For Quick Alerts
ALLOW NOTIFICATIONS  
For Daily Alerts

ಇಂಗು: ಏನಿದು, ಎಲ್ಲಿಂದ ಬಂತು, ಇದರ ಆಯ್ಕೆ ಹೇಗೆ? ಇಲ್ಲಿದೆ ಮಾಹಿತಿ

|

ಇಂಗು ತೆಂಗು ಇದ್ದರೆ ಮಂಗ ಕೂಡ ರುಚಿಕರ ಅಡುಗೆ ಮಾಡುತ್ತದೆ ಎಂಬ ಮಾತಿದೆ. ಇಂಗು ಭಾರತೀಯ ಪಾಕಪದ್ಧತಿಯಲ್ಲಿ ಅಷ್ಟು ಪ್ರಾಮುಖ್ಯತೆ ವಹಿಸಿದೆ, ಅಲ್ಲದೆ ಅದು ಅಡುಗೆಯ ರುಚಿಯನ್ನು ಇನ್ನಷ್ಟು ಹೆಚ್ಚಿಸಲು ಪೂರಕವಾಗಿದೆ.

ಭಾರತದಲ್ಲಿ ಇಂಗು ಇಲ್ಲದ ಮನೆ ಇರದು, ಇದಿಲ್ಲದೆ ಯಾವ ಮಸಾಲೆ ಪದಾರ್ಥಗಳು ಸಹ ಸಿದ್ಧವಾಗುವುದೇ ಇಲ್ಲ. ಇದು ಅಡುಗೆಗೆ ಒಂದು ರೀತಿಯ ಆಕರ್ಷಕ ಸುವಾಸನೆಯನ್ನು ಸಹ ನೀಡುವುದರಲ್ಲಿ ಹಿಂದಿಲ್ಲ. ಇನ್ನು ಕೆಲವು ಮನೆಗಳಲ್ಲಿ ಇಂಗು ಇಲ್ಲದೆ ಯಾವ ಅಡುಗೆಯೂ ಆಗುವುದೇ ಇಲ್ಲ ಎಂದರೆ ತಪ್ಪಾಗಲಾರದು. ಬರೋಬ್ಬರಿ 16ನೇ ಶತಮಾನದಷ್ಟು ಹಿಂದಿನ ಇಂಥಾ ಮಸಾಲೆ ಪದಾರ್ಥ ಇಂಗಿನ ವೈಜ್ಞಾನಿಕ ಹೆಸರು ಅಸಾಫೋಟಿಡಾ.

ಬನ್ನಿ, ಇಂಗಿನ ಹಿನ್ನೆಲೆ ಏನು, ಇದರ ಅರ್ಥವೇನು, ಇದರಿಂದಾಗುವ ಆರೋಗ್ಯ ಲಾಭಗಳೇನು, ಇದನ್ನು ಬಳಸುವ ವಿಧಾನಗಳು ಹೇಗೆ, ಇಂಗನ್ನು ಯಾವ ರೀತಿ ಆಯ್ಕೆ ಮಾಡಬೇಕು ಎಂಬ ವಿವರಗಳನ್ನು ಮುಂದೆ ತಿಳಿಯೋಣ:

