For Quick Alerts
ALLOW NOTIFICATIONS  
For Daily Alerts

ಆರೋಗ್ಯಕರ ಚರ್ಮ ಬೇಕೆ? ವಾರಕ್ಕೊಮ್ಮೆ ದಿಂಬಿನ ಕವರ್‌ ತೊಳೆಯಿರಿ

|

ಸೌಂದರ್ಯ ಪ್ರಜ್ಞೆ ಉಳ್ಳವರು ತಮ್ಮ ತ್ವಚೆಯ ಬಗ್ಗೆ ಎಷ್ಟು ಕಾಳಜಿ ಮಾಡುತ್ತಾರೆ ಎಂದರೆ ತ್ವಚೆಯ ಮೇಲಿನ ಸಣ್ಣ ಬದಲಾವಣೆಯೂ ಅವರಿಗೆ ಬೇಸರ ಉಂಟು ಮಾಡುತ್ತದೆ. ಅದರ ಚಿಕಿತ್ಸೆಗೆ ಬೇಕಾದ ಎಲ್ಲಾ ಮನೆಮದ್ದುಗಳನ್ನು ಬಳಸಿ ಕೂಡಲೇ ಸರಿಮಾಡಿಕೊಳ್ಳುತ್ತಾರೆ.

Wash your pillowcase every week for healthy skin in kannada

ಆದರೆ ನಾವು ಮಾಡುವ ಕೆಲವು ಸಣ್ಣಪುಟ್ಟ ತಪ್ಪುಗಳು ನಮಗೇ ತಿಳಿಯದಂತೆ ನಮ್ಮ ತ್ವಚೆ ಅಲ್ಲದೇ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿರುತ್ತದೆ. ನೀವು ನಿತ್ಯ ಮಲಗಲು ಬಳಸುವ ದಿಂಬು ನಿಮ್ಮ ತ್ವಚೆ, ಕೇಶ ಹಾಗೂ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಏಕೆ?, ಹೇಗೆ? ಮತ್ತು ಇದಕ್ಕೆ ಪರಿಹಾರವೇನು ಮುಂದೆ ನೋಡೋಣ:

ದಿಂಬಿನ ಕವರ್‌ನಲ್ಲಿರುತ್ತದೆ ಧೂಳಿನ ಹುಳು

ದಿಂಬಿನ ಕವರ್‌ನಲ್ಲಿರುತ್ತದೆ ಧೂಳಿನ ಹುಳು

ನಿಮ್ಮ ಮುಖ ಸೇರಿದಂತೆ ಇಡೀ ದೇಹವು ನಿರಂತರವಾಗಿ ಸತ್ತ ಚರ್ಮದ ಕೋಶಗಳನ್ನು ಹೊರ ಹಾಕುತ್ತಿರುತ್ತದೆ. ಆ ಸತ್ತ ಚರ್ಮದ ಕೋಶಗಳು ನಿಮ್ಮ ದಿಂಬಿನ ಕವರ್‌ನಲ್ಲಿ ಸಂಗ್ರಹಗೊಳ್ಳುತ್ತವೆ. ಈ ಸತ್ತಜೀವಕೋಶಗಳು ಸೂಕ್ಷ್ಮ ಧೂಳಿನ ಹುಳಗಳಿಗೆ ನೆಚ್ಚಿನ ತಿಂಡಿ, ಅವುಗಳು ನೀವು ನಿತ್ಯ ಮಲಗುವ ಸ್ಥಳದಲ್ಲಿಯೇ ಸತ್ತ ಚರ್ಮದ ರುಚಿಕರವಾದ ಖಾದ್ಯವನ್ನು ಸೇವಿಸುತ್ತದೆ ಗೊತ್ತೆ!. ಅಲ್ಲದೇ ಅದೇ ಸ್ಥಳದಲ್ಲೇ ಹುಳುಗಳು ತನ್ನ ಶೌಚವನ್ನು ಮಾಡುತ್ತದೆ, ಧೂಳು, ಧೂಳಿನ ಹುಳು ಮತ್ತು ಅದರ ಶೌಚ ಎಲ್ಲವೂ ನಿಮ್ಮ ತ್ವಚೆಯನ್ನು ಸ್ಪರ್ಶಿಸುತ್ತದೆ ಮತ್ತು ಇದರಿಂದ ನಿಮ್ಮ ತ್ವಚೆ ಖಂಡಿತ ಹಾಳಾಗುತ್ತದೆ.

