For Quick Alerts
ALLOW NOTIFICATIONS  
For Daily Alerts

ಸ್ತನಗಳ ಬಗ್ಗೆ ವೈಜ್ಞಾನಿಕ ಸತ್ಯಸಂಗತಿಗಳು ನೀವು ತಿಳಿಯಲೇಬೇಕು!

|

ದೇಹದಲ್ಲಿ ಸಾಕಷ್ಟು ಭಾಗಗಳಿವೆ. ಅದರಲ್ಲಿ ಕೆಲವು ಬಾಹ್ಯ ಸೌಂದರುಅವನ್ನು ಹೆಚ್ಚಿಸುವಂಥದ್ದು, ಇನ್ನೂ ಕೆಲವು ಆಂತರಿಕ ಸೌಂದರ್ಯ. ಉದಾಹರಣೆಗೆ ಮನಸ್ಸು ನಮ್ಮ ಆಂತರಿಕ ಸೌಂದರ್ಯದ ಪ್ರತಿಬಿಂಬ. ಹಾಗೇ ಸ್ತನಗಳು ಅದರಲ್ಲೂ ವಿಶೇಷವಾಗಿ ಮಹಿಳೆಯರಲ್ಲಿ ಸ್ತನಗಳು ಸೌಂದರ್ಯಕ್ಕೆ ಹಿಡಿದ ಕೈಗನ್ನಡಿ!

ಸ್ತನಗಳು ಎಂದರೆ ಮಹಿಳೆಯರಿಗೆ , ಪುರುಷರಿಗೆ, ವಯಸ್ಕರಿಗೆ, ಮಗುವಿಗೆ ಎಲ್ಲರಿಗೂ ಇಷ್ಟವಾಗುವ ವಿಷಯವೆ! ಇದು ಎಲ್ಲರಿಗೂ ಗೊತ್ತಿರುವ ಕಟು ಸತ್ಯವೇ ಸರಿ. ಸ್ತನಗಳ ಬಗ್ಗೆ ವಿಜ್ಞಾನವೂ ಹೇಳಲಾಗದೆ ಇರುವ ಸಾಕಷ್ಟು ವಿಷಯಗಳಿವೆ. ಉದಾಹರಣೆಗೆ ಸ್ತನಗಳು ಲೈಂಗಿಕ ಆಕರ್ಷಣೇಯ ಮೂಲ ಎಂದಷ್ಟೇ ಹೆಳುತ್ತದೆಯೇ ಹೊರತು ಅದರ ಬಗ್ಗೆ ಇತರ ವಿಷಯಗಳನ್ನು ವಿಜ್ಞಾನ ಹೇಳುವುದಿಲ್ಲ.

ಹಾಗಾಗಿ ನಿಮಗೆ ಗೊತ್ತಿಲ್ಲದೇ ಇರುವಂತಹ ಸ್ತನಗಳ ಬಗೆಗಿನ ಸಂಗತಿಗಳನ್ನು ನಾವಿಲ್ಲಿ ಹೇಳುತ್ತಿದ್ದೇವೆ.

ನಿಮಗೆ ಒಳ್ಳೆಯದು ಮತ್ತು ಮಗುವಿಗೂ ಒಳ್ಳೆಯದು

ನಿಮಗೆ ಒಳ್ಳೆಯದು ಮತ್ತು ಮಗುವಿಗೂ ಒಳ್ಳೆಯದು

ಎದೆ ಹಾಲಿನಲ್ಲಿ ಕಂಡುಬರುವ ಪೋಷಕಾಂಶಗಳನ್ನು ಅಮ್ಮನ ರಕ್ತದಿಂದ ನೇರವಾಗಿ ಪಡೆಯಲಾಗುತ್ತದೆ. ಅಂದರೆ ತಾಯಿಯ ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೋಷಕಾಂಶಗಳಿದ್ದರೆ ಅದರಿಂದ ರಕ್ತ ಶುದ್ಧವಾಗಿರುತ್ತದೆ ಹಾಗೂ ಇದು ಹಾಲು ಕುಡಿಯುವ ಮಗುವಿಗೂ ಅತ್ಯಂತ ಒಳ್ಳೆಯದು.

ಸಮಗಾತ್ರವಲ್ಲದ್ದು?

ಸಮಗಾತ್ರವಲ್ಲದ್ದು?