ಇಂಗಿನ ಮೂಲ ಮತ್ತು ಇತಿಹಾಸ

ಇಂಗಿನ ಮೂಲ ಮತ್ತು ಇತಿಹಾಸ

ಇಂಗಿನ ವಿಶಿಷ್ಟ ಪರಿಮಳ, ಸುವಾಸನೆಯು ಇಂದ್ರಿಯಗಳನ್ನು ಆಕರ್ಷಿಸುತ್ತದೆ, ಜತೆಗೆ ಇದರ ಸೇವನೆಯು ಆರೋಗ್ಯದಲ್ಲಿ ಸಾಕಷ್ಟು ಪವಾಡಗಳನ್ನು ಸೃಷ್ಟಿಸುವ ಶಕ್ತಿಯನ್ನು ಹೊಂದಿದೆ. ಇಂಗು ಇರಾನ್ ದೇಶದಿಂದ ಬಂದಂತಹ ಫೆರುಲಾ ಎಂಬ ಸಸ್ಯದ (ferula assafoetida) ಉತ್ಪನ್ನ. ಆ ಗಿಡದ ವಿವಿಧ ಭಾಗಗಳನ್ನು ಒಣಗಿಸಿ ಮಾಡಿದ ಪುಡಿ ಇದಾಗಿದೆ. 16ನೇ ಶತಮಾನದಲ್ಲಿ ಮೊಘಲರು ಇಂಗನ್ನು ಭಾರತಕ್ಕೆ ಪರಿಚಯಿಸಿದರು, ಮೊಘಲರು ಈ ಮಸಾಲೆಯನ್ನು ಭಾರತೀಯ ಅಡುಗೆಗೆ ಪರಿಚಯಿಸುವವರೆಗೂ ಅದರ ಮೂಲದ ಕುರುಹುಗಳು ಮಧ್ಯಪ್ರಾಚ್ಯದಲ್ಲಿ ಕಂಡುಬಂದಿದ್ದವು.

ಇಂಗು ಎಂದರೇನು?

ಇಂಗು ಎಂದರೇನು?

ಅಸಾಫೋಟಿಡಾ ಅಥವಾ ಇಂಗು ಮೂಲತಃ ಫೆರುಲಾ ಅಸ್ಸಾ-ಫೊಯ್ಟಿಡಾ ಎಂದು ಕರೆಯಲ್ಪಡುವ ಒಂದು ಬಗೆಯ ಗಿಡಮೂಲಿಕೆಯಿಂದ ಪಡೆದ ಲ್ಯಾಟೆಕ್ಸ್ ಗಮ್ ಆಗಿದೆ. ಇಂಗಿನಲ್ಲಿರುವ ನೈಸರ್ಗಿಕ ಗುಣಲಕ್ಷಣಗಳು ಹಲವಾರು ಕಾಯಿಲೆಗಳನ್ನು ಗುಣಪಡಿಸುವ ಪ್ರಬಲ ಸಾಮರ್ಥ್ಯವನ್ನು ಹೊಂದಿದೆ. ಅಡುಗೆಗೆ ರುಚಿ ಮತ್ತು ಸುವಾಸನೆಯ ಸ್ಪರ್ಶವನ್ನು ಸೇರಿಸುವುದರ ಹೊರತಾಗಿಯೂ, ಇಂಗು ಹೊಟ್ಟೆ ಮತ್ತು ಕರುಳಿನ ಆರೋಗ್ಯಕ್ಕೆ ಅದ್ಭುತ ಚಮತ್ಕಾರಗಳನ್ನು ಮಾಡುತ್ತದೆ ಮತ್ತು ನೈಸರ್ಗಿಕವಾಗಿಯೇ ಚಯಾಪಚಯವನ್ನು ಸುಧಾರಿಸುತ್ತದೆ.

