For Quick Alerts
ALLOW NOTIFICATIONS  
For Daily Alerts

ಸೋಡಾ ಬಳಸದೆ ಮೃದುವಾದ ಇಡ್ಲಿ ತಯಾರಿಸಲು ಟಿಪ್ಸ್

|

ನಮ್ಮ ದಕ್ಷಿಣ ಭಾರತದ ಪ್ರಮುಖ ತಿಂಡಿಗಳಲ್ಲೊಂದು ಇಡ್ಲಿ. ಇದನ್ನು ನಾನಾ ರುಚಿಯಲ್ಲಿ ತಯರಿಸುತ್ತೇವೆ. ರವೆ ಇಡ್ಲಿ, ಮಲ್ಲಿಗೆ ಇಡ್ಲಿ, ತಟ್ಟೆ ಇಡ್ಲಿ, ಮೈಸೂರು ಇಡ್ಲಿ, ಮಸಾಲೆ ಇಡ್ಲಿ ಹೀಗೆ ನಾನಾ ತರದ ಇಡ್ಲಿ ಮಾಡುತ್ತೇವೆ. ನಾವು ಯಾವುದೇ ಇಡ್ಲಿ ಮಾಡಲಿ ಅದು ಮೃದುವಾಗಿದ್ದರೆ ಮಾತ್ರ ತಿನ್ನಲು ಇಷ್ಟವಾಗುವುದು. ಕೆಲವರು ಮಾಡಿದ ಇಡ್ಲಿ ಗಟ್ಟಿಯಾಗಿದ್ದರೆ, ಇನ್ನೂ ಕೆಲವರು ಮಾಡುವ ಇಡ್ಲಿ ಹೂವಿನಂತೆ ಮೃದುವಾಗುತ್ತೆ.

ಇಡ್ಲಿ ಮೃದುವಾಗುವುದು, ಗಟ್ಟಿಯಾಗುವುದು ನಾವು ಯಾವ ರೀತಿಯ ಹಿಟ್ಟು ತಯಾರಿಸುತ್ತೇವೆ ಅದನ್ನು ಅವಲಂಬಿಸಿರುತ್ತದೆ. ಇನ್ನು ಕೆಲವರುಬೇಸಿಗೆಯಲ್ಲಿ ಇಡ್ಲಿ ಚೆನ್ನಾಗಿ ಬರುತ್ತದೆ, ಅದೇ ಮಳೆಗಾಲ, ಚಳಿಗಾಲ ಬಂತೆಂದರೆ ಅದು ಸರಿಯಾಗು ಹುದುಗು ಬಾರದೇ ಇಡ್ಲಿ ಸರಿ ಬರುವುದೇ ಇಲ್ಲ, ಇಡ್ಲಿ ಮೃದುವಾಗಲು ಏನು ಮಾಡಬೇಕು ಎಂದು ಕೆಲವರು ಕೇಳುವುದುಂಟು.

ಇಡ್ಲಿ ಚೆನ್ನಾಗಿ ಉಬ್ಬಿ ಬರಲಿ ಕೆಲವರು ಅಡುಗೆ ಸೋಡಾ ಬಳಸುತ್ತಾರೆ, ಆದರೆ ಸೋಡಾ ಹಾಕಿದ ಇಡ್ಲಿ ತಿಂದರೆ ಕೆಲವರಿಗೆ ಆಗಿ ಬರಲ್ಲ, ಹೊಟ್ಟೆ ಉಬ್ಬವ ಸಮಸ್ಯೆ ಕಂಡು ಬರುತ್ತದೆ. ನಾವಿಲ್ಲಿ ನಿಮ್ಮ ಇಡ್ಲಿ ಮೃದುವಾಗಿ ರುಚಿಯಾಗಿ ಬರಲು ಕೆಲವೊಂದು ಅಡುಗೆ ಟಿಪ್ಸ್ ನೀಡಿದ್ದೇವೆ ನೋಡಿ.