50 ಪ್ರತಿಶತ ಮಹಿಳೆಯರಿಗೆ, ಒಂದು ಸ್ತನ ಇನ್ನೊಂದಕ್ಕಿಂತ ದೊಡ್ಡದಾಗಿದೆ. ಇದು ಸಾಮಾನ್ಯವಾಗಿ ಎಡಭಾಗದ ಸ್ತನವಾಗಿದೆ, ಮತ್ತು ವಿಜ್ಞಾನಿಗಳಿಗೆ ಇದು ಏಕೆ ಎಂಬುದು ತಿಳಿದಿಲ್ಲ. ಆದರೆ ಇದನ್ನು ಯಾರೂ ಹೆಚ್ಚಾಗಿ ಗಮನಿಸಿರುವುದಿಲ್ಲ. ಅಥವಾ ಗೊತ್ತಾಗುವಷ್ಟರ ಮಟ್ಟಿಗಿನ ವ್ಯತ್ಯಾಸ ಇರದೆಯೂ ಇರಬಹುದು.

ಎಂದಿಗೂ ಮುಗಿಯದ ಕಥೆ!

ಎಂದಿಗೂ ಮುಗಿಯದ ಕಥೆ!

ನಿಮ್ಮ ಋತುಚಕ್ರದ ಕಾರಣ ನಿಮ್ಮ ಸ್ತನಗಳ ಗಾತ್ರ ವಾರದಿಂದ ವಾರಕ್ಕೆ ಬದಲಾಗುತ್ತದೆ. ಅಲ್ಲದೇ ಹಾರ್ಮೋನಲ್ ಬದಲಾವಣೆ, ಹಾಗೂ ಗರ್ಭಿಣಿಯಾಗಿರುವ ಸಂದರ್ಭದಲ್ಲಿಯೂ ಸ್ತನಗಳ ಗಾತ್ರ ಇರುವುದಕ್ಕಿಂತ ದೊಡ್ಡದಾಗುತ್ತದೆ.

ಇದು ಸತ್ಯ!

ಇದು ಸತ್ಯ!

ಮಹಿಳೆಯರಲ್ಲಿ ಪ್ರೌಢಾವಸ್ಥೆಯಲ್ಲಿ ಸ್ತನಗಳು ಹಿಗ್ಗುತ್ತವೆ ಮತ್ತು ತಮ್ಮ ಜೀವನದುದ್ದಕ್ಕೂ ವಿಸ್ತರಿಸುತ್ತವೆ. ಎಲ್ಲಾ ಸಸ್ತನಿಗಳಿಗೆ, ತಾಯಿ ಶುಶ್ರೂಷೆ ಮಾಡುವಾಗ ಮಾತ್ರ ಅದು ಸಂಭವಿಸುತ್ತದೆ. ಹಾಗೂ ಮಗುವಿಗೆ ಹಾಲುಣಿಸುವ ಸಂದರ್ಭದಲ್ಲಿ ಮಾತ್ರ ಹಾಲು ಉತ್ಪಾದನೆಯಾಗುತ್ತದೆ.

ಇದು ಇರುವುದು ಈ ಕಾರಣಕ್ಕೆ!

ಇದು ಇರುವುದು ಈ ಕಾರಣಕ್ಕೆ!

ನಿಮ್ಮ ಐಸೊಲಾದಲ್ಲಿನ ಉಬ್ಬುಗಳು (ನಿಮ್ಮ ಮೊಲೆತೊಟ್ಟುಗಳ ಸುತ್ತಲಿನ ಚರ್ಮದ ಕಪ್ಪು ವಲಯ) ಕೇವಲ ಅಲಂಕಾರಕ್ಕಾಗಿ ಅಲ್ಲ! ಮಗು ಸರಿಯಾಗಿ ಬಾಯಲ್ಲಿ ಮೊಲೆಯನ್ನು ಚೀಪಲು ಮತ್ತು ಮೊಲೆತೊಟ್ಟುಗಳ ರುಚಿಯನ್ನು ಉತ್ತಮಗೊಳಿಸಲು ಅವು ಎಣ್ಣೆಯನ್ನು ಸ್ರವಿಸುತ್ತವೆ.

