For Quick Alerts
ALLOW NOTIFICATIONS  
For Daily Alerts

ನೀವು ರಾತ್ರಿ ಭಾರೀ ಭೋಜನ ಮಾಡೋರಾದ್ರೆ ಈ ಸ್ಟೋರಿ ಓದಲೇಬೇಕು...!

|

ರಾತ್ರಿ ಊಟ ಬೇಗ ಮಾಡುವುದರಿಂದ ಆಹಾರ ಉತ್ತಮವಾಗಿ ಜೀರ್ಣವಾಗಲು, ತೂಕ ನಷ್ಟವನ್ನು ಉತ್ತೇಜಿಸಲು, ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಮತ್ತು ರೋಗಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಆಗುತ್ತದೆ. ಹಾಗೆಯೇ ಮತ್ತೊಂದೆಡೆ, ತಡವಾಗಿ ಊಟ ಮಾಡುವುದರಿಂದ ತೂಕ ಹೆಚ್ಚಾಗಬಹುದು ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ ಎಂದು ಎಂಡೋಕ್ರೈನ್ ಸೊಸೈಟಿಯ ಜರ್ನಲ್ ಆಫ್ ಕ್ಲಿನಿಕಲ್ ಎಂಡೋಕ್ರೈನಾಲಜಿ & ಮೆಟಾಬಾಲಿಸಂನಲ್ಲಿ ಪ್ರಕಟವಾದ ಅಧ್ಯಯನವು ಹೇಳುತ್ತದೆ. ಆದ್ದರಿಂದ, ತಜ್ಞರು ಸಂಜೆ 7 ಗಂಟೆಯ ಮೊದಲು ದಿನದ ಕೊನೆಯ ಊಟ ಮಾಡಲು ಶಿಫಾರಸು ಮಾಡುತ್ತಾರೆ.

ಇಂಥಹ ಸಂದರ್ಭದಲ್ಲಿ ನಿಮ್ಮ ಭೋಜನವನ್ನು ಹಗುರವಾಗಿರಿಸಿಕೊಳ್ಳುವುದು ಸಹ ಬಹಳ ಮುಖ್ಯ. ರಾತ್ರಿಯಲ್ಲಿ ಚಯಾಪಚಯ ಕ್ರಿಯೆಯು ನಿಧಾನವಾಗುವುದರಿಂದ, ನೀವು ಸೇವಿಸುವ ಭಾರವಾದ ಊಟ ಸರಿಯಾಗಿ ಜೀರ್ಣವಾಗುವುದಿಲ್ಲ. ಇದರಿಂದ ದೇಹವು ಹೆಚ್ಚುವರಿ ಕ್ಯಾಲೊರಿಗಳನ್ನು ಕೊಬ್ಬಿನಂತೆ ಸಂಗ್ರಹಿಸುತ್ತದೆ. ಅದಕ್ಕಾಗಿ ರಾತ್ರಿ ನೀವು ಭಾರಿ ಭೋಜನವನ್ನು ಸೇವಿಸಿದಾಗ ನಿಮ್ಮ ದೇಹಕ್ಕೆ ಸಂಭವಿಸುವ ಕೆಲವು ಭಯಾನಕ ಸಂಗತಿಗಳನ್ನು ಹೇಳಿದ್ದೇವೆ, ನೋಡಿ.

ರಾತ್ರಿ ನೀವು ಭಾರಿ ಭೋಜನವನ್ನು ಸೇವಿಸಿದಾಗ ನಿಮ್ಮ ದೇಹಕ್ಕೆ ಸಂಭವಿಸುವ ಕೆಲವು ಭಯಾನಕ ಸಂಗತಿಗಳು ಇಲ್ಲಿವೆ.

ಬೆಳಿಗ್ಗೆ ಕಳಪೆ ಹಸಿವು:

ಬೆಳಿಗ್ಗೆ ಕಳಪೆ ಹಸಿವು:

ರಾತ್ರಿ ಹೆಚ್ಚು ಮತ್ತು ತಡವಾಗಿ ತಿನ್ನುವುದು ಮರುದಿನ ಬೆಳಿಗ್ಗೆ ಹಸಿವಿನ ಕೊರತೆಗೆ ಕಾರಣವಾಗಬಹುದು, ಅದು ನಿಮಗೆ ಉಪಾಹಾರವನ್ನು ಬಿಟ್ಟುಬಿಡುವಂತೆ ಮಾಡಬಹುದು.