ಎರಡು ರೂಪದಲ್ಲಿ ಲಭ್ಯವಿರುವ ಇಂಗು

ಎರಡು ರೂಪದಲ್ಲಿ ಲಭ್ಯವಿರುವ ಇಂಗು

ಇಂಗು ಮುಖ್ಯವಾಗಿ ಎರಡು ವಿಭಿನ್ನ ರೂಪಗಳಲ್ಲಿ ಲಭ್ಯವಿದೆ. ಇಂಗಿದೆ ಒಂದು ವಿಶಿಷ್ಟವಾದ ವಿನ್ಯಾಸವನ್ನು ನೀಡಲು ಕೆಲವು ಪದಾರ್ಥಗಳೊಂದಿಗೆ ಬೆರೆಸಲಾಗುತ್ತದೆ. ಮೊದಲನೆಯದಾಗಿ, ಇದು ಹಳದಿ ಮಿಶ್ರಿತ ಮಸಾಲೆ ರೂಪದಲ್ಲಿ ಲಭ್ಯವಿದೆ, ಇದನ್ನು ಅರಿಶಿನ ಅಥವಾ ಅಕ್ಕಿ ಹಿಟ್ಟಿನೊಂದಿಗೆ ಬೆರೆಸುವ ಮೂಲಕ ಇದರ ಬಲವಾದ ವಾಸನೆ ಮತ್ತು ಪರಿಮಳವನ್ನು ದುರ್ಬಲಗೊಳಿಸುತ್ತದೆ. ಎರಡನೆಯದಾಗಿ, ಇಂಗಿನ ಶುದ್ಧ ರೂಪವು ಸಾಮಾನ್ಯವಾಗಿ ಜಿಗುಟಾದ ಕಂದು ಬಣ್ಣದ ಉಂಡೆಯಾಗಿ ಲಭ್ಯವಿದೆ. ಜೀರ್ಣಕಾರಿ ಸಮಸ್ಯೆಗಳನ್ನು ಗುಣಪಡಿಸಲು ಶುದ್ಧ ಇಂಗನ್ನು ಯುನಾನಿ, ಸಿಧಾ ಮತ್ತು ಆಯುರ್ವೇದದ ಔಷಧಿಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇಂಗು ಒಂದು ದುಬಾರಿ ಮಸಾಲೆ ಪದಾರ್ಥವಾಗಿದೆ.

ಇಂಗಿನ ಆರೋಗ್ಯ ಪ್ರಯೋಜನಗಳು

ಇಂಗಿನ ಆರೋಗ್ಯ ಪ್ರಯೋಜನಗಳು

ಇಂಗು ಆರೋಗ್ಯಕ್ಕೆ ಹೇರಳವಾದ ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿ ಕಾರ್ಮಿನೇಟಿವ್, ಆಂಟಿ-ವೈರಲ್, ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ನಿವಾರಕ, ನಿದ್ರಾಜನಕ ಮತ್ತು ಮೂತ್ರವರ್ಧಕ ಗುಣಲಕ್ಷಣಗಳಿಗೆ. ಜೀರ್ಣಕಾರಿ ಸಮಸ್ಯೆಗಳನ್ನು ಗುಣಪಡಿಸುವುದರ ಜೊತೆಗೆ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ, ಮುಟ್ಟಿನ ನೋವನ್ನು ಗುಣಪಡಿಸುತ್ತದೆ, ತಲೆನೋವು ಕಡಿಮೆ ಮಾಡುತ್ತದೆ, ಆಸ್ತಮಾ ನಿವಾರಿಸುತ್ತದೆ ಮತ್ತು ಕೀಟಗಳ ಕಡಿತವನ್ನು ಸಹ ಗುಣಪಡಿಸುತ್ತದೆ. ದೀರ್ಘಕಾಲದ ಉಸಿರಾಟದ ಸಮಸ್ಯೆ ಇದ್ದರೆ ಇಂಗನ್ನು ನೀರಿನಲ್ಲಿ ಹಾಕಿ ಸೇವಿಸುವುದರಿಂದ ಕಫವನ್ನು ನಿವಾರಿಸುತ್ತದೆ.

ರಕ್ತದ ತೆಳುವಾಗಲು, ರಕ್ತದೊತ್ತಡದ ಮಟ್ಟವನ್ನು ಸಮತೋಲನಗೊಳಿಸಲು, ಮುಟ್ಟಿನ ಸಮಯದಲ್ಲಿ ರಕ್ತದ ಹರಿವನ್ನು ಸುಲಭಗೊಳಿಸಲು ಮತ್ತು ನೋವನ್ನು ಕಡಿಮೆ ಮಾಡುವ ಪ್ರೊಜೆಸ್ಟರಾನ್ ಸ್ರವಿಸುವಿಕೆಯನ್ನು ಹೆಚ್ಚಿಸುವ ಮೂಲಕ ಮುಟ್ಟಿನ ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಜ್ಜಿಗೆ ಅಥವಾ ಒಂದು ಕಪ್ ಬೆಚ್ಚಗಿನ ನೀರಿಗೆ ಇಂಗನ್ನು ಹಾಕಿ ಸೇವಿಸುವುದು ಉತ್ತಮ ವಿಧಾನ

ಇಂಗನ್ನು ಹೇಗೆ ಬಳಸುವುದು?

ಇಂಗನ್ನು ಹೇಗೆ ಬಳಸುವುದು?