ನೀವು ಎಂದಿಗೂ ಗಮನಿಸಿರುವುದಿಲ್ಲ

ನೀವು ಎಂದಿಗೂ ಗಮನಿಸಿರುವುದಿಲ್ಲ

ನಿಮ್ಮ ಮೊಲೆತೊಟ್ಟು ವಾಸ್ತವವಾಗಿ ಅದರ ಮೇಲೆ ನೂರಾರು ಸಣ್ಣ ರಂಧ್ರಗಳನ್ನು ಹೊಂದಿದೆ, ಕೇವಲ ಒಂದು ದೊಡ್ಡದಲ್ಲ. ಆದರೆ ಇದನ್ನು ನಆವು ಗಮನಿಸಿರುವುದಿಲ್ಲ. ಅಲ್ಲದೇ ಅದು ಅಷ್ಟು ಸುಲಭವಾಗಿ ಗೊತ್ತಾಗುವುದಿಲ್ಲ.

ಲವ್ ಹಾರ್ಮೋನ್

ಲವ್ ಹಾರ್ಮೋನ್

ನಿಮ್ಮ ಮಗು ಹಾಲನ್ನು ಹೀರುವಾಗ, ನಿಮ್ಮ ಮೆದುಳು ಆಕ್ಸಿಟೋಸಿನ್ (ಪ್ರಚೋದಕ ಹಾರ್ಮೋನ್) ಅನ್ನು ಉತ್ಪಾದಿಸುತ್ತದೆ, ಲೈಂಗಿಕತೆ ಮತ್ತು ಇತರ ಪ್ರೀತಿಯ ಕ್ರಿಯೆಗಳಾದ ತಬ್ಬಿಕೊಳ್ಳುವುದು ಮತ್ತು ಮುದ್ದಾಡುವುದು ಮೊದಲಾದ ಸಮಯದಲ್ಲಿಯೂ ಅದೇ ಹಾರ್ಮೋನ್ ಬಿಡುಗಡೆಯಾಗುತ್ತದೆ.

ವಾಹ್, ಎಂಥ ವಿಷಯ!

ವಾಹ್, ಎಂಥ ವಿಷಯ!

ಇದನ್ನು ಹೇಳಿದರೆ ನಿಮಗೆ ಖಂಡಿತವಾಗಿಯೂ ಆಶ್ವರ್ಯವಾಗಬಹುದು ಅಥವಾ ನೀವು ನಂಬಲಿಕ್ಕೆ ಸಾಧ್ಯವಿಲ್ಲ! ಅದೇನು ಅಂತಿರಾ? (ನಿಮ್ಮ ಮಗುವಲ್ಲದಿದ್ದರೂ ಸಹ,) ಮಗುವಿನ ಕೂಗು ಕೇಳಿದ ನಂತರವೇ ನಿಮ್ಮ ಮೆದುಳು ಹಾಲು ಉತ್ಪಾದಿಸುವ ಹಾರ್ಮೋನುಗಳ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ.

ಅರಿಯಬೇಕಾದ ಮಾಹಿತಿ

ಅರಿಯಬೇಕಾದ ಮಾಹಿತಿ

ತನ್ನ ಜೀವಿತಾವಧಿಯಲ್ಲಿ ಮಹಿಳೆಯ ಸ್ತನಗಳು ಹೆಚ್ಚು ಬದಲಾಗುತ್ತಿರುವುದರಿಂದ ಭಾಗಶಃ ಎರಡನೆಯ ಅತ್ಯಂತ ಸಾಮಾನ್ಯ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಎನ್ನಲಾಗುತ್ತದೆ. ನಿಮ್ಮ ಸ್ತನಗಳು ಬೆಳೆದಾಗ, ಅದರ ಕೋಶಗಳು ವಿಭಜನೆಯಾಗುತ್ತವೆ. ಒಂದು ಅಂಗದ ಜೀವಕೋಶಗಳು ಎಷ್ಟು ಹೆಚ್ಚು ವಿಭಜನೆಯಾಗುತ್ತವೆಯೋ, ಅದು ಕ್ಯಾನ್ಸರ್ ಉಂಟುಮಾಡುವ ರೂಪಾಂತರಗಳನ್ನು ಹುಟ್ಟುಹಾಕುವ ಸಾಧ್ಯತೆ ಹೆಚ್ಚು.

ದೊಡ್ಡದು ಎಂದರೆ ಉತ್ತಮವಲ್ಲ

ದೊಡ್ಡದು ಎಂದರೆ ಉತ್ತಮವಲ್ಲ

ಸ್ತನ್ಯಪಾನ ಮಾಡುವ ನಿಮ್ಮ ಸಾಮರ್ಥ್ಯಕ್ಕೂ, ಸ್ತನದ ಗಾತ್ರಕ್ಕೂ ಯಾವುದೇ ಸಂಬಂಧವಿಲ್ಲ. ಸ್ತನಗಳು ದೊಡ್ಡದಾಗಿವೆ ಎಂಬ ಕಾರಣಕ್ಕೆ ಅದರಲ್ಲಿ ಹಾಲು ಅಧಿಕವಾಗಿ ಉತ್ಪಾದನೆ ಯಾಗುತ್ತದೆ ಎಂದು ಅರ್ಥವಲ್ಲ.