ಜಠರಗರುಳಿನ ಕಾಯಿಲೆ:

ಜಠರಗರುಳಿನ ಕಾಯಿಲೆ:

ನೀವು ರಾತ್ರಿಯಲ್ಲಿ ನಿರಂತರವಾಗಿ ಜಾಸ್ತಿ ಊಟ ಸೇವಿಸಿದರೆ, ನಿಮ್ಮ ಜೀರ್ಣಕ್ರಿಯೆಯು ಕ್ಷೀಣಿಸಬಹುದು ಮತ್ತು ಕಾಲಾನಂತರದಲ್ಲಿ ಇದು ಜಠರಗರುಳಿನ ಕಾಯಿಲೆ, ಜಠರದುರಿತ, ಗ್ಯಾಸ್ಟ್ರಿಕ್ ಹುಣ್ಣು, ಎಂಟರೈಟಿಸ್, ಮಲಬದ್ಧತೆ ಮತ್ತು ಕರುಳಿನ ಕ್ಯಾನ್ಸರ್ ಗೆ ಕಾರಣವಾಗಬಹುದು.

ಹೆಚ್ಚಿದ ಹೃದಯ ಬಡಿತ:

ಹೆಚ್ಚಿದ ಹೃದಯ ಬಡಿತ:

ನೀವು ಅತಿಯಾಗಿ ತಿನ್ನುವಾಗ, ನಿಮ್ಮ ಹೃದಯವು ಸಾಮಾನ್ಯಕ್ಕಿಂತ ಹೆಚ್ಚು ಶ್ರಮಿಸಬೇಕು, ಇದರಿಂದ ಹೃದಯ ಬಡಿತ ಹೆಚ್ಚಾಗುತ್ತದೆ. ತಿನ್ನುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. ಸಂಜೆ 6 ಗಂಟೆಯ ನಂತರ ಹೆಚ್ಚಿನ ಕ್ಯಾಲೋರಿಯುಳ್ಳ ಊಟವನ್ನು ಸೇವಿಸುವುದರಿಂದ ಅಧಿಕ ರಕ್ತದೊತ್ತಡ ಮತ್ತು ಟೈಪ್ 2 ಮಧುಮೇಹಕ್ಕೆ ಕಾರಣವಾಗಬಹುದು ಎಂದು ಅಮೆರಿಕನ್ ಹಾರ್ಟ್ ಅಸೋಸಿಯೇಷನ್‌ನ 2019 ರ ವಾರ್ಷಿಕ ಸಭೆಯಲ್ಲಿ ಹೇಳಲಾಗಿದೆ.

ಕಳಪೆ ನಿದ್ರೆ:

ಕಳಪೆ ನಿದ್ರೆ:

ಭಾರಿ ಭೋಜನ ಉತ್ತಮ ನಿದ್ರೆಗೆ ಅಡ್ಡಿಯಾಗಬಹುದು. ನಿದ್ರಾಹೀನತೆಯು ಮರುದಿನದ ದಿನಚರಿಯ ಮೇಲೆ ಪರಿಣಾಮ ಬೀರುತ್ತದೆ. ನೀವು ಬೆಳಿಗ್ಗೆ ಒತ್ತಡ ಮತ್ತು ಆಯಾಸವನ್ನು ಅನುಭವಿಸಲು ಇದು ಒಂದು ಕಾರಣವಾಗಬಹುದು.

ತೀವ್ರವಾದ ಪ್ಯಾಂಕ್ರಿಯಾಟೈಟಿಸ್:

ತೀವ್ರವಾದ ಪ್ಯಾಂಕ್ರಿಯಾಟೈಟಿಸ್:

ರಾತ್ರಿ ಹೆಚ್ಚು ಊಟ ಮಾಡುವುದರಿಂದ ಪಿತ್ತರಸ ಕಲ್ಲುಗಳಲ್ಲಿರುವ ಜನರಲ್ಲಿ ತೀವ್ರವಾದ ಪ್ಯಾಂಕ್ರಿಯಾಟೈಟಿಸ್ ಅಪಾಯವನ್ನು ಹೆಚ್ಚಿಸುತ್ತದೆ. ಕೆಲವೊಮ್ಮೆ, ತೀವ್ರವಾದ ಪ್ಯಾಂಕ್ರಿಯಾಟೈಟಿಸ್ ನ ಹಠಾತ್ ಸ್ಫೋಟವು ಸಾವಿಗೆ ಕಾರಣವಾಗಬಹುದು.

English summary

Things That Happen To Your Body When You Eat A Heavy Dinner

Since the metabolism slows down at night, heavy meal eaten by you may not be digested properly, and the body will store extra calories as fat. Here are some other terrible things that happen to your body when you eat a heavy dinner. have a look
Story first published: Thursday, January 21, 2021, 11:35 [IST]
X
Desktop Bottom Promotion