಕ್ಕಳ ಜವಾಬ್ದಾರಿಯನ್ನು ಹೊರಬಹುದು. ಏಕೆಂದರೆ ಸೋಂಕು ತಗುಲಿದ ಪ್ರಾರಂಭಿಕ ದಿನಗಳಲ್ಲಿಯೇ ಇದು ಇತರರಿಗೆ ಹರಡುವ ಸಾಧ್ಯತೆ ಹೆಚ್ಚು.

      ಆದರೂ, ಇಬ್ಬರ ಸೋಂಕು ಎಷ್ಟರ ಮಟ್ಟಿನ ಪ್ರಾಬಲ್ಯ ಪಡೆದಿದೆ ಎಂಬ ಮಾಹಿತಿಯನ್ನು ಅನುಸರಿಸಿ ಮಕ್ಕಳ ಮತ್ತು ಇತರ ಸದಸ್ಯರ ಹೊಣೆಗಾರಿಕೆಯನ್ನು ಮೂರನೆಯ ವ್ಯಕ್ತಿಗೆ ವಹಿಸುವುದೇ ಸೂಕ್ತವಾದ ಕ್ರಮವಾಗಿದೆ. ಆದರೆ, ಪಾಲಕರಿಗೆ ಸೋಂಕು ಇರುವುದು ಪತ್ತೆಯಾಗುವ ಹೊತ್ತಿಗೆ ಈ ಸೋಂಕು ಮಕ್ಕಳಿಗೂ ಹರಡಿರುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಹಾಗಾಗಿ ಅಜ್ಜ ಅಜ್ಜಿಯರಿಗೆ ಈ ಜವಾಬ್ದಾರಿ ವಹಿಸಲಾಗದು. ಏಕೆಂದರೆ, ಒಂದು ವೇಳೆ ಮಕ್ಕಳಿಗೆ ಸೋಂಕು ತಗಲಿದ್ದು ಲಕ್ಷಣಗಳು ಪ್ರಕಟಗೊಳ್ಳದೇ ಇದ್ದರೂ ಇದು ಹಿರಿಯ ನಾಗರಿಕರಿಗೆ ಸುಲಭವಾಗಿ ಆವರಿಸಬಹುದು. ನೆನಪಿರಲಿ, ಈ ಸೋಂಕು ವೃದ್ದರಲ್ಲಿ ಅತಿ ಹೆಚ್ಚಿನ ಲಕ್ಷಣಗಳನ್ನು ಪ್ರಕಟಿಸುತ್ತದೆ.

      ಸ್ವಯಂ-ಪ್ರತ್ಯೇಕಿಸುವಿಕೆಯನ್ನು ಹೊಂದುವ ಸಾಧ್ಯತೆಗಾಗಿ ನನ್ನ ಕುಟುಂಬವನ್ನು ಹೇಗೆ ಸಿದ್ಧಪಡಿಸಬೇಕು?

      ಸ್ವಯಂ-ಪ್ರತ್ಯೇಕಿಸುವಿಕೆಯನ್ನು ಹೊಂದುವ ಸಾಧ್ಯತೆಗಾಗಿ ನನ್ನ ಕುಟುಂಬವನ್ನು ಹೇಗೆ ಸಿದ್ಧಪಡಿಸಬೇಕು?