ಜೋಲುವಂಥದ್ದು

ಜೋಲುವಂಥದ್ದು

ನಮ್ಮ ಪಕ್ಕೆಲುಬುಗಳಿಗೆ ನೇರವಾಗಿ ಅಂಟಿಕೊಂಡಿರುವಂತೆ ಇರುವ ಬದಲು ಮಾನವ (ಮಹಿಳೆಯರು ವಿಶೇಷವಾಗಿ) ಸ್ತನಗಳು ಕೆಳಗೆ ತೂಗಾಡುತ್ತವೆ (ನೀವು ನಾಯಿಗಳಲ್ಲಿ ನೋಡುವಂತೆ) ಏಕೆಂದರೆ ಇದು ಶಿಶುಗಳಿಗೆ ಮೊಲೆತೊಟ್ಟುಗಳನ್ನು ಚೀಪಲು ಸುಲಭವಾಗುತ್ತದೆ.

ಸಸ್ತನಿಗಳ ಹುಟ್ಟು

ಸಸ್ತನಿಗಳ ಹುಟ್ಟು

ಸಸ್ತನಿಗಳು ಭೂಮಿಯ ಮೇಲೆ ತುಂಬಾ ಯಶಸ್ವಿಯಾಗಿರುವಂತವು, ಇವು ಗ್ರಹದ ಅತಿದೊಡ್ಡ ಮತ್ತು ಅತೀ ಬುದ್ಧಿವಂತ ಪ್ರಾಣಿಗಳಾಗಿ ಮಾರ್ಪಟ್ಟಿವೆ, ಏಕೆಂದರೆ ತಾಯಂದಿರು ತಮ್ಮ ಮಕ್ಕಳಿಗೆ ಜೀರ್ಣಿಸಿಕೊಳ್ಳಲು ಸುಲಭವಾದ ಆಹಾರವನ್ನು ಹುಡುಕಬೇಕಾಗಿಲ್ಲ. ಅವು ತಾನಾಗಿಯೇ ಮೊಲೆಹಾಲಿನ ಮೂಲಕ ಮಗುವಿಗೆ ಸಿಗುತ್ತದೆ!

ಎಲ್ಲವೂ ಎಲ್ಲರಲ್ಲೂ ಒಂದೇ ತೆರನಾಗಿರುವುದಿಲ್ಲ!

ಎಲ್ಲವೂ ಎಲ್ಲರಲ್ಲೂ ಒಂದೇ ತೆರನಾಗಿರುವುದಿಲ್ಲ!

ಮೊಲೆತೊಟ್ಟುಗಳ 8 ವೈದ್ಯಕೀಯ ಪ್ರಕಾರಗಳಿವೆ: ಚಾಚಿಕೊಂಡಿರುವ, ಚಪ್ಪಟೆ, ಪಫಿ, ತಲೆಕೆಳಗಾದ (ಎರಡೂ), ಏಕಪಕ್ಷೀಯ ತಲೆಕೆಳಗಾದ (ಕೇವಲ ಒಂದು), ನೆಗೆಯುವ, ಕೂದಲುಳ್ಳ ಮತ್ತು ಅತಿರಿಕ್ತ.

ಆರಂಭಿಕ ಸಮಯ

ಆರಂಭಿಕ ಸಮಯ

ಆರಂಭಿಕ ವಿಕಾಸದಲ್ಲಿ, ಸ್ತನದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬು ಮಹಿಳೆಯರಿಗೆ ಬದುಕಲು ಸಹಾಯ ಮಾಡಿತು. ಮಹಿಳೆಯರಿಗೆ ರಕ್ಷಕ, ಮಗುವಿಗೆ ಜೀವಪಾನ ನೀಡುವ ಸ್ತನಗಳಿಗೆ ಧನ್ಯವಾದಗಳು!

English summary

Things You Didn't Know About Science of Boobs

Here we are discussing about Things You Didn't Know About Science of Boobs, know more on it. It's a pretty well-known fact. There's a lot about boobs that science can't explain, like why they're source of sexual attraction for starters. Read more.
X
Desktop Bottom Promotion