ನಮ್ಮ ದೇಹ ಒಂದು ಲೀಟರ್ ಬೆವರು, 10 ಗ್ರಾಂ ಉಪ್ಪು ತಯಾರಿಸುತ್ತೆ

ನಮ್ಮ ದೇಹ ಒಂದು ಲೀಟರ್ ಬೆವರು, 10 ಗ್ರಾಂ ಉಪ್ಪು ತಯಾರಿಸುತ್ತೆ

ನಿಮ್ಮ ದೇಹ ಹೊರಹಾಕುವ ಸತ್ತ ಜೀವಕೋಶಗಳು ದಿಂಬಿನ ಕವರ್‌, ಧರಿಸುವ ಬಟ್ಟೆಗಳು, ನಿತ್ಯ ಬಳಸುವ ಟವೆಲ್ ಮತ್ತು ಇತರೆ ಬಟ್ಟೆಗಳಿಗೆ ವರ್ಗಾಯಿಸಬಹುದು. ನಾವು ಪ್ರತಿದಿನ ನಮ್ಮ ದೇಹದಲ್ಲಿ ಒಂದು ಲೀಟರ್ ಬೆವರು, 10 ಗ್ರಾಂ ಉಪ್ಪು, 40 ಗ್ರಾಂ ಮೇದೋಗ್ರಂಥಿಗಳ ಸ್ರಾವ ಮತ್ತು 2 ಬಿಲಿಯನ್ ಸತ್ತ ಚರ್ಮದ ಕೋಶಗಳನ್ನು ಉತ್ಪಾದಿಸುತ್ತೇವೆ ಮತ್ತು ಹೊರಹಾಕುತ್ತೇವೆ. ಇದರ ಜತೆಗೆ ನಿಮ್ಮ ತಲೆಹೊಟ್ಟು, ಇಯರ್‌ವಾಕ್ಸ್ ಮತ್ತು ಲಾಲಾರಸ ಸೇರಿಸಿದಾಗ ಅದು ಕೆಟ್ಟಪ್ರಭಾವ ಬೀರುತ್ತದೆ. ಇಷ್ಟೇ ಅಲ್ಲದೆ ನಿಮ್ಮ ದಿಂಬಿನ ಕವರ್‌ ಮೇಲೆ ನಿಮ್ಮ ತ್ವಚೆಯ ಮೇಕಪ್, ಮಾಯಿಶ್ಚರೈಸರ್, ಸನ್‌ಸ್ಕ್ರೀನ್ ಅಥವಾ ಕೂದಲ ರಕ್ಷಣೆಯ ಉತ್ಪನ್ನಗಳೂ ಸಹ ಅದರ ಮೇಲೆ ಇನ್ನೂ ಹೆಚ್ಚಿನ ಶೇಷ ಇರಬಹುದು.

ಇದರಿಂದ ನಿಮ್ಮ ಚರ್ಮಕ್ಕಾಗುವ ಪರಿಣಾಮ

ಇದರಿಂದ ನಿಮ್ಮ ಚರ್ಮಕ್ಕಾಗುವ ಪರಿಣಾಮ

ಮೇಕಪ್‌, ತಲೆಹೊಟ್ಟು, ಧೂಳು ಹುಳಗಳಿಂದ ಸಂಗ್ರಹವಾಗುವ ಕಣಗಳು ಮೊದಲು ಅಂಟಿಕೊಳ್ಳುವುದೇ ದಿಂಬಿನ ಕವರ್‌ ಮೇಲೆ. ಇದು ಸುಲಭವಾಗು ನಿಮ್ಮ ಚರ್ಮಕ್ಕೆ ಅಂಟಿಕೊಳ್ಳಬಹುದು. ಇದರಿಂದ ಚರ್ಮದ ಕಿರಿಕಿರಿ ಮತ್ತು ಮೊಡವೆ ಬ್ರೇಕ್‌ಗಳು ಆರಂಭವಾಗುತ್ತದೆ.