ಭಾರತೀಯ ಪಾಕಪದ್ಧತಿಯಲ್ಲಿ ಇಂಗನ್ನು ಹಲವಾರು ವಿಧಗಳಲ್ಲಿ ಬಳಸಲಾಗುತ್ತದೆ. ಇದನ್ನು ಮುಖ್ಯವಾಗಿ ಮಸಾಲೆ ಪದಾರ್ಥವಾಗಿ ಬಳಸಲಾಗುತ್ತದೆ ಮತ್ತು ಇದನ್ನು ಮೇಲೋಗರಗಳು, ದಾಲ್, ಸಾಂಬಾರು, ರಸಂ, ರೈಸ್‌ಬಾತ್‌ ಮತ್ತು ಇತರ ಭಕ್ಷ್ಯಗಳಿಗೆ ಸೇರಿಸಲಾಗುತ್ತದೆ. ನೀವು ಕಚ್ಚಾ ಇಂಗ್‌ ಬಳಸುತ್ತಿದ್ದರೆ ಅದನ್ನು ಪುಡಿಮಾಡಿ 3 ನಿಮಿಷಗಳ ಕಾಲ ಕುದಿಯುವ ನೀರಿನಲ್ಲಿ ಕರಗಿಸಿ, ಅದನ್ನು ಭಕ್ಷ್ಯಕ್ಕೆ ಸೇರಿಸಿ.

ಶುದ್ಧ ಇಂಗನ್ನು ಹೇಗೆ ಆಯ್ಕೆ ಮಾಡುವುದು?

ಶುದ್ಧ ಇಂಗನ್ನು ಹೇಗೆ ಆಯ್ಕೆ ಮಾಡುವುದು?

ಇಂಗನ್ನು ಹೆಚ್ಚಾಗಿ ಅರಿಶಿನ, ಅಕ್ಕಿ ಹಿಟ್ಟು ಅಥವಾ ಇತರ ಪದಾರ್ಥಗಳೊಂದಿಗೆ ಬೆರೆಸಿ ಅದರಲ್ಲಿರುವ ದೀರ್ಘವಾದ ವಾಸನೆಯನ್ನು ಕಡಿಮೆ ಮಾಡಲಾಗುತ್ತದೆ. ಇಂಥ ಇಂಗನ್ನುಆಯ್ಕೆ ಮಾಡುವಾಗ ಇಂಗು ಯಾವುದೇ ಕಲ್ಲು ಅಥವಾ ಕಣಗಳನ್ನು ಹೊಂದಿಲ್ಲ ಎಂದು ಖಚಿತಪಡಿಸಿಕೊಳ್ಳಿ.

ಇನ್ನು ಶುದ್ಧ ಇಂಗು ಬಲವಾದ ವಾಸನೆ, ಸ್ವಲ್ಪ ಜಿಗುಟಾದ ವಿನ್ಯಾಸ ಮತ್ತು ಕಂದು ಬಣ್ಣವನ್ನು ಹೊಂದಿರುತ್ತದೆ. ಇದರ ಆಯ್ಕೆ ವೇಳೆ ಇದು ಗಾಢವಾದ ಸುವಾಸನೆಯನ್ನು ಹೊಂದಿದೆಯೇ, ಅದರ ಬಣ್ಣವನ್ನು ಸಹ ಪರಿಶೀಲಿಸಿ. ಹಾಗೂ ಇಂಗನ್ನು ಅಲ್ಲಾಡಿಸಿ ಅದರ ಕೆಳಭಾಗದಲ್ಲಿ ಕಲ್ಲುಗಳು, ಸೋಪ್‌ನಂಥ ಯಾವುದೇ ಕಣಗಳಿವೆಯೇ ಎಂದು ಪರಿಶೀಲಿಸಿ.

English summary

What is Hing, Asafoetida? History, Health Benefits and How to Select in kannada

Here we are discussing about What is Hing, Asafoetida? History, Health Benefits and How to Select in kannada. One such spice is Heeng also known as Asafoetida, which is commonly used in almost every Indian household; Interestingly, the story of this Heeng dates back to the 16th century, when it paved its way to the the Indian cuisine. Read more.
X