      • ಅಗತ್ಯವಸ್ತುಗಳ ಸರಬರಾಜು, ಅವಶ್ಯಕ ಚಟುವಟಿಕೆಗಳು, ಔಷಧಿಗಳು ಮತ್ತು ಆಹಾರದ ವಿಷಯದಲ್ಲಿ ನೀವು ಏನು ಮಾಡುತ್ತೀರಿ, ನೀವು ಎಲ್ಲಿ ಉಳಿಯುತ್ತೀರಿ ಮತ್ತು 14 ದಿನಗಳ ಅವಧಿಯಲ್ಲಿ ನೀವು ಹೇಗೆ ಪಡೆಯಬೇಕು ಎಂಬ ಬಗ್ಗೆ ವಿವರಗಳನ್ನು ಕಲೆಹಾಕಿ ಆ ಪ್ರಕಾರ ಸಾಮಾಗ್ರಿಗಳನ್ನು ಮುಂಚಿತವಾಗಿ ಖರೀದಿಸಿಟ್ಟುಕೊಳ್ಳಿ.
      • ಈ ಹದಿನಾಲ್ಕು ದಿನಗಳ ವನವಾಸದಲ್ಲಿ ಮಕ್ಕಳು ಯಾವ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಲ್ಲರು ಎಂಬುದನ್ನು ಪರಿಗಣಿಸಿ. ವಿಶೇಷವಾಗಿ ಮಕ್ಕಳಲ್ಲಿ ಯಾವುದೇ ಲಕ್ಷಣಗಳಿಲ್ಲದಿದ್ದಾಗ ಹೆಚ್ಚು ಚಟುವಟಿಕೆಗಳನ್ನು ಆಯೋಜಿಸಿ. ಮಕ್ಕಳ ಮನಸ್ಸು ಚಂಚಲವಾಗಿದ್ದು ವಿವಿಧ ಚಟುವಟಿಕೆಗಳನ್ನು ಬಯಸುವವರಾದ್ದರಿಂದ ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟೂ ಹೆಚ್ಚು ಚಟುವಟಿಕೆಯನ್ನು ಆಯೋಜಿಸಿ. ಉದಾಹರಣೆಗೆ 23 Indoor Activities for Heart-Healthy Kids ಎಂಬ ತಾಣವನ್ನು ಆಯ್ದುಕೊಳ್ಳಬಹುದು.
      • ಮಕ್ಕಳ ಆರೋಗ್ಯದ ಜೊತೆಗೇ ನಿಮ್ಮ ಮನೆಯಲ್ಲಿರುವ ಸಾಕುಪ್ರಾಣಿಗಳ ಬಗ್ಗೆಯೂ ಗಮನ ಹರಿಸಿ.
      • ಮಕ್ಕಳು COVID-19 ನಿಂದ ತೀವ್ರವಾದ ತೊಡಕುಗಳ ಅಪಾಯವನ್ನು ಹೊಂದಿಲ್ಲ ಮತ್ತು ಅವರು ಈ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದಾರೆ ಮತ್ತು ಸಹಾಯ ಮಾಡಲು ಸಮರ್ಥರಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಿ.
      • ಕೊನೆಯದಾಗಿ, Kohl's Start Childhood Off Right ಎಂಬ ಕಾರ್ಯಕ್ರಮದ ಪ್ರಕಾರ ಮಕ್ಕಳಲ್ಲಿ ಆರೋಗ್ಯಕರ ಹವ್ಯಾಸಗಳನ್ನು ಜೀವನದಲ್ಲಿ ಅಳವಡಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಈ ಸಮಯವನ್ನು ಸೂಕ್ತವಾಗಿ ಬಳಸಿಕೊಳ್ಳಿ. ಉದಾಹರಣೆಗೆ: ಪೌಷ್ಟಿಕ ಆಹಾರ ಸೇವನೆ, ದೈಹಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವುದು, ಸಾಕಷ್ಟು ನೀರು ಕುಡಿಯುತ್ತಿರುವುದು ಮತ್ತು ಪ್ರತಿ ರಾತ್ರಿ ಕನಿಷ್ಟ ಎಂಟು ಘಂಟೆಗಳಾದರೂ ಗಾಢ ನಿದ್ದೆ ಪಡೆಯುವುದು ಇತ್ಯಾದಿ.
      • ಸ್ವಯಂ-ಪ್ರತ್ಯೇಕಿಸುವಿಕೆಯ ಸಮಯದಲ್ಲಿ ಇತರರೊಂದಿಗೆ ಹೇಗೆ ಸಂಪರ್ಕದಲ್ಲಿರಬಹುದು?