ಇನ್ನು ನೀವು ಸಾಕುಪ್ರಾಣಿಗಳೊಂದಿಗೆ ವಾಸಿಸುತ್ತಿದ್ದರೆ ಮತ್ತು ಅದರ ಜತೆಗೆ ಮಲಗಿದ್ದರಂತೂ ನೀವು ಇನ್ನಷ್ಟು ಅಪಾಯಗಳನ್ನು ಸ್ವಾಗತಿಸಿದಂತೆ ಆಗುತ್ತದೆ. ಪ್ರಾಣಿಗಳ ಕೂದಲು ಮತ್ತು ದಿಂಬಿನ ಕವರ್‌ ಮೇಲೆ ಪ್ರಾಣಿಗಳು ಓಡಾಡುವುದು ಇನ್ನಷ್ಟು ಅಲರ್ಜಿ ಉಲ್ಬಣಗೊಳ್ಳುವ ಸಾಧ್ಯತೆ ಇರುತ್ತದೆ. ನೀವು ಸಾಕುಪ್ರಾಣಿಗಳೊಂದಿಗೆ ಮಲಗುವವರಾದರೆ ನಿಮ್ಮ ದಿಂಬಿನಕವರ್ ಅನ್ನು ವಾರಕ್ಕೆ ಎರಡು, ಮೂರು ಬಾರಿ ತೊಳೆದರೆ ಒಳ್ಳೆಯದು.

ಕಣ್ಣಗೆ ಕಾಣದ ಕಲ್ಮಷ, ವಾಸನೆಯಿಂದ ಗ್ರಹಿಸಲು ಯತ್ನಿಸಬಹುದು

ಕಣ್ಣಗೆ ಕಾಣದ ಕಲ್ಮಷ, ವಾಸನೆಯಿಂದ ಗ್ರಹಿಸಲು ಯತ್ನಿಸಬಹುದು

ನಿಮ್ಮ ದಿಂಬಿನ ಕವರ್‌ಗಳು ಸ್ವಚ್ಛವಾಗಿ ಕಾಣಿಸಿಕೊಂಡರೂ ಕೆಟ್ಟವಾಸನೆ ಬಂದರೆ ಅವು ನಿಜವಾಗಿಯೂ ಸ್ವಚ್ಛವಾಗಿಲ್ಲ ಎಂದರ್ಥ. ನಿಮ್ಮ ದಿಂಬಿನ ಕವರ್‌ನಲ್ಲಿರುವ ದೇಹದ ಸ್ರವಿಸುವಿಕೆ ಮತ್ತು ಸೂಕ್ಷ್ಮಜೀವಿಗಳು ಬರಿಗಣ್ಣಿಗೆ ಅಗೋಚರವಾಗಿರುತ್ತವೆ ಆದರೆ ನಮ್ಮ ಮೂಗುಗಳ ಸೂಕ್ಷ್ಮ ಸಂವೇದನಾಶೀಲತೆಯಿಂದ ದುರ್ವಾಸನೆಯನ್ನು ಸುಲಭವಾಗಿ ಗ್ರಹಿಸುತ್ತದೆ.

ಒಟ್ಟಾರೆ ಇಂಥಾ ಯಾವುದೇ ಸಮಸ್ಯೆಯಿಂದ ನೀವು ತಪ್ಪಿಸಿಕೊಳ್ಳಲು ಬಯಸಿದರೆ ವಾರಕ್ಕೊಮ್ಮೆ ಅಥವಾ ಆಗಾಗ್ಗೆ ದಿಂಬಿನ್ ಕವರ್‌ಗಳನ್ನು ತೊಳೆಯುವುದು ಉತ್ತಮ.

English summary

Wash your pillowcase every week for healthy skin in kannada

Here we are discussing about Wash your pillowcase every week for healthy skin in kannada. if you want to be truly kind to yourself, or at least to your face, you should change your pillowcase at least once a week, if not more often. Read more.
Story first published: Tuesday, June 22, 2021, 17:50 [IST]
X
Desktop Bottom Promotion