1. ಅವಲಕ್ಕಿ ಸೇರಿಸಿ

1. ಅವಲಕ್ಕಿ ಸೇರಿಸಿ

ಇಡ್ಲಿಗೆ ಉದ್ದು, ಅಕ್ಕಿ ಹಾಕಿ ರುಬ್ಬುತ್ತೇವೆ, ಹೀಗೆ ರುಬ್ಬುವಾಗ ಅವಲಕ್ಕಿ ಕೂಡ ಸೇರಿಸಿದರೆ ಇಡ್ಲಿ ತುಂಬಾ ಮೃದುವಾಗುವುದು. 3 ಕಪ್ ಅಕ್ಕಿಗೆ, 1 ಕಪ್ ಉದ್ದು ಹಾಕಿದರೆ ಅದಕ್ಕೆ ಒಂದು ಕಪ್ ಅವಲಕ್ಕಿ ಸೇರಿ ರುಬ್ಬಿ ಮಿಕ್ಸ್ ಮಾಡಿಡಿ. ಹೀಗೆ ಮಾಡಿದರೆ ಇಟ್ಟು ತುಂಬಾ ಮೃದುವಾಗುತ್ತದೆ.

2. ಹಿಟ್ಟು ಬಿಸಿ ಮಾಡಿ

2. ಹಿಟ್ಟು ಬಿಸಿ ಮಾಡಿ

ತುಂಬಾ ಚಳಿಯಿದ್ದಾಗ ಇಟ್ಟು ಉಬ್ಬು ಬರುವುದು ಕಡಿಮೆ. ಆಗ ಹಿಟ್ಟನ್ನು ರುಬ್ಬಿದ ಬಳಿಕ ಚೆನ್ನಾಗಿ ಒಂದು ನಿಮಿಷ ತಿರುಗಿಸುತ್ತಾ ಬಿಸಿ. ಇಟ್ಟು ಬಿಸಿ ಮಾಡುವಾಗ ತುಂಬಾನೇ ಜಾಗ್ರತೆವಹಿಸಬೇಕು. ಹಿಟ್ಟು ಗಟ್ಟಿಯಾಗಬಾರದು, ನೀವು ಮೀಡಿಯಂ ಉರಿಯಲ್ಲಿ ಗ್ಯಾಸ್‌ ಇಟ್ಟು ಹಿಟ್ಟನ್ನು ತಿರುಗಿಸಿದರೆ ಹಿಟ್ಟು ಗಟ್ಟಿಯಾಗಲ್ಲ. ಹಿಟ್ಟು ಸ್ವಲ್ಪ ಬಿಸಿಯಾದಾಗ ಇಡ್ಲಿಗೆ ಚೆನ್ನಾಗಿ ಉಬ್ಬಿ ಬರುತ್ತೆ.

3. ಕುದಿಯುವ ನೀರು 1 ಕಪ್ ಸೇರಿಸಿ

3. ಕುದಿಯುವ ನೀರು 1 ಕಪ್ ಸೇರಿಸಿ

ಹಿಟ್ಟನ್ನು ಬಿಸಿ ಮಾಡಿದರೆ ಎಲ್ಲಿ ಗಟ್ಟಿಯಾಗುತ್ತೆ ಎಂಬ ಭಯವಿದ್ದರೆ ಹಿಟ್ಟನ್ನು ರುಬ್ಬುವಾಗ ತುಂಬಾ ನೀರು ಹಾಕಬೇಡಿ, ರುಬ್ಬಿದ ಬಳಿಕ ಬಿಸಿ ನೀರು ಸೇರಿಸಿ ಮಿಕ್ಸ್ ಮಾಡಿಟ್ಟರೆ ಕೂಡ ಹಿಟ್ಟು ಮೃದುವಾಗಿರುತ್ತೆ.

4. ಸೇಂದಿ ಬಳಸಿದರೂ ಮೃದುವಾಗುತ್ತೆ

4. ಸೇಂದಿ ಬಳಸಿದರೂ ಮೃದುವಾಗುತ್ತೆ

ಊರು ಕಡೆ ತೆಂಗಿನ ಮರದ ಅಥವಾ ಈಚಲು ಮರದ ಸೇಂದಿ ತೆಗೆಯುತ್ತಾರೆ, ಅದು 2 ಚಮಚ ಹಾಕಿದರೆ ಸಾಕು ಇಡ್ಲಿ ತುಂಬಾನೇ ಮೃದುವಾಗಿರುತ್ತೆ.

English summary

Tips To Make Soft Idli Without Soda In Kannada

Tips To Make Soft Idli Withou Soda In Kannada, read on...
Story first published: Monday, June 21, 2021, 11:13 [IST]
X
Desktop Bottom Promotion