        ಸ್ವಯಂ-ಪ್ರತ್ಯೇಕಿಸುವಿಕೆಯ ಸಮಯದಲ್ಲಿ ಇತರರೊಂದಿಗೆ ಹೇಗೆ ಸಂಪರ್ಕದಲ್ಲಿರಬಹುದು?

        ನೆನಪಿಡಬೇಕಾದ ಒಂದು ಪ್ರಮುಖ ವಿಷಯವೆಂದರೆ ಸ್ವಯಂ-ಪ್ರತ್ಯೇಕಿಸುವಿಕೆ ಎಂದರೆ ಸಾಮಾಜಿಕವಾಗಿ ಪ್ರತ್ಯೇಕವಾಗಿರುವುದು ಎಂದರ್ಥವಲ್ಲ. ಮಕ್ಕಳು ಮತ್ತು ವಯಸ್ಕರು ಇನ್ನೂ ಇತರರೊಂದಿಗೆ ಸಂಪರ್ಕ ಸಾಧಿಸಲು, ಕಲಿಕೆಯ ಅವಕಾಶಗಳಲ್ಲಿ ತೊಡಗಿಸಿಕೊಳ್ಳಲು ಮತ್ತು ಈ ರೀತಿಯ ಚಟುವಟಿಕೆಗಳೊಂದಿಗೆ ಸಮಯವನ್ನು ಹಾದುಹೋಗಲು ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಬಹುದು.

        • ಫೋನ್ ಕರೆಗಳನ್ನು ಮಾಡಿ ಅಥವಾ ವೀಡಿಯೊ ಚಾಟ್‌ಗಳಲ್ಲಿ ತೊಡಗಿಸಿಕೊಳ್ಳಿ
        • ಪತ್ರಗಳನ್ನು ಬರೆಯಿರಿ, ಇಮೇಲ್‌ಗಳು ಅಥವಾ ಪಠ್ಯ ಸಂದೇಶಗಳನ್ನು ಅಥವಾ ನಿಮಗಿಷ್ಟವಾದ ವಿಷಯವನ್ನು ಬರೆಯಿರಿ.
        • ಶಾಲಾ ಪಠ್ಯಗಳನ್ನು ಪುನರಾವರ್ತಿಸಿ
        • ಒಳಾಂಗಣ ಆಟಗಳನ್ನು ಆಡಿ
        • ಪುಸ್ತಕಗಳನ್ನು ಓದುದಿ
        • ಸ್ವಯಂ-ಪ್ರತ್ಯೇಕಿಸುವಿಕೆಯ ಸಮಯದಲ್ಲಿ ಸೃಜನಶೀಲರಾಗಿರುವುದು ಬಹಳ ಮುಖ್ಯ - ಆದ್ದರಿಂದ ಸಾಮಾಜಿಕ ಸಂಪರ್ಕಗಳನ್ನು ಕಾಪಾಡಿಕೊಳ್ಳಲು ಈ ಅವಧಿಯ ಲಾಭವನ್ನು ಪಡೆದುಕೊಳ್ಳಿ ಮತ್ತು ನಿಮ್ಮ ಪಟ್ಟಿಯಿಂದ ದೀರ್ಘ-ಯೋಜಿತ ಯೋಜನೆಗಳನ್ನು ಸಧ್ಯಕ್ಕೆ ನಿವಾರಿಸಿ. ಇವು ನಿಮ್ಮ ಮನಸ್ಥಿತಿಯನ್ನು ಬೆಳಗಿಸುತ್ತದೆ ಮತ್ತು ದಿನಗಳನ್ನು ಸ್ವಲ್ಪ ವೇಗವಾಗಿ ಕಳೆಯಲು ಸಹಾಯ ಮಾಡುತ್ತವೆ.

          --

English summary

What Paediatrician Says About Self-Quarantine and Your Family

Here we are discussing about What Pediatrician Saya About Self-Quarantine and Your Family. Read more.
X
Desktop Bottom Promotion